Heart attach symptoms (ಹೃದಯಾಘಾತ) ಲಕ್ಷಣಗಳ ಮಾಹಿತಿ ಇಲ್ಲಿದೆ

Written by Ramlinganna

Updated on:

Heart attach symptoms: ದಿನದಿಂದ ದಿನಕ್ಕೆ ಹೃದಯಾಘಾತ (ಹರ್ಟ್ ಅಟ್ಯಾಕ್) ಹೆಚ್ಚುತ್ತಲೇ ಹಿದೆ. ಸಣ್ಣವರಿಂದ ಹಿಡಿದು ವಯೋವೃದ್ದರಿಗೂ  ಹರ್ಟ್ ಅಟ್ಯಾಕ್ ಆಗುತ್ತಿರುವುದು ತಮಗೆಲ್ಲಾ ಗೊತ್ತಿದ್ದ ಸಂಗತಿ.

ಇಂದು ಎಷ್ಟೇ ಆರೋಗ್ಯವಂತರಾಗಿದ್ದರೂ ಹರ್ಟ್ ಅಟ್ಯಾಕ್ ಯಾವ ಕಾಲದಲ್ಲಿ ಯಾರಿಗೆ ಯಾವಾಗ ಬರುತ್ತದೆ ಎಂದು ಹೇಳಲಿಕ್ಕಾಗುವುದಿಲ್ಲ.  ಬೇರೆ ರೋಗಗಳಿಗಿಂತ ಹರ್ಟ್ ಅಟ್ಯಾಕ್ ಅತ್ಯಂತ ಆಘಾತಕಾರಿಯಾಗಿದೆ. ಏಕೆಂದರೆ ಹರ್ಟ್ ಅಟ್ಯಾಕ್ ಲಕ್ಷಣಗಳನ್ನು ತಿಳಿಯದೆ ಕೆಲವು ಸಲ ನಾವು ನಿರ್ಲಕ್ಷ ಮಾಡುತ್ತೇವೆ.ಹಾಗಾಗಿ ಹರ್ಟ್ ಅಟ್ಯಾಕ್ ಆದಾಗ ಮುಂಜಾಗ್ರತಾ ಕ್ರಮ ಕೈಗೊಳ್ಳದೆ ಇರುವುದರಿಂದ ಸಾವು ಸಂಭವಿಸುತ್ತದೆ.

ವೈದ್ಯರು ಹೇಳಿದ ಪ್ರಕಾರ ಹರ್ಟ್ ಅಟ್ಯಾಕ್ ಆಗುವಾಗ ದೇಹದಲ್ಲಿ ಏನೇನು ಬದಲಾವಣೆಯಾಗುತ್ತದೆ? ಯಾವ ಭಾಗದಲ್ಲಿ ನೋವು ಆಗುತ್ತದೆ ಎಂಬುದರ ಬಗ್ಗೆ ಇಲ್ಲಿ ಕೆಲವು ಮಾಹಿತಿಗಳನ್ನು ನೀಡಲಾಗಿದೆ.

Heart attach symptoms: ಹೃದಯಾಘಾತ ಆದಾಗ ಯಾವ ಭಾಗದಲ್ಲಿ ನೋವಾಗುತ್ತದೆ ಹಾಗೂ ಹೇಗಾಗುತ್ತದೆ?

ಇತ್ತೀಚೆಗೆ ಪತ್ರಿಕೆಯೊಂದರಲ್ಲಿ ಮಣಿಪಾಲ್ ಆಸ್ಪತ್ರೆಯಲ್ಲಿ ಖ್ಯಾತ ಹೃದಯರೋಗ ತಜ್ಞರಾಗಿರುವ ಡಾ. ಅನ್ಸುಲ್ ಕುಮಾರ ರರು ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದರು ಅವರ ಹೇಳಿದ ಪ್ರಕಾರ ಹರ್ಟ್ ಅಟ್ಯಾಕ್ ಮಾಹಿತಿ ಇಲ್ಲಿ ನೀಡಲಾಗಿದೆ.

ಹರ್ಟ್ ಅಟ್ಯಾಕ್ ಆದಾಗ ಬಹುತೇಕ ಎಲ್ಲರಿಗೂ ಮೊದಲು ಎದೆಯಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಈ ಸಮಯದಲ್ಲಿ ಕೆಲವರಿಗೆ ಎದೆಯಲ್ಲಿ ಭಾರ ಆದಂತೆ ಆಗುತ್ತದೆ. ಎಡಗಡೆ ಎದೆಯ ಭಾಗದಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಎದೆಯ ಮಧ್ಯ ಭಾಗದಲ್ಲಿ ಒತ್ತಿ ಹಿಡಿದ ಹಾಗೆ ಭಾಸವಾಗುತ್ತದೆ. ಎದೆಯಲ್ಲಿ ಬಿಗಿ ಬಂದ ಹಾಗೆ ನೋವಾಗುತ್ತದೆ.ಇನ್ನೂ ಕೆಲವರಿಗೆ ಎದೆಯ ಮೇಲೆ ಯಾರೋ ಬಂದು ಕುಳಿತಂತೆ ಆಗುತ್ತದೆ. ಬಿಗಿಯಾಗಿ ಹಿಡಿದುಕೊಂಡ ಹಾಗೆ ಆಗುತ್ತದೆ ಇವು ಹೃದಯಘಾತದ ಲಕ್ಷಣಗಳಾಗಿರುತ್ತವೆ.

