ಸಬ್ಸಿಡಿ ದರದಲ್ಲಿ ಬಿತ್ತನೆ ಬೀಜ, ರಸಗೊಬ್ಬರ ಸರಬರಾಜು

Written by By: janajagran

Updated on:

Farmer get subsidy for fertilizer ಮುಂಗಾರು ಹಂಗಾಮಿಗೆ ಅಗತ್ಯವಿರುವ ಮತ್ತು ಬಿತ್ತನೆ ಬೀಜದ ದಾಸ್ತಾನಿದ್ದು, ಯಾವುದೇ ಕೊರತೆ ಇರುವುದಿಲ್ಲ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ತಿಳಿಸಿದರು.

ಅವರು ಬಿಜೆಪಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಕ್ರಮವಾಗಿ ಕಾಳಸಂತೆಯಲ್ಲಿಮಾರಾಟ ಮಾಡುವ ಮೂಲಕ ಕೃತಕ ಅಭಾವ ಸೃಷ್ಟಿ ಮಾಡುವ ಪ್ರಯತ್ನಮಾಡಿದರೆ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ರಾಜ್ಯದಲ್ಲಿ ಮಳೆ ಆರಂಭವಾಗಿದ್ದು, ರಸಗೊಬ್ಬರ ಹಾಗೂ ಬಿತ್ತನೆ ಬೀಜವನ್ನು ದಾಸ್ತಾನು ಮಾಡಿ ಕಾಳಸಂತೆಯಲ್ಲಿ ಮಾರಲು ಯತ್ನಿಸಿದರೆ ಅಂತಹವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು.ಸರ್ಕಾರ ರಸಗೊಬ್ಬರ ಹಾಗೂ ಬಿತ್ತನೆ ಬೀಜದ ಕೊರತೆಯಾಗದಂತೆ ನೋಡಿಕೊಂಡು ಸಕಾಲಕ್ಕೆ ರೈತರಿಗೆ ಪೂರೈಕೆ ಮಾಡಲಾಗುತ್ತದೆ ಎಂದರು.

2022-23ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಏಪ್ರೀಲ್ 2022 ರಿಂದ ಸೆಪ್ಟೆಂಬರ್ 2023ರವರೆಗೆ 26.76 ಲಕ್ಷ ಮೆಟ್ರಿಕ್ ಟನ್ ಪ್ರಮಾಣದ ವಿವಿಧ ಗ್ರೇಡ್ ಗಳ ರಸಗೊಬ್ಬರದ ಬೇಡಿಕೆಯಿದೆ. ಏಪ್ರೀಲ್ 2023 ತಿಂಗಳಿಂದ ಮೇ ತಿಂಗಳವರೆಗೆ ಒಟ್ಟು 7.61 ಲಕ್ಷ ಮೆಟ್ರಿಕ್ ಟನ್ ಬೇಡಿಕೆಯಿದೆ. ಇದರಲ್ಲಿ ಯೂರಿಯಾ 3.38 ಮೆಟ್ರಿಕ್ ಟನ್, ಡಿಎಪಿ 1.56 ಲಕ್ಷ ಮೆಟ್ರಿಕ್ಟನ್, ಎಂಒಪಿ .06 ಲಕ್ಷ ಮೆಟ್ರಿಕ್ ಟನ್ ಮತ್ತು ಕಾಂಪ್ಲೆಕ್ಸ್  3.18 ಲಕ್ಷ ಮೆಟ್ರಿಕ್ಟನ್ ಬೇಡಿಕೆಯಿದೆ. ಬೇಡಿಕೆಗೆ ತಕ್ಕಂತೆ ರಸಗೊಬ್ಬರವನ್ನು ಪೂರೈಸಲು ಎಲ್ಲಾ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ರಾಜ್ಯದಲ್ಲಿ ರಸಗೊಬ್ಬರದ ಕೊರತೆಯಿಲ್ಲ ಎಂದು ತಿಳಿಸಿದರು.

ಇದನ್ನೂ ಓದಿ : ಈ ರೈತರೇಕೆ ಪಿಎಂ ಕಿಸಾನ್ ಯೋಜನೆಯ ಪಟ್ಟಿಯಿಂದ ಹೊರಗುಳಿಯಲಿದ್ದಾರೆ? ಇಲ್ಲಿದೆ ಮಾಹಿತಿ

ಗೊಬ್ಬರದ ವಿಷಯದಲ್ಲಿಯಾವುದೇ ಸಮಸ್ಯೆಯಿಲ್ಲ.ಕೇಂದ್ರ ಸರ್ಕಾರ ಕೂಡ ನಮಗೆ ಪೂರ್ಣ ಸಹಕಾರ ನೀಡಿದೆ. ರೈತರಿಗೆ ಸಬ್ಸಿಡಿ ದರದಲ್ಲಿ ಗೊಬ್ಬರ ಸರಬರಾಜು ಮಾಡುಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರು ಸಬ್ಸಿಡಿ ಹಣವನ್ನು ಬಿಡುಗಡೆ ಮಾಡಿದ್ದಾರೆ ಎಂದರು. ಕೇಂದ್ರದಿಂದ 3,61,000 ಮೆಟ್ರಿಕ್ ಟನ್ ಗೊಬ್ಬರವನ್ನು ಕೇಂದ್ರ ಸರ್ಕಾರ ರಾಜ್ಯ ಸರ್ಕಾರಕ್ಕೆಹಂಚಿಕೆ ಮಾಡಿದೆ. 83,827 ಮೆಟ್ರಿಕ್ ಟನ್ ಗೊಬ್ಬರ ಸರಬರಾಜು ಮಾಡಲಾಗಿದೆ ಎಂದರು.

