ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ 2019-20ನೇ ಸಾಲಿನ ಮುಂಗಾರು, ಹಿಂಗಾರು ಮತ್ತು ಬೇಸಿಗೆ ಹಂಗಾಮುಗಳಲ್ಲಿ ಬೆಳೆ ವಿಮೆ ಮಾಡಿಸಿದ ಕೆಲವು ರೈತರ ಪ್ರಸ್ತಾವನೆ ತಿರಸ್ಕೃತಗೊಂಡಿದೆ. ಅಂತಹ ರೈತರು ಜುಲೈ 14 ರೊಳಗಾಗಿ ಬೆಳೆ ವಿಮೆ ಮಾಡಿಸಿದ ರೈತರು ತಮ್ಮ ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶವಿದೆ. ಕೂಡಲೇ ತಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ವಿಮೆ ಏತಕ್ಕಾಗಿ ತಿರಸ್ಕೃತಗೊಂಡಿದೆ ಎಂಬುದನ್ನು ತಿಳಿದುಕೊಂಡು ಅಗತ್ಯ ದಾಖಲೆ ಸಲ್ಲಿಸಿ ಬೆಳೆ ವಿಮೆ ಸೌಲಭ್ಯ ಪಡೆಯಬಹುದು.

ದಾವಣಗೆರೆ ತಾಲೂಕಿನ ರೈತರು ಜುಲೈ 15 ರೊಳಗೆ ಆಕ್ಷೇಪಣೆ ಸಲ್ಲಿಸಲು ಕೋರಿಕೆ

ದಾವಣಗೆರೆ ತಾಲೂಕಿನ 321 ಜನ ರೈತರು ಪ್ರಸ್ತಾವನೆ ತಿರಸ್ಕೃತಗೊಂಡಿದೆ. ತಿರಸ್ಕೃತಗೊಂಡ ರೈತರ ಪ್ರಸ್ತಾವನೆಗಳ ಮಾಹಿತಿಯನ್ನು ಎಲ್ಲಾ ರೈತ ಸಂಪರ್ಕ ಕೇಂದ್ರಗಳ ಸೂಚನಾ ಫಲಕದಲ್ಲಿ ಪ್ರಕಟಸಲಾಗಿದೆ. ದಾವಣಗೆರೆ ತಾಲೂಕಿನ ಬೆಳೆ ವಿಮೆ ಮಾಡಿಸಿ ಇಲ್ಲಿಯವರೆಗೆ ಬೆಳೆ ವಿಮೆ ಬರದ  ರೈತರು ಜುಲೈ 15 ರೊಳಗಾಗಿ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ಆಕ್ಷೇಪಣೆ ಸಲ್ಲಿಸಲು ಕೋರಲಾಗಿದೆ.

ಚಿಕ್ಕಬಳ್ಳಾಪುರ ತಾಲೂಕಿನ ರೈತರು 18 ಆಕ್ಷೇಪಣೆ ಸಲ್ಲಿಸಲು ಅವಕಾಶ

2019-20ನೇ ಸಾಲಿನ ಮುಂಗಾರು ಮತ್ತು ಹಿಂಗಾರು ಹಂಗಾಮಿನಲ್ಲಿ ವಿವಿಧ ಬೆಳೆಗಳಿಗೆ ಕರ್ನಾಟಕ ರೈತ ಸುರಕ್ಷಾ ಫಸಲ್ ಬಿಮಾ ಯೋಜನೆಯಡಿ  ಬೆಳೆ ವಿಮೆಗೆ ನೋಂದಾಯಿಸಿದ ಕೆಲವು ರೈತರ ವಿಮೆ ನೋಂದಣಿ ಬೆಳೆ ಸಮೀಕ್ಷೆ ದತ್ತಾಂಶ ಮತ್ತು ಇತರೆ ಕಾರಣಗಳಿಂದ ತಿರಸ್ಕೃತಗೊಂಡಿದೆ. ಇದಕ್ಕೆ ಆಕ್ಷೇಪಣೆಗಳಿದ್ದಲ್ಲಿ ಸಂಬಂಧಪಟ್ಟ ರೈತರು ರೈತ ಸಂಪರ್ಕ ಕೇಂದ್ರದಲ್ಲಿ ಜುಲೈ 18 ರೊಳಗಾಗಿ ಸಲ್ಲಿಸಬಹುದೆಂದು ಚಿಕ್ಕಬಳ್ಳಾಪುರ ಸಹಾಯಕ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬಳ್ಳಾರಿ ಜಿಲ್ಲೆಯ ರೈತರು 15 ರೊಳಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ

