ಶೇ. 90 ರಷ್ಟು ಸಬ್ಸಿಡಿಯಲ್ಲಿ ತಾಡಪತ್ರಿ ಪಡೆಯಲು ಅರ್ಜಿ ಆಹ್ವಾನ

Written by By: janajagran

Updated on:

subsidy for tadapatri ಕೃಷಿ ಇಲಾಖೆಯ ವಿವಿಧ ಯೋಜನೆಗಳಡಿ 2021-22ನೇ ಸಾಲಿನಲ್ಲಿ ರೈತರಿಗೆ ಸಹಾಯಧನದಲ್ಲಿ ತಾಡಪತ್ರಿ ವಿತರಿಸಲು ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.

250 ಜಿಎಸ್ಎಂ ಎಚ್.ಡಿಪಿಇ ಟಾರ್ಪಲಿನ್ಸ್ ಕನ್ಟ್ರಮಿಂಗ್ ಟು ಐಎಸ್ 7903/2017 (ಟೈಪ್ 11) 8*6 ಮೀಟರ್ ಟಾರ್ಪಲಿನ್ ಗಳನ್ನು ಸಬ್ಸಿಡಿಯಲ್ಲಿ ವಿತರಿಸಲು ಕೊಡಗು ಜಿಲ್ಲೆಯ ಮೂರು ತಾಲೂಕು ಸೇರಿದಂತೆ ಬಿಜಾಪುರ, ಬೀದರ್ ಜಿಲ್ಲೆಯ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.

ರೈತರು ಆಧಾರ್ ಕಾರ್ಡ್, ಜಮೀನಿನ ಪಹಣಿ, ಬ್ಯಾಂಕ್ ಪಾಸ್ಬುಕ್ , ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಾಗಿದ್ದರೆ ಜಾತಿ ಮತ್ತ್ು ಆದಾಯ ಪ್ರಮಾಣ ಪತ್ರದೊಂದಿಗೆ ಅಗತ್ಯ ದಾಖಲೆ ಸಲ್ಲಿಸಿ ಸಹಾಯಧನದಲ್ಲಿ ತಾಡಪತ್ರಿಗಳನ್ನು ಪಡೆದುಕೊಳ್ಳಬೇಕೆಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಶಬನಾ ಎಂ. ಷೇಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಟಾರ್ಪಲಿನ್ ಒಟ್ಟು ಮೊತ್ತ 2142 ರೂಪಾಯಿಆಗಿದ್ದು, ಇದರಲ್ಲಿ ಸಾಮಾನ್ಯ ವರ್ಗದ ರೈತರಿಗೆ ಶೇ. 50 ರಷ್ಟು ಸಹಾಯಧನ ಸಿಗಲಿದಂ. ಅಂದರೆ ರೈತರು 1071 ರೂಪಾಯಿ ವಂತಿಕೆ ಕಟ್ಟಿ ತಾಡಪತ್ರಿ ಪಡೆಯಬಹುದು. ಅದೇ ರೀತಿ ಪರಿಶಿಷ್ಚ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರಿಗೆ ಶೇ. 90 ರಷ್ಟು ಸಹಾಯಧನ ಸಿಗಲಿದೆ. ಅಂದರೆ ಎಸ್.ಸಿ ಎಸ್.ಟಿ ರೈತರು ಕೇವಲ 214 ರೂಪಾಯಿ ವಂತಿಕೆ ಪಾವತಿಸಿ ತಾಡಪತ್ರಿ ಪಡೆಯಬಹುದು.

ಮಡಿಕೇರಿ ತಾಲೂಕು ಕಸಬಾ, ನಾಪ್ಲೋಕ್ಲು, ಭಾಗಮಂಡಲ, ಸೋಮವಾರಪೇಟಿ ತಾಲೂಕು ಕಸಬಾ, ಕುಶಾಲನಗರ, ಸಂಟಿಕೊಪ್ಪ, ಶನಿವಾರಸಂತೆ, ಶಾಂತಳ್ಳಿ, ವಿರಾಜಪೇಟೆ ತಾಲೂಕು ಕಸಬಾ, ಪೊನ್ನಂಪೇಟೆ, ಅಮ್ಮತ್ತಿ, ಬಾಳೆಲೆ, ಹುದಿಕೇರಿ ಹಾಗೂ ಶ್ರೀಮಂಗಲ ರೈತ ಸಂಪರ್ಕ ವ್ಯಾಪ್ತಿಯ ರೈತರು ಅರ್ಜಿ ಸಲ್ಲಿಸಿ ಸಹಾಯಧನದಲ್ಲಿ ತಾಡಪತ್ರಿ ಪಡೆಯಬಹುದು.

subsidy for tadapatri ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ರೈತರಿಂದಲೂ ಅರ್ಜಿ ಆಹ್ವಾನ

ಮುದ್ದೇಬಿಹಾಳ ತಾಲೂಕಿನ ಮುದ್ದೇಬಿಹಾಳ ಹೋಬಳಿ, ನಾಲತವಾಡ ಹೋಬಳಿ, ಢವಳಗಿ ಹೋಬಳಿ ಮತ್ತು ತಾಳಿಕೋಟೆ ತಾಲೂಕಿನಲ್ಲಿ 2021-22ನೇ ಸಾಲಿನ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ ಅಡಿಯಲ್ಲಿ ತಾಡಪತ್ರಿಗಾಗಿ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.

