ಹೈನುಗಾರಿಕೆಯಲ್ಲಿ ಆಸಕ್ತಿಯಿರುವ ಹಾಗೂ ಹೈನುಗಾರಿಕೆ ಮಾಡುತ್ತಿರುವ ರೈತರಿಗಿಲ್ಲಿದೆ ಸಂತಸದ ಸುದ್ದಿ. ಜಿಲ್ಲಾ ಕೃಷಿ ತರಬೇತಿ ಕೇಂದ್ರ, ಅರಕಲಗೂಡು ಹಾಗೂ ಪಶು ವೈದ್ಯಕೀಯ ಮಹಾವಿದ್ಯಾಲಯ ಹಾಸನ ಸಹಯೋಗದಲ್ಲಿ ಜುಲೈ 20 ರಂದು ಮಧ್ಯಾಹ್ನ 3 ರಿಂದ 5 ರವರೆಗೆ online ಮೂಲಕ ಹೈನುಗಾರಿಕೆ ಕುರಿತು (free dair training) ತರಬೇತಿ ಆಯೋಜಿಸಲಾಗಿದೆ.

ಹವಾಮಾನ ಹಾಗೂ ಆರ್ಥಿಕ ವೈಪರೀತ್ಯಗಳಲ್ಲಿ ಸುಸ್ಥಿರ ಪಶುಸಂಗೋಪನೆ ಕುರಿತು ತರಬೇತಿ ನಡೆಯಲಿದೆ. ಪಶು ವೈದ್ಯಕೀಯ ಮಹಾವಿದ್ಯಾಲಯ ಹಾಸನದ ಸಹಾಯಕ ಪ್ರಾಧ್ಯಾಪಕ ಡಾ. ಹೇಮಂತ್ ಗೌಡ ಕೆರವರು ತರಬೇತಿ ನೀಡಲಿದ್ದಾರೆ. ರೈತರು ಮನೆಯಲ್ಲಿಯೇ ಕುಳಿತು ತರಬೇತಿಯ ಸೌಲಭ್ಯ ಪಡೆಯಬಹುದು.

ಈ ತರಬೇತಿಯಲ್ಲಿ ಭಾಗವಹಿಸಲಿಚ್ಚಿಸುವ ರೈತರು ಗೂಗಲ್ ಮೀಟ್ App ಇನ್ಸ್ ಸ್ಟಾಲ್ ಮಾಡಿಕೊಂಡಿರಬೇಕು. ಒಂದು ವೇಳೆ ಇನ್ಸ್ ಟಾಲ್ ಮಾಡಿಕೊಳ್ಳದಿದ್ದರೆ ತರಬೇತಿಯ ಮುಂಚೆ ಇನ್ಸ್ ಸ್ಟಾಲ್ ಮಾಡಿಕೊಂಡ ನಂತರ ತರಬೇತಿಯಲ್ಲಿ ಭಾಗವಹಿಸಬಹುದು.

ತರಬೇತಿಯಲ್ಲಿ ಭಾಗವಹಿಸಲಿಚ್ಚಿಸುವ ರೈತರು ಮಧ್ಯಾಹ್ನ 2..50 ಗಂಟೆಗೆ meet.google.com/yhf-eezn-jgx ಲಿಂಕ್ ಮೇಲೆ ಕ್ಲಿಕ್ ಮಾಡಿ ತರಬೇತಿಯಲ್ಲಿ ಭಾಗವಹಿಸಬಹುದು.

ಗೂಗಲ್ ಮೀಟ್ ನಲ್ಲಿ ಹಾಜರಾದ ತಕ್ಷಣ ರೈತರು ಮೊಬೈಲ್ ನ್ನು ಮ್ಯೂಟ್ ಮಾಡಬೇಕು. ತರಬೇತಿ ನೀಡುವ ಸಂಪನ್ಮೂಲ ವ್ಯಕ್ತಿಗೆ ತೊಂದರೆಯಾಗುವುದಿಲ್ಲ. ಇನ್ನಿತರ ರೈತರಿಗೆ ಸರಿಯಾಗಿ ಕೇಳಿ ಬರುತ್ತದೆ.  ತರಬೇತಿ ಪ್ರಾರಂಭದಲ್ಲಿ ಯಾರು ತಮ್ಮ ಮೊಬೈಲ್ ನಲ್ಲಿ Present now button ಒತ್ತಬಾರದು. ಬದಲಿಗೆ ask to join ಬಟನ್ ಒತ್ತಬೇಕು.  ಹೆಚ್ಚಿನ ಮಾಹಿತಿಗಾಗಿ ರೈತರು ಜಿಲ್ಲಾ ಕೃಷಿ ತರಬೇತಿ ಕೇಂದ್ರ, ಅರಕಲಗೂಡು, ಹಾಸನ, ಸಹಾಯಕ ಕೃಷಿ ನಿರ್ದೇಶಕರ ಮೊ. ನಂಬರ್ 94484 21518 ಗೆ ಸಂಪರ್ಕಿಸಲು ಕೋರಲಾಗಿದೆ.

Leave a Reply

Your email address will not be published. Required fields are marked *