ಇಂದಿನಿಂದ ಮೇ 9 ರವರೆಗೆ ಮಳೆ

Written by Ramlinganna

Updated on:

Due to cyclone heavy rain ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಮೇ 6 ರ ಆಸುಪಾಸಿನಲ್ಲಿ ಆಗ್ನೆಯ ಬಂಗಾಳಕೊಲ್ಲಿಯಲ್ಲಿ ಚಂಡಮಾರುತ ರೂಪುಗೊಳ್ಳುವ ಸಾಧ್ಯತೆಯಿದೆ.  ಹೀಗಾಗಿ ಚಂಡಮಾರುತದ ಪರಿಣಾಮದಿಂದಾಗಿ ರಾಜ್ಯದೆಲ್ಲೆಡೆ ಮಳೆಯಾಗಲಿದೆ. ಅದರಲ್ಲಿ ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ರಾಜ್ಯದಲ್ಲಿ ಇಂದಿನಿಂದ (ಶ್ರುಕ್ರವಾರ) ಐದು ದಿನ ಮಳೆಯಾಗಲಿದ್ದು, ಮೇ 7 ರಿಂದ 9 ರವರೆಗೆ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಮೇ 8 ಮತ್ತು 9 ರಂದು ದಕ್ಷಿಣ ಒಳನಾಡಿನ ಚಾಮರಾಜನಗರ, ಕೊಡಗು, ಮೈಸೂರು ಮತ್ತು ರಾಮನಗರ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ. ಅದೇ ರೀತಿ ಉತ್ತರ ಒಳನಾಡಿನ ಬಾಗಲಕೋಟೆ, ಬೀದರ್, ಕಲಬುರಗಿ, ಬೆಳಗಾವಿ, ರಾಯಚೂರು, ಕೊಪ್ಪಳ, ಯಾದಗಿರಿ, ವಿಜಯಪುರ,  ಹಾಗೂ ಕರಾವಳಿಯ ಎಲ್ಲಾ ಜಿಲ್ಲೆಗಳಲ್ಲಿ ಹಗುರದಿಂದ ಕೂಡಿದ ಸಾಧಾರಣ ಮಳೆಯಾಗಲಿದೆ.

ದೇಶಾದ್ಯಂತ ಮುಂದುವರಿಯುತ್ತಿರುವ ಬಿಸಿಲನ ಪ್ರತಾಪದ ನಡುವೆದೆ ಚಂಡಮಾರುತ ಸೃಷ್ಟಿಯಾಗುವ ಸಾಧ್ಯತೆಯಿದೆ. ಹೌದು, ಆಗ್ನೆಯ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ಮುಂದಿನ ವಾರದ ಹೊತ್ತಿಗೆ ಇದು ಚಂಡಮಾರುತವಾಗಿ ರೂಪುಗೊಳ್ಳುವ ಸಾಧ್ಯತೆಯಿದೆ. ಈ ಚಂಡಮಾರುತಕ್ಕೆ ಮೋಚಾ ಎಂದು ಹೆಸರಿಡಲಾಗಿದೆ.

ಒಡಿಸ್ಸಾ ತೀರಕ್ಕೆ ಸೈಕ್ಲೋನ್ ಅಪ್ಪಳಿಸುವ ಸಾಧ್ಯತೆಯಿದ್ದು, ದಕ್ಷಿಣ ಭಾರತ ಸೇರಿದಂತೆ ಹಲವು ರಾಜ್ಯಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ.

ಮಳೆಯ ಮಾಹಿತಿ ಬೇಕೆ?

ಸಾರ್ವಜನಿಕರು ತಮ್ಮೂರಿನನಲ್ಲಿ ಯಾವಾಗ ಮಳೆಯಾಗುತ್ತದೆ? ಹಾಗೂ ವಾತಾವರಣ ಹೇಗಿರಲಿದೆ? ಗಾಳಿ, ಮಳೆ ಸೇರಿದಂತೆ ಹವಾಮಾನದ ಇನ್ನಿತರ ಮಾಹಿತಿ ಪಡೆಯಲು ಉಚಿತ ಸಹಾಯವಾಣಿಯನ್ನು ಆರಂಭಿಸಿದೆ. ಹೌದು, ವರುಣಮಿತ್ರ ಎಂಬ ಸಹಾಯವಾಣಿಯನ್ನು ಆರಂಭಿಸಿದೆ.

ವರುಣಮಿತ್ರ ಸಹಾಯವಾಣಿ 9243345433 ನಂಬರಿಗೆ ಕರೆ ಮಾಡಿದರೆ ಸಾಕು, ಹವಾಮಾನದ ವರದಿಯನ್ನುಹಾಗೂ ಮಳೆಯ ಮಾಹಿತಿಯನ್ನು ದಿನದ 24 ಗಂಟೆಗಳ ಕಾಲ ಸಾರ್ವಜನಿಕರು ಪಡೆಯಬಹುದು. ಇದಕ್ಕಾಗಿ ಯಾವುದೇ ಶುಲ್ಕ ಪಾವತಿಸುವ ಅಗತ್ಯವಿಲ್ಲ.ಇದು ಉಚಿತವಾಗಿರುತ್ತದೆ.

