Ganga Kalyan Scheme ಮಂಜೂರಾದ 45 ದಿನದಲ್ಲಿ ಕಾರ್ಯಮುಗಿಸಿ

Written by By: janajagran

Updated on:

Ganga Kalyan Scheme ಯಡಿ ಗುತ್ತಿಗೆದಾರರ ಮೂಲಕ ಕೊಳವೆಬಾವಿ ಹಾಕಿಸಿಕೊಳ್ಳುವ ವ್ಯವಸ್ಥೆಯನ್ನು ಮಂಜೂರಾದ 45 ದಿನದಲ್ಲಿ ಕಾರ್ಯ ಮುಗಿಸಲು ಗಡವು ನೀಡಲಾಗಿದೆ.

ಫಲಾನುಭವಿಗಳೇ ನೋಂದಾಯಿತ ಕಂಪನಿಗಳನ್ನು ಆಯ್ಕೆ ಮಾಡಿಕೊಳ್ಳುವ (Ganga Kalyan Yojana to be modified for selection) ವಿನೂನತ ಕ್ರಮಕ್ಕೆ ಯೋಚಿಸಲಾಗುತ್ತಿದೆ .ಇದಕ್ಕಾಗಿ ಸಮರ್ಪಕ  ಮಾರ್ಗಸೂಚಿಗಳನ್ನು ರಚಿಸಲಾಗುತ್ತಿದೆ ಎಂದು ಡಿ. ದೇವರಾಜ ಅರಸು ಹಿಂದುಳಿದ ವರ್ಗಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಆರ್. ರಘು ಕೌಟಿಲ್ಯ ಹೇಳಿದರು.

ಅವರು ಹುಬ್ಬಳ್ಳಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,  ಸಣ್ಣ ಹಿಡುವಳಿ ಹೊಂದಿರುವ ರೈತರ ಜಮೀನಿಗೆ ನೀರಾವರಿ ಸೌಲಭ್ಯ ಒದಗಿಸುವ ಗಂಗಾ‌ ಕಲ್ಯಾಣ ಯೋಜನೆ (Ganga Kalyan Scheme) ಅನುಷ್ಠಾನಕ್ಕೆ ಒಬ್ಬನೇ ಗುತ್ತಿಗೆದಾರರನ್ನು ನೇಮಿಸುವ ಬದಲು, ನೋಂದಾಯಿತ ಹಲವು ಕಂಪನಿಗಳ ಹೆಸರನ್ನು ಸೂಚಿಸಲಾಗುವುದು. ರೈತರು ತಾವು ಆಯ್ಕೆ ಮಾಡಿ ಕೊಳ್ಳುವ ಕಂಪನಿಯಿಂದಲೇ ಕೊಳವೆ ಬಾವಿ ಹಾಕಿಸಿಕೊಳ್ಳಬಹುದು. ಇದಕ್ಕಿಂತ ಮುಂಚೆ ಗುತ್ತಿಗೆದಾರರಿಗಾಗಿ ಕಾಯುವಂತಹ ಪರಿಸ್ಥಿತಿಯಿತ್ತು. ಸಕಾಲಕ್ಕೆ ಯೋಜನೆ ಅನುಷ್ಠಾನವಾಗುತ್ತಿರಲಿಲ್ಲ. ಹೀಗಾಗಿ ಯೋಜನೆ ನಿಗದಿತ ಸಮಯದಲ್ಲಿ ರೈತರಿಗೆ ದೊರಕುತ್ತಿರಲಿಲ್ಲ. ರೈತರಿಗೆ ಸುಲಭವಾಗಿ ಈ ಸೌಲಭ್ಯ ಸಿಗಲಿ ಎಂಬ ಉದ್ದೇಶದಿಂದ ಹೊಸ ಮಾರ್ಗ ಸೂಚಿ ರಚಿಸಲಾಗುತ್ತಿದೆ. ಇನ್ನೂ ಮುಂದೆ ಯೋಜನೆ ಫಲಾನುವಭಿಯ ವಿವೇಚನೆಗೆ ತಕ್ಕಂತೆ ರೂಪಿಸಲಾಗುತ್ತಿದೆ. ಗಂಗಾಕಲ್ಯಾಣ ಯೋಜನೆಯಡಿ ಮಂಜೂರಾದ 45 ದಿನಗಳೊಳಗೆ ಕೊಳವೆಬಾವಿ ಕೊರೆಯುವುದು ಸೇರಿದಂತೆ ಪ್ರತಿಯೊಂದು ಕಾರ್ಯಗಳು ಪೂರೈಸಬೇಕು ಎನ್ನುವ ಬದಲಾವಣೆ ತರಲಾಗುತ್ತಿದೆ.

