first festival of monsoon ಬಿರು ಬೇಸಿಗೆ ಕಳೆದು ಮುಂಗಾರು ಮನೆ ಬಾಗಿಲಿಗೆ ಬರುವ ಹಬ್ಬವೇ ಕಾರಹುಣ್ಣಿಮೆ. ಇದು ಮುಂಗಾರಪು ಆರಂಭದ ಮೊದಲ ಹಬ್ಬವಾಗಿದೆ. ಕಲ್ಯಾಣ ಕರ್ನಾಟಕದ ಬೀದರ್, ರಾಯಚೂರು, ಯಾದಗಿರಿ, ಕಲಬುರಗಿ ಸೇರಿದಂತೆ ಉತ್ತರ ಕರ್ನಾಟಕದಲ್ಲಿ ವೈಭವದಿಂದ ಆಚರಿಸಲಾಗುವ ಹಬ್ಬಗಳಲ್ಲಿ ಕಾರಹುಣ್ಣೆಮೆಯೂ ಒಂದಾಗಿದೆ.
ಗುರುವಾರ ಮುಂಗಾರು ಹಂಗಾಮಿನ ಸಿದ್ದತೆಯ ನಡುವೆ ರೈತರು ತಮ್ಮ ಎತ್ತುಗಳನ್ನು ಅಲಂಕಾರ ಮಾಡಿ ಗ್ರಾಮದಲ್ಲಿ ಓಡಾಡಿಸುವ ಮೂಲಕ ಸಂಭ್ರಮದಿಂದ ಕಾರಣ ಹುಣ್ಣಿಮೆ ಆಚರಿಸಿದರು.
ಇದನ್ನ ಓದಿ ನಿಮ್ಮ ಜಮೀನಿನ ಮ್ಯಾಪ್ mobileನಲ್ಲಿ ಡೌನ್ಲೋಡ್ ಮಾಡಿ
ಬೇಸಿಗೆ ಕಾಲದ ಮುಗಿದು, ಮುಂಗಾರು ಹಂಗಾಮು ಪ್ರಾರಂಭವಾಗುವ ಹೊತ್ತಿಗೆ ಜೂನ್ ತಿಂಗಳಲ್ಲಿ ಬರುವ ಕಾರ ಹುಣ್ಣಿಮೆಯಂದು ಎತ್ತುಗಳಿಗೆ ಮಾಡುವ ಅಲಂಕಾರ ಕಣ್ಣುಗಳಿಗೆ ಹಬ್ಬವನ್ನುಂಟು ಮಾಡುತ್ತದೆ. ದೇಶಕ್ಕೆ ರೈತ ಬೆನ್ನೆಲಬು ಆದರೆ ರೈತರಿಗೆ ಎತ್ತುಗಳೇ ಬೆನ್ನೆಲಬು. ರೈತರ ಮೊದಲ ಹಬ್ಬವೆಂದೇ ಕರೆಯಲ್ಪಡುವ ಕಾರಹುಣ್ಣಿಮೆಯಂದು ಎತ್ತುಗಳಿಗೆ ಅರಿಶಿಣ ಕುಂಕುಮ ಹಚ್ಚಿ, ಕೋಡುಗಳಿಗೆ ಬಣ್ಣ ಬಣ್ಣಗಳಿಂದ ಸಿಂಗರಿಸಿ, ಕುತ್ತಿಗೆಗೆ ಅಲಂಕಾರಿಕ ಹಗ್ಗ, ಗೊಂಡೆ ಕಟ್ಟಿ ಸಿಂಗರಿಸಿ ಮೆರವಣಿಗೆ ಮಾಡಿ ರೈತರು ಸಂಭ್ರಮಿಸುತ್ತಾರೆ.
first festival of monsoon ಕಾರ ಹುಣ್ಣಿಮೆಯ ವಿಶೇಷತೆ
ಬೇಸಿಗೆ ಕಾಲದಲ್ಲಿ ಸುಡು ಬಿಸಿಲಿನಲ್ಲಿ ಎತ್ತುಗಳಿಂದ ಉಳುಮೆ ಮಾಡುವ ರೈತರು, ಕಾರ ಹುಣ್ಣಿಮೆಯ ದಿನದಂದು ಎತ್ತುಗಳಿಗೆ ಬಣ್ಣ ಬಣ್ಣಗಳಿಂದ ಶೃಂಗರಿಸಿ ತಮ್ಮ ಕೃತಜ್ಞತೆ ಸಮರ್ಪಿಸುತ್ತಾರೆ. ಅವುಗಳಿಗೆ ಪೂಜೆ ಮಾಡಿ ಎತ್ತುಗಳ ಸೇವೆಯನ್ನು ಸ್ಮರಿಸುತ್ತಾರೆ.
