Free CIBIL Score ಮೊಬೈಲ್ ನಲ್ಲೇ ಚೆಕ್ ಮಾಡಿ

Written by Ramlinganna

Updated on:

Free CIBIL Score : ಯಾವುದೇ ಬ್ಯಾಕಿನಲ್ಲಿ ಅಥವಾ ಹಣಕಾಸು ಸಂಸ್ಥೆಗಳಲ್ಲಿ ಸಾಲ ಕೇಳಲು ಹೋದರೆ ಮೊದಲು ಚೆಕ್ ಮಾಡುವುದು ಸಿಬಿಲ್ ಸ್ಕೋರ್. ಇದನ್ನೇ ಉಚಿತವಾಗಿ ಚೆಕ್ ಮಾಡಬಹುದು.

ಈ ಸಿಬಿಲ್ ಸ್ಕೋರ್ ಉತ್ತಮವಾಗಿದ್ದರೆ ಮಾತ್ರ ನಿಮಗೆ ಸಾಲ ಸಿಗುತ್ತದೆ. ನಿಮ್ಮ ಸಿಬಿಲ್ ಸ್ಕೋರ್ ಕಡಿಮೆಯಿದ್ದರೆ ನಿಮಗೆ ಸಾಲ ನೀಡಲು ಬ್ಯಾಂಕುಗಳು ಹಿಂದೇಟು ಹಾಕುತ್ತವೆ. ಹಾಗಾದರೆ ಸಿಬಿಲ್ ಸ್ಕೋರ್ ಚೆಕ್ ಮಾಡಿ ಯಾವ ಯಾವ ಬ್ಯಾಂಕಿನಲ್ಲಿ ಸಾಲ ಪಡೆಯಲಾಗಿದೆ ಎಂಬುದನ್ನು ಚೆಕ್ ಮಾಡಬಹುದು.

ಸಿಬಿಲ್ ಸ್ಕೋರ್ ನಿಮ್ಮ ಕ್ರೆಡಿಟ್ ಇತಿಹಾಸದ ಆಧಾರದ ಮೇಲೆ ಕ್ರೆಡಿಟ್ ಅರ್ಹತೆಯನ್ನು ಸೂಚಿಸುವ ಸಂಖ್ಯೆಯಾಗಿದೆ.  ಈ ಸಿಬಿಲ್ ಸ್ಕೋರ್ ಆಧಾರದ ಮೇಲೆ ನೀವು ಯಾವ ಬ್ಯಾಂಕಿನಲ್ಲಿ ಸಾಲ ಪಡೆದಿದ್ದೀರಿ ಯಾವ ವರ್ಷದಲ್ಲಿ ಸಾಲ ಪಡೆಯಲಾಗಿದೆ. ಮರುಪಾವತಿ ಮಾಡಲಾಗಿದೆಯೇ ಎಂಬುದರ ಆಧಾರ ಮೇಲೆ ಕ್ರೆಡಿಟ್ ಸ್ಕೋರ್ ನಿರ್ಧರಿಸಲಾಗುವುದು.  ಕ್ರೆಡಿಟ್ ಸ್ಕೋರ್  0 ರಿಂದ 900 ವರೆಗೆ ಇರುತ್ತದೆ.

ಸಿಬಿಲ್ ಸ್ಕೋರ್ ಯಾವುದು ಉತ್ತಮ ಯಾವುದು ಕೆಟ್ಟದು?

0 ದಿಂದ 550 ವರೆಗೆ ಸಿಬಿಲ್ ಸ್ಕೋರ್ ಇದ್ದರೆ ತುಂಬಾ ಕೆಟ್ಟದಾಗಿದೆ ಎಂದರ್ಥ. 550 ರಿಂದ 650 ವರೆಗೆ ಇದ್ದರೆ ಕೆಟ್ಟದು. 650 ರಿಂದ 750 ವರೆಗೆ ಇದ್ದರೆ ಒಳ್ಳೆಯದು ಎಂದರ್ಥ.750-900 ವರೆಗೆ ಇದ್ದರೆ ಅತ್ಯುತ್ತಮ ಎಂದರ್ಥ. ನಿಮ್ಮ ಸಿಬಿಲ್ ಸ್ಕೋರ್ 750ಕ್ಕಿಂತ ಹೆಚ್ಚಿದ್ದರೆ ನಿಮಗೆ ಬ್ಯಾಂಕಿವರಾಗಲಿ ಹಣಕಾಸು ಸಂಸ್ಥೆಗಳಾಗಲಿ ಸುಲಭವಾಗಿ ಸಾಲ ನೀಡುತ್ತಾರೆ.

Free CIBIL Score ಚೆಕ್ ಮಾಡುವುದು ಹೇಗೆ?