ಕೊಳವೆ ಬಾವಿ, ಮೋಟಾರ್ ಹಾಗೂ ವಿದ್ಯುತ್ ಸಂಪರ್ಕ ಕಲ್ಪಿಸಲು ವಿವಿಧ ಕಂಪನಿಗಳಿಗೆ ಟೆಂಡರ್ ನೀಡುವ ಬದಲು, ಒಂದೇ ಕಂಪನಿಗೆ ಈ ಮೂರು ಕಾರ್ಯ ನಿರ್ವಹಿಸುವ ಹೊಣೆ ನೀಡಲಾಗುವುದು. ಗುಣಮಟ್ಟ ಹಾಗೂ ಪಾರದರ್ಶಕತೆಯಿಂದ ಯೋಜನೆ ಅನುಷ್ಠಾನ ಮಾಡಲಾಗುವುದು’ ಎಂದು ತಿಳಿಸಿದರು.

‘ನಿಗಮದ ಯೋಜನೆಗಳ ಬಗ್ಗೆ ಬಹಳಷ್ಟು ಜನಕ್ಕೆ ಮಾಹಿತಿ ಇಲ್ಲ. ಪ್ರಚಾರದ ಕೊರತೆಯಿಂದಾಗಿ ಹೀಗಾಗಿದ್ದು, ಮುಂದಿನ ದಿನಗಳಲ್ಲಿ ಪ್ರಚಾರಕ್ಕೆ ಒತ್ತು ಕೊಡಲಾಗುವುದು. ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಎಲ್ಲಾ ಜಿಲ್ಲಾ ಕಚೇರಿಗಳಲ್ಲಿ ಸಿ.ಸಿ.ಟಿ.ವಿ. ಕ್ಯಾಮೆರಾಗಳನ್ನು ಅಳವಡಿಸಿ ಅದರ ಸಂಪರ್ಕವನ್ನು ಕೇಂದ್ರ ಕಚೇರಿಗೆ ನೀಡಲಾಗುವುದು. ಅನಗತ್ಯವಾಗಿ ವ್ಯಕ್ತಿಗಳ ಓಡಾಟಕ್ಕೂ ಕಡಿವಾಣ ಹಾಕಲಾಗುವುದು’ ಎಂದರು.

ಇದನ್ನೂ ಓದಿ: ಗಂಗಾ ಕಲ್ಯಾಣ ಯೋಜನೆಯಡಿ ಬೋರ್ವೆಲ್ ಕೊರೆಸುವಿಕೆಗೆ 3 ಲಕ್ಷ ರೂಪಾಯಿಯವರೆಗೆ ಸಹಾಯಧನ

‘ನಿಗಮದಿಂದ ರಿಯಾಯಿತಿ ಸಹಾಯಧನ ಹಾಗೂ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡಲಾಗುತ್ತಿದೆ. ರಾಜ್ಯದಾದ್ಯಂತ 400 ಕೋಟಿ ಸಾಲ ಫಲಾನುಭವಿಗಳಿಂದ ಬರುವುದು ಬಾಕಿಯಿದೆ. ಮುಂದಿನ ವಾರದಿಂದ ಸ್ವಯಂಪ್ರೇರಿತ ಸಾಲ ಮರುಪಾವತಿ ಅಭಿಯಾನ ಆರಂಭಿಸಲಾಗುವುದು. ಆಗಲೂ ಸಾಲ ಕೊಡದಿದ್ದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದರು

ಯೋಜನೆ ಅನುಷ್ಠಾನದ ಕುರಿತು ಸಾಕಷ್ಟು ದೂರುಗಳು ಬಂದಿದ್ದವು. ಸಕಾಲದಲ್ಲಿ ಯೋಜನೆ ಪೂರ್ಣಗೊಳ್ಳುತ್ತಿರಲಿಲ್ಲ. ಈ ಎಲ್ಲಾ ಗೊಂದಲಗಳಿಗೆ ಪರಿಹಾರ ನೀಡುವ ಕ್ರಾಂತಿಕಾರ ಕಾರ್ಯ ಸರ್ಕಾರದಿಂದ ನಡೆಯುತ್ತಿದೆ ಎಂದರು

ನಿಗಮಕ್ಕೆ ಈ ವರ್ಷದ ಆಯವ್ಯದಲ್ಲಿ ಸುಮಾರು 500 ಕೋಟಿ ರೂಪಾಯಿ ನೀಡುವಂತೆ ಮನವಿ ಮಾಡಿದ್ದೇನೆ. ಇದರಲ್ಲಿ ಸುಮಾರು 200ಕ್ಕೂ ಹೆಚ್ಚು ಜಾತಿಗಳು ಬರುವುದರಿಂದ ಪ್ರತಿಯೊಂದು ಜಾತಿಗೂ ಪ್ರಾತಿನಿಧ್ಯ ನೀಡಬೇಕಾಗುತ್ತದೆ ಎಂದರು.

Leave a Comment