Land Akarband download ರೈತರು ತಮ್ಮ ಜಮೀನಿನ ಆಕಾರಬಂದ್ ನ್ನು ಮೊಬೈಲ್ ನಲ್ಲೇ ಡೌನ್ಲೋಡ್ ಮಾಡಿಕೊಳ್ಳಬಹುದು. ಹೌದು, ರೈತರು ಜಮೀನಿನ ದಾಖಲೆಗಳಲ್ಲಿ ಮುಖ್ಯವಾದ ದಾಖಲೆ ಆಕಾರಬಂದ್ ಆಗಿದೆ. ರೈತರ ಪಹಣಿ ಹೇಗಿದೆಯೋ ಅದೇ ರೀತಿ ಆಕಾರಬಂದ್ ಸಹ ಮುಖ್ಯವಾದ ದಾಖಲೆಯಾಗಿದೆ.
ಯೂಟೂಬ್ ಚಾನೆಲ್ ಸಬಸ್ಕ್ರೈಬ್ ಮಾಡಿ ಕೃಷಿ ಮಾಹಿತಿ ಪಡೆಯಿರಿ
ಈ ದಾಖಲೆಯನ್ನು ಪಡೆಯಲು ಈಗ ರೈತರು ತಹಶೀಲ್ದಾರ್ ಕಚೇರಿಗೆ ಹೋಗಬೇಕಿಲ್ಲ. ಮನೆಯಲ್ಲಿಯೇ ಕುಳಿತು ಪಡೆದುಕೊಳ್ಳಬಹುದು. ಹೌದು, ನಿಮ್ಮ ಬಳಿಯಿರುವ ಸ್ಮಾರ್ಟ್ ಫೋನ್ ನಲ್ಲೇ ಆಕಾರಬಂದ್ ನ್ನು ಪಡೆಯಬಹುದು.
Land Akarband download ಮಾಡಿ ಮೊಬೈಲ್ ನಲ್ಲಿ ಚೆಕ್ ಮಾಡುವುದು ಹೇಗೆ?
ರೈತರು ತಮ್ಮ ಜಮೀನಿಗೆ ಸಂಬಂಧಿಸಿದ ದಾಖಲೆ ಆಕಾರಬಂದ್ ನ್ನು ಮೊಬೈಲ್ ನಲ್ಲೇ ಪಡೆಯಲು ಈ
https://bhoomojini.karnataka.gov.in/service39/
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಒಂದು ವೇಳೆ ನಿಮಗೆ ಐ ಯಮ್ ನಾಟ್ ರೋಬೋಟ್ ಆಯ್ಕೆ ಕಾಣಿಸದರೆ ಆ ಬಾಕ್ಸ್ ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮಗೆ ಆಕಾರಬಂದ್ ಚೆಕ್ ಮಾಡುವ ಪೇಜ್ ಓಪನ್ ಆಗುತ್ತದೆ. ಅಲ್ಲಿ ರೈತರು ತಮ್ಮ ಜಿಲ್ಲೆಆಯ್ಕೆ ಮಾಡಿಕೊಳ್ಳಬೇಕು. ನಂತರ ತಾಲೂಕು ಆಯ್ಕೆ ಮಾಡಿಕೊಳ್ಳಬೇಕು. ಇದಾದನಂತರ ಹೋಬಳಿಯನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಇದಾದನಂತರ ನಿಮ್ಮ ಊರು ಆಯ್ಕೆ ಮಾಡಿಕೊಳ್ಳಬೇಕು. ನಂತರ ಯಾವ ಜಮೀನಿನ ಆಕಾರಬಂದ್ ನೋಡಬೇಕೆಂದುಕೊಂಡಿದ್ದೀರೋ ಆ ಸರ್ವೆ ನಂಬರ್ ನಮೂದಿಬೇಕು. ಸರ್ನೋಕ್ ನಲ್ಲಿ ಸ್ಟಾರ್ ಹಾಗೂ ಹಿಸ್ಸಾ ನಲ್ಲಿ ಸ್ಟಾರ್ ನಮೂದಿಸಬೇಕು. ಇದಾದ ಮೇಲೆ View Akarband ಮೇಲೆ ಕ್ಲಿಕ್ ಮಾಡಬೇಕು. ಆಗ ಆಕಾರಬಂದ್ ಪೇಜ್ ತೆರೆದುಕೊಳ್ಳುತ್ತದೆ.
ಆಕಾರಬಂದ್ ನಲ್ಲಿ ಏನೇನು ಮಾಹಿತಿ ಇರುತ್ತದೆ?