ಎತ್ತುಗಳಿಗೆ ಏನೇನು ಮಾಡುತ್ತಾರೆ ಗೊತ್ತಾ
ಕಾರ ಹುಣ್ಣಿಮೆಯಂದು ಗ್ರಾಮದ ಹತ್ತಿರವಿರುವ ಹಳ್ಳ, ಅಥವಾ ನದಿ ದಂಡೆಯಲ್ಲಿ ಮೈ ತೊಳೆದು ಕೆಂಪು, ಹಳದಿ, ಗುಲಾಬಿಯಂತಹ ಬಣ್ಣ ಹಚ್ಚುತ್ತಾರೆ. ಕೊರಳಿಗೆ ಗೆಜ್ಜೆಸರ ಸೇರಿದಂತೆ ವಿವಿಧ ಅಲಂಕಾರಿಕ ವಸ್ತುಗಳನ್ನು ಹಾಕುತ್ತಾರೆ. ಕೊಂಬಿಗೆ ಬಣ್ಣ ಹಚ್ಚುತ್ತಾರೆ. ನಂತರ ಹತ್ತಿರದ ದೇವಸ್ಥಾನದ ಬಳಿ ಕರಿ ಹರಿದು ಸ್ಮರಿಸುತ್ತಾರೆ. ಕೆಲವು ಕಡೆ ಓಟಗಳ ಸ್ಪರ್ಧೆ, ಇನ್ನೂ ಕೆಲವು ಕಡೆ ಕರಿ ಹರಿಯುವ ಸ್ಪರ್ಧೆ ಏರ್ಪಡಿಸುತ್ತಾರೆ. ಸೇಡಂ ತಾಲೂಕಿನಲ್ಲಿ ಹಣೆಗೆ ಬಾಸಿಂಗ್ ಕಟ್ಟಿ ಊರಿನ ಬೀದಿಗಳಲ್ಲಿ ಮೆರವಣಿಗೆ ಮಾಡಿ ಮನೆಯ ಮುಂದೆ ತಂದು ಪೂಜೆ ಪುನಸ್ಕಾರ ಮಾಡಿ ಹೋಳಿಗೆ ತಿಳಿಸುತ್ತಾರೆ. ಸಂಬಂಧಿಕರಿಗೆ, ಎತ್ತುಗಳ ಮೆರವಣಿಗೆಯ ಹಿಂದೆ ಬರುವವರಿಗೆ ಹೋಳಿಗೆ ಊಟ ಮಾಡಿಸುತ್ತಾರೆ.
ಇದನ್ನೂ ಓದಿ ನಿಮ್ಮ ಮಕ್ಕಳಿಗೆ ಎಷ್ಟು ಸ್ಕಾಲರ್ ಶಿಪ್ ಬರುತ್ತಿದೆ? ಇಲ್ಲೇ ಚೆಕ್ ಮಾಡಿ
ಕಲ್ಯಾಣ ಕರ್ನಾಟಕ ಅದರಲ್ಲಿ ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನಲ್ಲಿ ಕಾರ ಹುಣ್ಣಿಮೆ ರೈತರ ಮೊದಲ ಹಬ್ಬವಾಗಿರುತ್ತದೆ. ಹೌದು ಆ ದಿನ ರೈತರು ತಮ್ಮ ಎತ್ತುಗಳಿಗೆ ಸ್ನಾನ ಮಾಡಿಸಿ ವಿವಿಧ ಬಣ್ಣಗಳಿಂದ ಅಲಂಕರಿಸುತ್ತಾರೆ. ನಂತರ ಮೆರವಣಿಗೆ ಮೂಲಕ ಮನೆಗೆ ತಂದು ಪೂಜೆ ಮಾಡುತ್ತಾರೆ. ಇದು ಸೇಡಂ ತಾಲೂಕಿನ ಸುತ್ತ ಮುತ್ತಲಿನ ಗ್ರಾಮಗಳಲ್ಲಿ ವಿಜೃಂಭಣೆಯಿಂಂ ನಡೆಯುತ್ತದೆ.