ರೈತರ  ಕೃಷಿ ಚಟುವಟಿಕೆಗೆ 3 ಲಕ್ಷ ರೂಪಾಯಿಯವರೆಗೆ ಶೂನ್ಯ ಬಡ್ಡಿದರದಲ್ಲಿ ಸಾಲಸೌಲಭ್ಯ ಸಿಗುತ್ತದೆ. ಹೌದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಪಿಕಾರ್ಡ್ ಬ್ಯಾಂಕ್ ಅಥವಾ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕುಗಳ ಮೂಲಕ ರೈತರು ಶೂನ್ಯ ಬಡ್ಡಿದರದಲ್ಲಿ ಸಾಲ ಪಡೆಯಬಹುದು.

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ಶೂನ್ಯ ಬಡ್ಡಿದರ ಹಾಗೂ ರಿಯಾಯಿತಿ ಬಡ್ಡಿದರದಲ್ಲಿ ನೀಡಲಾಗುವ ಸಾಲಕ್ಕಿರುವ ಕೆಲವು ಷರತ್ತುಗಳನ್ನುಸರ್ಕಾರ ಸಡಿಲಗೊಳಿಸಿದೆ. ಹೌದು, ಇದಕ್ಕಿಂತ ಮುಂಚಿತವಾಗಿ ರೈತರು ಶೂನ್ಯ ಬಡ್ಡಿದರದಲ್ಲಿ ಸಾಲ ಪಡೆಯಬೇಕಾದರೆ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗಿತ್ತು. ರೈತರ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರವು ಕೆಲವು ಷರತ್ತುಗಳನ್ನು ಸಡಿಲಗೊಳಿಸಿದೆ.

ಶೂನ್ಯ ಬಡ್ಡಿದರದಲ್ಲಿ ರೈತರಿಗೆ ನೀಡಲಾಗುವ ಸಾಲಕ್ಕೆ ಇದಕ್ಕಿಂತ ಮುಂಚಿತವಾಗಿ ಒಂದು ಕುಟುಂಬಕ್ಕೆ ಗರಿಷ್ಠ 3 ಲಕ್ಷರೂಪಾಯಿಯವರೆಗೆ ಸಾಲ ನೀಡಲಾಗುತ್ತಿತ್ತು. ಈಗ ಈ ಷರತ್ತನ್ನು ಈಗ ಸಡಿಲಗೊಳಿಸಲಾಗಿದೆ. ಒಂದು ಕುಟುಂಬಕ್ಕೆ ಬದಲಾಗಿ ಈಗ ಕುಟುಂಬದ ಒಬ್ಬ ವ್ಯಕ್ತಿಗೆ 3 ಲಕ್ಷ ರೂಪಾಯಿಯವರೆಗೆ ಸಾಲ ನೀಡಲಾಗುವುದು.

ರೈತರು ಎರಡು ಸಂಘಗಳ ಕಾರ್ಯವ್ಯಾಪ್ತಿಯಲ್ಲಿ ಬೇರೆ ಬೇರೆ ಭೂಮಿ ಹೊಂದಿದ್ದರೆ ಅಥವಾ ಭೂಮಿ ಮತ್ತು ವಾಸಸ್ಥಳ ವಿವಿಧ ಸಂಘಗಳ ವ್ಯಾಪ್ತಿಯಲ್ಲಿದ್ದರೆ ಯಾವ ಸಂಘದ ವ್ಯಾಪ್ತಿಯಲ್ಲಿ ವಾಸವಿರುತ್ತಾನೆಯೇ ಆ ಸಂಘದಲ್ಲಿ ಪಡೆದ ಸಾಲಗಳಿಗೆ ಮಾತ್ರ ಬಡ್ಡಿ ಸಹಾಯಧನ ಅನ್ವಯವಾಗುತ್ತಿತ್ತು. ಇದೀಗ ಈ ಷರತ್ತನ್ನು ಸಡಿಲಗೊಳಿಸಿ ಎರಡು ಸಹಕಾರ ಸಂಘಗಳಲ್ಲಿ ಸಾಲ ಪಡೆದಿದ್ದಲ್ಲಿ ಒಂದು ಸಂಘದಲ್ಲಿ ಮಾತ್ರ ರಿಯಾಯಿತಿ ಬಡ್ಡಿದರವನ್ನು  ಪಡೆಯಬಹುದು.

