ರಾಜ್ಯದಲ್ಲಿಇಂದಿನಿಂದ 4 ದಿನಗಳ ಕಾಲ ಮಳೆ

Written by Ramlinganna

Updated on:

Four days rain alert ರಾಜ್ಯದ ಕರಾವಳಿ, ದಕ್ಷಿಣ ಹಾಗೂ ಉತ್ತರ ಒಳನಾಡು ವ್ಯಾಪ್ತಿಯ ಜಿಲ್ಲೆಗಳಲ್ಲಿ ಶನಿವಾರದಿಂದ ನಾಲ್ಕು ದಿನಗಳ ಕಾಲ ಮೋಡ ಕವಿದ ವಾತಾವರಣದೊಂದಿಗೆ ಉತ್ತಮ ಮಳೆಯಾಗಲಿದೆ ಎಂದು ಹವಾಮಾನ  ಇಲಾಖೆ ಮುನ್ಸೂಚನೆ ನೀಡಿದೆ.

ಹೌದು, ಉತ್ತರ ಒಳನಾಡಿನ ಬೀದರ್, ಕಲಬುರಗಿ, ವಿಜಯಪುರ ಜಿಲ್ಲೆಯ ಅಲ್ಲಲ್ಲಿ ಗುಡುಗು ಸಹಿತ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ.

ಚಿತ್ರದುರ್ಗ, ಕೋಲಾರ, ಚಿಕ್ಕಬಳ್ಳಾಪುರ, ಚಾಮರಾಜನಗರ, ಜಿಲ್ಲೆಯಲ್ಲಿಯೂ ಉತ್ತಮ ಮಳೆಯಾಗಲಿದೆ. ಬೆಂಗಳೂರು ನಗರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿಯೂ ಶನಿವಾರ ಸಾಯಂಕಾಲ ಅಥವಾ ರಾತ್ರಿ ವೇಳೆ ರಭಸದ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಕಲಬುರಗಿಯಲ್ಲಿ ರಭಸದ ಮಳೆ

ಶುಕ್ರವಾರ ಸಾಯಂಕಾಲ 7 ಗಂಟೆಯಿಂದ 9 ಗಂಟೆಯವರೆಗೆ ಸುಮಾರು ಎರಡು ಗಂಟೆಗಳ ಕಾಲ ರಭಸದ ಮಳೆ ಸುರಿದಿದೆ. ಈ ಮಳೆಯಿಂದಾಗಿ ತಗ್ಗುಪ್ರದೇಶಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿ ಮಾಡಿದೆ. ಕಳೆದ ನಾಲ್ಕೈದು ದಿನಗಳಿಂದ ಮೋಡ ಕವಿದ ವಾತಾವರಣ ಇನ್ನೇನು ಮಳೆಯಾಗಲಿದೆ ಎಂದುಕೊಂಡಿರುವಾಗಲೇ  ಬಿಸಿಲಿನ ತಾಪವೂ ಹೆಚ್ಚಾಗುತ್ತಿತ್ತು. ಮೊದಲೇ ಮಳೆಯಿಲ್ಲದೆ  ಕಲಬುರಗಿ ಜನತೆ ಬಿಸಿಲಿನ ತಾಪಕ್ಕೆ ಬೇಸತ್ತುಹೋಗಿದ್ದರು. ಆದರೆ ಶುಕ್ರವಾರ ಸುಮಾರು ಎರಡು ಗಂಟೆಗಳ ಕಾಲ ಗುಡುಗು ಮಿಂಚಿನ ಆರ್ಭಟದೊಂದಿಗೆ ಜೋರಾದ ಮಳೆಯಾಯಿತು.

