FID ಹೊಂದಿದ ರೈತರಿಗೆ ಮಾತ್ರ ಬರ ಪರಿಹಾರ ಹಣ ಜಮಯಾಗಲಿದೆ. ಹೌದು, ಈ ಕುರಿತು ಕಲಬುರಗಿ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೃಷಿ ಇಲಾಖೆಯಿಂದ ರೈತರಿಗೆ ಎಫ್ಐಡಿ ಮಾಡಲು ಅವಕಾಶ ನೀಡಲಾಗಿತ್ತು. ಕೆಲವು ರೈತರು ಆನ್ಲೈನ್ ಮೂಲಕವೂ ಎಫ್ಐಡಿ ಮಾಡಿದ್ದಾರೆ. ಆದರೆ ಇನ್ನೂ ಬಹಳಷ್ಟು ರೈತರು ಎಫ್ಐಡಿ ಮಾಡಿಸುವುದಿದೆ. ಹಾಗಾಗಿ ಯಾರು ಎಫ್ಐಡಿ ಮಾಡಿಸಿಲ್ಲವೋ ಅಂತಹವರು ಕೂಡಲೇ ಎಫ್ಐಡಿಮಾಡಿಕೊಳ್ಳಬಹುದು. ಇಲ್ಲದಿದ್ದರೆ ಬರ ಪರಿಹಾರ ಹಣ ಜಮೆಯಾಗುವುದಿಲ್ಲ.
ಕಲಬುರಗಿ ಜಿಲ್ಲೆಯಲ್ಲಿ 4,32,715 ಭೂ ಹಿಡುವಳಿದಾರರಿದ್ದು, ಈವರೆಗೆ ಕೇವಲ 3,87,874 ರೈತರು ಮಾತ್ರ ಎಫ್ಐಡಿ ನೋಂದಣಿ ಮಾಡಿಸಿದ್ದು.ಇನ್ನೂ ಎಫ್ಐಡಿ ಮಾಡಿಸದೆ ಇರುವವರು 33,841 ರೈತರಿಗೆ ಬರ ಪರಿಹಾರ, ತೊಗರಿ ನೆಟೆ ರೋಗ ಪರಿಹಾರ ಮೊತ್ತಬರುವುದಿಲ್ಲ. ಏಕೆಂದರೆ ಈ ಹಣವನ್ನು ನೇರ ನಗದು ವರ್ಗಾವಣೆ (Direct Benefit Transfer) ಮೂಲಕ ರೈತರ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತಿದೆ.
ಇದನ್ನೂ ಓದಿ : ಗೃಹಲಕ್ಷೀ ಯೋಜನೆಯ 2 ನೇ ಕಂತಿನ ಹಣ ಜಮೆಯ ಸ್ಟೇಟಸ್ ಮೊಬೈಲ್ ನಲ್ಲೇ ಚೆಕ್ ಮಾಡಿ
ಈವರೆಗೆ ಎಫ್ಐಡಿ ಮಾಡಿಸದೆ ಇರುವ ರೈತರು ಕೂಡಲೇ ತಮ್ಮ ಸಮೀಪದ ಸಾಮಾನ್ಯ ಸೇವಾ ಕೇಂದ್ರ (CSC Centre) ಅಥವಾ ಹೋಬಳಿಯ ರೈತ ಸಂಪರ್ಕ ಕೇಂದ್ರ ಅಥವಾ ತೋಟಗಾರಿಕೆ ಇಲಾಖೆ ಕಚೇರಿಗೆ ತಮ್ಮ ಆಧಾರ್ ಕಾರ್ಡ್, ಪಹಣಿ, ಬ್ಯಾಂಕ್ ಪಾಸ್ ಬುಕ್, ತಮ್ಮ ಮೊಬೈಲ್ ಸಂಖ್ಯೆಯೊಂದಿಗೆ ಹೋಗಿ ತುರ್ತಾಗಿ ಎಫ್ಐಡಿ ಮಾಡಿಸಬೇಕು.ಇದಕ್ಕೆ ತಪ್ಪಿದ್ದಲ್ಲಿ ಸರ್ಕಾರದಿಂದ ನೀಡಲ್ಪಡುವ ಪರಿಹಾರದ ಮೊತ್ತದಿಂದ ರೈತರು ವಂಚಿತರಾಗಬೇಕಾಗುತ್ತದೆ.
