ಈಗ ಜನನ ಮತ್ತು ಮರಣ ಪ್ರಮಾಣ ಪತ್ರಗಳನ್ನು ಪಡೆಯಲು ಕಚೇರಿಗಳಿಗೆ ಅಲೆದಾಡುವ ಅವಶ್ಯಕತೆಯಿಲ್ಲ. ಮುಂಚೆ ಜನನ ಮತ್ತು ಮರಣ ಪ್ರಮಾಣ ಪತ್ರಗಳನ್ನು ಪಡೆಯಲು ತಾಲೂಕು ಮತ್ತು ಪಟ್ಟಣ ಪ್ರದೇಶಗಳಿಗೆ ಹೋಗಬೇಕಾಗಿತ್ತು. ಈಗ ಎಲ್ಲಿಯೂ ಹೋಗಬೇಕಾಗಿಲ್ಲ. ಮನೆಯಲ್ಲಿಯೇ ಕುಳಿತು ಕ್ಷಣಾರ್ಧದಲ್ಲಿ ಜನನ ಮರಣ ಪ್ರಮಾಣ ಪತ್ರಗಳನ್ನು (Get  birth/death certificate in mobile ) ಪಡೆದುಕೊಳ್ಳಬಹುದು. ಅದು ಹೇಗೆ ಅಂದುಕೊಂಡಿದ್ದೀರಾ….. ಇಲ್ಲಿದೆ ಮಾಹಿತಿ.

ಮನೆಯಲ್ಲಿಯೇ ಕುಳಿತು ನಿಮ್ಮ ಮೊಬೈಲ್, ಲ್ಯಾಪ್ ಟಾಪ್ ಅಥವಾ ಕಂಪ್ಯೂಟರ್ ಯಾವುದರಲ್ಲಾದರೂ ಒಂದೇ ನಿಮಿಷಯದಲ್ಲಿ ಪ್ರಮಾಣ ಪತ್ರಗಳನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.

ನಿಮ್ಮ ಮೊಬೈಲಿನಲ್ಲಿ ಗೂಗಲ್ನಲ್ಲಿ  e janma ಎಂದು ಟೈಪ್ ಮಾಡಿದಾಗ ಇಜನ್ಮ ಕರ್ನಾಟಕ ಲಿಂಕ್ ಬರುತ್ತದೆ ಅದರ ಮೇಲೆ ಕ್ಲಿಕ್ ಮಾಡಬೇಕು. ನಂತರ Birth/Death verification  ಮೇಲೆ ಕ್ಲಿಕ್ ಮಾಡಬೇಕು.  ಅಲ್ಲಿ ನಿಮಗೆ ಬರ್ತ್ ಸರ್ಟಿಪಿಕೇಟ್ ಬೇಕೋ ಅಥವಾ ಡೆತ್ ಸರ್ಟಿಫಿಕೇಟ್ ಬೇಕೋ ಎಂಬುದನ್ನು ಗುರುತಿಸಬೇಕು. ಒಂದು ವೇಳೆ ಬರ್ತ್ ಸರ್ಟಿಫಿಕೇಟ್ ಬೇಕಾದರೆ ಬರ್ತ್ ಸರ್ಟಿಫಿಕೇಟ್ ಮೇಲೆ ಕ್ಲಿಕ್ ಮಾಡಿ ರೆಜಿಸ್ಟ್ರೇಷನ್ ನಂಬರ್ ಮತ್ತು ಹುಟ್ಟಿದ ದಿನಾಂಕ ಹಾಕಿ ಕ್ಯಾಪ್ಚಾಕೋಡ್ ನೋಡಿ ಅದೇ ರೀತಿ ಟೈಪ್ ಮಾಡಬೇಕು. ಆಗ ನಿಮ್ಮ ಬರ್ತ್ ಸರ್ಟಿಫಿಕೇಟ್ ಓಪನ್ ಆಗುತ್ತದೆ.

ಒಂದುವೇಳೆ 1-7-2018 ರ ಮೊದಲು ಜನನ ಹಾಗೂ ಮರಣ ಹೊಂದಿದ್ದರೆ https://ejanma.karnataka.gov.in/frmBirthDeathSearch.aspx ಲಿಂಕ್ ಮೇಲ ಕ್ಲಿಕ್ ಮಾಡಿದ ನಂತರ ಕೆಳಗಡಿ ರೆಡ್ ಕಲರ ನಲ್ಲಿ ಕ್ಲಿಕ್ ಹಿಯರ್ ಸರ್ಚ್ ULB DATA Registration date before 1/7/2018  ಮೇಲೆ ಕ್ಲಿಕ್ ಮಾಡಬೇಕು. ಅಥವಾ https://ejanma.karnataka.gov.in/frmBirthDeathSearch_ULB.aspx ಈ ಲಿಂಕ್ ಮೇಲೆ ಕ್ಲಿಕ್ ಮಾಡಿ. ಇಲ್ಲಿ ಸಹ ಬರ್ತ್ ಅಥವಾ ಡೆತ್ ಎರಡರಲ್ಲಿ ಯಾವುದಾದರೊಂದನ್ನು ಆಯ್ಕೆ ಮಾಡಿಕೊಳ್ಳಬೇಕು.

ನಿಮ್ಮ ಜಿಲ್ಲೆ, ತಾಲೂಕು ಆಯ್ಕೆ ಮಾಡಿಕೊಂಡು ರಿಜಿಸ್ಟ್ರರ್ ನಂಬರ್ ಹಾಕಬೇಕು. ಡೇಟ್ ಆಫ್ ಬರ್ತ್  ಹಾಕಿದ ನಂತರ ಕ್ಯಾಪ್ಚಾ ಕೋಡ್ ಯಾವ ರೀತಿ ಇರುತ್ತದೆಯೋ ಅದೇ ರೀತಿ ಟೈಪ್ ಮಾಡಬೇಕು. ನಂತರ ಸರ್ಚ್ ಆಫ್ಯನ್ ಮೇಲೆ ಕ್ಲಿಕ್ ಮಾಡಿದರೆ ಸಾಕು. ಜನನ ಪ್ರಮಾಣ ಪತ್ರ ಓಪನ್ ಆಗುತ್ತದೆ. ಆಗ ನೀವು ಡೌನ್ಲೋಡ್ ಮಾಡಿಕೊಂಡು ಪ್ರಿಂಟ್ ತೆಗೆದುಕೊಳ್ಳಬಹುದು.

ಹೆಚ್ಚಿನ ಮಾಹಿತಿಗಾಗಿ 1800-425-6578 ಗೆ ಸಂಪರ್ಕಿಸಬಹುದು.

Leave a Reply

Your email address will not be published. Required fields are marked *