2021-22ನೇ ಸಾಲಿನಲ್ಲಿ 7 ಕೋಟಿ ರೂಪಾಯಿ ಮೌಲ್ಯದ ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಕೀಟನಾಶಕಗಳನ್ನು ಜಪ್ತಿ ಮಾಡಿ 145 ಪ್ರಕರಣಗಳನ್ನು ದಾಖಲು ಮಾಡಲಾಗಿದೆ. 202-21ರಲ್ಲಿ 17.31 ಕೋಟಿ ಮೌಲ್ಯದ ಕೃಷಿ ಪರಿಕರ ಜಪ್ತಿ ಮಾಡಿ 70 ಪ್ರಕರಣ ದಾಖಲಿಸಲಾಗಿತ್ತು ಎಂದರು.

Farmer get subsidy for fertilizer ಸಬ್ಸಿಡಿಯಲ್ಲಿ ಬೀಜ ರಸಗೊಬ್ಬರ

ರಾಜ್ಯ ಸರ್ಕಾರದ ರಿಯಾಯ್ತಿ ಯೋಜನೆಯಡಿ ಭತ್ತ, ರಾಗಿ, ಜೋಳ, ಮೆಕ್ಕೆಜೋಳ, ಉದ್ದು, ಹೆಸರು, ಕಡಲೆ, ಅಲಸಂದೆ, ಸೂರ್ಯಕಾಂತಿ, ಕುಸುಬೆ, ಸೋಯಾ ಅವರೆ, ನವಣೆ ಬಿತ್ತನೆ ಬೀಜಗಳನ್ನು ರಾಜ್ಯದ ಎಲ್ಲಾ ವರ್ಗದ ರೈತರಿಗೆ ಗರಿಷ್ಠ 2 ಹೆಕ್ಟೇರಿಗೆ ಅಥ್ ಅವರ ವಾಸ್ತವಿಕ ಹಿಡುವಳಿ ಯಾವುದಿದಿಯೋ ಆ ವಿಸ್ತೀರ್ಣದ ಮಿತಿಯೊಳಗೆ ರೈತರಿಗೆ ಸಕಾಲದಲ್ಲಿ ಹೋಬಳಿಮಟ್ಟದಲ್ಲಿಯೇ ಉತ್ತಮ ಬೀಜಗಳು  ಲಭ್ಯವಾಗುವಂತೆ ಆಯಾ ಹೋಬಳಿಯ ರೈತ ಸಂಪರ್ಕ ಕೇಂದ್ರಗಳು ಗುರುತಿಸಿದ ಹೆಚ್ಚುವರಿಮಾರಾಟ ಕೇಂದ್ರಗಳು ಹಾಗೂ ಗ್ರಾಮ ಮಟ್ಟದಲ್ಲಯಿ ಲಭ್ಯವಾಗುವಂತೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ಬಿತ್ತನೆ ಬೀಜಗಳನ್ನು ವಿತರಿಸಲಾಗುತ್ತಿದೆ ಎಂದರು.

5.38 ಲಕ್ಷ ಕ್ವಿಂಟಾಲ ಬಿತ್ತನೆ ಬೀಜಗಳ ಬೇಡಿಕೆಗೆ 8.65 ಲಕ್ಷ ಕ್ವಿಂಟಾಲ್ ಬಿತ್ತನೆ ಬೀಜಗಳು ಲಭ್ಯವಿದ್ದು, ರಾಜ್ಯಾದ್ಯಂತ ಕೃಷಿ ಇಲಾಖೆಯ  ರೈತ ಸಂಪರ್ಕ ಕೇಂದ್ರಗಳ ಮೂಲಕ ರೈತ ಸಂಪರ್ಕ ಕೇಂದ್ರಗಳಲ್ಲಿ 3505.8 ಕ್ವಿಂಟಾಲ ಗಳಷ್ಟು ಬಿತ್ತನೆ ಬೀಜಗಳನ್ನು ವಿತರಣೆ ಮಾಡಲಾಗಿದ್ದು, 2185.8 ಕ್ವಿಂಟಾಲ ಗಳಷ್ಟು ಗರಿಷ್ಠ ದಾಸ್ತಾನು ಇರುತ್ತದೆ ಎಂದರು.

Leave a Comment