ಇದನ್ನೂ ಓದಿರೈತರ ಖಾತೆಗೆ ಜಮೆಯಾಯಿತು ಪರಿಹಾರದ ಹೆಚ್ಚುವರಿ ಹಣಃ ಸ್ಟೇಟಸ್ ನೋಡಲು ಇಲ್ಲಿ ಕ್ಲಿಕ್ ಮಾಡಿ

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಪಿಕಾರ್ಡ್ ಬ್ಯಾಂಕ್ ಅಥವಾ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕುಗಳಲ್ಲಿ ರೈತರು ಸಾಲ ಪಡೆಯಬಹುದು. ಈ ಬ್ಯಾಂಕಿನಲ್ಲಿ ರೈತರಿಗೆ 3 ಲಕ್ಷರೂಪಾಯಿಯವರೆಗೆ ಸಾಲ ನೀಡಲಾಗುವುದು. ಕೃಷಿ ಚಟುವಟಿಕೆಗಾಗಿ ಅಲ್ಪಾವಧಿ ಬೆಳೆ ಸಾಲವನ್ನು 3 ಲಕ್ಷ ರೂಪಾಯಿಯವರೆಗೆ ನೀಡಲಾಗುವುದು. ಅದೇ ರೀತಿ ಪಶುಸಂಗೋಪನೆ ಹಾಗೂ ಮೀನುಗಾರಿಕೆಗಾಗಿ 2 ಲಕ್ಷ ರೂಪಾಯಿಯವರೆಗೆ ಸಾಲ ಶೂನ್ಯ ಬಡ್ಡಿದರದಲ್ಲಿ ಸಾಲ ನೀಡಲಾಗುವುದು.

ಶೂನ್ಯ ಬಡ್ಡಿದರದಲ್ಲಿ ಸಾಲ ಪಡೆಯಲು ಯಾವ ಅರ್ಹತೆಗಳು ಬೇಕು?

ಶೂನ್ಯ ಬಡ್ಡಿದರದಲ್ಲಿ ಸಾಲ ಪಡೆಯಬೇಕಾದರೆ ರೈತರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಪಿಕಾರ್ಡ್ ಬ್ಯಾಂಕ್ ಅಥವಾ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕುಗಳಲ್ಲಿ ಸದಸ್ಯತ್ವ ಹೊಂದಿರಬೇಕು. ರೈತರು ಪಹಣಿ ಮತ್ತು ಆಧಾರ್ ಕಾರ್ಡ್ ದಾಖಲೆಗಳೊಂದಿಗೆ ನಿಗದಿತ ನಮೂನೆಗಳಲ್ಲಿ ಸಂಘಗಳಿಗೆ ಅರ್ಜಿ ಸಲ್ಲಿಸಬೇಕು. ರೈತರು ಪಹಣಿ ಮೇಲೆ ಬೇರೆ ಬ್ಯಾಂಕುಗಳಲ್ಲಿ ಸಾಲ ಪಡೆದಿರಬಾರದು.

ಇದನ್ನೂ ಓದಿ ನನ್ನ ಪಾಲಿಸಿ ನನ್ನ ಕೈಲಿ ಅಭಿಯಾನದಡಿಯಲ್ಲಿ ರೈತರ ಮನೆ ಬಾಗಿಲಿಗೆ ಬರಲಿದೆ ಫಸಲ್ ಬಿಮಾ ಯೋಜನೆ