ಆಕಾರಬಂದ್ ಪೇಜ್ ನಲ್ಲಿ ನಿಮ್ಮ ಊರು, ಹೋಬಳಿ, ತಾಲೂಕು, ಜಿಲ್ಲೆ ಕಾಣಿಸುತ್ತದೆ. ನೀವು ನಮೂದಿಸಿದ ಸರ್ವೆ ನಂಬರ್ ನಲ್ಲಿ ಒಟ್ಟು ಎಷ್ಟು ಹೆಕ್ಟೇರ್ ಹಾಗೂ ಎಷ್ಟು ಎಕರೆ ಹಾಗೂ ಗುಂಟೆಯಲ್ಲಿದೆ ಎಂಬುದು ನಮೂದಿಸಲಾಗಿರುತ್ತದೆ.ಅದರ ಕೆಳಗಡೆ ಸರ್ವೆ ನಂಬರ್ ಎದುರುಗಡೆ ಒಟ್ಟು ವಿಸ್ತೀರ್ಣ ಅಂದರೆ ಎಕರೆ ಹಾಗೂ ಹೆಕ್ಟೇರ್ ಗಳನ್ನು ನಮೂದಿಸಲಾಗಿರುತ್ತದೆ. ಖುಷ್ಕಿ ಜಮೀನು ಎಷ್ಟಿದೆ? ಎಂಬುದು ಸಹ ನಮೂದಿಸಲಾಗಿರುತ್ತದೆ. ತರಿ ಜಮೀನಿದ್ದರೆ ಅದನ್ನು ಸಹ ನಮೂದಿಸಲಾಗಿರುತ್ತದೆ.
ರೈತರ ಇತರ ದಾಖಲೆಗಳಂತೆ ಆಕಾರಬಂದ್ ಸಹ ಅತೀ ಮುಖ್ಯವಾದ ದಾಖಲೆಯಾಗಿದೆ. ಇದನ್ನು ರೈತರು ಡೌನ್ಲೋಡ್ ಮಾಡಿಕೊಂಡು ಸೇವ್ ಮಾಡಿಕೊಳ್ಳಬಹುದು. ಬೇಕಾದಾಗ ಪ್ರಿಂಟ್ ಸಹ ತೆಗೆದುಕೊಳ್ಳಬಹುದು.
Land Akarband download ಮೊಬೈಲ್ ನಲ್ಲೇ ಮಾಡಿಕೊಳ್ಳುವುದು ಹೇಗೆ?
ರೈತರು ತಮ್ಮ ಜಮೀನಿನ ಖಾತಾ ಮೊಬೈಲ್ ನಲ್ಲೇ ಡೋನ್ಲೋಡ್ ಮಾಡಿಕೊಳ್ಳಲು ಈ
https://landrecords.karnataka.gov.in/service64/
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಖಾತಾ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ಜಿಲ್ಲೆ ಆಯ್ಕೆ ಮಾಡಿಕೊಳ್ಳಬೇಕು. ತಾಲೂಕು ಆಯ್ಕೆ ಮಾಡಿಕೊಳ್ಳಬೇಕು. ನಂತರ ಹೋಬಳಿ ಆಯ್ಕೆ ಮಾಡಿಕೊಳ್ಳಬೇಕು. ಇದಾದ ನತರ ಗ್ರಾಮ ಆಯ್ಕೆ ಮಾಡಿಕೊಂಡು ನಿಮ್ಮ ಜಮೀನಿನ ಖಾತಾ ನಮೂದಿಸಿ ಗೆಟ್ ರಿಪೋರ್ಟ್ ಮೇಲೆ ಕ್ಲಿಕ್ ಮಾಡಿದರೆ ಸಾಕು ನಿಮ್ಮ ಜಮೀನಿನ ಖಾತಾ ಓಪನ್ ಆಗುತ್ತದೆ.
ರೈತರು ತಮ್ಮ ಜಮೀನಿಗೆ ಸಂಬಂಧಿಸಿದ ದಾಖಲೆಗಳು ಸುಲಭವಾಗಿ ಸಿಗಲೆಂಬ ಉದ್ದೇಶದಿಂದ ಸರ್ಕಾರವು ಎಲ್ಲಾ ದಾಖಲೆಗಳನ್ನು ಆನ್ಲೈನ್ ವ್ಯವಸ್ಥೆ ಮಾಡಿದೆ. ಆನ್ಲೈನ್ ನಲ್ಲಿಯೇ ಜಮೀನಿನ ದಾಖಲೆಗಳನ್ನು ಪಡೆದುಕೊಳ್ಳಬೇಕೆಂದು ಭೂಮಿ ತಂತ್ರಾಂಶವನ್ನು ಅಭಿವೃದ್ಧಿ ಪಡಿಸಲಾಗಿದೆ. ಈ ತಂತ್ರಾಂಶದಲ್ಲಿ ಮುಟೇಶನ್, ಮೋಜಿನಿ, ಪಹಣಿ (ಆರ್.ಟಿ.ಸಿ), ಆಕಾರಬಂದ್, ಜಮೀನಿನ ಖಾತಾ ಸೇರಿದಂತೆ ಇನ್ನಿತರ ದಾಖಲೆಗಳನ್ನು ರೈತರು ಸರ್ಕಾರದ ಕಚೇರಿಗಳ ಎದುರು ನಿಲ್ಲಬಾರದು, ತಮ್ಮ ಕೆಲಸಬಿಟ್ಟು ದಾಖಲೆಗಳನ್ನು ಪಡೆಯಲು ಅಲೆಯಬಾರದೆಂಬ ಉದ್ದೇಶದಿಂದ ಈ ವ್ಯವಸ್ಥೆಯನ್ನು ಮಾಡಲಾಗಿದೆ. ರೈತರು ಸಹ ಈಗ ದಾಖಲೆಗಳು ಸಿಎಸ್ಸಿ ಕೇಂದ್ರ, ನಾಡ ಕಚೇರಿಗಳಲ್ಲಿ ಹಾಗೂ ಗ್ರಾಮ ಒನ್ ಕೇಂದ್ರಗಳಲ್ಲಿ ಸಿಗುತ್ತದೆ.