ಮೀನು ಕೃಷಿ ಕೊಳ ನಿರ್ಮಾಣಕ್ಕೆ ಸಹಾಯಧನ

Written by By: janajagran

Updated on:

fish farming pond subsidy ಮೀನುಗಾರಿಕೆ ಇಲಾಖೆ ವತಿಯಿಂದ ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ವಿವಿಧ ಸಹಾಯಧನಕ್ಕಾಗಿ  ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಪ್ರಸಕ್ತ ಸಾಲಿನ ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ಮೀನುಗಾರಿಕೆಗೆ ಸಂಬಂಧಿಸಿದ ವಿವಿಧ ಚಟುವಟಿಕೆ ಕೈಗೊಳ್ಳಲು ಅರ್ಜಿ ಸಲ್ಲಿಸುವ ಅವಧಿಯನ್ನು ಜುಲೈ 15ರವರೆಗೆ ವಿಸ್ತರಿಸಲಾಗಿದೆ. ಪ್ರಧಾನಮಂತ್ರಿ ಮತ್ಸ್ಸ್ಯ ಸಂಪದ ಯೋಜನೆಯಡಿ ಹೊಸದಾಗಿ ಮೀನು ಕೃಷಿ ಕೊಳ ನಿರ್ಮಾಣ ಮಾಡಲು ಇಚ್ಚಿಸುವವರು ಹಾಗೂ ಮೀನುಗಾರಿಕೆಗೆ ಸಂಬಂಧಿಸಿದ ಇತರೆ ಚಟುವಟಿಕೆಗಳಾದ ಆರ್.ಎ.ಎಸ್  ಘಟಕಗಳ ನಿರ್ಮಾಣ, ತಾಜಾ ಮೀನು ಮಾರಾಟ ಕೇಂದ್ರಗಳ ಸ್ಥಾಪನೆ, ಮೀನು ಸಾಗಣೆ ಮತ್ತು ಮಾರಾಟ ವಾಹನಗಳ ಖರೀದಿಗೆ ಸಹಾಯಧನ ಮತ್ತಿತರ ಚಟುವಟಿಕೆಗಳ ಸದುಪಯೋಗ ಪಡೆಯುವುದಕ್ಕಾಗಿ ಅರ್ಜಿ ಸಲ್ಲಿಸುವ ಅವಧಿಯನ್ನು ಜುಲೈ 15ರವರೆಗೆ ವಿಸ್ತರಿಸಲಾಗಿದೆ. ಯೋಜನೆಗಳ ಸಹಾಯಧನ ಪಡೆಯಲು ಆಸಕ್ತ ಒಳನಾಡು ಮೀನುಗಾರರು ಸಂಬಂಧಪಟ್ಟ ತಾಲೂಕು ಮೀನುಗಾರಿಕೆ ಸಹಾಯಕ ನಿರ್ದೇಶಕ ಕಚೇರಿಗಳಿಗೆ ಸಂಪರ್ಕಿಸಿ ಅರ್ಜಿ ಸಲ್ಲಿಸಬಹುದು ಎಂದು ಮೀನುಗಾರಿಕೆ ಉಪನಿರ್ದೇಶಕ ಗಣೇಶ ಆರ್. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಲಮೂಲಗಳು ಇಱುವ ಕಡೆಗಳಲ್ಲಿ ಮೀನು ಕೃಷಿ ಪ್ರಮುಖ ಆರ್ಥಿಕ ಬೇಸಾಯವಾಗಿದೆ. ಈ ಉಧ್ಯಮದ ಮೇಲೆ ಈಗಲೂ ಸಹ ಸಾಕಷ್ಟು ಕುಟುಂಬಗಳು ಅವಲಂಬಿಸಿವೆ. ದೊಡ್ಡ ದೊಡ್ಡ ಕೆರೆಗಳಲ್ಲಿ, ಜಲಾಶಯಗಳಲ್ಲಿ ಮೀನುಮರಿಗಳನ್ನು ಬಿಟ್ಟು ವ್ಯಾಪಾರ ಮಾಡುವುದು ಒಂದೆಡೆಯಾದರೆ ಮೀನು  ಕೃಷಿ ಕೊಳ ನಿರ್ಮಾಣ ಮಾಡಿ ರೈತರು ಆದಾಯ ಗಳಿಸಿಕೊಳ್ಳಬಹುದು.

