premium calculator in mobile ಮೊಬೈಲ್ ಒಂದಿದ್ದರೆ ಸಾಕು, ಮನೆಯಲ್ಲಿಯೇ ಕುಳಿತು ಯಾವ ಬೆಳೆಗೆ ಎಷ್ಟು ವಿಮೆ ಕಟ್ಟಬೇಕು, ಯಾವ ಬೆಳೆಗೆ ಎಷ್ಟು ವಿಮೆ ಹಣ ಜಮೆಯಾಗುತ್ತದೆ ಎಂಬ ಮಾಹಿತಿ ನೋಡಬಹುದು. ಹೌದು, ಈಗ ತಂತ್ರಜ್ಞಾನ ಬೆಳೆದಿದ್ದರಿಂದ ರೈತರು ಬೆಳೆ ವಿಮೆಯ ಮಾಹಿತಿ ಪಡೆಯಲು ಎಲ್ಲಿಯೂ ಹೋಗಬೇಕಿಲ್ಲ. ಮೊಬೈಲ್ ನಲ್ಲಿಯೇ ಕ್ಷಣಾರ್ಧದಲ್ಲಿ ಪಡೆಯಬಹುದು.
ರೈತರ ಸಂಕಷ್ಟ ಕಾಲದಲ್ಲಿಕೈಹಿಡಿಯಲು ಸರ್ಕಾರವು ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯನ್ನು ಜಾರಿಗೆ ತಂದಿದೆ. ಹೌದು, ಕರ್ನಾಟಕ ರಾಜ್ಯದಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿಯಲ್ಲಿ ವಿವಿಧ ಬೆಳೆಗಳಿಗೆ ರೈತರು ಬೆಳೆ ವಿಮೆ ಮಾಡಿಸಿದರೆ ಅವರಿಗೆ ಸಂಕಷ್ಟದ ಕಾಲದಲ್ಲಿ ಸಹಾಯವಾಗುತ್ತದೆ. ಆದರೆ ಬಹುತೇಕ ರೈತರಿಗೆ ಯಾವ ಬೆಳೆಗೆ ಎಷ್ಟು ಬೆಳೆವಿಮೆ ಕಟ್ಟಬೇಕು ಎಂಬ ಮಾಹಿತಿ ಗೊತ್ತಿರುವುದಿಲ್ಲ.
premium calculator in mobile ರೈತರೇಕೆ ಬೆಳೆ ವಿಮೆ ಕ್ಯಾಲ್ಕುಲೇಶನ್ ಹೇಗೆ ಮಾಡಬೇಕು ?
ಬೆಳೆ ವಿಮೆ ಕಟ್ಟಿದ ನಂತರ ಬೆಳೆ ಹಾಳಾದರೆ ಯಾವ ಬೆಳೆಗೆ ಎಷ್ಟು ವಿಮೆ ಹಣ ರೈತರ ಖಾತೆಗೆ ಜಮೆಯಾಗುತ್ತದೆ ಎಂಬ ಮಾಹಿತಿಯೂ ಗೊತ್ತಿರುವುದಿಲ್ಲ. ಆದರೆ ಈಗ ತಂತ್ರಜ್ಞಾನ ಬೆಳೆದಿದ್ದರಿಂದ ರೈತರು ಬೆಳೆ ವಿಮೆಯ ಮಾಹಿತಿ ಪಡೆಯಲು ಎಲ್ಲಿಯೂ ಹೋಗಬೇಕಿಲ್ಲ. ಮೊಬೈಲ್ ಒಂದಿದ್ದರೆ ಸಾಕು, ಮನೆಯಲ್ಲಿಯೇ ಕುಳಿತು ಯಾವ ಬೆಳೆಗೆ ಎಷ್ಟು ವಿಮೆ ಕಟ್ಟಬೇಕು, ಯಾವ ಬೆಳೆಗೆ ಎಷ್ಟು ವಿಮೆ ಹಣ ಜಮೆಯಾಗುತ್ತದೆ ಎಂಬ ಮಾಹಿತಿ ನೋಡಬಹುದು.
ರೈತರು
https://www.samrakshane.karnataka.gov.in/Premium/Premium_Chart.aspx
ಈ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಸಂರಕ್ಷಣೆ ಅಂದರೆ ಬೆಳೆವಿಮೆಯ ಪೇಜ್ ಓಪನ್ ಆಗುತ್ತದೆ. ಅಲ್ಲಿ ರೈತರು ಜಿಲ್ಲೆ ಆಯ್ಕೆ ಮಾಡಿಕೊಳ್ಳಬೇಕು. ನಂತರ ತಾಲೂಕು ಆಯ್ಕೆ ಮಾಡಿಕೊಳ್ಳಬೇಕು. ಹೋಬಳಿ ಆಯ್ಕೆ ಮಾಡಿಕೊಂಡ ನಂತರ ಗ್ರಾಮ ಆಯ್ಕೆ ಮಾಡಿಕೊಳ್ಳಬೇಕು.
