Farmar’s son got gold medal ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಕುನೂರ ಗ್ರಾಮದ ರೈತನ ಮಗ ಪ್ರಶಾಂತ ವಿ. ಬಿಎಸ್ಸಿ ತೋಟಗಾರಿಕೆ ಪದವಿಯಲ್ಲಿ ಬರೋಬ್ಬರಿ 14 ಚಿನ್ನದ ಪದಕಗಳ (14 gold medal) ಬೆಳೆ ತೆಗೆದಿದ್ದಾರೆ.
ಹೌದು, ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಮಂಗಳವಾರ ಜರುಗಿದ 10ನೇ ಘಟಿಕೋತ್ಸವ ಕಾರ್ಯಕ್ರಮದಲ್ಲಿ ರೈತರ ಮಕ್ಕಳಿಗೆ ಚಿನ್ನದ ಪದ9ಕ ಧಾರೆ ಎರೆದಿದೆ. 28 ವಿದ್ಯಾರ್ಥಿಗಳಇಗೆ 64 ಚಿನ್ನದ ಪದಕ ನೀಡಿದೆ. ಈ ವಿದ್ಯಾರ್ಥಿಗಳಲ್ಲಿ ಪ್ರಶಾಂತ ವಿ ಒಬ್ಬರೇ 14 ಚಿನ್ನದ ಪದಕ ಪಡೆದು ಗಮನ ಸೆಳೆದಿದ್ದಾರೆ. ಮೂಲತಃ ರೈತ ಕುಟುಂಬದವನಾಗಿದ್ದ ಇವರು, ತಮ್ಮದೇ ಆದ ಜಮೀನಿನಲ್ಲಿ ತೋಟಗಾರಿಕೆ ಬೆಳೆಗಳನ್ನು ಬೆಳೆಯುವುದರ ಜೊತೆಗೆ ಕೃಷಿಯಲ್ಲಿ ತೊಡಗಿದ್ದಾರೆ.
ಪದವಿ ಸ್ವೀಕರಿಸಿದ ನಂತರ ಮಾತನಾಡಿ, ‘ಬಾಲ್ಯದಿಂದಲೂ ನನಗೆ ಕೃಷಿ ಖುಷಿ ನೀಡುವ ಸಂಗತಿ. ಹೀಗಾಗಿಯೇ ಪಿಯುಸಿಯಲ್ಲಿ ಶೇ 93.87 ಅಂಕ ಬಂದಿದ್ದರೂ ಎಂಜಿನಿಯರಿಂಗ್ ಅಥವಾ ಬೇರೆ ಯಾವುದೇ ವಿಷಯ ಆಯ್ದುಕೊಳ್ಳಲಿಲ್ಲ. ಗಿಡ–ಮರಗಳ ಜೊತೆಗೆ ಬದುಕಿ–ಬೆಳೆಯುವ ಆ ಅನುಭೂತಿಯೇ ಬೇರೆ ಎಂದ ಅವರು, ತಾವು ಕೃಷಿ ವಿಜ್ಞಾನಿಯಾಗಿ ರೈತರಿಗೆ ಅನುಕೂಲವಾಗುವ ರೀತಿಯೆಲ್ಲಿ ಕೆಲಸ ಮಾಡುತ್ತೇನೆಂದು ಹೇಳಿದ್ದಾರೆ.
ಇದನ್ನೂ ಓದಿ ನೀವು ನಿಂತಿರುವ ಜಮೀನು ಯಾರ ಹೆಸರಿನಲ್ಲಿದೆ ಇಲ್ಲೇ ಚೆಕ್ ಮಾಡಿ
Farmar’s son got gold medal 14 ಚಿನ್ನದ ಪದಕಕ್ಕೆ ಕೊರಳೊಡ್ಡಿದ ರೈತನ ಮಗ ಪ್ರಶಾಂತ
ಪ್ರಶಾಂತ್ ಇಲ್ಲಿಯವರೆಗೂ ಊರಲ್ಲಿರುವ ಎರಡೂವರೆ ಎಕರೆ ಹೊಲದಲ್ಲಿ ಅಪ್ಪನೊಂದಿಗೆ ಸೇರಿ ರೇಷ್ಮೆ ಬೆಳೆಯುತ್ತಿದ್ದ. ಈಗ ಇಲ್ಲಿ (ಬಾಗಲಕೋಟೆಯಲ್ಲಿ) ಬಂದು ಚಿನ್ನದ ಫಸಲನ್ನೇ ತೆಗೆದಿದ್ದಾನೆ’ ಎಂದು ಘಟಿಕೋತ್ಸವದಲ್ಲಿದ್ದ ಪ್ರಶಾಂತರವರ ಅಜ್ಜ ಚೆನ್ನೇಗೌಡರು ಸಂತಸ ವ್ಯಕ್ತಪಡಿಸಿದರು.
