crop survey in mobile ಮೊಬೈಲ್ ನಲ್ಲೇ ಬೆಳೆ ಸಮೀಕ್ಷೆ ಮಾಡಿ

Written by Ramlinganna

Updated on:

crop survey in mobile ರೈತರು ಬೆಳೆ ಸಮೀಕ್ಷೆ ಮಾಡಿದರೆ ಮಾತ್ರ ಮುಂದಿನ ದಿನಗಳಲ್ಲಿ ಬೆಳೆ ವಿಮೆ, ಬೆಳೆ ಹಾನಿ ಪರಿಹಾರ, ಬೆಂಬಲ ಬೆಲೆ ಸೇರಿದಂತೆ ಇನ್ನಿತರ ಸೌಲಭ್ಯ ಪಡೆಯಲಿದ್ದಾರೆ.

ಹೌದು, ರೈತರು ಇನ್ನೂ ಮುಂದೆ ಸರ್ಕಾರದ ಸೌಲಭ್ಯ ಪಡೆಯಲು ಬೆಳೆ ಸಮೀಕ್ಷೆ ಮಾಡುವುದು ಕಡ್ಡಾಯವಾಗಿದೆ. ಬೆಳೆ ಸಮೀಕ್ಷೆ ಮಾಡದಿದ್ದರೆ ರೈತರು ಬೆಳೆ ಹಾನಿ ಪರಿಹಾರ ಹಾಗೂ ಬೆಳೆ ವಿಮೆ ಹಣವನ್ನು ಪಡೆಯುವಲ್ಲಿ ವಂಚಿತರಾಗುವ ಸಾಧ್ಯತೆಯಿದೆ. ಹಾಗಾದರೆ ರೈತರು ಮೊಬೈಲ್ ನಲ್ಲೇ ಬೆಳೆ ಸಮೀಕ್ಷೆ ಹೇಗೆ ಮಾಡಬೇಕೆಂಬುದರ ಮಾಹಿತಿ ಇಲ್ಲಿದೆ.

crop survey in mobile ಮೊಬೈಲ್ ನಲ್ಲಿ ಬೆಳೆ ಸಮೀಕ್ಷೆ ಮಾಡುವುದು ಹೇಗೆ?

ರೈತರು ತಮ್ಮ ಬಳಿಯಿರುವ ಮೊಬೈಲ್ ನಲ್ಲೇ ಬೆಳೆ ಸಮೀಕ್ಷೆ ಮಾಡಲು ಈ

https://play.google.com/store/apps/details?id=com.csk.farmer23_24.cropsurvey

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.  ಆಗ ಮುಂಗಾರು ರೈತರ ಬೆಳೆ ಸಮೀಕ್ಷೆ 2023 ಆ್ಯಪ್ ಕಾಣಿಸುತ್ತದೆ. ಅಲ್ಲಿ ನೀವು install ಮೇಲೆ ಕ್ಲಿಕ್ ಮಾಡಬೇಕು. ನಂತರ ಓಪನ್ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮಗೆ ಋತು ಮುಂಗಾರು ಕಾಣಿಸುತ್ತದೆ. ಅಲ್ಲಿ ಇಕೆವೈಸಿ ಮೂಲಕ ಆಧಾರ್ ದೃಢೀಕರಿಸಿ ಮೇಲೆ ಕ್ಲಿಕ್ ಮಾಡಬೇಕು.

ಒಂದು ವೇಳೆ ಇಲ್ಲಿ ನಿಮಗೆ ತಾಂತ್ರಿಕ ಸಮಸ್ಯೆಯಾಗುತ್ತಿದ್ದರೆ  ಹೆಚ್ಚಿನ ವಿವರಗಳಿಗಾಗಿ ಬೆಳೆ ಸಮೀಕ್ಷೆ ಸಹಾಯವಾಣಿ 8448447715 ಗೆ ಕರೆ ಮಾಡಬಹುದು.

ಇಕೆವೈಸಿ ಮೂಲಕ ಆಧಾರ್ ದೃಢೀಕರಿಸಿ ಮೇಲೆ ಕ್ಲಿಕ್ ಮಾಡಿದರ ನಂತರ ನಿಮ್ಮ ಆಧಾರ್ ಸಂಖ್ಯೆ ನಮೂದಿಸಬೇಕು. ನಂತರ ನನ್ನ ಆಧಾರ್ ಮಾಹಿತಿ ಹಾಗೂ ಇತ  ಮಾಹಿತಿಗಳನ್ನು ಯುಐಡಿಎಐ ನೊಂದಿಗೆ ಇಕೆವೈಸಿ ಹೌದು ಇಲ್ಲ ಬಾಕ್ಸ್ ಆಯ್ಕೆ ಮಾಡಿಕೊಳ್ಳಬೇಕು. ನಂತರ ಓಟಿಪಿ ಹಾಗೂ ಫೆಸ್ ಕ್ಯಾಪ್ಚರ್ ಎಂಬ ಎರಡು ಆಯ್ಕೆಗಳು ಕಾಣಿಸುತ್ತವೆ. ಓಟಿಪಿ ಆಯ್ಕೆ ಮಾಡಿಕೊಂಡರೆ ನಿಮ್ಮ ಮೊಬೈಲಿಗೆ ಓಟಿಪಿ ಬರುತ್ತದೆ.

