ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಿಂದಾಗಿ ರೈತರು ಟ್ರ್ಯಾಕ್ಟರ್ ಗಳನ್ನು ಖರೀದಿಸಲು ಹಿಂಜರಿಯುತ್ತಿದ್ದರಿಂದ ಹರಿಯಾಣ ಕೃಷಿ ವಿಶ್ವವಿದ್ಯಾಲಯವು ರೈತರಿಗೆ ಅಗ್ಗದ ಇ ಟ್ರ್ಯಾಕ್ಟರ್ ಅಭಿವೃದ್ಧಿಪಡಿಸಿದೆ.

ಹೌದು, ಇತ್ತೀಚೆಗೆ ಅನೇಕ ಕಂಪನಿಗಳು ವಿವಿಧ ತಂತ್ರಜ್ಞಾನಗಳನ್ನು ಉಪಯೋಗಿಸುತ್ತಿದ್ದರೂ ಪೆಟ್ರೋಲ್ ಡಿಸೆಲ್ ಬೆಲೆ ಏರಿಕೆಯಿಂದಾಗಿ ಡಿಸೆಲ್ ಟ್ರ್ಯಾಕ್ಟರ್ ಖರೀದಿಗೆ ಹಿಂಜರಿಯುತ್ತಿದ್ದಾರೆ. ಹೀಗಾಗಿ ಹರಿಯಾಣ ಕೃಷಿ ವಿಶ್ವವಿದ್ಯಾಲಯದ  ವಿಜ್ಞಾನಿಗಳು ಎಲೆಕ್ಟ್ರಿಕ್ ಟ್ರ್ಯಾಕ್ಟರ್ ಅನ್ನು ಅಭಿವೃದ್ಧಿಪಡಿಸಿದ್ದಾರೆ. ಇದು ಡೀಸೆಲ್ ಟ್ರ್ಯಾಕ್ಟರ್ ಗಿಂತ ಶೇಕಡಾ 25 ರಷ್ಟು ಅಗ್ಗವಾಗಲಿದೆ.

ಈ ಟ್ರ್ಯಾಕ್ಟರ್ 16.2 ಕಿಲೋವ್ಯಾಟ್ ಬ್ಯಾಟರಿಯಿಂದ ಚಾಲಿತವಾಗಿದೆ ಮತ್ತು ಡೀಸೆಲ್ ಟ್ರ್ಯಾಕ್ಟರ್ ಗೆ ಹೋಲಿಸಿದರೆ ಇದರ ನಿರ್ವಹಣಾ ವೆಚ್ಚವು ತುಂಬಾ ಕಡಿಮೆ. ಈ ಇ-ಟ್ರ್ಯಾಕ್ಟರ್ 1.5 ಟನ್ ತೂಕದ ಟ್ರೇಲರ್ ನೊಂದಿಗೆ ಗಂಟೆಗೆ ಗರಿಷ್ಠ 23.17 ಕಿ.ಮೀ ವೇಗದಲ್ಲಿ ಚಲಿಸಬಲ್ಲದು.

ಇ ಟ್ರ್ಯಾಕ್ಟರ್ ವಿಶಿಷ್ಟತೆ

ಬ್ಯಾಟರಿ ಚಾಲಿತ ಟ್ರ್ಯಾಕ್ಟರ್ 16.2 ಕಿಲೋವ್ಯಾಟ್ ಗಂಟೆ (ಕೆಡಬ್ಲ್ಯೂಎಚ್) ಲಿಥಿಯಂ-ಅಯಾನ್ ಬ್ಯಾಟರಿಯಿಂದ ಚಾಲಿತವಾಗಿದೆ. ಇದು 12 ಕೆಡಬ್ಲ್ಯೂ ಎಲೆಕ್ಟ್ರಿಕ್ ಬ್ರಶ್ ಲೆಸ್ ಡಿಸಿ ಮೋಟರ್ ಅನ್ನು ಹೊಂದಿದೆ, ಈ ಬ್ಯಾಟರಿ ಚಾರ್ಜ್ ಗೆ 19ರಿಂದ 20 ಯೂನಿಟ್ ವಿದ್ಯುತ್ ಬಳಕೆಯಾಗುತ್ತದೆ. ಅದರ ಸಹಾಯದಿಂದ ಕೇವಲ 4 ಗಂಟೆಗಳಲ್ಲಿ ಟ್ರ್ಯಾಕ್ಟರ್ ಚಾರ್ಜ್ ಮಾಡಬಹುದು. ಬ್ಯಾಟರಿಯನ್ನು ಸಂಪೂರ್ಣವಾಗಿ ಚಾರ್ಜ್ ಮಾಡುವ ವೆಚ್ಚ ಸುಮಾರು 160 ರೂಪಾಯಿ ತಗಲುತ್ತದೆ.

