ಡಿಎಪಿ ಸಬ್ಸಿಡಿ 700 ರೂಪಾಯಿ ಹೆಚ್ಚಳ

Written by By: janajagran

Updated on:

ದೇಶಾದ್ಯಂತ ಕೃಷಿಕರು ಹೆಚ್ಚಾಗಿ ಉಪಯೋಗಿಸುವ ಡಿಎಪಿ ರಸಗೊಬ್ಬರದ ಸಬ್ಸಿಡಿಯನ್ನು (Fertilizer subsidy increased) ಪ್ರತಿ 50 ಕೆಜಿ ಬ್ಯಾಗಿಗೆ  700 ರೂಪಾಯಿ ಏರಿಸುವ ಪ್ರಸ್ತಾವನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.

Fertilizer subsidy increased ಡಿಎಪಿ ಸಬ್ಸಿಡಿ 700 ರೂಪಾಯಿ ಹೆಚ್ಚಳ

ಪ್ರಧಾನಿ ನರೇಂದ್ರ ಮೋದಿಯವರ ಅಧ್ಯಕ್ಷತೆಯ ಉನ್ನತಮಟ್ಟದ ಸಮಿತಿ ಕಳೆದ ತಿಂಗಳು ಡಿಎಪಿ ರಸಗೊಬ್ಬರದ ಸಬ್ಸಿಡಿಯನ್ನು ಶೇ. 140 ರಷ್ಟು ಏರಿಸುವ ತೀರ್ಮಾನವನ್ನು ತೆಗೆದುಕೊಂಡಿತ್ತು. ಬುಧವಾರ ಈ  ಕೇಂದ್ರ ಸಚಿವ ಸಂಪುಟವು ಡಿಎಪಿ ಮತ್ತು ಯೂರಿಯಾ ರಹಿತ ಇತರ ಕೆಲವು ರಸಗೊಬ್ಬರಗಳಿಗೆ 14,775 ಕೋಟಿ ಸಬ್ಸಿಡಿ ನೀಡಲು  ಅನುಮೋದನೆ ನೀಡಿದೆ. ಕೋವಿಡ್ ಸಾಂಕ್ರಾಮಿಕದ ಈ ಹೊತ್ತಿನಲ್ಲಿ ಕೇಂದ್ರ ಸರ್ಕಾರದ ತೀರ್ಮಾನದಿಂದ ರೈತರಿಗೆ ರಸಗೊಬ್ಬರದ ಮೇಲಿನ ಹೊರೆ ಕಡಿಮೆಯಾಗಲಿದೆ.

ಕಳೆದ ವರ್ಷ ಡಿಎಪಿ ನೈಜ ಬೆಲೆ ಪ್ರತಿ ಚೀಲಕ್ಕೆ 1700 ರೂಪಾಯಿ ಇತ್ತು. ಇದರ ಮೇಲೆ ಕೇಂದ್ರ ಸರ್ಕಾರವು 500 ಸಬ್ಸಿಡಿ ನೀಡುತ್ತಿದೆ. ಆದ್ದರಿಂದ ಕಂಪನಿಗಳು ಗೊಬ್ಬರವನ್ನು ಪ್ರತಿ 50 ಕೆಜಿ ಚೀಲಕ್ಕೆ 1200 ರೂಪಾಯಿಯಂತೆ ಮಾರಾಟ ಮಾಡುತ್ತಿದ್ದವು. ಆದರೆ ಕಳೆದ ತಿಂಗಳ ಹಿಂದೆ ಜಾಗತಿಕ ಬೆಲೆಗಳ ಏರಿಕೆಯಿಂದಾಗಿ ಡಿಎಪಿ ನೈಜ ಪೆಲೆ ದಿಡೀರನೆ ಪ್ರತಿ ಚೀಲಕ್ಕೆ 2400 ರೂಪಾಯಿ ಏರಿಕೆಯಾಗಿ ರೈತರಿಗೆ ಹೊರೆಯಾಗಿತ್ತು. ಇದಕ್ಕೆ ದೇಶಾದ್ಯಂತ ಕೇಂದ್ರ ಸರ್ಕಾರದ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದ್ದರು. ಕೊನೆಗೆ ಕೇಂದ್ರ ಸರ್ಕಾರವು ಹಳೆಯ ದರದಲ್ಲಿಯೇ ಅಂದರೆ ಪ್ರತಿ ಚೀಲಕ್ಕೆ 1200 ರೂಪಾಯಿಯಂತೆ ನೀಡಲು ನಿರ್ಧರಿಸಿತ್ತು. ಬುಧವಾರ ನಡೆದ ಸಚಿವ ಸಂಪುಟದಲ್ಲಿ ಪ್ರತಿ ಚೀಲಕ್ಕೆ 1200 ರೂಪಾಯಿಯಂತೆ ನೀಡಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ದಾಸ್ತಾನಿರುವ ಡಿಎಪಿ ಗೊಬ್ಬರವನ್ನು ಹಳೆಯ ದರಕ್ಕೆ ಮಾರಾಟ ಮಾಡುವಂತೆ ರಸಗೊಬ್ಬರ ಉತ್ಪಾದಕ ಸಂಸ್ಥೆಗಳಿಗೆ ಸರ್ಕಾರ ತಿಳಿಸಿದೆ.