ಇದನ್ನೂ ಓದಿ ಈ ಲಿಸ್ಟ್ ನಲ್ಲಿರುವವರಿಗೆ ಜುಲೈ 24 ರಂದು ಗೃಹಲಕ್ಷ್ಮೀ ಯೋಜನೆಯ 2 ಸಾವಿರ ರೂಪಾಯಿ ಜಮೆ

ಓಟಿಪಿ ಕಾಪಿ ಮಾಡಿ ಸಬ್ಮಿಟ್ ಮೇಲೆ ಕ್ಲಿಕ್ ಮಾಡಬೇಕು ಆಗ ನಿಮ್ಮ ಹೆಸರು, ತಂದೆಯ ಹೆಸರು, ಹುಟ್ಟಿದ ದಿನಾಂಕ, ವಿಳಾಸ ಕಾಣಿಸುತ್ತದೆ. ಅಲ್ಲಿ ನಿಮ್ಮಮೊಬೈಲ್ ನಂಬರ್ ನಮೂದಿಸಬೇಕು. ನಂತರ ಸಕ್ರಿಯಗೊಳಿಸಿ ಮೇಲೆ ಕ್ಲಿಕ್ ಮಾಡಬೇಕು. ನಂತರ ಸರಿ ಮೇಲೆ ಕ್ಲಿಕ್ ಮಾಡಬೇಕು.ಮತ್ತೆ ಓಟಿಪಿಯನ್ನು ನಮೂದಿಸ ಸಲ್ಲಿಸಿ ಮೇಲೆ ಕ್ಲಿಕ್ ಮಾಡಬೇಕು.

ಓಟಿಪಿ  ನಮೂದಿಸಿ ಬೆಳೆ ಸಮೀಕ್ಷೆ ಮಾಡುವುದು ಸಮಸ್ಯೆಯಾಗುತ್ತಿದ್ದರೆ ಫೇಸ್ ಕ್ಯಾಪ್ಚರ್ ಮೇಲೆ ಕ್ಲಿಕ್ ಮಾಡಿ ಬೆಳೆ ಸಮೀಕ್ಷೆಯನ್ನು ಮೊಬೈಲ್ ನಲ್ಲೇ ಮಾಡಿಕೊಳ್ಳಬಹುದು. ನಿಮ್ಮ ಸರ್ವೆ ನಂಬರ್ ನಮೂದಿಸಬೇಕಾಗುತ್ತದೆ. ಬೆಳೆಯ ಫೋಟೋ ತೆಗೆದು ಅಪ್ಲೋಡ್ ಸಹ ಮಾಡಬೇಕಾಗುತ್ತದೆ.

ಬೆಳೆ ಸಮೀಕ್ಷೆ ಮಾಡುವಾಗ ನೀವು ಗಡಿರೇಖೆಯೊಳಗೆ ಇರಬೇಕು. ಆಗ ಮಾತ್ರ ಬೆಳೆ ಸಮೀಕ್ಷೆಯಾಗುತ್ತದೆ.

ಬೆಳೆ ಸಮೀಕ್ಷೆ ಮಾಡುವಾಗ ರೈತರು ಮುಖ್ಯ ಬೆಳೆಗಳ ಕೋಡ್ ನಮೂದಿಸಬೇಕಾಗುತ್ತದೆ. ರೈತರಿಗೆ ಅನುಕೂಲವಾಗಲೆಂದು ಇಲ್ಲಿ ಕೆಲವು ಬೆಳೆಗಳ ಕೋಡ್ ನೀಡಲಾಗಿದೆ.

  1. ತೊಗರಿಗೆ (Tur) 4. ಮೆಕ್ಕೆಜೋಳಕ್ಕೆ (maize), ಭತ್ತ ಸ್ಥಳೀಯ, ( Paddy) ಶೇಂಗಾ, (Ground nut) ಹೆಸರು, (Moong) ಸಜ್ಜೆ, (Bajra) ಕಬ್ಬು, (Sugarcane) ಸೋಯಾಬಿನ್, (Soyabean) ಉದ್ದು, (urad) ಇರುತ್ತದೆ.

ಬೆಳೆ ಸಮೀಕ್ಷೆ ಮಾಡಲು ತಾಂತ್ರಿಕ ಸಮಸ್ಯೆ ಇದ್ದರೆ ತಮ್ಮ ಗ್ರಾಮದಲ್ಲೇ ಸರ್ಕಾರದಿಂದ ಬೆಳೆ ಸಮೀಕ್ಷೆಗಾರರು ನೇಮಕವಾಗಿರುತ್ತಾರೆ. ಅವರ ಸಹಾಯ ಪಡೆಯಬಹುದು. ನಿಮ್ಮ ಗ್ರಾಮಕ್ಕೆ ನೇಮಕವಾದ ಖಾಸಗಿ ಸಮೀಕ್ಷೆಗಾರ ಹೆಸರು ಮತ್ತು ಫೋನ್ ನಂಬರ್ ಪಡೆಯಲು ಬೆಳೆ ದರ್ಶಕ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ ಪಡೆಯಬಹುದು.

ಹೆಚ್ಚಿನ ಮಾಹಿತಿಗಾಗಿ ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರ, ಕಂದಾಯ, ತೋಟಗಾರಿಕೆ ಇಲಾಖೆಯ ಕಚೇರಿಗೆ ಭೇಟಿ ನೀಡಬಹುದು.

Leave a Comment