2019-20ನೇ ಸಾಲಿನ ಮುಂಗಾರು ಹಿಂಗಾರು ಹಂಗಾಮಿನ ಕೇಂದ್ರ ಸರ್ಕಾರದ ಮಾರ್ಗದರ್ಶನದಂತೆ ಬೆಳೆ ಸಮೀಕ್ಷೆಯ ದತ್ತಾಂಶಗಳನ್ನು ರೈತ ಬೆಳೆ ವಿಮೆಗೆ ನೋಂದಣಿಯಾದ ಪ್ರಸ್ತಾವನೆಗಳೊಂದಿಗೆ ಹೋಲಿಕೆ ಮಾಡಲಾಗಿದೆ. ಕೆಲವು ರೈತರ ದತ್ತಾಂಶ ತಾಳೆಯಾಗದೆ ತಿರಸ್ಕೃತಗೊಂಡಿದೆ.

ಮುಂಗಾರು ಹಂಗಾಮಿನಲ್ಲಿ ಬಳ್ಳಾರಿ ತಾಲೂಕಿನಲ್ಲಿ 221, ಸಿರುಗುಪ್ಪದಲ್ಲಿ 715, ಸಂಡೂರು4870, ಕುರುಗೋಡು 24 ಪ್ರಸ್ತಾವನೆಗಳು ಸೇರಿದಂತೆ ಒಟ್ಟು 1140 ಅರ್ಜಿಗಳು ತಿರಸ್ಕೃತಗೊಂಡಿವೆ. ತಿರಸ್ಕೃತಗೊಂಡಿವೆ.2019 ರ ಹಿಂಗಾರು ಹಂಗಾಮಿನಲ್ಲಿ ಬಳ್ಳಾರಿ ತಾಲೂಕಿನ 116, ಸಿರುಗುಪ್ಪದಲ್ಲಿ 75 ಪ್ರಸ್ತಾವನೆಗಳು ಸೇರಿದಂತೆ ಒಟ್ಟು 191 ಅರ್ಜಿಗಳು ತಿರಸ್ಕೃತಗೊಂಡಿರುತ್ತವೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ : ಜಮೀನಿನ ಮೊಟೇಷನ್ ಮೊಬೈಲ್ ನಲ್ಲೇ ನೋಡುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

ತಿರಸ್ಕೃತವಾದ ರೈತರ ಹೆಸರುಗಳ ಪಟ್ಟಿಯನ್ನು ಸಂಬಂಧಪಟ್ಟ ರೈತ ಸಂಪರ್ಕ ಕೇಂದ್ರಗಳ ಸೂಚನಾ ಫಲಕದಲ್ಲಿ ಲಗತ್ತಿಸಲಾಗಿದೆ.  ಆಕ್ಷೇಪಣೆಗಳಿದ್ದರೆ ರೈತರು ಜುಲೈ15 ರೊಳಗೆ ರೈ ಸಂಪರ್ಕ ಕೇಂದ್ರ, ಸಹಾಯಕ ಕೃಷಿ ನಿರ್ದೇಶಕರ ಕಚೇರಿಗಳಿಗೆ ಸಲ್ಲಿಸಬಹುದು ಎಂದು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 08392 276224 ಗೆ ಸಂಪರ್ಕಿಸಲು ಕೋರಲಾಗಿದೆ.

