ರೈತರ ಮಕ್ಕಳಿಗೆ ಶಿಷ್ಯವೇತನ ಘೋಷಿಸಿದ ರಾಜ್ಯ ಸರ್ಕಾರ

Written by By: janajagran

Updated on:

Scholarship for farmers’ children ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೊದಲ ಸಚಿವ ಸಂಪುಟ ಸಭೆಯಲ್ಲಿ (Govt announced Scholarship for farmers’ children) ರೈತರ ಮಕ್ಕಳಿಗೆ ಘೋಷಿಸಿದ್ದ ಶಿಷ್ಯವೇತನಕ್ಕೆ ಶನಿವಾರ ಆದೇಶ ಹೊರಡಿಸಿದ್ದಾರೆ. 10ನೇ ತರಗತಿಯ ನಂತರ ರಾಜ್ಯದ ಯಾವುದೇ ಭಾಗದಲ್ಲಿ ಅಧಿಕೃತ ನೋಂದಾಯಿತ ಶಿಕ್ಷಣ ಸಂಸ್ಥೆ ಅಥವಾ ವಿಶ್ವವಿದ್ಯಾಲಯದಲ್ಲಿ ಪ್ರವೇಶ ಪಡೆದಿರುವ ರಾಜ್ಯದ ರೈತರ ಎಲ್ಲಾ ಮಕ್ಕಳಿಗೆ ಈ ವರ್ಷದಿಂದಲೇ ಶಿಷ್ಯವೇತನ ನೀಡಲಾಗುವುದು.

ಜುಲೈ 28 ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ರೈತರ ಮಕ್ಕಳ ಹೆಚ್ಚಿನ ಹಾಗೂ ಉನ್ನತ ಶಿಕ್ಷಣವನ್ನು ಪ್ರೋತ್ಸಾಹಿಸಲು ಹೊಸ ಸ್ಕಾಲರ್ ಶಿಪ್ ಯೋಜನೆ ಘೋಷಿಸಿ 1 ಸಾವಿರ ಕೋಟಿ ರೂಪಾಯಿ ಮೀಸಲಿಡಲು ನಿರ್ಧರಿಸಲಾಗಿತ್ತು.

ಸ್ಕಾಲರ್ ಶಿಪ್ ನ್ನು ರೈತರ ಎಲ್ಲಾ ಮಕ್ಕಳಿಗೆ ಬ್ಯಾಂಕ್ ಖಾತೆಗಳಿಗೆ ನೇರ ನಗದು ವರ್ಗಾವಣೆ ಪದ್ಧತಿಯ ಮೂಲಕ ವರ್ಗಾವಣೆ ಮಾಡಲಾಗುವುದು.

Scholarship for farmers’ children ಶಿಷ್ಯವೇತನಕ್ಕೆ ಷರತ್ತುಗಳು

ರೈತರ ಮಕ್ಕಳು ಕರ್ನಾಟಕ ರಾಜ್ಯದ ಅನುದಾನದಿಂದ ಪಾವತಿಸುವಂತಹ ಒಂದು ವಿದ್ಯಾರ್ಥಿವೇತನಕ್ಕೆ ಮಾತ್ರ ಅರ್ಹರಿರುತ್ತಾರೆ. ಮೆರಿಟ್, ಅರ್ಹತಾ ಪರೀಕ್ಷೆ, ಶೈಕ್ಷಣಿಕ ಪರೀಕ್ಷೆಗಳಲ್ಲಿ ರ್ಯಾಂಕ್ ಇತ್ಯಾದಿಗಳ ಆಧಾರದ ಮೇಲೆ ಶಿಷ್ಯ ವೇತನ, ಪ್ರಶಸ್ತಿ ಪಡೆದ ರೈತರ ಮಕ್ಕಳು ಅರ್ಹರಾಗಿರುತ್ತಾರೆ. ಯಾವುದಾದರೊಂದು ವಿಧಧ ಕ್ರೋಸ್ಗೆ ಶಿಷ್ಯವೇತನ ದೊರೆಯಲಿದೆ. ಶಿಷ್ಯವೇತವು ಶಿಕ್ಷಣದ ಯಾವುದೇ ಕೋರ್ಸ್ ನ ಸೆಮಿಸ್ಟರ್, ಶೈಕ್ಷಣಿಕ ವರ್ಷಗಳಿಗೆ ಮಾತ್ರ ಸೀಮಿತವಾಗಿರುತ್ತದೆ.  ಒಂದು ಸೆಮಿಸ್ಟರ್ ನಲ್ಲಿ ಅನುತ್ತೀರ್ಣರಾದರೆ ಮರು ಪುನರಾವರ್ತನೆಯಾಗುವ ರೈತರ ಮಕ್ಕಳಿಗೆ ಈ ಸೌಲಭ್ಯ ಸಿಗುವುದಿಲ್ಲ.