ಇದನ್ನೂ ಓದಿ ಈ ಲಿಸ್ಟ್ ನಲ್ಲಿರುವ ರೈತರಿಗೆ PM kisan ಹಣ ಜಮೆಯಾಗಲ್ಲ

ಸಣ್ಣ, ಮಧ್ಯಮ ರೈತರು ಸಹ ತಮ್ಮ ಹೊಲಗಳಲ್ಲಿ ಅಥವಾ ತಮ್ಮ ಹೊಲದಲ್ಲಿರುವ ತಗ್ಗುಪ್ರದೇಶಗಳಲ್ಲಿ ಕೊಳಗಳನ್ನು ನಿರ್ಮಾಣ ಮಾಡಿ ಮೀನು ಮರಿಗಳನ್ನು ಸಾಕಿ ಆರ್ಥಿಕವಾಗಿ ಸಬಲರಾಗಬಹುದು.

fish farming pond subsidy ಮಿನು ಉತ್ಪಾದನೆಯಿಂದ ಆದಾಯ ಹೇಗೆ ಗಳಿಸಬೇಕು?

ಮಾಂಸಹಾರಿಗಳು  ಅದರಲ್ಲಿ ಮೀನುಗಳ ಆಹಾರ ಸೇವನೆ ಆರೋಗ್ಯಕ್ಕೆ ಒಳ್ಳೆೆಯದೆಂದು ಹೆಚ್ಚು ಖರೀದಿಸುತ್ತಾರೆ. ಚಿಕನ್ ಮಟನ್ ಗಿಂದ ಮೀನಿಗೆ ಹೆಚ್ಚು ಬೇಡಿಕೆ ಇದೆ. ಕಡಿಮೆ ದರದಲ್ಲಿಯೂ ಮೀನುಗಳು ಸಿಗುತ್ತವೆ. ಹಾಗಾಗಿ ಮೀನು ಸಾಕಾಣಿಕೆ ಮಾಡಿ ರೈತರು ಆದಾಯ ಮಾಡಿಕೊಳ್ಳಬಹುದು. ಮೀನು ಮರಿಗಳನ್ನು ಖರೀದಿಸಿ ಫಾರ್ಮ್ ಪಾಂಡ್ ಗಳಲ್ಲಿ ಮೀನು ಸಾಕಾಣಿಕೆ ಮಾಡಬಹುದು. ಈ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ರೈತರು ಕೃಷಿ ಇಲಾಖೆಗೆ ಸಂಪರ್ಕಿಸಬಹುದು.

ಮೀನು ಸಾಕಾಣಿಕೆಗೆ ಸಹಾಯಧನ ಯಾವ ತಿಂಗಳಲ್ಲಿ ನೀಡಲಾಗುತ್ತದೆ. ಯಾವ ರೈತರಿಗೆ ನೀಡಲಾಗುವುದು. ಮೀನು ಸಾಕಾಣಿಕೆಗೆ ಯಾವ ಯಾವ ದಾಖಲೆಗಳು ಸಲ್ಲಿಸಬೇಕಾಗುುತ್ತದೆ ಎಂಬುದರ ಕುರಿತು ಸಂಪೂರ್ಣ ಮಾಹಿತಿ ಪಡೆದು ಅರ್ಜಿ ಆಹ್ವಾನಿಸಿದಾಗ ಅರ್ಜಿ ಸಲ್ಲಿಸಿ ಸೌಲಭ್ಯ ಪಡೆದುಕೊಳ್ಳಬಹುದು.

ಮೀನು ಸಾಕಾಣಿಕೆ ಮಾಡುವುದಕ್ಕಿಂತ ಮುಂಚಿತವಾಗಿ ಅದರ ಮೀನು ಸಾಕಾಣಿಕೆ ಕುರಿತು ತರಬೇತಿ ಅಥವಾ ಮಾಹಿತಿ ಪಡೆಯುವುದು ಉತ್ತಮ. ಹೆಚ್ಚಿನ ಮಾಹಿತಿಗಾಗಿ ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಬಹುದು.

Leave a Comment