ಜನರು ತಮ್ಮ ಸಿಬಿಲ್ ಸ್ಕೋರ್ ನ್ನು ಮೊಬೈಲ್ ನಲ್ಲೇ ಉಚಿತವಾಗಿ ಚೆಕ್ ಮಾಡಬಹುದು. ಹೌದು, ಈ

https://homeloans.sbi/getcibil

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ  ಎಸ್.ಬಿ.ಐ ಬ್ಯಾಂಕಿನ ವತಿಯಿಂದ ಉಚಿತವಾಗಿ ಸಿಬಿಲ್ ಸ್ಕೋರ್ ಚೆಕ್ ಮಾಡುವ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ  ನಿಮ್ಮ ಹೆಸರು,  ಲಿಂಗ, ಹುಟ್ಟಿದ ದಿನಾಂಕ ಭರ್ತಿ ಮಾಡಬೇಕು. ವಿಳಾಸ ತುಂಬಬೇಕು.  ಪ್ಯಾನ್ ಕಾರ್ಡ್ ನಮೂದಿಸಬೇಕು. ನಂತರ ನಿಮ್ಮ ಮೊಬೈಲ್ ನಂಬರ್ ಹಾಗೂ ಇ ಮೇಲ್ ಐಡಿ ಹಾಕಬೇಕು. ಟರ್ಮ್ಸ್ ಆ್ಯಂಡ್ ಕಂಡಿಶನ್ ಆಯ್ಕೆ ಮಾಡಿ ಸಬ್ಮಿಟ್ ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪಿಡಿಎಫ್ ಜನರೇಟ್ ಆಗುತ್ತದೆ. ಅದನ್ನು ಓಪನ್ ಮಾಡುವುದು ಹೇಗೆ ಎಂಬದರ ಪಾಸ್ವರ್ಡ್ ಬರುತ್ತದೆ. ಆ ಪಾಸ್ವರ್ಡ್ ಹಾಕಿ ನೀವು  ಪಿಡಿಎಫ್ ಫೈಲ್ ಓಪನ್ ಮಾಡಬಹುದು.

Free CIBIL Score ಪಿಡಿಎಫ್ ಫೈಲ್ ನಲ್ಲಿ ಏನೇನು ಮಾಹಿತಿ ಇರುತ್ತದೆ?

ಸಿಬಿಲ್ ಸ್ಕೋರ್ ಪಿಡಿಎಫ್ ಫೈಲ್ ನಲ್ಲಿ ನೀವು ಎಲ್ಲೆಲ್ಲಿ ಸಾಲ ಪಡೆದಿದ್ದೀರಿ? ಹಾಗೂ ಯಾವಾ ಬ್ಯಾಂಕಿನಲ್ಲಿ ಯಾವಾಗ ಸಾಲ ಪಡೆದಿದ್ದೀರಿ ಎಂಬುದರ ಬಗ್ಗೆ ಮಾಹಿತಿ ಇರುತ್ತದೆ. ಇದರೊಂದಿಗೆ ನಿಮ್ಮ ಸಿಬಿಲ್ ಸ್ಕೋರ್ ಎಷ್ಟಿದೆ ಎಂಬ ಮಾಹಿತಿಯೂ ಇರುತ್ತದೆ.

ಇದನ್ನೂ ಓದಿ ಸರ್ವೆ ನಂಬರ್ ಹಾಕಿ ನಿಮ್ಮ ಜಮೀನಿನ ಈ ದಾಖಲೆಗಳನ್ನು ಮೊಬೈಲ್ ನಲ್ಲೇ ಚೆಕ್ ಮಾಡಿ? ಇಲ್ಲಿದೆ ಮಾಹಿತಿ

ನೀವು ಖಾಸಗಿ ಹಣಕಾಸು ಸಂಸ್ಥೆಗಳಲ್ಲಿ ಸಾಲ ಪಡೆದಿದ್ದರೂ ಎಷ್ಟು ಸಾಲ ಪಡೆದಿದ್ದೀರಿ? ಎಷ್ಟು ಸಾಲ ಮರುಪಾವತಿಸಲಾಗಿದೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಇರುತ್ತದೆ. ಈ ಆಧಾರ ಮೇಲೆ ನೀವು ಯಾವುದೇ ಬ್ಯಾಂಕಿನಲ್ಲಿ ಸಾಲಕ್ಕೆ ಅರ್ಜಿ ಸಲ್ಲಿಸಬಹುದು.

ಸಿಬಿಲ್ ಸ್ಕೋರ್ ಕಡಿಮೆಯಿದ್ದರೆ ಹೆಚ್ಚಿಸುವುದು ಹೇಗೆ?

ಸಾಲ ಪಡೆದನಂತರ ಸರಿಯಾದ ಸಮಯಕ್ಕೆ ಮರುಪಾವತಿಸುವುದರಿಂದ ನಿಮ್ಮ ಕ್ರೆಡಿಟ್ ಸ್ಕೋರ್ ಹೆಚ್ಚಾಗುತ್ತದೆ. ನಿಮ್ಮ ಸಿಬಿಲ್ ಸ್ಕೋರ್ ಕಡಿಮೆಯಿದ್ದರೆ ಸ್ಕೋರ್ ಹೆಚ್ಚಿಸಲು ನಿಮ್ಮ ಆದಾಯದ ಶೇ. 30ಕ್ಕಿಂತ ಹೆಚ್ಚು ಸಾಲ ಮಾಡಬಾರದು. ನಿಮಗೆ ಅಗತ್ಯವಿರುವ ಸಾಲವನ್ನು ಮಾತ್ರ ಮಾಡಬೇಕು. ಆಕರ್ಷಕ ಕೊಡುಗೆಗಳಿಗಾಗಿ ಸುಖಾಸುಮ್ಮನೆ ಸಾಲ ಪಡೆಯಬಾರದು.

Leave a Comment