FID ಆಗಿದೆಯೋ ಇಲ್ಲವೋ ಮೊಬೈಲ್ ನಲ್ಲೇ ಚೆಕ್ ಮಾಡಿ
ಯಾವ ಯಾವ ರೈತರ ಎಫ್ಐಡಿ ಆಗಿದೆ ಎಂಬುದನ್ನು ಚೆಕ್ ಮಾಡಲು ಈ
https://fruitspmk.karnataka.gov.in/MISReport/GetDetailsByAadhaar.aspx
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ನಂತರ ನಿಮ್ಮ ಆಧಾರ್ ಕಾರ್ಡ್ ನಮೂದಿಸಿದ ನಂತರ search ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮಗೆ FruitsID ಕಾಣಿಸುತ್ತದೆ. ಈ ಐಡಿ ಇದ್ದರೆ ಮಾತ್ರ ನಿಮಗೆ ಬರ ಪರಿಹಾರ ಹಣ ಜಮೆಯಾಗಲಿದೆ.
ಒಂದು ವೇಳೆ ಫ್ರೂಟ್ಸ್ ಐಡಿ ಆಗಿಲ್ಲವಾದಲ್ಲಿ ನೀವು ಈ
https://fruits.karnataka.gov.in/OnlineUserLogin.aspx
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ನಂತರ Citizen Registration ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನಿಮ್ಮಆಧಾರ್ ಕಾರ್ಡಿನಲ್ಲಿರುವಂತೆ ನಿಮ್ಮ ಹೆಸರು ನಮೂದಿಸಬೇಕು.ನಂತರ ನಿಮ್ಮ ಆಧಾರ್ ಕಾರ್ಡ್ ನಮೂದಿಸಬೇಕು. ಐ ಅಗ್ರಿ ಬಾಕ್ಸ್ ಆಯ್ಕೆ ಮಾಡಿಕೊಂಡು ನಲ್ಲಿ ಸಲ್ಲಿಸಿ / Submit ಮೇಲೆ ಕ್ಲಿಕ್ ಮಾಡಬೇಕು. ನಂತರ ಇನ್ನೊಂದು ಪೇಜ್ ಓಪನ್ ಆಗುತ್ತದೆ. ಅಲ್ಲಿ ಕೇಳಲಾದ ಅಗತ್ಯ ಮಾಹಿತಿಗಳನ್ನು ಭರ್ತಿ ಮಾಡಿದ ನಂತರ ನಿಮಗೆ ಎಫ್ಐಡಿ ನಂಬರ್ ಸಿಗಲಿದೆ.
ಒಂದು ವೇಳೆ ಮೊಬೈಲ್ ನಲ್ಲಿ ಅರ್ಜಿ ಸಲ್ಲಿಸಲು ಸಮಸ್ಯೆಯಾಗುತ್ತಿದ್ದರೆ ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕು. ನಿಮ್ಮ ಜಮೀನಿನ ಪಹಣಿ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ಪ್ರತಿ, ಇತ್ತೀಚಿನ ಫೋಟೋಗಳೊಂದಿಗೆ ಅರ್ಜಿ ಸಲ್ಲಿಸಿಎಫ್ಐಡಿ ಪಡೆಬಹುದು.
ಕೀಟನಾಶಕ ಸಿಂಪರಣೆ ಮಾಡುವಾಗ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳು
ರೈತರು ಬೆಳೆಗಳಿಗೆ ಕೀಟನಾಶಕ, ಶಿಲಿಂದ್ರನಾಶಕ ಸಿಂಪರಣೆ ಮಾಡುವಾಗ, ಅನುಸರಿಸಬೇಕಾದ ಸುರಕ್ಷಿತ ಕ್ರಮಗಳನ್ನು ಕೈಗೊಳ್ಳಬೇಕು. ಕೀಟನಾಶಕ ಸಿಂಪರಣೆ ಮಾಡುವಾಗ ಕೈಗಳಿಗೆ ಮಾಸ್ಕ್ ಹಾಗೂ ಗ್ಲೌಸ್ ಗಳನ್ನು ಧರಿಸಬೇಕು. ಗಾಳಿಯ ವಿರುದ್ಧ ದಿಕ್ಕಿನಲ್ಲಿ ಸಿಂಪರಣೆ ಮಾಡಬಾರದು. ಸಿಂಪರಣಾ ನಾಝಲ್ ರಂದ್ರ ಕಟ್ಟಿದಾಗ ಬಾಯಿಂದ ಊದಬಾರದು. ಪೀಡೆನಾಶಕವನ್ನು ಮಕ್ಕಳು ಮಿಶ್ರಣ ಮಾಡದಂತೆ ತಡೆಯಬೇಕು. ಕೀಟನಾಶಕ ಸಿಂಪರಣೆ ಸಮಯದಲ್ಲಿ ತಿನ್ನುವುದಾಗಲಿ, ಕುಡಿಯುವುದಾಗಲಿ ಅಥವಾ ಧೂಮ್ರಪಾನ ಮಾಡಬಾರದು ಎಂದು ಅವರು ತಿಳಿಸಿದ್ದಾರೆ.