ಕೃಷಿ, ತೋಟಗಾರಿಕೆ ಇಲಾಖೆಯಿಂದ ಕಳೆದ ಮೂರು ವರ್ಷಗಳಲ್ಲಿ ಕೃಷಿ ಯಂತ್ರೋಪಕರಣಗಳ ಪಡೆದವರ ಫಲಾನುಭವಿಗಳ ಪಟ್ಟಿ ನೋಡಬೇಕೆ…… ಇಲ್ಲಿದೆ ಸಂಪೂರ್ಣ ಮಾಹಿತಿ

Written by By: janajagran

Published on:

ರೈತರಿಗೆ ಸಂತಸದ ಸುದ್ದಿ. ರೈತರು ಮನೆಯಲ್ಲಿಯೇ ಕುಳಿತು ಕೃಷಿ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆಯಿಂದ ಕಳೆದ ಮೂರು ವರ್ಷಗಳಲ್ಲಿ ಕೃಷಿ ಯಂತ್ರೋಪಕರಣಗಳ ಪಡೆದವರ ಫಲಾನುಭವಿಗಳ ಪಟ್ಟಿಯನ್ನು ನೋಡಬಹುದು. ಹೌದು ರಾಜ್ಯ ಸರ್ಕಾರವು ಮಾಹಿತಿ ಕಣಜ ಎಂಬ ತಂತ್ರಾಂಶದಲ್ಲಿ ಈ ಸೌಲಭ್ಯವನ್ನು ಒದಗಿಸಲಾಗಿದೆ.

ಕೃಷಿ ಯಂತ್ರೋಪಕರಣಗಳನ್ನು ಫಲಾನುಭವಿಗಳಿಗೆ ಹಂಚುವಲ್ಲಿ ಪಾರದರ್ಶಕ ತರುವುದಕ್ಕಾಗಿ ರೈತರ ಕೈಯಲ್ಲಿಯೇ ಎಲ್ಲಾ ಸೌಲಭ್ಯವನ್ನು ಒದಗಿಸಿದೆ. ನಿಮ್ಮ ಗ್ರಾಮದಲ್ಲಿ ಯಾರ್ಯಾರು ಕೃಷಿ ಇಲಾಖೆಯಿಂದ ಸೌಲಭ್ಯ ಪಡೆದುಕೊಂಡಿದ್ದೀರಾ ಎಂಬ ವಿವರ ನೋಡಲು ಎಲ್ಲಿಯೂ ಹೋಗಬೇಕಿಲ್ಲ. ಮನೆಯಲ್ಲಿಯೇ ಕುಳಿತು ಮೊಬೈಲ್ ನಲ್ಲಿಯೇ ನೋಡಬಹುದು.

ರೈತರು ಮೊದಲು https://mahitikanaja.karnataka.gov.in/AllService ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಸರ್ಕಾರದ ಮಾಹಿತಿ ಕಣಜ ಎಂಬ ವೆಬ್ ಪೇಜ್ ಓಪನ್ ಆಗುತ್ತದೆ. ಅಲ್ಲಿ ಬ್ಯಾಂಕುಗಳು ಮತ್ತು ಎಟಿಎಂ ಪಟ್ಟಿ, ಚುನಾಯಿತ ಗ್ರಾಮ ಪಂಚಾಯತ್ ಪ್ರತಿನಿಧಿಗಳ ಪಟ್ಟಿ, ಮನೆ ತೆರಿಗೆ ಸಂಗ್ರಹ ಮತ್ತು ಬಾಕಿ, ಪರಿಹಾರ ವಿವರಗಳು. ಪಡಿತರ ಅಂಗಡಿಗಳ ವಿವರಗಳು. ಪಡಿತರ ಮಾಹಿತಿ, ಪಿಂಚಣಿ, ಪೊಲೀಸ್ ಠಾಣೆ, ಕೃಷಿ ನನ್ನ ವರದಿ, ನಿಮ್ಮ ಅರ್ಜಿ ಸ್ಥಿತಿಯನ್ನು ತಿಳಿಯಿರಿ, ಕೃಷಿ ಪ್ರದೇಶ ವರದಿ ಸೇರಿದಂತೆ ಹಲವಾರು ಸೇವೆಗಳು ಬಾಕ್ಸ್ ಕಾಣುತ್ತದೆ. ನೀವು ಕೃಷಿ ಪ್ರದೇಶ ವರದಿ ಮೇಲೆ ಕ್ಲಿಕ್ ಮಾಡಬೇಕು. ಆಗ ಸರ್ಕಾರವು ಆರಂಭಿಸಿದ ಮಾಹಿತಿ ಕಣಜದ ವೆಬ್ ಪೇಜ್ ಓಪನ್ ಆಗುತ್ತದೆ.

