ಬರ ಪರಿಹಾರದ ಮೊದಲ ಕಂತಿನ ಹಣ ಪಾವತಿ- ಕೃಷ್ಣ ಭೈರೇಗೌಡ

Written by Ramlinganna

Updated on:

First installment of drought ಈ ವಾರದಲ್ಲಿ ಬರ ಪರಿಹಾರದ ಮೊದಲ ಕಂತಿನ ಹಣ ರೈತರಿಗೆ ಪಾವತಿ ಮಾಡಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ತಿಳಿಸಿದರು.

ಅವರು ರಾಯಚೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಹಿಂದೆ ಬರ ಪರಿಹಾರ ಅತೀವೃಷ್ಟಿ ಪರಿಹಾರ ನೀಡುವಲ್ಲಿ ಹಲವು ತೊಂದರೆಗಳಿದ್ದವು. ಬಹಳಷ್ಟು ರೈತರು ಯಾವುದೇ ಬೆಳೆ ಬೆಳೆಯದಿದ್ದರೂ ಅವರಿಗೂ ಪರಿಹಾರ ಹಣ ಜಮೆಯಾಗುತ್ತಿತ್ತು. ಇದರಿಂದ ಬೆಳೆ ಹಾನಿಯಾದವರಿಗೆ ಪರಿಹಾರ ಹಣ ಸಿಗುತ್ತಿರಲಿಲ್ಲ.

ಹಿಂದಿನ ಸರ್ಕಾರ ಇದ್ದಾಗ ಹಾಗೂ ನಾನು ಕೃಷಿ ಸಚಿವ ಇದ್ದಾಗಲೂ ನೋಡಿದ್ದೇನೆ. ಯಾರದ್ದೋ ಜಮೀನು ಮತ್ತೊಬ್ಬರಿಗೆ ಹಣ ಪಾವತಿಯಾಗುತ್ತಿತ್ತು. ರೈತರು ಬೆಳೆಯುವ ಬೆಳೆಯೇ ಬೇರೆ ಹಾಗೂ ಪರಿಹಾರ ಸಿಗುವುದು ಇನ್ನೊಂದು ಬೆಳೆಗೆ. ಅಧಿಕಾರಿಗಳು ಹಾನಿಯಾದ ಬೆಳೆಗಳ ಮಾಹಿತಿ ಸೇರಿಸುವಾಗ ತಪ್ಪಾಗುತ್ತಿದ್ದವು. ಆದರೆ ಈಗ ಯಾವುದೇ ತಪ್ಪಾಗುವುದಿಲ್ಲ. ಏಕೆಂದರೆ ಬೆಳೆ ಸಮೀಕ್ಷೆ ಆಧಾರದಲ್ಲಿ ರೈತರಿಗೆ ಪರಿಹಾರ ಹಣ ಜಮೆ ಮಾಡಲಾಗುವುದು.

ಇದನ್ನೂ ಓದಿ ಪಿಎಂ ಕಿಸಾನ್ ಹಣ ಜಮೆಯಾಗಲು Moibleನಲ್ಲಿ ಹೀಗೆ ಇ-ಕೆವೈಸಿ ಮಾಡಿ                                   

ಬರ ಪರಿಹಾರ ಪಾವತಿಸುವ ವ್ಯವಸ್ಥೆ ಸರಿಪಡಿಸಲು ಎರಡು ತಿಂಗಳು ತಡವಾಗಿದೆ. ಒಂದು ವಾರದಲ್ಲಿ ರೈತರ ಖಾತೆಗೆ ಮೊದಲ ಕಂತಿನ ಹಣ ಜಮೆಯಾಗುತ್ತದೆ ಈಗಾಗಲೇ ಇಲಾಖೆಯಿಂದ 12 ಲಕ್ಷ ರೈತರಿಗೆ ಆರ್.ಬಿ.ಐ ಪೇಮೆಂಟ್ ಆರ್ಡರ್ ಕಳುಹಿಸಿದ್ದೇವೆ. ಇನ್ನೂ 20 ಲಕ್ಷ ರೈತರ ಪೇಮೆಂಟ್ ಆರ್ಡರ್ ಒಂದು ವಾರದಲ್ಲಿ ಕಳುಹಿಸುತ್ತೇವೆ ಎಂದರು.

ಕೇಂದ್ರ ಸರ್ಕಾರಕ್ಕೆ ಬರ ಪರಿಹಾರಕ್ಕಾಗಿ ಸಲ್ಲಿಸಿರುವ ಮನವಿ ಕೊಟ್ಟಿದೆ.ಆದರೆ ಇನ್ನೂ ಹಣ ಬಂದಿಲ್ಲ. ಹೀಗಾಗಿ ರಾಜ್ಯ ಸರ್ಕಾರದ ವತಿಯಿಂದಲೇ ಪ್ರತಿ ರೈತರಿಗೆ2 ಸಾವಿರ ರೂಪಾಯಿ ಪರಿಹಾರ ನೀಡಲು ತೀರ್ಮಾನ ಮಾಡಿದ್ದೇವೆ.