ರೈತರು ಗ್ರಾಮ ಆಯ್ಕೆ ಮಾಡಿಕೊಂಡನಂತರ ಯಾವ ಬೆಳೆಗೆ ವಿಮೆ ಕಟ್ಟಬೇಕೆಂದುಕೊಂಡಿದ್ದಾರೋ ಆ ಬೆಳೆ ಆಯ್ಕೆ ಮಾಡಿಕೊಳ್ಳಬೇಕು.ಅಲ್ಲಿ ನಿಮ್ಮೂರಿಗೆ ಸಂಬಂಧಿಸಿದ ಬೆಳೆಗಳ ಪಟ್ಟಿ ಕಾಣುತ್ತದೆ. ಅದರಲ್ಲಿಯಾವ ಬೆಳೆ ಎಂಬುದನ್ನು ಆಯ್ಕೆ ಮಾಡಿಕೊಂಡು ಎಷ್ಟು ಎಕರೆಗೆ ವಿಮೆ ಕಟ್ಟಬೇಕೆಂದುಕೊಂಡಿದ್ದಾರೋ ಆ ಎಕರೆ ಸಂಖ್ಯೆ ನಮೂದಿಸಿಬೇಕು.
ಎಕರೆ ಮತ್ತು ಗುಂಟೆಯಲ್ಲಿದ್ದರೆ ಎಕರೆ ಕಾಲಂನಲ್ಲಿ ಎಷ್ಟು ಎಕರೆ ಎಂಬದನ್ನುನಮೂದಿಸಿ ಗುಂಟೆಯಿದ್ದರೆ ಎಷ್ಟು ಗುಂಟೆಯಿದೆ ಎಂಬುದನ್ನು ನಮೂದಿಸಿ Show Premium ಮೇಲೆ ಕ್ಲಿಕ್ ಮಾಡಬೇಕು. ಆಗ ಪ್ರತಿ ಹೆಕ್ಟೇರಿಗೆ ಎಷ್ಟು ವಿಮೆ ಹಣ ಜಮೆಯಾಗುತ್ತದೆ ಎಂಬುದು ಮೇಲ್ಗಡೆ ಕಾಣುತ್ತದೆ.
ಇದನ್ನೂ ಓದಿ : ಈ ರೈತರೇಕೆ ಪಿಎಂ ಕಿಸಾನ್ ಯೋಜನೆಯ ಪಟ್ಟಿಯಿಂದ ಹೊರಗುಳಿಯಲಿದ್ದಾರೆ? ಇಲ್ಲಿದೆ ಮಾಹಿತಿ
ಆದರ ಕೆಳಗಡೆ ನೀವು ನಮೂದಿಸಿದ ಅಂದರೆ ಎಷ್ಟು ಎಕರೆಗೆ ವಿಮೆ ಕಟ್ಟಬೇಕೆಂದುಕೊಂಡಿದ್ದೀರೋ ಅದರ ಎಕರೆ, ನಿಮಗೆ ಜಮೆಯಾಗುವ ಹಣ ಒಟ್ಟು ವಿಮೆ ಹಣ, ರೈತರು ಕಟ್ಟುವ ಹಣ, ಕೇಂದ್ರ ಮತ್ತು ರಾಜ್ಯಸರ್ಕಾರದ ಪಾಲೆಷ್ಟು ಎಂಬ ಮಾಹಿತಿ ಕಾಣುತ್ತದೆ.
ಉದಾಹರಣೆಗೆ ನೀವು ಒಂದು ಎಕರೆ ತೊಗರಿಗೆ ವಿಮೆ ಹಣ ಕಟ್ಟಬೇಕೆಂದುಕೊಂಡಿದ್ದರೆ ನಿಮಗೆ ಸುಮಾರು 16188 ರೂಪಾಯಿ ಜಮೆಯಾಗುತ್ತದೆ. ನೀವು ಕಟ್ಟುವ ವಿಮೆ ಕೇವಲ 323 ರೂಪಾಯಿ, ರಾಜ್ಯ ಸರ್ಕಾರದ 1240 ರೂಪಾಯಿ ಕೇಂದ್ರ ಸರ್ಕಾರದ 1240 ರೂಪಾಯಿ ಸೇರಿ ಒಟ್ಟು 2803 ರೂಪಾಯಿ ವಿಮೆ ಕಟ್ಟಲಾಗುತ್ತದೆ. ನೀವು ಪಾವತಿಸುವುದು ಕೇವಲ 323 ರೂಪಾಯಿ ಇದಕ್ಕೆ ಬೆಳೆ ಹಾಳಾದರೆ ನಿಮಗೆ ವಿಮೆಯ ಹಣ 16188 ರೂಪಾಯಿ ಜಮೆಯಾಗುತ್ತದೆ.
ಬೆಳೆ ವಿಮೆ ಕುರಿತಂತೆ ಹೆಚ್ಚಿನ ಮಾಹಿತಿ ಪಡೆಯಲು ಈ 08026564535, 08026564536, 08026564537 ನಂಬರುಗಳಿಗೆ ಕರೆ ಮಾಡಬಹುದು. ಇವು ಬೆಳೆ ವಿಮೆಯ ಸಹಾಯವಾಣಿ ನಂಬರುಗಳಿವೆ. ಇನ್ನೂ ಹೆಚ್ಚಿನ ಮಾಹಿತಿಗಾಗಿ ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ಸಿ.ಎಸ್.ಸಿ ಕೇಂದ್ರಗಳಿಗೆ ಸಂಪರ್ಕಿಸಬಹುದು.