five days rain alert ರಾಜ್ಯದಲ್ಲಿ ಇಂದಿನಿಂದ (ಏಪ್ರೀಲ್ 8 ರಿಂದ 12 ರವರೆಗೆ ಐದು ದಿನಗಳ ಕಾಲ 16 ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಏಪ್ರೀಲ್ 8 ರಿಂದ 12 ರವರೆಗೆ ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಾಮರಾಜನಗರ, ಚಿಕ್ಕಮಂಗಳೂರು, ಹಾಸನ,ಕೊಡಗು, ಮೈಸೂರು ಶಿವಮೊಗ್ಗದಲ್ಲಿ ಮಳೆಯಾಗುವ ಸಾಧ್ಯತೆಯಿದೆ.
five days rain alert) ಎಲ್ಲೆಲ್ಲಿ ಮಳೆಯಾಗಲಿದೆ?
ಏಪ್ರೀಲ್ 11 ಹಾಗೂ 12 ರಂದು ಬೆಳಗಾವಿ, ಬೀದರ್, ಬಿಜಾಪುರ, ಬೆಳಗಾವಿ,ಧಾರವಾಡ, ಗದಗ, ಹಾವೇರಿ, ಕಲಬುರಗಿಯಲ್ಲಿ ಮಳೆಯಾಗುವ ಸಾಧ್ಯತೆಯಿದೆ. ಆದರೆ ಏಪ್ರೀಲ್ 8 ರಂದು ಕಲಬುರಗಿ ಜಿಲ್ಲೆಯಲ್ಲಿ ಮೋಡ ಕವಿದ ವಾತಾವರಣ, ತಣ್ಣನೆಯೆ ಗಾಳಿ ಬಿಸಲಿದೆ.
ಇದನ್ನೂ ಓದಿ ನಿಮ್ಮ ಜಮೀನಿನ ಭೂ ಮಾಲಿಕರ ವಿವರ ಮೊಬೈಲ್ ನಲ್ಲೇ ಚೆಕ್ ಮಾಡಿ
ಚಿತ್ರದುರ್ಗ, ಹಾಸನ , ಕೊಡಗು, 13 ಮತ್ತು 4 ರಂದು ಮೋಡ ಕವಿದ ವಾತಾವರಣ ಇರಲಿದೆ. ಯಾದಗಿರಿ, ಬಳ್ಳಾರಿ, ರಾಯಚೂರು, ವಿಜಯಪುರ ಸೇರಿದಂತೆ ಇತರ ಜಿಲ್ಲೆಗಳಲ್ಲಿ ಯಾವುದೇ ಮಳೆಯಾಗುವ ಮುನ್ಸೂಚನೆಯಿಲ್ಲ. ಒಣಹವೆ ಮುಂದುವರೆಯಲಿದೆ.
ಈ ರೈತರ ಖಾತೆಗೆ ಜಮೆಯಾಯಿತು ರೈತ ಶಕ್ತಿ ಡೀಸೆಲ್ ಸಬ್ಸಿಡಿ ಹಣ
ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳಿಗೆ ಮತ್ತೊಂದು ಗುಡ್ ನ್ಯೂಸ್. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ಪ್ರತಿ ವರ್ಷ ಮೂರು ಕಂತುಗಳಲ್ಲಿ 6 ಸಾವಿರ ರೂಪಾಯಿ ಜಮಯಾಗುವುದು ಎಲ್ಲರಿಗೂ ಗೊತ್ತಿದ್ದ ಸಂಗತಿ. ಇದರೊಂದಿಗೆ ಕರ್ನಾಟಕ ರಾಜ್ಯದ ವತಿಯಿಂದ ಹೆಚ್ಚುವರಿಯಾಗಿ ಎರಡು ಕಂತುಗಳಲ್ಲಿ 4 ಸಾವಿರ ರೂಪಾಯಿ ಜಮೆಯಾಗುತ್ತಿದೆ. ಈಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಡೀಸೆಲ್ ಸಬ್ಸಿಡಿ ಹಣ ರೈತರ ಖಾತೆಗೆ ಜಮೆ ಮಾಡುವ ಕುರಿತಂತೆ ಘೋಷಣೆ ಮಾಡಿದ್ದು ಎಲ್ಲರಿಗೂ ತಿಳಿದ ಸಂಗತಿ. ಇದೇ ತಿಂಗಳು ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳ ಖಾತೆಗೆ ಡೀಸೆಲ್ ಸಬ್ಸಿಡಿ ಹಣವನ್ನು ಜಮೆ ಮಾಡಲಾಗಿದೆ.
ಹೌದು, ಪಿಎಂ ಕಿಸಾನ್ ಯೋಜನೆಯಡಿಯಲ್ಲಿ ರೈತರು ಎಷ್ಟು ಎಕರೆ ಜಮೀನನ್ನು ನೋಂದಣಿ ಮಾಡಿಸಿದ್ದಾರಾ ಆ ಆಧಾರದ ಮೇಲೆ ಎಕರೆ ಅನುಸಾರವಾಗಿ ಜಮೆ ಮಾಡಲಾಗುತ್ತಿದೆ. ಒಂದು ವೇಳ ನೀವು ಒಂದು ಎಕರೆ ಜಮೀನು ನಮೂದಿಸಿದ್ದರೆ 250 ರೂಪಾಯಿ ಜಮೆಯಾಗಿದೆ.. 2 ಎಕರೆ ಜಮೀನು ನಮೂದಿಸಿದ್ದರೆ 500 ರೂಪಾಯಿ ಜಮೆಯಾಗಿದೆ. ಅದೇ ರೀತಿ 3 ಎಕರೆ ಜಮೀನು ನಮೂದಿಸಿದ್ದರೆ 750 ರೂಪಾಯಿ ಜಮೆಯಾಗಿದೆ. ನಾಲ್ಕು ಎಕರೆ ಜಮೀನು ನಮೂದಿಸಿದ್ದರೆ 1000 ರೂಪಾಯಿ ಹಾಗೂ 5 ಎಕರೆ ಜಮೀನು ನಮೂದಿಸಿದ್ದರೆ 1250 ರೂಪಾಯಿ ರೈತರ ಖಾತೆಗೆ ನೇರವಾಗಿ ಜಮೆಯಾಗಿದೆ.
ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ? ಮೊಬೈಲ್ ನಲ್ಲೇ ಚೆಕ್ ಮಾಡಿ
ರೈತ ಶಕ್ತಿ ಯೋಜನೆಯಡಿ ಜಮೆ ಮಾಡಲಾಗಿರುವ ರೈತರ ಪಟ್ಟಿಯಲ್ಲಿ ನಿಮ್ಮ ಹೆಸರು ಚೆಕ್ ಮಾಡಲು ಈ
https://fruitspmk.karnataka.gov.in/MISReport/FarmerDeclarationReport.aspx
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಒಂದು ಓಪನ್ ಆಗುವುದು ಅಲ್ಲಿ ರೈತರು ಜಿಲ್ಲೆ, ತಾಲೂಕು, ಹೋಬಳಿ ಗ್ರಾಮಆಯ್ಕೆ ಮಾಡಿಕೊಂಡು ವೀಕ್ಷಿಸು ಮೇಲೆ ಕ್ಲಿಕ್ ಮಾಡಬೇಕು. ಓಪನ್ ಆಗುವ ಪೇಜ್ ನಲ್ಲಿರುವ ರೈತರಿಗೆ ಡೀಸೆಲ್ ಸಬ್ಸಿಡಿ ಜಮೆಯಾಗುತ್ತದೆ.