ರೈತ ವಾಸವಿರುವ ಸ್ಥಳದ ಸಂಘ ಅಥವಾ ಭೂಮಿ ಹೊಂದಿರುವ ಸ್ಥಳದ ಸಂಘ ಈ ಮೂರರಲ್ಲಿ ಯಾವುದಾದರೊಂದು ಸಂಘದ ವ್ಯಾಪ್ತಿಯಲ್ಲಿ  ಮಾತ್ರ ಸಾಲ ಪಡೆಯಬೇಕು. ಒಂದು ಜಿಲ್ಲೆಅಥವಾ ತಾಲೂಕಿನ ಹೋಬಳಿಯಲ್ಲಿರುವ ರೈತರು ಇನ್ನೊಂದು ಜಿಲ್ಲೆಯ ಹೋಬಳಿಯಲ್ಲಿ ಶೂನ್ಯ ಬಡ್ಡಿದರದಲ್ಲಿಸಾಲ ಪಡೆಯುವಂತಿಲ್ಲ.ಪಹಣಿಯೊಂದಿಗೆ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್, ಇತ್ತೀಚಿನ ಫೋಟೋ  ಹೊಂದಿರಬೇಕು. ವಿಶೇಷವಾಗಿ ರೈತರು ಸಂಘದ ಸದಸ್ಯರಾಗಿರಬೇಕು.

ರೈತರಿಗೆ ಯಾವ ಚಟುವಟಿಕೆಗೆ  ಸಾಲ ನೀಡಲಾಗುವುದು ?

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಪಿಕಾರ್ಡ್ ಬ್ಯಾಂಕ್ ಅಥವಾ ಸಹಕಾರ ಕೇಂದ್ರಬ್ಯಾಂಕುಗಳ ಮೂಲಕ ಸಾಲವನ್ನು ರೈತರಿಗೆ ಕೃಷಿ ಚಟುವಟಿಕೆಗೆ ಮಾತ್ರ ನೀಡಲಾಗುವುದು. ಕೃಷಿಗೆ ಸಂಬಂಧಿಸಿದ ಪಶುಸಂಗೋಪನೆ, ಮೀನುಗಾರಿಕೆ, ರೇಷ್ಮೆ, ಜೇನುಸಾಕಾಣಿಕೆ, ಕೋಳಿಸಾಕಾಣಿಕೆ ಸೇರಿದಂತೆ ಇನ್ನಿತರ ಕೃಷಿ ಚಟುವಟಿಕೆಗೆ ಸಾಲ ನೀಡಲಾಗುವುದು.

ಮಧ್ಯಮಾವಧಿ ಸಾಲ

ಕೃಷಿ ಚಟುವಟಿಕೆಯೊಂದಿಗೆ ಟ್ರ್ಯಾಕ್ಟರ್, ಟಿಲ್ಲರ್, ಸ್ಪಿಂಕ್ಲರ್, ಹೈನುಗಾರಿಕೆ ಘಟಕಗಾಗಿ 10 ಲಕ್ಷ ರೂಪಾಯಿಯವರೆಗೆ ಶೇ. 3 ಬಡ್ಡಿ ದರದಲ್ಲಿ ಮಧ್ಯಮಾವಧಿಸಾಲ ನೀಡಲಾಗುವುದು.  ಸಾಲ ಪಡೆದವರಿಗೆ ನೇರವಾಗಿಅವರ ಖಾತೆಗೆ ಹಣ ವರ್ಗಾವಣೆ ಮಾಡಲಾಗುವುದು. ವಾಹನ ಖರೀದಿ ಮನೆ ಖರೀದಿ, ಪ್ಲಾಟ್ ಖರೀದಿ ಸೇರಿದಂತೆ ಕೃಷಿ ಹೊರತುಪಡಿಸಿ ಇನ್ನಿತರ ಚಟುವಟಿಕೆಗಳಿಗೆ ಈ ಸಾಲ ಅನ್ವಯವಾಗುವುದಿಲ್ಲ.

ಬ್ಯಾಂಕಿನಿಂದ ಪಡೆದುಕೊಂಡ ಸಾಲವನ್ನು ಅವಧಿಯೊಳಗೆ ಮರುಪಾವತಿ ಮಾಡಿದಲ್ಲಿ ಪಡೆದುಕೊಂಡ ಸಾಲಕ್ಕೆ ಬಡ್ಡಿ ಇರುವುದಿಲ್ಲ. ಅವಧಿ ಮೀರಿದ ನಂತರ ಸಾಲಕ್ಕೆ ಬಡ್ಡಿ ವಿಧಿಸಲಾಗುವುದು.

Leave a Reply

Your email address will not be published. Required fields are marked *