ಹೊಸದುರ್ಗ ತಾಲೂಕಿನ ರೈತರು ಜುಲೈ 14 ರೊಳಗೆ ಆಕ್ಷೇಪಣೆ ಸಲ್ಲಿಸಲು ಕೋರಿಕೆ

ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ  ಬೆಳೆ ವಿಮೆ ನೋಂದಣಿ ಮಾಡಿಸಿದ  5009 ರೈತರ ಹೆಸರು ತಿರಸ್ಕೃತಗೊಂಡಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಪಿ.ಎಸ್ ಈಶ ತಿಳಿಸಿದ್ದಾರೆ. ರೈತರ ಪ್ರಸಾವ ಬೆಳೆ ಸಮೀಕ್ಷೆ ದತ್ತಾಂಶಗಳೊಂದಿಗೆ ಹೋಲಿಸಿದಾಗ ತಾಳೆಯಾಗದಿದ್ದರಿಂದ ತಿರಸ್ಕೃತಗೊಂಡಿದೆ. ಈ ರೈತರ ಪಟ್ಟಿಯನ್ನು ಹೋಬಳಿ ರೈತ ಸಂಪರ್ಕ ಕೇಂದ್ರ ಹಾಗೂ ಗ್ರಾಮ ಪಂಚಾಯತಿ ನೋಟಿಸ್ ಬೋರ್ಡಿನಲ್ಲಿ ಪ್ರಕಟಿಸಲಾಗಿದೆ. ಆಕ್ಷೇಪಣೆ ಇದ್ದಲ್ಲಿ ಆಯಾ ಹೋಬಳಿ ರೈತ ಸಂಪರ್ಕ ಕೇಂದ್ರಗಳಲ್ಲಿ ಜುಲೈ 14 ರೊಳಗೆ ಸಲ್ಲಿಸಲು ಸೂಚಿಸಲಾಗಿದೆ. 2019-20ನೇ ಸಾಲಿನಲ್ಲಿ ವಿಮೆಗೆ ನೋಂದಾಯಿಸಿದ ಬೆಳೆ ನಮೂದಾಗಿರುವ ಪಹಣಿ, ರಶೀದಿ ಇದ್ದರೆ ದಾಖಲೆ ಸಲ್ಲಿಸಲು ಕೋರಲಾಗಿದೆ.

ಹುಣಸೂರು ತಾಲೂಕಿನ ರೈತರೂ ಆಕ್ಷೇಪಣೆ ಸಲ್ಲಿಸಲು ಕೋರಿಕೆ

ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ 174 ರೈತರ ಅರ್ಜಿಗಳು ತಿರಸ್ಕೃತಗೊಂಡಿವೆ. ಈ ರೈತರು ರೈತ ಸಂಪರ್ಕ ಕೇಂದ್ರದಲ್ಲಿ ಸೂಕ್ತ ದಾಖಲೆ ಸಲ್ಲಿಸಲು ಅವಕಾಶ ನೀಡಲಾಗಿದೆ.  2019-20ನೇ ಸಾಲಿನ ವಿಮೆಗೆ ನೋಂದಾಯಿಸಿದ ಬೆಳೆ ನಮೂದಿಸಿರುವ ಆರ್.ಟಿಸಿ, ಬೆಂಬಲ ಬೆಲೆ ಪ್ರಯೋಜನ ಪಡೆದಿದ್ದಲ್ಲಿ ಅದರ ರಶೀದಿ, ವಿಮೆಗೆ ನೋಂದಾಯಿತ ಬೆಳೆಯ ಉತ್ಪನ್ನವನ್ನು ಎಪಿಎಂಸಿ ಮಾರುಕಟ್ಟೆಯಲ್ಲಿ ಮಾರಾಟ ಮಾಡಿದ್ದಲ್ಲಿ ದಾಖಲಾತಿಗಳನ್ನು ಸಲ್ಲಿಲು ಕೋರಲಾಗಿದೆ.

ಬೆಳೆ ವಿಮೆ ಹಣ ಬರದ ರೈತರು ಬೆಳೆ ವಿಮೆ ಕುರಿತಂತೆ ಮಾಹಿತಿ ಕೇಳಲು ರೈತರ ಸಹಾಯವಾಣಿ 1800 180 1551 ಗೆ ಕರೆ ಮಾಡಬಹುದು.

Leave a Reply

Your email address will not be published. Required fields are marked *