Ella Amavasya ದಿನ ಚರಗ ಏಕೆ ಚೆಲ್ಲುತ್ತಾರೆ?

Written by Ramlinganna

Published on:

Ella Amavasya : ಎಳ್ಳಅಮವಾಸ್ಯೆ ದಿನ ಚರಗ ಏಕೆ ಚೆಲ್ಲುತ್ತಾರೆ?  ಚರಗ ಚೆಲ್ಲುವುದರ ಹಿಂದಿನ ಮಹತ್ವವೇನು? ಉತ್ತರ ಕರ್ನಾಟಕದ ಕಡೆ ಏನುನು ಮಾಡುತ್ತಾರೆ?.ಎಂಬ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

ನಮ್ಮ ಯೂಟೂಬ್ ಚಾನೆಲ್ ಸಬಸ್ಕ್ರೈಬ್ ಮಾಡಿ ಇಂತಹ ಮಾಹಿತಿ ಪಡೆಯಿರಿ

ಎಳ್ಳ ಅಮವಾಸ್ಯೆಯನ್ನು ಕೆಲವರು ಮಾರ್ಗಶಿರ ಅಮಾವಾಸ್ಯೆ ಎನ್ನತ್ತಾರೆ. ಎನ್ನು ಕೆಲವು ಭಾಗದಲ್ಲಿ ಎಳ್ಳಮಾವಾಸ್ಯೆ ಅಥವಾ ದರ್ಶ ಅಮಾವಾಸ್ಯೆ ಎಂದು ಕರೆಯಲಾಗುತ್ತದೆ. ಎಳ್ಳ ಅಮವಾಸ್ಯೆಗೆ ನಿಮ್ಮ ಕಡೆ ಏನೆಂದು ಕರೆಯುತ್ತಾರೆ. ಕಾಮೆಂಟ್ ಮಾಡಿ ತಿಳಿಸಬಹುದು.

ಉತ್ತರ ಕರ್ನಾಟಕದ ಕಡೆ ಎಳ್ಳ ಅಮಾವಾಸ್ಯೆ ಹಬ್ಬವನ್ನು ವಿಶೇಶವಾಗಿ ಆಚರಿಸಲಾಗುತ್ತದೆ. ಭೂ ತಾಯಿಗೆ ಚೆರಗ ಚೆಲ್ಲುವುದರ ಮೂಲಕ ನೈವೈದ್ಯ ಅರ್ಪಿಸಲಾಗುತ್ತದೆ. ಹಿಂಡಿ ಪಲ್ಯಾ, ಹೋಳಿಗೆ, ಬದನೆಕಾಯಿ ಪಲ್ಲೆ, ಅನ್ನ-ಸಾಂಬಾರನ್ನು ಉಂಡೆ ಉಂಡೆ ಮಾಡಿ ಹೊಲದ ತುಂಬಾ ಚೆರಗ ಚೆಲ್ಲುತ್ತಾರೆ.

ಎಳ್ಳ ಅಮವಾಸ್ಯೆ ಸಂದರ್ಭದಲ್ಲಿಉತ್ತರ ಕರ್ನಾಟಕದಲ್ಲಿ ಹೆಚ್ಚಾಗಿ ಜೋಳ ಬೆಳೆ ಇರುತ್ತದೆ. ಇದು ಕಡಿಮೆ ಖರ್ಚಿನಲ್ಲಿಯೇ ಒಳ್ಳೆಯ ಫಸಲನ್ನು ನೀಡುತ್ತದೆ. ಹಾಗಾಗಿ ಇದು ರೈತರ ಆಪ್ತ ಮಿತ್ರ ಬೆಳೆಯಾಗಿದೆ.

ಕೆಲವು ಪುರಾಣಗಳಲ್ಲಿ ಪಾಂಡವರು- ಕೌರವರು  ಜೋಳದ ಬೆಳೆಯನ್ನು ಬಿತ್ತಿದ್ದರು ಎಂಬ ಉಲ್ಲೇಖವಿದೆ. ಇನ್ನು ಕೆಲವು ಭಾಗದಲ್ಲಿ ರೈತರು ಅವರ ಜಮೀನಿನಲ್ಲಿ ಎಳ್ಳು ಹಾಗೂ ಬೆಲ್ಲವನ್ನು ಚಿಮ್ಮುತ್ತಾರೆ.  ಭೂಮಿಯ ಫಲವತ್ತತೆಯನ್ನು ಕಾಪಾಡುವ ಎರೆಹುಳಗಳಿಗೆ ಆಹಾರವಾಗುತ್ತದೆಯೆಂಬ ಉದ್ದೇಶದಿಂದ  ಎಳ್ಳು ಬೆಲ್ಲ ಚಿಮ್ಮಲಾಗುತ್ತದೆ.