ಇದನ್ನೂ ಓದಿ: ರೈತರಿಗೆ ಸಂತಸದ ಸುದ್ದಿ- ಯೂರಿಯಾ ಬದಲಿಗೆ ಈಗ ಅರ್ಧ ಲೀಟರ್ (nano nitrogen) ನ್ಯಾನೋ ರಸಗೊಬ್ಬರ

ರೈತರು ಈ ವರ್ಷ 50 ಕೆಜಿ ಡಿಎಪಿ ರಸಗೊಬ್ಬರವನ್ನು ಹಳೆಯ ದರದಲ್ಲಿಯೇ ಅಂದರೆ 1200 ರೂಪಾಯಿಗೆ ಖರೀದಿಸಬಹುದು.  ಸರ್ಕಾರದ ಈ ನಿರ್ಧಾರದಿಂದ ಬೊಕ್ಕಸಕ್ಕೆ 14,775 ಕೋಟಿ ರೂಪಾಯಿ ಹೆಚ್ಚವರಿ ಹೊರೆ ಆಗಲಿದೆ. ರೈತರಿಗೆ ಹೆಚ್ಚು ಸಬ್ಸಿಡಿ ಸಿಗುವುದರಿಂದ ರೈತರು ವ್ಯವಸಾಯ ಮಾಡಲು ಹಿಂಜರಿಯುವುದಿಲ್ಲ. ಇತ್ತೀಚೆಗೆ ವ್ಯವಸಾಯ ಮಾಡುವ ರೈತರು ತಮಗೆ ಹಾಕಿದ ಖರ್ಚು ಬರುತ್ತಿಲ್ಲವೆಂದು ನಗರ ಪ್ರದೇಶಗಳಿಗೆ ವಲಸೆ ಹೋಗುತ್ತಿದ್ದಾರೆ. ವಲಸೆ ಹೋಗುವುದನ್ನು ತಪ್ಪಿಸಬೇಕಾದರೆ ಹೆಚ್ಚು ಹೆಚ್ಚು ಪ್ರೋತ್ಸಾಹ ಧನ ನೀಡಬೇಕು. ಆಗ ರೈತರಲ್ಲಿ ವ್ಯವಸಾಯ ಮಾಡಲು ಆಸಕ್ತಿ ಬರುತ್ತದೆ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ವ್ಯವಸಾಯ ಮಾಡುವುದಕ್ಕಾಗಿ ನೌಕರಗೆ ಅರ್ಜಿ ಕರೆದಂತೆ ಅರ್ಜಿ ಕರೆಯಬೇಕಾಗುತ್ತದೆ. ಇಂದಿನ ಪೀಳಿಗೆ ವ್ಯವಸಾಯ ಮಾಡಲು ಹಿಂಜರಿಯುತ್ತಿದ್ದಾರೆ.  ಮುಂದಿನ ಪೀಳಿಗೆಗೆ ಪ್ರೋತ್ಸಾಹಿಸಿ ಕೃಷಿಗೆ ಹೆಚ್ಚು ಒತ್ತು ಕೊಡುವ ಪರಿಸ್ಥಿತಿ ಬಂದಿದೆ. ಇದಕ್ಕೆ ಸರ್ಕಾರಗಳು ಮುಂದೆ ಬರಬೇಕಾಗಿದೆ..

Leave a Comment