ಅಲ್ಲಿ ನೀವು ಜಿಲ್ಲೆ, ತಾಲೂಕು, ಹೋಬಳಿ, ಗ್ರಾಮ, ಹಣಕಾಸು ವರ್ಷ ಯೋಜನೆಗಳಲ್ಲಿ ಕೃಷಿ ಸಂಸ್ಕರಣೆ, ಫಾರ್ಮ್ ಯಾಂತ್ರೀಕರಣ, ಕೃಷಿ ಭಾಗ್ಯ ಹಾಗೂ ಸೂಕ್ಷ್ಮ ನೀರಾವರಿ ಎಂಬು ನಾಲ್ಕು ಆಯ್ಕೆಗಳಿರುತ್ತವೆ. ಇದರಲ್ಲಿ ನೀವು ಯಾವುದನ್ನು ನೋಡಬೇಕೆಂದುಕೊಂಡಿದ್ದೀರೋ ಅದನ್ನು ಆಯ್ಕೆ ಮಾಡಿಕೊಳ್ಳಬೇಕು.  ಸೂಕ್ಷ್ಮ ನೀರಾವರಿ ಅಡಿಯಲ್ಲಿ ಸ್ಪ್ರೀಂಕ್ಲರ್ ಪಡೆದುಕೊಂಡವರ ಫಲಾನುಭವಿಗಳ ಪಟ್ಟಿ ನೋಡಬೇಕೆಂದುಕೊಂಡಿದ್ದರೆ ಸೂಕ್ಷ್ಮ ನೀರಾವರಿಯನ್ನು ಆಯ್ಕೆ ಮಾಡಿಕೊಳ್ಳಬೇಕು. ಕೃಷಿ ಯಂತ್ರೋಪಕರಣಗಳು ಪಡೆದುಕೊಂಡವರ ಫಲಾನುಭವಿಗಳ ಪಟ್ಟಿ ನೋಡಬೇಕಾದರೆ ನೀವು ಕೃಷಿ ಫಾರ್ಮ ಯಾಂತ್ರೀಕರಣ ಆಯ್ಕೆ ಮಾಡಿಕೊಳ್ಳಬೇಕು.

ಇದನ್ನೂ ಓದಿ :ಪಿಎಂ ಕಿಸಾನ್ ಯೋಜನೆಯ 10ನೇ ಕಂತಿನ ಫಲಾನುಭವಿಗಳ ಲಿಸ್ಟ್ ಬಿಡುಗಡೆ, ಮೊಬೈಲ್ ನಲ್ಲಿಯೇ ನಿಮ್ಮ ಹೆಸರು ಚೆಕ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ಉದಾಹರಣೆಗೆ ನೀವು ಯಂತ್ರೋಪಕರಣಗಳ ಪಡೆದವರ ಫಲಾನುಭವಿಗಳ ಪಟ್ಟಿ ನೋಡಬೇಕಾದರೆ ಜಿಲ್ಲೆ, ತಾಲೂಕು, ಹೋಬಳಿ, ಗ್ರಾಮ, ಹಣಕಾಸು ವರ್ಷ (ಯಾವ ವರ್ಷ ಅರ್ಜಿ ಸಲ್ಲಿಸಲಾಗಿದೆ) ಯೋಜನೆಗಳಲ್ಲಿ ಫಾರ್ಮ ಯಾಂತ್ರೀಕರಣ ಆಯ್ಕೆ ಮಾಡಿಕೊಳ್ಳಬೇಕು. ನಂತರ ಕ್ಯಾಪ್ಚ್ಯಾ ಕೋಡ್ ನಮೂದಿಸಿ ಸಲ್ಲಿಸು ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮ್ಮ ಗ್ರಾಮದಿಂದ ಕಳೆದ ಮೂರು ವರ್ಷಗಳಲ್ಲಿ ಕೃಷಿ ಯಂತ್ರೋಪಕರಣಗಳನ್ನು ಪಡೆದವರ ಹೆಸರು ಕಾಣುತ್ತದೆ. ಅಲ್ಲಿ  ಜಿಲ್ಲೆ, ತಾಲೂಕು, ಹೋಬಳಿ, ಗ್ರಾಮ, ರೈತರ ಸಂಖ್ಯೆ ಫ್ರೂಟ್ಸ್ ಐಡಿ, ಯೋಜನೆಯ ಹೆಸರು, ಹಣಕಾಸು ವರ್ಷ, ಯಾವ ಉಪಕರಣ ಪಡೆಯಲಾಗಿದೆ ಯಾವ ಕಂಪನಿಯ ಉಪಕರಣ ಪಡೆಯಲಾಗಿದೆ, ಸರ್ಕಾರದಿಂದ ಎಷ್ಟು ಸಬ್ಸಿಡಿ ದೊರೆತಿದೆ ಹಾಗೂ ರೈತರು ಪಾವತಿಸಿದ ಮೊತ್ತವೂ ಕಾಣುತ್ತದೆ. ರೈತನ ಹೆಸರು ನೋಡಬೇಕಾದರೆ ವಿವರಗಳು ಮೇಲೆ ಕ್ಲಿಕ್ ಮಾಡಬೇಕು. ಆಗ ರೈತರ ಹೆಸರು, ತಂದೆಯ ಹೆಸರು ಸೇರಿದಂತೆ ಎಲ್ಲಾ ಮಾಹಿತಿಯೂ ಕಾಣುತ್ತದೆ.

Leave a comment