ಇದನ್ನೂ ಓದಿ ನಿಮ್ಮ ಜಮೀನಿನ ಅಕ್ಕಪಕ್ಕ ಯಾರಿಗೆಷ್ಟು ಜಮೀನಿದೆ? ಚೆಕ್ ಮಾಡಿ

ಅರ್ಜಿ ಸಲ್ಲಿಸಲು ರೈತರು ಆಧಾರ್ ಕಾರ್ಡ್, ಪಹಣಿ ಮತ್ತು ಎಸ್ಸಿ,ಎಸ್ಟಿ ಪಂಗಡದವರು ಜಾತಿ ಮತ್ತು ಆದಾಯ ಪ್ರಮಾಣ  ಪತ್ರವನ್ನು ಅರ್ಜಿಯೊಂದಿಗೆ ಲಗತ್ತಿಸಬೇಕು. ರೈತರು ಕಡ್ಡಾಯವಾಗಿ ಎಫ್ಐಡಿ ನಂಬರ್ ಹೊಂದಿರಬೇಕು. ಭರ್ತಿ ಮಾಡಿದ ಅರ್ಜಿಯನ್ನು ಮೇ 2 ರೊಳಗಾಗಿ ರೈತ ಸಂಪರ್ಕ ಕೇಂದ್ರದಲ್ಲಿ ಅರ್ಜಿ ಸಲ್ಲಿಸಬೇಕು. ಮೇ 11 ರಂದು ಆಯಾ ತಾಲೂಕಿನ ರೈತ ಸಂಪರ್ಕ ಕೇಂದ್ರಗಳಲ್ಲಿ ಬಂದ ಅರ್ಜಿಗಳನ್ನು ಪರಿಶೀಲಿಸಿ ಲಾಟರಿ ಮೂಲಕ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುವುದು ಎಂದು ಕೃಷಿ ನಿರ್ದೇಶಕ ರೇವಣೇಪ್ಪ ಮನಗೂಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ರೈತರಿಂದಲೂ ಅರ್ಜಿ ಆಹ್ವಾನ

ಭಾಲ್ಕಿ ತಾಲೂಕಿನ  ಹಲಬರ್ಗಾ ರೈತ ಸಂಪರ್ಕ ಕೇಂದ್ರ ವ್ಯಾಪ್ತಿಯಲ್ಲಿ 2021-22ನೇ ಸಾಲಿನಲ್ಲಿ ತಾಡಪಲ್ ವಿತರಿಸಲು ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ. ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿಯಲ್ಲಿ ತಾಡಪಲ್ ವಿತರಿಸಲಾಗುತ್ತಿದ್ದು, ಮೇ 3 ರೊಳಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ. ಅರ್ಜಿ ಸಲ್ಲಿಸಲು ರೈತರು ಎಫ್ಐಡಿ ಪ್ರತಿ, ಫೋಟೋ ಹಾಗೂ ಪಹಣಿ, ಎಸ್.ಸಿ, ಎಸ್.ಟಿ ಪಂಗಡದ ರೈತರು ಜಾತಿ ಪ್ರಮಾಣ ಪತ್ರ ಹೊಂದಿರಬೇಕು.  ರೈತರು ಆದಷ್ಟು ಬೇಗ ಅರ್ಜಿ ಸಲ್ಲಿಸಿ ಈ ಯೋಜನೆಯಡಿಯಲ್ಲಿ ಲಾಭ ಪಡೆದುಕೊಳ್ಳಬಹುದು ಎಂದು ರೈತ ಸಂಪರ್ಕ ಕೇಂದ್ರದ ಅಧಿಕಾರಿ ಸತ್ಯಭಾನು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರೈತರಿಗೇಕೆ ಸಬ್ಸಿಡಿಯಲ್ಲಿ ತಾಡಪತ್ರಿ ವಿತರಣೆ

ರೈತರ ಬೆಳಗಳಿಗೆ ಮಳೆ, ಗಾಳಿಯಿಂದ ಕಾಪಾಡಲು ತಾಡಪತ್ರಿ ಅವಶ್ಯಕತೆಯಿರುತ್ತದೆ. ಬೆಳೆಗಳ ರಾಶಿ ಸಮಯದಲ್ಲಿ ತಾಡಪತ್ರಿ ಬಳಕೆಯಾಗುತ್ತದೆ. ಬಿಸಿಲಿನಲ್ಲಿ ದವಸಧಾನ್ಯ ಒಣಗಿಸಲು ತಾಡಪತ್ರಿಯ ಬಳಕೆಯಾಗುತ್ತದೆ. ಹೀಗಾಗಿ ರೈತ ಬೆಳೆ, ದವಸಧಾನ್ಯಗಳ ಕಾಪಾಡಲು ಸರ್ಕಾರದ ವತಿಯಿಂದ ಸಬ್ಸಿಡಿಯಲ್ಲಿ ತಾಡಪತ್ರಿ ವಿತರಿಸಲಾಗುವುದು.

ರೈತರು ಹತ್ತಿರದ ರೈತ ಸಂಪರ್ಕ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಿ ತಾಡಪತ್ರಿ ಪಡೆಯಬಹುದು. ಲಭ್ಯತೆಯ ಆಧಾರದ ಮೇಲೆ ರೈತರಿಗೆ ತಾಡಪತ್ರಿ ವಿತರಿಸಲಾಗುವುದು. ಹಿರಿತನ ಆಧಾರದ ಮೇಲೆ ಮೊದಲು ಅರ್ಜಿ ಸಲ್ಲಿಸಿದ ರೈತರಿಗೆ ಹಾಗೂ ಹೆಚ್ಚಿನ ಅರ್ಜಿಗಳು ಬಂದಲ್ಲಿ ಲಾಟರಿ ಮೂಲಕ ವಿತರಿಸಲಾಗುವುದು.

Leave a Comment