Ella Amavasya ಚರಗ ಚೆಲ್ಲುವುದು ಏಕೆ ಗೊತ್ತಾ?

ಚರಗ ಚಲ್ಲುವುದು ಸಾಂಪ್ರದಾಯಿಕವಲ್ಲ, ಇದರ ಹಿಂದೆ ವೈಜ್ಞಾನಿಕ ಕಾರಣವೂ ಇದೆ. ಎಳ್ಳ ಅಮವಾಸ್ಯೆ ಹೊತ್ತಿಗೆ ಹಿಂಗಾರು ಪೈರು ಬೆಳೆದು ನಿಂತಿರುತ್ತದೆ. ಅದರಲ್ಲಿಯೂ ಜೋಳದ ಮಧ್ಯೆ ಕಡಲೆ ಬೆಳೆಗೆ ಕಾಯಿಕೊರಕ ಎಂಬ ಹುಳ ಬಿದ್ದು ಹಾನಿ ಮಾಡುತ್ತದೆ. ಈ ಹೊತ್ತಲ್ಲಿ “ಹುಲ್ಲು ಹುಲ್ಲಿಗೋ ಚೆಲ್ಲ ಚೆಲ್ಲಂಬರಿಗೋ” ಎಂದು ಚರಗ ಚೆಲ್ಲುವಾಗ ಖಾದ್ಯ ತಿನ್ನಲು ಹಕ್ಕಿಗಳು ಬರುತ್ತವೆ. ಅವು ಜೋಳದ ಮಧ್ಯೆ ಆಹಾರ ತಿನ್ನಲು ಇಳಿಯುತ್ತವೆ. ಆಗ ಖಾದ್ಯದ ಜೊತೆಗೆ ಕಡಲೆಗೆ ಬಿದ್ದಿರೋ ಕಾಯಿಕೊರಕ ಹುಳವನ್ನು ಕೂಡ ತಿನ್ನುತ್ತವೆ. ಇದರಿಂದ ಈ ಹುಳುಗಳ ನಿಯಂತ್ರಣವಾಗುತ್ತದೆ. ಪೈರು ಸೊಂಪಾಗಿ ಬೆಳೆಯುತ್ತದೆ. ಈ ಕಾರಣಕ್ಕಾಗಿ ಚರಗ ಚೆಲ್ಲುವ ಹಬ್ಬವನ್ನು ತಲೆ ತಲಾಂತರದಿಂದ ಆಚರಣೆ ಮಾಡಿಕೊಂಡು ಬರಲಾಗುತ್ತಿದೆ.

ಎಳ್ಳ ಅಮವಾಸ್ಯೆಯ ಹಿಂದಿನ ದಿನ ಏನೇನು ಮಾಡಲಾಗುತ್ತದೆ?

ಎಳ್ಳ ಅಮವಾಸ್ಯೆಯ ಹಿಂದಿನ ದಿನವನ್ನು ಕಾಯಿಪಲ್ಯೆ ದಿನವೆಂದು ಕರೆಯುತ್ತಾರೆ.. ದಿನವಿಡೀ ಕಾಯಪಲ್ಯೆ, ಕಾಳು ಸ್ವಚ್ಛಗೊಳಿಸಿ ಭಜ್ಜಿ, ರೊಟ್ಟಿ, ಅಂಬಲಿ, ಜೋಳದ ಬಾನಾ ತಯಾರಿಸುತ್ತಾರೆ. ಮರುದಿನ ತಯಾರಿಸಿದ ಎಲ್ಲಾಖಾದ್ಯಗಳನ್ನುಬಿದಿರಿನಿಂದ ತಯಾರಿಸಿದ ಬುಟ್ಟಿಯಲ್ಲಿ ಸಂಗ್ರಹಿಸಿ ತಲೆಯ ಮೇಲೆ ಇಟ್ಟುಕೊಂಡುಹೊಲಕ್ಕೆ ಕೊಂಡೊಯ್ಯುತ್ತಾರೆ. ಅವರದೊಂದಿಗೆ ಕುಟುಂಬದ ಎಲ್ಲಾ ಸದಸ್ಯರ ದೇವರ ಸ್ಮರಣೆ ಮಾಡುತ್ತಾ ಹೋಗುತ್ತಾರೆ. ಹೀಗೆ ಹೋಗುವಾಗ ಹಿಂದಿರುಗಿ ನೋಡುವುದಿಲ್ಲ. ಯಾರೋಂದಿಗೂ ಮಾತನಾಡುವುದಿಲ್ಲ.

