Goat farming 10 days training ಕುರಿ, ಮೇಕೆ ಸಾಕಾಣಿಕೆಯಲ್ಲಿ ಆಸಕ್ತಿಯಿರುವ ರೈತರಿಗಿಲ್ಲಿದೆ ಸಂತಸದ ಸುದ್ದಿ. ಕೃಷಿ ಯೊಂದಿಗೆ ಕುರಿ ಸಾಕಾಣಿಕೆಯಂತಹ ಉಪಕಸುಬುಗಳನ್ನು ಮಾಡಲು ರೈತರಿಗೆ 10 ದಿನಗಳ ಕಾಲ ಉಚಿತವಾಗಿ ಕುರಿತಸಾಕಾಣಿಕೆಗೆ ತರಬೇತಿ ನೀಡಲು ಅರ್ಜಿ ಕರೆಯಲಾಗಿದೆ. ಹೌದು, ಕೊಪ್ಪಳ ಜಿಲ್ಲೆಯ ರೈತರಿಗಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಯಿಂದ ಗ್ರಾಮೀಣ ಭಾಗದ ಆಸಕ್ತರಿಗೆ 10 ದಿನಗಳ ಉಚಿತ ಕುರಿ ಸಾಕಾಣಿಕೆ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಅರ್ಹ ಅಭ್ಯರ್ಥಿಗಳು 18 ರಿಂದ 45 ವರ್ಶ ಒಳಗಿನವರಾಗಿರಬೇಕು. ಕನಿಶ್ಟ 8ನೇ ತರಗತಿ ಪಾಸಾಗಿರಬೇಕು.ಕೊಪ್ಪಳ ಜಿಲ್ಲೆಯ ಗ್ರಾಮೀಣ ಭಾಗದವರಾಗಿರಬೇಕು. ಸ್ವಯಂ ಉದ್ಯೋಗದಲ್ಲಿ ಆಸಕ್ತಿ ಹೊಂದಿರಬೇಕು. ಅರ್ಜಿಯನ್ನು ನಿರ್ದೇಶಕರು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆ ಜಿಲ್ಲಾ ಕೈಗಾರಿಕಾ ಕೇಂದ್ರ ಆವರಣ, ಅಶೋಕ ಸರ್ಕಲ್ ಹತ್ತಿರ, ಕೊಪ್ಪಳ ಈ ವಿಳಾಸಕ್ಕೆ ಮಾರ್ಚ್ 13ರೊಳಗಾಗಿ ಅರ್ಜಿ ಸಲ್ಲಿಸಬೇಕು.
ಮಾರ್ಚ್14 ರಂದು ಬೆಳಗ್ಗೆ 10.30ಕ್ಕೆ ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನುಆಯ್ಕೆ ಮಾಡಲಾಗುವುದು. ಮಾರ್ಚ್ 15 ರಿಂದ ತರಬೇತಿ ಪ್ರಾರಂಭವಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08539 230138 ಗೆ ಸಂಪರ್ಕಿಸಬಹುದು ಎಂದು ಕೊಪ್ಪಳ ಎಸ್.ಬಿ.ಐ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Goat farming 10 days training ಪಶು ಪಾಲಕರಿಗೆ ಆರಂಭವಾಗಿದೆ ಸಹಾಯವಾಣಿ
ಪಶುಪಾಲನೆಯಲ್ಲಿ ಆಸಕ್ತಿಯಿರುವ ರೈತರಿಗಾಗಿ ಸರ್ಕಾರದ ವತಿಯಿಂದ ಪಶುಪಾಲಕರ ಸಹಾಯವಾಣಿಯನ್ನು ಆರಂಭಿಸಲಾಗಿದೆ. ರೈತರು ಮನೆಯಲ್ಲಿಯೇ ಕುಳಿತು ಪಶುಪಾಲನೆ ಕುರಿತು ಮಾಹಿತಿ ಪಡೆಯಲು ಈ ಸಹಾಯವಾಣಿಯನ್ನು ಆರಂಭಿಸಲಾಗಿದೆ. ರೈತರು 8277 100 200 ನಂಬರಿಗೆ ಕರೆ ಮಾಡಿದರೆ ಸಾಕು ಪಶುಪಾಲನೆ ಕುರಿತು ಮಾಹಿತಿ ನೀಡಲಿದ್ದಾರೆ.ಈ ಸಹಾಯವಾಣಿಯು ದಿನ 24*7 ಗಂಟೆ ಕಾರ್ಯನಿರ್ವಹಿಸಲಿದೆ. ಬೆಳಗ್ಗೆ 7 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಈ ಸಹಾಯವಾಣಿ ಕಾರ್ಯ ನಿರ್ವಹಿಸಲಿದೆ.
