ಈ ಜಿಲ್ಲೆಗಳಲ್ಲಿ ಭಾರಿ ಮಳೆ ಸಾಧ್ಯತೆ : ಯೆಲ್ಲೋ ಹಾಗೂ ಆರೇಂಜ್ ಅಲರ್ಟ್ ಘೋಷಣೆ

Written by Ramlinganna

Published on:

ರಾಜ್ಯದಲ್ಲಿ ಮುಂಗಾರು ಮಳೆಯು ಈಗ ಚುರುಕುಗೊಳ್ಳುವ ಸಾಧ್ಯತೆಯಿದೆ. ಮುಂದಿನ ನಾಲ್ಕು ದಿನಗಳಲ್ಲಿ ಕರಾವಳಿ, ಮಲೆನಾಡು, ದಕ್ಷಿಣ ಹಾಗೂ ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಗುಡುಗು ಸಹಿತ ಧಾರಾಕಾರ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಜೂನ್ 24, 25 ರಂದು ಉತ್ತರ ಕನ್ನಡ, ಉಡುಪಿ ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ. 26 ರಂದು ಉತ್ತರ ಕನ್ನಡಕ್ಕೆ ಆರೇಂಜ್ ಅಲರ್ಟ್ ನೀಡಲಾಗಿದೆ. ಅದೇ ರೀತಿ ಕಲಬುರಗಿ, ಶಿವಮೊಗ್ಗ, ಚಿಕ್ಕಮಗಳೂರು, ಉಡುಪಿ, ದಕ್ಷಿಣ ಕನ್ನಡ ಹಾಗೂ ಕೊಡಗು ಜಿಲ್ಲೆಗೆ ಯೆಲ್ಲೋ ಅಲರ್ಟೋ ನೀಡಲಾಗಿದೆ.

ಜೂನ್ 27 ರಂದು ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಆರೇಂಜ್ ಅಲರ್ಟ್ ನೀಡಲಾಗಿದೆ. ಶಿವಮೊಗ್ಗ, ಕಲಬುರಗಿ, ಚಿಕ್ಕಮಗಳೂರು ಹಾಗೂ ಕೊಡಗು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಕರಾವಳಿ ವ್ಯಾಪ್ತಿಯಲ್ಲಿ ಗಾಳಿಯ ವೇಗ ಹೆಚ್ಚಾಗಲಿದೆ. ಪ್ತತಿ ತಾಸಿಗೆ 45 ರಿಂದ 55 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದೆ. ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಇರಲಿದೆ. ಸಾಯಂಕಾಲ ಅಥವಾ ರಾತ್ರಿ ವೇಳೆಯಲ್ಲಿ ಮಳೆಯಾಗಲಿದೆ ಎಂದು  ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಕರಾವಳಿಯಲ್ಲಿ ಮುಂದಿನ 4 ದಿನ ಭಾರಿ ಮಳೆಯ ಮುನ್ಸೂಚನೆ

ಹವಾಮಾನ ಇಲಾಖೆ ಪ್ರಕಾರ ಇಂದಿನಿಂದ ಜೂನ್ 28 ರವರೆಗೆ ಕರಾವಳಿಯಲ್ಲಿ 64.50 ಮಿ.ಮೀ ಯಿಂದ 115.50 ಮಿ.ಮೀವರೆಗೆ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಮುನ್ಸೂಚನೆ ನೀಡಲಾಗಿದೆ.

ಇದನ್ನೂ ಓದಿ : Panchatantra 2.0 : ನಿಮ್ಮ ಗ್ರಾಮ ಪಂಚಾಯತಿಯ ಎಲ್ಲಾ ಮಾಹಿತಿ ಮೊಬೈಲ್ ನಲ್ಲೇ ಚೆಕ್ ಮಾಡಿ

ಕಳದ 24 ಗಂಟೆಗಳಲ್ಲಿ ಜಿಲ್ಲೆಯಲ್ಲಿ ಸರಾಸರಿ 7 ಮಿ.ಮೀ ಮಳೆಯಾಗಿದೆ. ಪಶ್ಚಿಮ ಘಟ್ಟ, ಆಗುಂಬೆ ಮತ್ತು ಕಾರ್ಕಳ ಭಾಗದಲ್ಲಿ ಉತ್ತಮ ಮಳೆಯಾಗುತ್ತಿದ್ದು,  ಪರಿಣಾಮ ಉಡುಪಿ ನಗರಕ್ಕೆ ಕುಡಿಯು ನೀರು ಪೂರೈಸುವ ಸ್ವರ್ಣ ನದಿಯಲ್ಲಿ ನೀರಿನ ಹರಿವು ಆರಂಭವಾಗಿದೆ.

