Free training take here : ಕಲಬುರಗಿ ಎಸ್.ಬಿ.ಐ ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ವಿವಿಧ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಇದಕ್ಕಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಸಂಸ್ಥೆಯ ಎಸ್.ಬಿ.ಐ ಆರ್.ಸೆಟ್ ನಿರ್ದೇಶಕರು ತಿಳಿಸಿದ್ದಾರೆ.
ಏಪ್ರೀಲ್ 15 ರಿಂದ 28 ರವರೆಗೆ ಕೃಷಿ ಉದ್ಯಮಿ (ಕುರಿ ಮತ್ತು ಆಡು ಸಾಕಾಣಿಕೆ, ಹೈನುಗಾರಿಕೆ ಹಾಗೂ ಎರೆಹುಳು ಗೊಬ್ಬರ ತಯಾರಿಕೆ) ತರಬೇತಿ ಹಾಗೂ ಏಪ್ರೀಲ್ 15 ರಿಂದ ಮೇ 15 ರವರೆಗೆ ಹೊಲಿಗೆ ತರಬೇತಿ (ಮಹಿಳೆಯರೆಗಾಗಿ) ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಅರ್ಜಿ ಸಲ್ಲಿಕೆಗೆ ಏಪ್ರೀಲ್ 14 ರಂದು ಕೊನೆಯ ದಿನವಾಗಿದೆ.
ಈ ತರಬೇತಿ ಸಂದರ್ಭದಲ್ಲಿ ಉಚಿತ ಊಟ ಹಾಗೂ ವಸತಿ ಸೌಲಭ್ಯ ನೀಡಲಾಗುತ್ತದೆ. ವಯೋಮಿತಿ 18 ರಿಂದ 45 ವರ್ಷದೊಳಗಿನ ಬಿಪಿಎಲ್, ಅಂತ್ಯೋದಯ ರೇಷನ್, ಎಮ್.ಜಿ.ಎನ್.ಆರ್.ಇ.ಜಿ.ಎ ಕಾರ್ಡ್ ಹೊಂದಿದ ಕುಟುಂಬದ ನಿರುದ್ಯೋಗಿ ಅಭ್ಯರ್ಥಿಗಳು ಸಂಸ್ಥೆಯಿಂದ ನಿಗದಿತ ಅರ್ಜಿ ನಮೂನೆಯನ್ನು ಪಡೆದು ಭರ್ತಿ ಮಾಡಿ ಅವಶ್ಯಕ ದಾಖಲಾತಿಗಳೊಂದಿಗೆ ಮೇಲ್ಕಂಡ ಕೊನೆಯ ದಿನಾಂಕದೊಳಗೆ ಅರ್ಜಿ ಸಲ್ಲಿಸಬೇಕು.
ಮತ್ತಿತರ ಹೆಚ್ಚಿನ ಮಾಹಿತಿಗಾಗಿ ತರಬೇತಿ ಸಂಸ್ಥೆಯನ್ನು ಹಾಗೂ ಮೊಬೈಲ್ ಸಂಖ್ಯೆ 9901694389, 9900135705, 7019939996, 99001098123 ಗಳಿಗೆ ಸಂಪರ್ಕಿಸಲು ಕೋರಲಾಗಿದೆ.
Free training take here ರೈತರಿಗೆ ಉಚಿತ ತರಬೇತಿ ನೀಡಿ ತಿಂಗಳಿಗೆ 1750 ರೂಪಾಯಿ ಶಿಷ್ಯವೇತನ ನೀಡಲು ಅರ್ಜಿ ಆಹ್ವಾನ
ರೈತರ ಮಕ್ಕಳಿಗೆ 10 ತಿಂಗಳ ಕಾಲ ಉಚಿತ ತರಬೇತಿ ನೀಡಲು ರಾಜ್ಯದ ರೈತರ ಅರ್ಜಿ ಆಹ್ವಾನಿಸಲಾಗಿದೆ.
ಹೌದು, ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ವಿವಿಧ ತೋಟಗಾರಿಕೆ ಇಲಾಖೆಯ ವತಿಯಿಂದ ರೈತರ ಮಕ್ಕಳಿಗೆ 10 ತಿಂಗಳ ಕಾಲ ತರಬೇತಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ.
2026-27ನೇ ಸಾಲಿನ ತರಬೇತಿಯನ್ನ 2026ರ ಮೇ 2 ರಿಂದ 2027ರ ಫೆಬ್ರವರಿ 28 ರವರೆಗೆ ತರಬೇತಿ ನೀಡಲಾಗುವುದು.
ಪಹಣಿ ಹೊಂದಿರುವ ರೈತರ ಮಕ್ಕಳಿಗೆ ತರಬೇತಿ ಆಯೋಜಿಸಲಾಗಿದೆ. ತರಬೇತಿ ಪಡೆಯಲಿಚ್ಚಿಸುವವರು ಎಸ್.ಎಸ್.ಎಲ್.ಸಿಯಲ್ಲಿ ಉತ್ತೀರ್ಣರಾಗಿರಬೇಕು.