ವೆಚ್ಚ ಮತ್ತು ನಿರ್ವಹಣೆ:

ವಿಶ್ವವಿದ್ಯಾಲಯದ ಕೃಷಿ ವಿಜ್ಞಾನಿಗಳು ಮೂಲಮಾದರಿ ಮಾದರಿಯಾಗಿರುವುದರಿಂದ, ಬ್ಯಾಟರಿ ಚಾಲಿತ ಟ್ರ್ಯಾಕ್ಟರ್ ಗೆ ಸುಮಾರು 6.5 ಲಕ್ಷ ರೂಪಾಯಿ ವೆಚ್ಚವಾಗಲಿದೆ. ಅದೇ ಅಶ್ವ ಶಕ್ತಿ ಹೊಂದಿರುವ ಡೀಸೆಲ್ ಟ್ರ್ಯಾಕ್ಟರ್ ಬೆಲೆ 4.50 ಲಕ್ಷ ರೂ. ಬ್ಯಾಟರಿ ಚಾಲಿತ ಟ್ರ್ಯಾಕ್ಟರ್ ಅನ್ನು ದೊಡ್ಡ ಪ್ರಮಾಣದಲ್ಲಿ ತಯಾರಿಸಿದರೆ ಆಗ ಈ ಟ್ರ್ಯಾಕ್ಟರ್ ನ ಬೆಲೆಯೂ ಡೀಸೆಲ್ ಟ್ರ್ಯಾಕ್ಟರ್ ಗೆ ಸಮನಾಗಿರುತ್ತದೆ. ಈ ಇ-ಟ್ರ್ಯಾಕ್ಟರ್ 1.5 ಟನ್ ತೂಕದ ಟ್ರೇಲರ್ ನೊಂದಿಗೆ 80 ಕಿ.ಮೀ.ವರೆಗೆ ಚಲಿಸಲಿದೆ ಈ ಟ್ರ್ಯಾಕ್ಟರ್ ಬಳಕೆಯಿಂದ ರೈತರ ಆದಾಯವೂ ಗಮನಾರ್ಹವಾಗಿ ಹೆಚ್ಚಲಿದೆ.

ಇದನ್ನೂ ಓದಿ : ಪಿಎಂ ಕಿಸಾನ್ ಯೋಜನೆಯ 10ನೇ ಕಂತಿನ ಲಿಸ್ಟ್ ನಲ್ಲಿ ನಿಮ್ಮ ಹೆಸರು ಮೊಬೈಲ್ ನಲ್ಲಿಯೇ ಚೆಕ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ಎಲೆಕ್ಟ್ರಿಕ್ ಟ್ರ್ಯಾಕ್ಟರ್ ಅನ್ನು ನಿರ್ವಹಿಸುವ ವೆಚ್ಚವು ಡೀಸೆಲ್ ಟ್ರ್ಯಾಕ್ಟರ್ ಗಿಂತ ಶೇಕಡಾ 15 ರಿಂದ 25 ರಷ್ಟು ಅಗ್ಗವಾಗಲಿದೆ ಎಂದು ಕೃಷಿ ವಿಜ್ಞಾನಿಗಳು ಮಾಹಿತಿ ನೀಡಿದ್ದಾರೆ.

“ಎಲೆಕ್ಟ್ರಿಕ್ ಟ್ರ್ಯಾಕ್ಟರ್ ಕೃಷಿಯಲ್ಲಿ ವೆಚ್ಚ ತಗ್ಗಿಸಲಿದೆ. ರೈತರು ಖರ್ಚುವೆಚ್ಚ ಉಳಿಸಬಹುದು. ಇದು ಅವರ ಸುಸ್ಥಿರ ಸಮೃದ್ಧಿಗೆ ದೊಡ್ಡ ಉತ್ತೇಜನ ನೀಡಲಿದೆ ಎಂದು ಹರಿಯಾಣ ರಾಜ್ಯಪಾಲ ಬಂಡಾರು ದತ್ತಾತ್ರೇಯ ತಿಳಿಸಿದ್ದಾರೆ.

ಕೃಪೆ: ಟೈಮ್ಸ್ ಆಫ್ ಇಂಡಿಯಾ

Leave a Reply

Your email address will not be published. Required fields are marked *