ಸಾಧಾರಣ ಮಳೆ, ಇಂದು ಆರೇಂಜ್ ಅಲರ್ಟ್

ಕರಾವಳಿಯಲ್ಲಿ ಶುಕ್ರವಾರ ಸಾಯಂಕಾಲ ವೇಳೆಗೆ ಮುಂಗಾರು ಮಳೆ ಸಾಧಾರಣ ಪ್ರಮಾಣದಲ್ಲಿ ಸುರಿಯತೊಡಗಿದೆ. ಭಾರತೀಯ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಸೂಚನೆ ಹೊರತು ಹಗಲು ಮಳೆ ಬಂದಿಲ್ಲ.

ಗ್ರಾಮೀಣ ಭಾಗದಲ್ಲಿ ಬೆಳಗ್ಗೆ ಮೋಡ ಬಳಿಕ ಬಿಸಲು ಕಂಡುಬಂದಿದೆ.ಅಲ್ಲಲ್ಲಿ ತುಂತುರು ಮಳೆಯಾಗಿದೆ. ಮಂಗಳೂರಿನಲ್ಲಿ ಸಂಜೆವರೆಗೆ ಬಿಸಿಲು, ಮೋಡ ಇತ್ತು. ಸಂಜೆ ವೇಳೆ ಮೋಡ ದಟ್ಟೈಸಿ ಮಳೆ ಸುರಿಯತೊಡಗಿದೆ. ಜಿಲ್ಲೆಯಾದ್ಯಂತ ಮುಂಗಾರು ಬಿರುಸುಕೊಳ್ಳುವ ಮುನ್ಸೂಚನೆ ಲಭಿಸಿದೆ.

ಇದನ್ನೂ ಓದಿ : ಪಿಎಂ ಕಿಸಾನ್ ಮುಂದಿನ ಕಂತು ಜಮೆಯಾಗಲಿ ಇಕೆವೈಸಿ ಕಡ್ಡಾಯ- ಇಕೆವೈಸಿ ಆಗಿದೆಯೇ? ಮೊಬೈಲ್ ನಲ್ಲೇ ಚೆಕ್ ಮಾಡಿ

ಜೂನ್ 24 ರಂದು ಕರಾವಳಿಯಲ್ಲಿ ಆರೇಂಜ್ ಅಲರ್ಟ್ ಘೋಷಿಸಲಾಗಿದೆ.  ಶುಕ್ರವಾರ ಬೆಳಗಿನ ವರೆಗೆ ಬೆಳ್ತಂಗಡಿಯಲ್ಲಿ 8.4 ಮಿಲಿ ಮೀಟರ್, ಬಂಟ್ವಾಳ 15 ಮಿ.ಮೀ, ಪುತ್ತೂರ 13.1 ಮಿ.ಮೀ ಕಡಬ 4.7 ಮಿ.ಮೀ, ಮಂಗಳೂರು 7.8 ಮಿ.ಮೀ, ಸುಳ್ಯ 7.8 ಮಿ.ಮೀ ಮಳೆಯಾಗಿದ್ದು. ದಿನದ ಸರಾಸರಿ ಮಳೆ 13 ಮಿ.ಮೀ ಆಗಿದೆ.

ಮಳೆಯ ಮಾಹಿತಿ ಬೇಕೆ? ವರುಣಮಿತ್ರ ಉಚಿತ ಸಹಾಯವಾಣಿಗೆ ಕರೆ ಮಾಡಿ

ನಿಮ್ಮೂರಿನ ಸುತ್ತಮುತ್ತಲು ಮಳೆಯಾಗುವ ವರದಿ ಪಡೆಯಲು ವರುಣಮಿತ್ರ ಸಹಾಯವಾಣಿಗೆ ಕರೆ ಮಾಡಬಹುದು. ಹೌದು, 92433 45433 ಗೆ ಕರೆ ಮಾಡಿ ಇಂದಿನ ಹವಾಮಾನ ಹಾಗೂ ಮುಂದಿನ ಐದು ದಿನದ ಮಳೆಯ ಮಾಹಿತಿ ಪಡೆದುಕೊಳ್ಳಬಹುದು. ಮಳೆಯ ಮಾಹಿತಿಯೊಂದಿಗೆ ಗಾಳಿಯ ವೇಗ, ದಿಕ್ಕು, ಹಾಗೂ ಅಂದಿನ ಹವಾಮಾನದ ವರದಿಯನ್ನು ಪಡೆದುಕೊಳ್ಳಬಹುದು. ರೈತರಿಗೆ ಸಾರ್ವಜನಿಕರಿಗೆ ಸಹಾಯವಾಗಲೆಂದು ಈ ಉಚಿತ ಸಹಾಯವಾಣಿಯನ್ನು ಆರಂಭಿಸಲಾಗಿದೆ.

Leave a comment