ವಿದ್ಯಾರ್ಥಿ ವೇತನವು ಯಾವುದಾದರೊಂದು ಕೋರ್ಸ್ ಗೆ ಮಾತ್ರ ಸಿಗುತ್ತದೆ. ಉದಾಹರಣೆಗೆ ಒಂದು ಸ್ನಾತಕೋತ್ತರ ಪದವಿ ಮುಗಿಸಿ ಬಳಿಕ ಮತ್ತೊಂದು ಸ್ನಾತಕೋತ್ತರ ಪದವಿ ತೆಗೆದುಕೊಂಡರೆ ಅಂತಹ ಮಕ್ಕಳಿಗೆ ವಿದ್ಯಾರ್ಥಿವೇತನ ಸಿಗುವುದಿಲ್ಲ. ಒಂದು ಸ್ನಾತಕೋತ್ತರ ಪದವಿಗೆ ಮಾತ್ರ ಸ್ಕಾಲರ್ ಶಿಪ್ ಸಿಗುತ್ತದೆ.

ರೈತರ ಯಾವ ಮಕ್ಕಳು ಈ ಶಿಷ್ಯವೇತನಕ್ಕೆ ಅರ್ಹರು

ರಾಜ್ಯದ ಯಾವುದೇ ಭಾಗದಲ್ಲಿ ಉಳುಮೆ, ಕೃಷಿ ಮಾಡುವಂತಹ ಜಮೀನನ್ನು ತನ್ನ ಹೆಸರಿನಲ್ಲಿರುವ ವ್ಯಕ್ತಿಯನ್ನು ರೈತ ಎಂದು ಪರಿಗಣಿಸಲಾಗುತ್ತದೆ. ಕಾನೂನು ಪ್ರಕಾರ ದತ್ತು ಪಡೆದಿರುವ ಮಕ್ಕಳೂ ಸಹ ಶಿಷ್ಯವೇತನ ಪಡೆಯಲು ಅರ್ಹರಾಗಿರುತ್ತಾರೆ.

ಸರ್ಕಾರದಿಂದ ಮಂಜೂರು ಮಾಡಲಾದ ಶಿಷ್ಯವೇತನದ ಪಟ್ಟಿ

ಪಿಯುಸಿ, ಐಟಿಐ ಮತ್ತು ಡಿಪ್ಲೋಮಾ ಕೋರ್ಸ್ಗಳಿಗೆ  ವಿದ್ಯಾರ್ಥಿಗಳಿಗೆ 2500 ವಿದ್ಯಾರ್ಥಿನಿಯರಿಗೆ 3000 ರೂಪಾಯಿ ಶಿಷ್ಯವೇತನ ನೀಡಲಾಗುವುದು.

ಬಿಎ, ಬಿಎಸ್.ಸಿ, ಬಿಕಾಂ ವಿದ್ಯಾರ್ಥಿಗಳಿಗೆ 5000 ರೂಪಾಯಿ ವಿದ್ಯಾರ್ಥಿನಯರಿಗೆ 5500 ರೂಪಾಯಿ ನೀಡಲಾಗುವುದು

ಇದನ್ನೂ ಓದಿ ಅನ್ನಭಾಗ್ಯ ಹಣ ನಿಮಗೆ ಜಮೆಯಾಗಿಲ್ಲವೇ? ಸ್ಟೇಟಸ್ ಚೆಕ್ ಮಾಡಿ

ಎಲ್ಎಲ್ಬಿ, ಪ್ಯಾರಾ ಮೆಡಿಕಲ್, ಬಿಫಾರ್ಮಾ, ನರ್ಸಿಂಗ್, ಇತ್ಯಾದಿ ವೃತ್ತಿಪರ ಕೋರ್ಸ್ಗಳಿಗೆ ವಿದ್ಯಾರ್ಥಿಗಳಿಗೆ 7500 ರೂಪಾಯಿ ವಿದ್ಯಾರ್ಥಿನಿಯರಿಗೆ 8000 ರೂಪಾಯಿ ಶಿಷ್ಯವೇತನ ನೀಡಲಾಗುವುದು.

ಎಂಬಿಬಿಎಸ್, ಬಿಇ, ಬಿಟೆಕ್ ಸೇರಿದಂತೆ ಎಲ್ಲಾ ಸ್ನಾತಕೋತ್ತರ ಕೋರ್ಸ್ ಗಳಿಗೆ ವಿದ್ಯಾರ್ಥಿಗಳಿಗೆ 10,000 ವಿದ್ಯಾರ್ಥಿನಿಯರಿಗೆ 11,000 ಸಾವಿರ ರೂಪಾಯಿ ನೀಡಲಾಗುವುದು.

Leave a Comment