ಇದನ್ನೂ ಓದಿ : ನಿಮ್ಮ ಜಮೀನು ಈ ಹಿಂದೆ ಯಾರ ಯಾರ ಹೆಸರಿನಲ್ಲಿತ್ತು? ಇಲ್ಲೇ ಚೆಕ್ ಮಾಡಿ
ಈ ತರಬೇತಿಗೆ ಸಂಬಂಧಪಟ್ಟ ಎಲ್ಲಾ ವಿಷಯಗಳನ್ನು ಕನ್ನಡದಲ್ಲಿ ಮಾತ್ರ ಹೇಳಲಾಗುತ್ತದೆ. ಆದ್ದರಿಂದ ಅಭ್ಯರ್ಥಿಯು ಕನ್ನಡ ಓದುವುದು, ಬರೆಯುವುದು ಹಾಗೂ ಮಾತನಾಡುವುದನ್ನು ತಿಳಿದಿರಬೇಕು.
ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 18 ರಿಂದ 30 ವಯೋಮಾನದೊಳಗಿರಬೇಕು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಾಗಿದ್ದಲ್ಲಿ 18 ರಿಂದ 30 ವರ್ಷ ಹಾಗೂ ಮಾಜಿ ಸೈನಿಕರಾದಲ್ಲಿ 35 ರಿಂದ 65 ವಯೋಮಾನದೊಳಗಿರಬೇಕು. ಈ ತರಬೇತಿಯು ರೈತರ ಮಕ್ಕಳಿಗಾಗಿ ಇರುವುದರಿಂದ ಅಭ್ಯರ್ಥಿಯ ತಂದೆ ಅಥವಾ ಪೋಷಕರು ಕಡ್ಡಾಯವಾಗಿ ಜಮೀನು ಹೊಂದಿರಬೇಕು. ಹಾಗೂ ಸ್ವಂತ ಸಾಗುವಳಿ ಮಾಡುತ್ತಿರಬೇಕು. ಈ ಪಗ್ಗೆ ಪಹಣಿಯನ್ನು ನೀಡುವುದು ಕಡ್ಡಾಯವಾಗಿರುತ್ತದೆ. ಅಭ್ಯರ್ಥಿಗಳು ಪ್ರಾಯೋಗಿಕ ತರಗತಿಗಳಲ್ಲಿ ತೋಟದ ಕೆಲಸಗಳನ್ನು ಮಾಡುವಷ್ಟು ದೃಢಕಾಯರಾಗಿರಬೇಕು. ಮಾಜಿ ಸೈನಿಕರು ಸಾಗುವಳಿ ಜಮೀನು ಹೊಂದಿರುವ ಬಗ್ಗೆ ಪಹಣಿಯನ್ನು ನೀಡುವುದು.
ತರಬೇತಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ 1750 ರೂಪಾಯಿಗಳ ಮಾಸಿಕ ಶಿಷ್ಯವೇತನ (ಮಾಜಿ ಸೈನಿಕರನ್ನು ಹೊರತುಪಡಿಸಿ) ವನ್ನು ನೀಡಲಾಗುವುದು.
ಶಿಷ್ಯವೇತನವನ್ನು ಅಭ್ಯರ್ಥಿಗಳ ಖಾತೆಗೆ ನೇರವಾಗಿ ಜಮೆ ಮಾಡಲಾಗುವುದು. ಸದರಿ ಶಿಷ್ಯವೇತನದಲ್ಲಿ ಪ್ರತಿ ತಿಂಗಳು ಆಯ್ಕೆಯಾಗುವ ಇಬ್ಬರು ವೀಕ್ಷಕರು ಊಟದ ವ್ಯವಸ್ಥೆಗಳಾದ ವಿವಿಧ ರೀತಿಯ ಭೋಜನ ಮತ್ತು ಗುಣಮಟ್ಟದ ಆಹಾರವನ್ನು ನೀಡುವ ನಿರ್ವಹಣೆಯನ್ನು ಮತ್ತು ಶಿಷ್ಯವೇತನದಲ್ಲಿಯೇ ವೆಚ್ಚ ಭರಿಸುವ ಜವಾಬ್ದಾರಿಯನ್ನು ಅಭ್ಯರ್ಥಿಗಳೇ ವಹಿಸಬೇಕು. ಪ್ರತಿ ವಿದ್ಯಾರ್ಥಿಯು ತಮ್ಮ ಸ್ವಂತ ಖರ್ಚಿನಲ್ಲಿ ಹಸಿರು ಬಣ್ಣದ ಸಮವಸ್ತ್ರಗಳನ್ನು ಹೊಲಿಸಿಕೊಂಡು ತರಬೇತಿ ಸಮಯದಲ್ಲಿ ಕಡ್ಡಾಯವಾಗಿ ಧರಿಸಿಕೊಳ್ಳಬೇಕು. ಅಭ್ಯರ್ಥಿಯು ತರಬೇತಿಯ ಮಧ್ಯದಲ್ಲಿ ಬಿಟ್ಟು ಹೋದರೆ ಅದುವರೆಗೂ ಪಡೆದಿರುವ ಶಿಷ್ಯವೇತನವನ್ನು ಹಿಂದಿರುಗಿಸಲಾಗುವುದು.
ಅರ್ಜಿಗಳನ್ನು ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿಗಳಲ್ಲಿ ಪಡೆದುಕೊಳ್ಳಬಹುದು. ಏಪ್ರೀಲ್ 15 ರ ಸಂಜೆ 5.30 ರೊಳಗಾಗಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ಆಯಾ ತೋಟಗಾರಿಕೆ ಇಲಾಖೆಗಳಲ್ಲಿ ಸಂಪರ್ಕಿಸಬಹುದು.





