ಮಿನಿ ಟ್ರ್ಯಾಕ್ಟರ್ ಖರೀದಿಗೆ ಶೇ. 90 ರಷ್ಟು ಸಬ್ಸಿಡಿ

Written by Ramlinganna

Updated on:

subsidy for purchase farm machinery  ಕೃಷಿ ಯಾಂತ್ರೀಕಣ ಯೋನೆಯಡಿ ರೈತರಿಗೆ ಕೃಷಿ ಉಪಕರಣಗಳ ಖರೀದಿಗೆ ಶೇ. 90 ರಷ್ಟು ಸಹಾಯಧನ ಸಿಗಲಿದೆ. ಹೌದು, ರೈತರ ಉತ್ಪಾದನಾ ವೆಚ್ಚ ಕಡಿಮೆ ಮಾಡುವುದು, ಕೃಷಿ ಕೂಲಿ ಕಾರ್ಮಿಕರ ಮೇಲಿನ ಅವಲಂಬನೆ ಕಡಿಮೆ ಮಾಡುವುದಕ್ಕಾಗಿ ಕೃಷಿ ಯಾಂತ್ರೀಕರಣ ಯೋಜನೆಯನ್ನು ಜಾರಿಗೆ ತರಲಾಗಿದೆ.

ಇತ್ತೀಚೆಗೆ ಕೃಷಿಯಲ್ಲಿಯೂ ಆಧುನಿಕ ತಂತ್ರಜ್ಞಾನಗಳ ಬಳಕೆ ಹೆಚ್ಚಾಗುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಕೃಷಿ ಯಂತ್ರೋಪಕರಣಗಳ  ಬಳಕೆ ಕಡಿಮೆಯಾಗುತ್ತಿದ್ದರಿಂದ ಸರ್ಕಾರವು ರೈತರಿಗೆ ನೆರವು ನೀಡಲು ಕೃಷಿ ಯಾಂತ್ರೀಕರಣ ಯೋಜನೆಯನ್ನು ಜಾರಿಗೆ ತಂದಿದೆ.

ಈ ಯೋಜನಯಡಿಯಲ್ಲಿ ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆಯ ವತಿಯಿಂದ ಭೂಮಿ ಸಿದ್ದತೆಯಿಂದ ಕೊಯ್ಲುವರೆಗೆ ವಿವಿಧ ಕೃಷಿ ಯಂತ್ರೋಪಕರಣಗಳ ಖರೀದಿಗೆ ಶೇ. 90 ರಷ್ಟು ಸಹಾಯಧನ ನೀಡಲಾಗುವುದು. ಯಾವ ರೈತರಿಗೆ ಎಷ್ಟು ಸಹಾಯಧನ, ಯಾವ ಯಾವ ಉಪಕರಣಗಳಿಗೆ ಸಹಾಯಧನ ಸಿಗುವುದು? ಅರ್ಜಿ ಎಲ್ಲಿ ಸಲ್ಲಿಸಬೇಕು? ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.

 subsidy for purchase farm machinery  ಯಾವ ಯಾವ ಉಪಕರಣಗಳಿಗೆ ಸಹಾಯಧನ ಸಿಗುವುದು?

ಕೃಷಿ ಯಾಂತ್ರೀಕರಣ ಯೋಜನೆಯಡಿಯಲ್ಲಿ ರೈತರಿಗೆ ಮಿನಿ ಟ್ರ್ಯಾಕ್ಟರ್, ಪವರ್ ಟಿಲ್ಲರ್, ರೋಟಾವೇಟರ್, ಎಂ.ಬಿ. ಪ್ಲೋ, ಡಿಸ್ಕ್ ಪ್ಲೋ ಸೇರಿದಂತೆ ಇನ್ನಿತರ ಕೃಷಿ ಯಂತ್ರೋಪಕರಣಗಳನ್ನು ಸಹಾಯಧನ ನೀಡಲಾಗುವುದು.

ಯಾವ ಉಪಕರಣಕ್ಕೆ ಎಷ್ಟು ಸಹಾಯಧನ ಸಿಗುವುದು?

ಕೃಷಿ ಯಾಂತ್ರೀಕರಣ ಯೋಜನೆಯಡಿಯಲ್ಲಿ ರೈತರಿಗೆ ಮಿನಿ ಟ್ರ್ಯಾಕ್ಟರ್ ಖರೀದಿಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರಿಗೆ ಗರಿಷ್ಠ 3 ಲಕ್ಷ ರೂಪಾಯಿಯವರೆಗೆ ಸಹಾಯಧನ ಸಿಗುವುದು.

ಇದನ್ನೂ ಓದಿ ಈ ಪಟ್ಟಿಯಲ್ಲಿರುವ ರೈತರಿಗೆ ಪಿಎಂ ಕಿಸಾನ್ ಹಣ ಜಮೆಯಾಗಲ್ಲ- ನಿಮ್ಮ ಹೆಸರಿದೆಯೇ? ಇಲ್ಲೆ ಚೆಕ್ ಮಾಡಿ

ಅದೇ ರೀತಿ ಸಾಮಾನ್ಯವರ್ಗದ ರೈತರಿಗೆ 75 ಸಾವಿರ ರೂಪಾಯಿ ಸಹಾಯಧನ ನೀಡಲಾಗುವುದು.