ಇದನ್ನೂ ಓದಿ : ಇನ್ನೂ ಮುಂದೆ ಸಿಡಿಲು ಬೀಳುವ ಮೊದಲೇ ಮೊಬೈಲಿಗೆ ಮುನ್ಸೂಚನೆ ನೀಡಲಿದೆ sidilu app: ಇಲ್ಲಿದೆ ಮಾಹಿತಿ

ಗುಡುಗು ಸಿಡಿಲಿಗೆ ಸಂಬಂಧಿಸಿದಂತೆ ಅಂದರೆ ಸಿಡಿಲು ಬೀಳುವ ಐದು ನಿಮಿಷ ಮೊದಲೇ ಮಾಹಿತಿ ನೀಡಲು ಸಿಡಿಲು ಹಾಗೂ ದಾಮಿನಿ ಆ್ಯಪ್ ಗಳಿವೆ.ಈ ಆ್ಯಪ್ ಗಳನ್ನುನಿಮ್ಮ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಂಡರೆ ಸಾಕು, ನಿಮಿಗೆ ಐದಾರು ನಿಮಿಷಗಳ ಮೊದಲೇ ಸಿಡಿಲಿನ ಮಾಹಿತಿ ಸಿಗುತ್ತದೆ. ಅಂದರೆ ನಿಮ್ಮ ಸುತ್ತಮುತ್ತ ಎಷ್ಟು ಕಿ.ಮೀ ಅಂತರದಲ್ಲಿ ಸಿಡಿಲು ಸಂಭವಿಸುತ್ತದೆ ಎಂಬ ಮಾಹಿತಿ ನೀಡಲಾಗುವುದು. ಇದರಿಂದಾಗಿ ನೀವು ಸುರಕ್ಷಿತ ಸ್ಥಳಕ್ಕೆಹೋಗಿ ಸೇರಬಹುದು.

Due to cyclone heavy rain ಬೆಂಗಳೂರಿನಲ್ಲಿ ಮೂರನೇ ದಿನವೂ ಮಳೆ

ಬೆಂಗಳೂರಿನಲ್ಲಿ ಸತತ ಮೂರನೇ ದಿನವೂ ಮಳೆಯಾಗಿದೆ. ಶಾಂತಿನಗರ, ರಾಜಾಜಿನಗರ, ಜಯನಗರ, ವಿಜಯನಗರ, ನಂದಿನಿ ಲೇ ಔಟ್, ಚಂದ್ರ ಲೇಔಟ್, ಶ್ರೀನಗರ, ಗಿರಿನಗರ, ಹೆಬ್ಬಾಳ, ನಾಗರಬಾವಿ, ಸೇರಿದಂತೆ ಇನ್ನೂ ಹಲವೆಡೆ ಮಳೆಯಾಗಿದೆ.

ಇನ್ನೂ ನಗರದಲ್ಲಿ ಮುಂದಿನ ಕೆಲವು ದಿನಗಳ ಕಾಲ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿರಲಿದೆ. ಸಾಧಾರಣ ಮಳೆ ಅಥವಾ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಬೆಂಗಳೂರಿನಲ್ಲಿ ಸಂಜೆ ಸುರಿದ ಮಳೆಗೆ ಉಕ್ಕಿ ಹರಿದ ನೀರು

ರಾಜಧಾನಿ ಬೆಂಗಳೂರಿನಲ್ಲಿ ಗುರುವಾರ ಸಂಜೆ ಸುರಿದ ಭಾರಿ ಮಳೆಗೆ ನಗರದ ರಸ್ತೆಗಳು ನದಿಗಳಂತೆ ಉಕ್ಕಿ ಹರಿದ ಪರಿಣಾಮ ವಾಹನ ಸಂಚಾರಕ್ಕೆ ಅಡ್ಡಿಯಾಯಿತು.

ನಗರದ ಓಕಳಿಪುರ ಅಂಡರ್ ಪಾಸ್ ಮತ್ತು ಶಿವಾನಂದ ರೈಲ್ವೆ ಅಂಡರ್ ಪಾಸ್ ಗಳು ಸಂಪೂರ್ಣವಾಗಿ ಜಲಾವೃತಗೊಂಡಿದ್ದವು. ಸುಮಾರು ಮೂರು ಅಡಿಯಷ್ಟು ನೀರು ನಿಂತ ಪರಿಣಾಮದಿಂದಾಗಿ ಶಿವಾನಂದ ರೈಲ್ವೆ ಅಂಡರ್ ಪಾಸ್ ನಲ್ಲಿ ಆ್ಯಂಬುಲೆನ್ಸ್ ಸಿಲುಕಿಕೊಂಡಿತ್ತು. ಕೆ. ಆರ್.ಮಾರುಕಟ್ಟೆಯಲ್ಲಿ ಸಮೀಪದ ಎಸ್.ಜೆಪಿ ರಸ್ತೆ, ಶೇಷಾದ್ರಿ ರಸ್ತೆಯಲ್ಲಿ ಭಾರೀ ಪ್ರಮಾಣದಲ್ಲಿ ನೀರು ಶೇಖರಣೆ ಆಗಿತ್ತು.

Leave a Comment