ಮೊದಲ ಕಂತಿನ ಹಣ 800 ರಿಂದ 900 ಕೋಟಿ ರೂಪಾಯಿ ಆಗುತ್ತದೆ. 4663 ಕೋಟಿ ರೂಪಾಯಿ ಹಣವನ್ನು ಕೇಂದ್ರ ಸರ್ಕಾರಕ್ಕೆ ಕೇಳಿದ್ದೇವೆ. ಎನ್.ಡಿ.ಆರ್.ಎಫ್  ಎಸ್.ಡಿ.ಆರ್.ಎಫ್ ನಿಯಮಗಳ ಪ್ರಕಾರ ನೀಡಿದರೆಪರಿಹಾರ ರೈತರ ಖರ್ಚಿಗೆ ತಾಳೆಯಾಗುವುದಿಲ್ಲ. ಹಾಗಾಗಿ ಕೇಂದ್ರ ಸರ್ಕಾರವು ಹೆಚ್ಚಿನ ಹಣ ಬಿಡುಗಡೆ ಮಾಡಿದರೆ ರೈತರಿಗೆ ಅನುಕೂಲವಾಗುತ್ತದೆ ಎಂದರು.

First installment of drought ನಿಮಗೆಷ್ಟು ಪರಿಹಾರ ಹಣ ಜಮೆಯಾಗಿದೆ? ಮೊಬೈಲ್ ನಲ್ಲೇ ಚೆಕ್ ಮಾಡಿ

ನಿಮಗೆಷ್ಟುಬರ ಪರಿಹಾರ ಹಣ ಜಮಯಾಗಿದೆ ಎಂಬುದನ್ನು ಚೆಕ್ ಮಾಡಲು ರೈತರು ಈ

https://landrecords.karnataka.gov.in/PariharaPayment/

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.  ಅಲ್ಲಿ ಪರಿಹಾರ ನಮೂದು ಸಂಖ್ಯೆ ಹಾಗೂ ಆಧಾರ್ ಸಂಖ್ಯೆ ಹೀಗೆ ಎರಡು ಆಯ್ಕೆಗಳು ಕಾಣಿಸುತ್ತವೆ. ಅದರಲ್ಲಿ ನೀವು ಆಧಾರ್ ಸಂಖ್ಯೆ ಆಯ್ಕೆ ಮಾಡಿಕೊಳ್ಳಬೇಕು. ನಂತರ calamity type ನಲ್ಲಿ Drought ಆಯ್ಕೆ ಮಾಡಿಕೊಳ್ಳಬೇಕು. ನಂತರ select Year type ನಲ್ಲಿ 2023-24 ಆಯ್ಕೆ ಮಾಡಿಕೊಳ್ಳಬೇಕು.

ಆಧಾರ್ ಸಂಖ್ಯೆ ನಮೂದಿಸಿ ಕೆಳಗಡೆ ನಿಮ್ಮ 12 ಅಂಕಿಗಳ ಆಧಾರ್ ಸಂಖ್ಯೆ ಹಾಕಬೇಕು. ನಂತರ ಅಲ್ಲೇ ಕಾಣುವ ಕ್ಯಾಪ್ಚ್ಯಾ ಕೋಡ್ ಹಾಕಬೇಕು. ಇದಾದನಂತರ ವಿವರಗಳನ್ನು ಪಡೆಯಲು/ Fetch Details ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮಗೆ ಬರ ಪರಿಹಾರ ಹಣ ಜಮೆಯಾಗಿರುವ ಮಾಹಿತಿ ಕಾಣಿಸುತ್ತದೆ.

ರೈತರು ಮೇಲೆ ತಿಳಿಸಿದ ಸ್ಟೆಪ್ ಬೈ ಸ್ಟೆಪ್ ಮಾಹಿತಿ ಪ್ರಕಾರ ತಮ್ಮ ಬಳಿಯಿರುವ ಮೊಬೈಲ್ ನಲ್ಲೇ ಚೆಕ್ ಮಾಡಬಹುದು. ಹೌದು, ತಮಗೆಲ್ಲಾ ಗೊತ್ತಿದ್ದ ಹಾಗೆ ಈಗಾಗಲೇ ಬರಗಾಲ ಪರಿಹಾರ ತಾತ್ಕಾಲಿಕ ಹಣವನ್ನು ಜಮೆ ಮಾಡಲಾಗಿದೆ. ರಾಜ್ಯದ ಬಹುತೇಕ ಎಲ್ಲಾ ಜಿಲ್ಲೆಗಳ ರೈತರ ಖಾತೆಗೆ ಬರ ಪರಿಹಾರ ಹಣ ಜಮೆ ಮಾಡಲಾಗುತ್ತಿದೆ.

Leave a Comment