ಇದನ್ನು ಓದಿ : ಪಿಎಂ ಕಿಸಾನ್ ಯೋಜನೆಯ ಅರ್ಹ ಮತ್ತು ಅನರ್ಹ ರೈತರ ಪಟ್ಟಿ ಬಿಡುಗಡೆ- ನಿಮ್ಮ ಹೆಸರು ಇಲ್ಲೇ ಚೆಕ್ ಮಾಡಿ

ಇದರಿಂದಾಗಿ ಕಲಬುರಗಿ ನಗರದ ಸುತ್ತಮುತ್ತಲಿರುವ ರೈತರು ನೆಮ್ಮದಿಯ ಉಸಿರು ಬಿಟ್ಟಂತಾಗಿದೆ. ಏಕೆಂದರೆ ಮಳೆಯಿಲ್ಲದೆ ಬೆಳೆಗಳು ಕಮರಿ ಹೋಗಿದ್ದವು. ಶುಕ್ರವಾರ ಸುರಿದ ಮಳೆಯಿಂದಾಗಿ  ರೈತರ ಬೆಳೆಗಳಿಗೆ ಜೀವ ಬಂದಂತಾಗಿದೆ. ಕಮರಿಹೋಗಿದ್ದ ಬೆಳೆಗಳಿಗೆ ಉಸಿರು ನೀಡಿದಂತಾಗಿದೆ. ಇದರೊಂದಿಗೆ ಕೃಷಿ ಚಟುವಟಿಕೆ ಕೈಗೊಳ್ಳಲು ರೈತರಿಗೆ ಅನುಕೂಲವಾಗಲಿದೆ.

Four days rain alert ಮುಂದಿನ ನಾಲ್ಕು ದಿನ ನಿಮ್ಮೂರಿನಲ್ಲಿಯೂ ಮಳೆಯಾಗಬಹುದೇ? ಈ ನಂಬರಿಗೆ ಕರೆ ಮಾಡಿ

ರಾಜ್ಯದಲ್ಲಿ ಮುಂದಿನ ನಾಲ್ಕು ದಿನಗಳ ಕಾಲ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಆದರೆ ನಿಮ್ಮ ಊರಿನಲ್ಲಿ ಮಳೆಯಾಗುತ್ತೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳಲು 92433 45433 ಎಂಬ ವರುಣಮಿತ್ರ ಉಚಿತ ಸಹಾಯವಾಣಿಗೆ ಕರೆ ಮಾಡಬೇಕು. ಕರೆ ಮಾಡಿದ ನಂತರ ನಿಮಗೆ ನಿಮ್ಮೂರಿನಲ್ಲಿ ಮಳೆಯಾಗುತ್ತೋ ಇಲ್ಲವೋ ಎಂಬ ಮಾಹಿತಿಯನ್ನು ನೀಡುವರು.ಈ ಉಚಿತ ಸಹಾಯವಾಣಿಯು ದಿನದ 24 ಗಂಟೆಗಳ ಕಾಲ ಕಾರ್ಯನಿರ್ವಹಿಸಲಿದೆ.  ಇದು ಸಂಪೂರ್ಣವಾಗಿ ಉಚಿತವಾಗಿರುತ್ತದೆ. ಹಾಗಾಗಿ ರೈತರು ತಮಗೆ ಸಮಯ ಸಿಕ್ಕಾಗ ವರುಣಮಿತ್ರ ಉಚಿತ ಸಹಾಯವಾಣಿಗೆ ಕರೆ ಮಾಡಿ ನಿಮ್ಮೂರಿನ ಸುತ್ತಮುತ್ತಲಿನ ಹವಾಮಾನದ ವರದಿಯನ್ನು ಪಡೆದುಕೊಳ್ಳಬಹುದು. ರೈತರಿಗೆ ಅನುಕೂಲವಾಗಲೆಂದು ಈ ಉಚಿತ ಸಹಾಯವಾಣಿಯನ್ನು ಆರಂಭಿಸಲಾಗಿದೆ.ಈಗಾಗಲೇ ರೈತರು ಈ ಉಚಿತ ಸಹಾಯವಾಣಿಗೆ ಕರೆ ಮಾಡಿ ಮಾಹಿತಿಗಳನ್ನು ಸಹ ಪಡೆಯುತ್ತಿದ್ದಾರೆ.

Leave a Comment