ಕರ್ನಾಟಕ ಅರಣ್ಯ ಇಲಾಖೆಯ ಸಾಮಾಜಿಕ ಅರಣ್ಯ ವಿಭಾಗವು ಶಿವಮೊಗ್ಗ ವಲಯದ ವ್ಯಾಪ್ತಿಯಲ್ಲಿನ ಶಿವಮೊಗ್ಗ, ಸಾಗರ, ಶಿಕಾರಿಪುರ ಮತ್ತು ಸೊರಬ ಸಸ್ಯ ಕ್ಷೇತ್ರಗಳಲ್ಲಿ ಬಿದಿರು ಬೆಳೆಸಲು ಆಸಕ್ತಿ ಹೊಂದಿರುವ ರೈತರಿಗೆ ಉಚಿತವಾಗಿ ಬಿದಿರು (Free bamboo saplings Distribution) ಸಸಿಗಳನ್ನು ವಿತರಿಸಲಿದೆ.

ಬ್ಯಾಂಬುಸ್ ಬಾಲ್ಕೂ-ಭೀಮಾ ಬಿದಿರು, ಬ್ಯಾಂಬೂಸಾ ನೂತನ್ಸ್ ಮತ್ತು ಬ್ಯಾಂಬೂಸ್ ಟುಡ್ಲಾ ಜಾತಿಯ, ಮುಳ್ಳುರಹಿತ ಹಾಗೂ ಅಂಗಾಂಶ ಕೃಷಿ ಪದ್ಧತಿಯಲ್ಲಿ ಬೆಳೆಸಿರುವ ಬಿದಿರು ಸಸಿಗಳನ್ನು ಎಂದು ಶಿವಮೊಗ್ಗ ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆಸಕ್ತ ರೈತರು ತಮ್ಮ ಹೆಸರು, ಜಮೀನಿನ ಸರ್ವೇ ನಂಬರ್, ಆರ್‌ಟಿಸಿ, ಆಧಾರ್ ಕಾರ್ಡ್ ಸಂಖ್ಯೆ, ಬ್ಯಾಂಕ್ ಖಾತೆ ಸಂಖ್ಯೆ, ಐಎಫ್‌ಎಸ್ ಕೋಡ್, ಬೇಕಾಗುವ ಸಸಿಗಳ ಸಂಖ್ಯೆಯೊಂದಿಗೆ ಮೊಬೈಲ್ ಸಂಖ್ಯೆಗೆ ವಾಟ್ಸಾಪ್ ಮೂಲಕ ಸಂದೇಶ ರವಾನಿಸಬಹುದು. ಇಲ್ಲವೇ ರೈತರೇ ಖುದ್ದಾಗಿ ಆಯಾ ವಲಯ, ಸಸ್ಯ ಕ್ಷೇತ್ರಗಳ ಕಚೇರಿಗೆ ನೇರವಾಗಿ ಭೇಟಿ ನೀಡಿಯೂ ಹೆಸರು ನೋಂದಣಿ ಮಾಡಿಕೊಳ್ಳಬಹುದು.

ಮುಂದಿನ ವರ್ಷಗಳಲ್ಲಿ ರೈತರ ಜಮೀನಿನಲ್ಲಿ ಬದುಕುಳಿದ ಸಸಿಗಳಿಗೆ ರಾಷ್ಟ್ರೀಯ ಬಿದಿರು ಮಿಷನ್ ಯೋಜನೆಯಡಿ ಪ್ರತಿ ಸಸಿಗೆ 60 ರೂ., ಕೆಎಪಿವೈ ಯೋಜನೆಯಡಿ ಪ್ರತಿ ಸಸಿಗೆ 125 ರೂಪಾಯಿ (ಮೂರು ವರ್ಷಗಳಲ್ಲಿ), ಮಹಾತ್ಮ ಗಾಂಧಿ ನರೆಗಾ ಯೋಜನೆಯಡಿ ನೆಡುತೋಪು ನಿರ್ಮಾಣದ ಪೂರ್ಣ ಹಣ, ಎಸ್‌ಎಂಎಎಫ್ ಯೋಜನೆಯಡಿ ಪ್ರತಿ ಸಸಿಗೆ 35 ರೂಪಾಯಿಯಂತೆ (ಮೂರು ವರ್ಷಗಳಲ್ಲಿ) ಯಾವುದಾದರೂ ಒಂದು ಯೋಜನೆಯಡಿ ಫಲಾನುಭವಿಗಳ ಖಾತೆಗೆ ನೇರವಾಗಿ ಪ್ರೋತ್ಸಾಹಧನ ಜಮಾ ಮಾಡಲಾಗುವುದು.

ಮೊದಲು ನೋಂದಣಿ ಮಾಡಿಕೊಂಡವರಿಗೆ ಆದ್ಯತೆ ಆಧಾರದಲ್ಲಿ ಬಿದಿರು ಸಸಿಗಳನ್ನು ವಿತರಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು, ಸಾಮಾಜಿಕ ಅರಣ್ಯ ವಿಭಾಗ ಶಿವಮೊಗ್ಗ ಮೊ.ಸಂ: 87221 89622, 08182-223900. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ಸಾಮಾಜಿಕ ಅರಣ್ಯ ಉಪ-ವಿಭಾಗ, ಶಿವಮೊಗ್ಗ ಹಾಗೂ ಸಾಗರ 94491 54665, 08183-228986. ವಲಯ ಅರಣ್ಯಾಧಿಕಾರಿಗಳು ಶಿವಮೊಗ್ಗ 94487 61481, 08182-251053. ವಲಯ ಅರಣ್ಯಾಧಿಕಾರಿಗಳು ಸಾಗರ 94827 00799, 08183-228986. ವಲಯ ಅರಣ್ಯಾಧಿಕಾರಿಗಳು ಶಿಕಾರಿಪುರ 93800 24101, 08187-222809. ವಲಯ ಅರಣ್ಯಾಧಿಕಾರಿಗಳು ಸೊರಬ 93806 71178, 08184-272101 ಇವರನ್ನು ಸಂಪರ್ಕಿಸಬಹುದು ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

Leave a Reply

Your email address will not be published. Required fields are marked *