ಪವರ್ ಟಿಲ್ಲರ್ ಖರೀದಿಗೆ ಎಷ್ಟು ಸಹಾಯಧನ ನೀಡಲಾಗುವುದು?

ಪವರ್ ಟಿಲ್ಲರ್ ಖರೀದಿಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರಿಗೆ ಶೇ. 90 ರವರೆಗೆ ಸಹಾಯಧನ ನೀಡಲಾಗುವುದು. ಇತರ ವರ್ಗದ ರೈತರಿಗೆ ಶೇ. 50 ರಷ್ಟು ಸಹಾಯಧನ ನೀಡಲಾಗುವುದು.

ಅದೇ ರೀತಿ ಟ್ರ್ಯಾಕ್ಟರ್ ಚಾಲಿತ ಡಿಸ್ಕ್ ಪ್ಲೋ, ಟ್ರ್ಯಾಕ್ಟರ್ ಚಾಲಿತ ಡಿಸ್ಕ್ ಹ್ಯಾರೋ ಉಪಕರಣಗಳಿಗೂ ಸಹಾಯಧನ ನೀಡಲಾಗುವುದು.

ರೈತರು ಸಹಾಯಧನ ಪಡೆಯಲು ಯಾವ ಯಾವ ದಾಖಲೆ ಸಲ್ಲಿಸಬೇಕು?

ಕೃಷಿ ಯಾಂತ್ರೀಕರಣ ಯೋಜನೆಯಡಿಯಲ್ಲಿ ಸಹಾಯಧನ ಪಡೆಯಲು ರೈತರ ಬಳಿ ಆಧಾರ್ ಕಾರ್ಡ್ ಇರಬೇಕು. ರೈತರು ಸಾಗುವಳಿ ಮಾಡುತ್ತಿರುವ ಜಮೀನಿನ ಪಹಣಿ (ಆರ್.ಟಿ.ಸಿ) ದಾಖಲೆ ಹೊಂದಿರಬೇಕು. ಬ್ಯಾಂಕ್ ಪಾಸ್ ಬುಕ್ ಝರಾಕ್ಸ್ ಪ್ರತಿ ಇರಬೇಕು.  ರೈತರು ಫ್ರೂಟ್ಸ್ ಐಡಿ ಹೊಂದುವುದು ಕಡ್ಡಾಯವಾಗಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರು ಬಳಿ ಆರ್.ಡಿ. ಸಂಖ್ಯೆ ಹೊಂದಿರುವ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಇರಬೇಕು.

ಅರ್ಜಿ ಎಲ್ಲಿ ಸಲ್ಲಿಸಬೇಕು?

ಕೃಷಿ ಇಲಾಖೆ ಅಥವಾ ತೋಟಗಾರಿಕೆ ಇಲಾಖೆಯ ವತಿಯಿಂದ ಲಭ್ಯತೆಯ ಆಧಾರದ ಮೇಲೆ ಕೃಷಿ ಯಂತ್ರೋಪಕರಣಗಳ ಖರೀದಿಗೆ ಸಹಾಯಧನ ನೀಡಲು ಜಿಲ್ಲಾವಾರು ಅರ್ಜಿ ಆಹ್ವಾನಿಸಲಾಗುವುದು.

ಇದನ್ನೂ ಓದಿ ಸರ್ವೆ ನಂಬರ್ ಹಾಕಿ ನಿಮ್ಮ ಜಮೀನಿನ ಮೇಲೆ ಎಷ್ಟು ಸಾಲವಿದೆ? ಮೊಬೈಲ್ ನಲ್ಲೇ ಚೆಕ್ ಮಾಡಿ

ಅರ್ಜಿ ಆಹ್ವಾನಿಸಿದಾಗ ರೈತರು ತಮಗೆ ಬೇಕಾದ ಕೃಷಿ ಯಂತ್ರೋಪಕರಣಕ್ಕೆ ಅರ್ಜಿ ಸಲ್ಲಿಸಬೇಕು. ಆಗ ಹಿರಿತನದ ಆಧಾರದ ಮೇಲೆ ಮೊದಲು ಅರ್ಜಿ ಸಲ್ಲಿಸಿದವರಿಗೆ ಆದ್ಯತೆ ನೀಡಲಾಗುವುದು. ಈ ಹಿಂದೆ ಕೃಷಿ ಯಾಂತ್ರೀಕರಣ ಯೋಜನೆಯಡಿ ಸೌಲಭ್ಯ ಪಡೆಯದ ರೈತರಿಗೆ ಉಪಕರಣ ನೀಡಲಾಗುವುದು. ಹಾಗಾಗಿ ರೈತರು ಅರ್ಜಿ ಆಹ್ವಾನಿಸಿದಾಗ ಅರ್ಜಿ ಸಲ್ಲಿಸಿ ತಮಗೆ ಬೇಕಾದ ಕೃಷಿ ಯಂತ್ರೋಪಕರಣಗಳ ಖರೀದಿಗೆ ಸಹಾಯಧನ ಪಡೆಯಬಹುದು.

ಹೆಚ್ಚಿನ ಮಾಹಿತಿಗಾಗಿ ರೈತರು ತಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಬಹುದು.

Leave a Comment