ಇದನ್ನೂ ಓದಿ : ರೈತರೇಕೆ ಜಮೀನಿನ ಪೋಡಿ ಮಾಡಿಸಬೇಕು? ಮಾಹಿತಿ ಇಲ್ಲಿದೆ

ಬಿಳಿಜೋಳದ ದಂಡು, ಕಬ್ಬಿನ ದಂಟು ಕಡಲೆ, ಕುಸುಬಿ, ಅಗಸಿ, ಗೋಧಿ ತೆನೆಗಳಿಂದ ಕೊಂಪೆಯನ್ನುಸಿಂಗರಿಸುತ್ತಾರೆ. ಲಕ್ಷ್ಮೀ, ಭೂದೇವಿ ಸರಸ್ವತಿ, ಪಾರ್ವತಿ ಹಾಗೂ ಭವಾನಿಯ ಪ್ರತೀಕವಾಗಿ ಐದು ಮಣ್ಣಿನ ಹೆಂಟೆ ಅಥವಾ ಕಲ್ಲುಗಳನ್ನಿಟ್ಟು ಗೋಧಿ ಹಿಟ್ಟಿನಿಂದ ಮಾಡಿದ ಹಣತೆ ದೀಪ ಬೆಳಗಿಸಿ ಪೂಜಿಸುತ್ತಾರೆ.

ಕೊಂಪೆಯಲ್ಲಿ ಇರಿಸಿದ ವಿವಿಧ ಆಹಾರ ಪದಾರ್ಥಗಳನ್ನು ಮಿಶ್ರಣ ಮಾಡಿ ದ್ರವ ರೂಪದ ಆಹಾರವನ್ನು ನೀರಿನ ತಂಬಿಗೆಯಲ್ಲಿ ತೆಗೆದುಕೊಂಡು ಕೊಂಪೆಯ ಸುತ್ತ ಜೋಳದ ದಂಟಿನಿಂದ ಚರಗ ಚೆಲ್ಲುತ್ತಾರೆ. ಕೊಂಪೆಯ ಸುತ್ತ ಸುತ್ತುವಾಗ ಮುಂದಿರುವ ವ್ಯಕ್ತಿ  ವಲಿಗ್ಯಾ ವಲಿಗ್ಯಾ ಎಂದುಹೇಳುತ್ತಾರೆ. ಹಿಂದಿರುವ ವ್ಯಕ್ತಿ ಚಾಲೋಂ ಪಲಿಗ್ಯಾ ಎನ್ನುವರು.

ಕೊನೆಯಲ್ಲಿ ಚರಗವನ್ನು ಚೆಲ್ಲಿ ಕೊಂಪೆಗೆ ನಮಸ್ಕಾರ ಮಾಡಿ, ಮನೆಯ ಮುತೈದೆಯರು ಕನೋಲಿ, ಕರಜಿಕಾಯಿ ಅವರ ಬೆನ್ನ ಮೇಲಿಡುವರು. ದೇವರಿಗೆ ನಮಸ್ಕರಿಸುವ ವ್ಯಕ್ತಿ ಎಡಗೈಯಿಂದ ಪಡೆದು ತಿನ್ನುವರು. ನಂತರ ಎಲ್ಲರೂ ಕುಳಿತುಸಾಮೂಹಿತವಾಗಿ ಊಟ ಮಾಡುವರು. ಬಂಧು ಬಾಂಧವರು, ನೆರೆಹೊರೆಯವರು, ಸ್ನೇಹಿತರನ್ನು ಹೊಲಕ್ಕೆ ಕರೆಸಿ ಉಣಬಡಿಸಲಾಗುತ್ತದೆ.

ಬುಟ್ಟಿ ಕೊಂಪೆಯಲ್ಲಿ ದೀಪ ಹಚ್ಚಿ ಅದನ್ನು ತಲೆಯ ಮೇಲೆ ಇಟ್ಟು ಮನೆಗೆ ವಾಪಸಾಗುತ್ತಾರೆ. ಮನೆ ತಲುಪುವವರೆಗೂ ಎಲ್ಲೂ ನಿಲ್ಲುವುದಿಲ್ಲ. ಇದು ನಮ್ಮ ಕಡೆ ಆಚರಿಸುವ ಎಳ್ಳ ಅಮವಾಸ್ಯೆಯ ವಿಶೇಶತೆ. ನಿಮ್ಮ ಕಡೆ ಎಳ್ಲ ಅಮವಾಸ್ಯೆ ದಿನ ಏನೇನು ಮಾಡುತ್ತಾರೆ. ಹೇಗೆ ಆಚರಿಸುತ್ತರೆ ಎಂಬುದನ್ನುಕಾಮೆಂಟ್ ಮಾಡಿ ತಿಳಿಸಿ.

Leave a Comment