ಅದೇ ರೀತಿ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಹಾರಲಹಳ್ಳಿ ಗ್ರಾಮದ ಬಿಎಸ್ಸಿ ಸ್ನಾತಕೋತ್ತರ ವಿದ್ಯಾರ್ಥಿ ಪುಷ್ಪಾ ಎಚ್.ಎ. 4 ಚಿನ್ನದ ಪದಕ ಪಡೆದರೆ, ಕೊಡಗು ಜಿಲ್ಲೆಯ ಕುಶಾಲನಗರದ ಸಿ.ಡಿ. ವೀಣಾ ಎಂ.ಎಸ್ಸಿ ಸ್ನಾತಕೋತ್ತರದಲ್ಲಿ 4, ಚಿಕ್ಕಬಳ್ಳಾಪೂರ ಜಿಲ್ಲೆ ಶಿಡ್ಲಗಟ್ಟ ತಾಲೂಕಿನ ಜಂಗಮಕೋಟೆ ಗ್ರಾಮದ ಪೃಥ್ವಿ ಬಸವರಾಜ ಎಂಎಸ್ಸಿ ತೋಟಗಾರಿಕೆಯಲ್ಲಿ 4, ಆಂಧ್ರಪ್ರದೇಶದ ಚಿತ್ತೂರ ಜಿಲ್ಲೆಯ ಉಪ್ಪರಪಳ್ಳಿಯ ಕುರುಬಲಕೋಟಾ ಮಾಧವಿ ಎಂಎಸ್.ಸಿ ತೋಟಗಾರಿಕೆಯಲ್ಲಿ 3 ಹಾಗೂ ರಾಯಚೂರಿನ ಗೌತಮ ಎಂ.ಎಸ್.ಸಿ ತೋಟಗಾರಿಕೆಯಲ್ಲಿ 2 ಚಿನ್ನದ ಪದಕ ಪಡೆದುಕೊಂಡರು.
ಕುಲಪತಿ ಡಾ. ಕೆ.ಎಂ ಇಂದಿರೇಶ ಮಾತನಾಡಿ, ತೋಟಗಾರಿಕೆ ಪದವಿ ಪಡೆದ ವಿದ್ಯಾರ್ಥಿಗಳು ಇಂದು ಆತ್ಮಾವಲೋಕನ ಮಾಡಿಕೊಳ್ಳುವ ಸಮಯ ಇದಾಗಿದೆ. ನಿಮ್ಮೆಲ್ಲರ ವ್ಯಕ್ತಿತ್ವದ ರೂವಾರಿಗಳಾದ ನಿಮ್ಮ ತಂದೆತಾಯಿ, ಶಿಕ್ಷಕರನ್ನು ಸ್ಮರಿಸಬೇಕು.ಸರಿಯಾದ ಜ್ಞಾನವೇ ನಮ್ಮ ಸಮಸ್ಯೆಗೆ ಪರಿಹಾರ ಎಂಬುದನ್ನು ಮರಿಯಬಾರದು ಎಂದು ಸಲಹೆ ನೀಡಿದರು
ರೈತರ ಮಕ್ಕಳು ಇತ್ತೀಚೆಗೆ ಉತ್ತಮ ಸಾಧನೆ ಮಾಡುತ್ತಿದ್ದಾರೆ. ತಮ್ಮ ತಂದೆ ತಾಯಿ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದರೂ ಸಹ ತಮ್ಮ ಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದಾರೆ. ಹೌದು, ಇಂದು ಎಲೆಮರೆ ಕಾಯಿಯಂತೆ ಮಕ್ಕಳು ಸಹ ಉತ್ತಮ ಸಾಧನೆ ಮಾಡಿ ತಮ್ಮ ಪಾಲಕರ ಕೀರ್ತಿ ಹೆಚ್ಚಿಸುತ್ತಿದ್ದಾರೆ.