ಹೃದಯಾಘಾತದ ಎದೆ ನೋವು 15 ರಿಂದ 20 ನಿಮಿಷ ಇರಬಹುದು. ಇಡೀ ದಿನ ಎದೆ ನೋವು ಇರುವುದಿಲ್ಲ. ಸಾಮಾನ್ಯವಾಗಿ ಎದೆಯ ಮಧ್ಯಭಾಗದಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಎದೆ ನೋವು ಒಂದು ಜಾಗದಿಂದ ಮತ್ತೊಂದು ಜಾಗಕ್ಕೆ ಜಂಪ್ ಆಗುವುದಿಲ್ಲ. ಒಂದೇ ಕಡೆಯಲ್ಲಿ ನೋವು ಕಾಣಿಸಿಕೊಳ್ಳುತ್ತದೆ ಎನ್ನುತ್ತಾರೆ ವೈದ್ಯರು.

ಇದನ್ನೂ ಓದಿ ಯಾವ ಯೋಜನೆಯಿಂದ ನಿಮಗೆಷ್ಟು ಹಣ ಜಮೆ ಆಗಿದೆ? ಇಲ್ಲೇ ಚೆಕ್ ಮಾಡಿ

ಎದೆಯಲ್ಲಿ ನೋವು ಕಾಣಿಸಿಕೊಂಡ ಬಳಿಕ ನೋವು ಕುತ್ತಿಗೆ ಕೈಗಳ ತೋಳು ಹಾಗೂ ಭುಜಗಳವರೆಗೂ ಹರಡುವ ಸಾಧ್ಯತೆಯಿರುತ್ತದೆ.  ಎದೆ ನೋವಿನ ಜೊತೆಗೆ ಬೆವರು ಜಾಸ್ತಿ ಇರುತ್ತದೆ. ವಾಂತಿ ಬಂದ ಹಾಗೆ ಇರುತ್ತದೆ. ಕೆಲವರಿಗೆ ವಾಂತಿನೂ ಬರುತ್ತದೆ. ಉಸಿರಾಟದ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಕೈ ಕಾಲುಗಳು ತಣ್ಣಗಾಗುತ್ತವೆ. ಇದಕ್ಕೆ ಕಾರಣ ದೇಹದಲ್ಲಿ ರಕ್ತ ಸಂಚಾರ ಸರಿಯಾಗಿ ಆಗುವುದಿಲ್ಲ. ಇದಕ್ಕಿದ್ದಂತೆ ಚರ್ಮದ ಬಣ್ಣ ನೀಲಿ ಬಣ್ಣಕ್ಕೆ ತಿರುಗುುದು. ಎಡಗಡೆ ಭುಜದಲ್ಲಿ ನೋವು, ತಲೆ ಸುತ್ತು ಬರುವುದು. ಎದೆ ಕಿವುಚಿದ ಹಾಗ ಅನುಭವ ಉಂಟಾಗುತ್ತದೆ.

ಚಳಿಗಾಲದಲ್ಲಿ ಎಚ್ಚರವಹಿಸುವುದು ಉತ್ತಮ. ಬೆಳಗ್ಗೆ ಸಮಯದಲ್ಲಿ ಚಳಿ ಹೆಚ್ಚಾಗಿರುವುದರಿಂದ ತೆಹ ಅತೀ ಶೀತ ವಾರಾವಣಕ್ಕೆ ಹೊಂದಿಕೊಳ್ಳುವುದು ಕಷ್ಟವಾಗುತ್ತದ. ಹಾಗಾಗಿ ಚಳಿಗಾದಲ್ಲಿ ರಕ್ತ ಸಂಚಾರದಲ್ಲಿ ಏರುಪೇರಾಗಿ ಹೃದಯಘಾತ ಉಂಟಾಗುವ ಸಾಧ್ಯತೆಯಿರುತ್ತದೆ.

ಎದೆಯಲ್ಲಿ ಅಚಾನಕ್ ಆಗಿ ನೋವು ಸಂಭವಸಿದರೆ ಕೂಡಲೇ ಹತ್ತಿರವಿರುವ ಆಸ್ಪತ್ರೆಯಲ್ಲಿವೈದ್ಯರ ಭೇಟಿಯಾಗುವುದು ಉತ್ತಮ. ಈ ಮಾಹಿತಿ ನಿಮಗೆ ಹೆಚ್ಚು ಉಪಯುಕ್ತವಾಗಿದ್ದರೆ ತಾವು ಕಾಮೆಂಟ್ ಮಾಡಿ ತಿಳಿಸಬಹುದು. ನಿಮ್ಮ ಸ್ನೇಹತರಿಗೂ ಈ ಲೇಖನ ಶೇರ್ ಮಾಡಬಹುದು. ಏಕೆಂದರೆ ಬಹುತೇಕ ಜನರಿಗೆ ಗೊತ್ತಿರುವುದಿಲ್ಲ.

Leave a Comment