ರೈತರು ಮೇಲಿನ ಉಚಿತ ಸಹಾಯವಾಣಿಗೆ ಕರೆ ಮಾಡಿ ತಮ್ಮ ಜಿಲ್ಲೆಯಲ್ಲಿ ಯಾವಾಗ ಕುರಿ, ಮೇಕೆ, ಮೊಲ, ಹೈನುಗಾರಿಕೆ, ಕೋಳಿ ಸಾಕಾಣಿಕ ತರಬೇತಿ ನೀಡಲಾಗುವುದು ಎಂಬ ಮಾಹಿತಿ ನೀಡುವರು. ಇದರೊಂದಿಗೆ ದೇಶಿ ಹಾಗೂ ವಿದೇಶಿ ಜಾನುವಾರು ತಳಿಗಳ ಬಗ್ಗೆ ಮಾಹಿತಿ ನೀಡಲಿದ್ದಾರೆ.
ಇದನ್ನೂ ಓದಿ PM kisan Mandhan Yojane ಯಡಿ ರೈತರಿಗೆ ಸಿಗಲಿದೆ 3 ಸಾವಿರ Pension
ಪಶು ಸಂಗೋಪನಾ ಚಟುವಟಿಕೆಗಳಿಗೆ ವಿವಿಧ ಬ್ಯಾಂಕುಗಳಿಂದ ದೊರೆಯಬಹುದಾದ ಸಾಲ ಸೌಲಭ್ಯ ಕುರಿತು ರೈತರಿಗೆ ಉಚಿತವಾಗಿ ಮಾಹಿತಿ ನೀಡಲಿದ್ದಾರೆ. ರೈತರು ಉಚಿತ ಸಹಾಯವಾಣಿಗೆ ಕರೆ ಮಾಡಿದಾಗ ಹತ್ತಿದ ಪಶು ಇಲಾಖೆಯ ಅಧಿಕಾರಿಗಳಿಗೆ ಕರೆಯನ್ನುಸಂಪರ್ಕ ಕಲ್ಪಿಸುವರು. ಆಗ ರೈತರು ಪಶು ಸಂಗೋಪನೆ ಕುರಿತು ವಿವರವಾಗಿ ಮಾಹಿತಿ ಪಡೆಯಬಹುದು. ತುರ್ತು ಪಶುವೈದ್ಯ ಸೇವೆಗಳಿಗಾಗಿ ಹತ್ತಿರದ ಇಲಾಖಾ ತಾಂತ್ರಿಕ ಸಿಬ್ಬಂದಿ ಅಥವಾ ಅಧಿಕಾರಿಗಳಿಗೆ ವರ್ಗಾಯಿಸಿ ಅಗತ್ಯಸೇವೆ ದೊರೆಯುವಂತೆ ಸಹಕರಿಸುವರು.
ರೈತರಿಗೆ ಪಶುಪಾಲನೆ ಕುರಿತು ತರಬೇತಿ ನೀಡಲು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ತರಬೇತಿ ಕೇಂದ್ರಗಳನ್ನು ಆರಂಭಿಸಲಾಗಿದೆ. ಪ್ರಸ್ತುತ ರಾಜ್ಯದಲ್ಲಿ 25 ತರಬೇತಿ ಕೇಂದ್ರಗಳಿವೆ. ನಿಮ್ಮ ಜಿಲ್ಲಾ ವ್ಯಾಪ್ತಿಯಲ್ಲಿ ಯಾವ ಯಾವ ತರಬೇತಿ ಕೇಂದ್ರಗಳಿವೆ ಎಂಬುದನ್ನು ನೋಡಲು
ಈ http://www.ahvs.kar.nic.in/kn-institutionstrg.html
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಆಯುಕ್ತಾಲಯ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ವೆಬ್ ಪೇಜ್ ಓಪನ್ ಆಗುತ್ತದೆ ಅಲ್ಲಿ ರಾಜ್ಯದ 25 ತರಬೇತಿ ಕೇಂದ್ರಗಳಲ್ಲಿ ಯಾವ ಜಿಲ್ಲೆಯಲ್ಲಿ ಯಾವುದರ ಕುರಿತು ತರಬೇತಿಗಳನ್ನು ನೀಡಲಾಗುತ್ತದೆ ಎಂಬ ಪಟ್ಟಿ ಇರುತ್ತದೆ.
ತರಬೇತಿಯಲ್ಲಿ ಏನೇನು ತರಬೇತಿ ನೀಡಲಾಗುತ್ತದೆ. ಉದಾಹರಣೆಗೆ ಮೂರು ದಿನಗಳ ಕಾಲದ ತರಬೇತಿ ಇದ್ದರೆ ಏನೇನು ತರಬೇತಿ ನೀಡಲಾಗುತ್ತದೆ ಎಂಬ ಮಾಹಿತಿಯೂ ಇಲ್ಲಿ ಸಿಗುತ್ತದೆ. ತರಬೇತಿಯ ಕುರಿತು ನೋಡಲು ರೈತರು ತರಬೇತಿ ಪಠ್ಯಕ್ರಮ ಕುರಿತು ನೋಡಬೇಕೆಂದರೆ
ಈ http://www.ahvs.kar.nic.in/pdfs/notifications/Training_Mod_SHEEP%20&%20GOAT%20FARMING.pdf
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಮೂರು ದಿನಗಳಕಾಲ ಯಾವ ಯಾವ ತರಬೇತಿ ನೀಡಲಾಗುತ್ತದೆ ಎಂಬ ಮಾಹಿತಿ ಕಾಣುತ್ತದೆ.