how much crop insurance : ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿಯಲ್ಲಿ ಬೆಳೆ ವಿಮೆ ಮಾಡಿಸಿದ ರೈತರ ಬೆಳೆ ಯಾವ ಹಂತದಲ್ಲಿ ಹಾನಿಯಾದರೆ ಎಷ್ಟು ಹಣ ಜಮೆಯಾಗುತ್ತದೆ ನಿಮಗೆ ಗೊತ್ತೇ? ಇಲ್ಲಿದೆ ಮಾಹಿತಿ.
ಮುಂಗಾರು ಹಂಗಾಮಿನ ಬೆಳೆ ವಿಮೆ ಮಾಡಿಸಿದ ರೈತರ ಬೆಳೆ ಮಳೆಯ ಕೊರತೆಯಿಂದ ಬಿತ್ತನೆ ವಿಫಲಗೊಂಡಲ್ಲಿ ವಿಮಾ ಮೊತ್ತದ ಗರಿಷ್ಠ ಶೇ. 25 ರಷ್ಟು ಬೆಳೆ ವಿಮೆ ಪಾವತಿಸಲಾಗುವುದು. ಬಿತ್ತನೆಯಿಂದ ಕಟಾವು ಹಂತದವರೆಗಿನ ಮಧ್ಯದ ಅವಧಿಯಲ್ಲಿಬೆಳೆ ನಷ್ಟ ಸಂಭವಿಸಿದರೆ ಮುಂಚಿತವಾಗಿ ಅಂದಾಜು ಮಾಡಲಾದ ಬೆಳೆ ವಿಮೆ ನಷ್ಟ ಪರಿಹಾರದಲ್ಲಿ ಶೇ. 25 ರಷ್ಟು ಹಣವನ್ನು ಪರಿಹಾರವಾಗಿ ನೀಡಲಾಗುವುದು.
how much crop insurance ಬೆಳೆ ಯಾವ ಹಂತದಲ್ಲಿ ಎಷ್ಟು ನಷ್ಟವಾದರೆ ಎಷ್ಟು ಪರಿಹಾರ ನೀಡಲಾಗುವುದು?
ತೊಗರಿ ಬೆಳೆ ಮೊಳಕೆ ಹಂತದಲ್ಲಿ ನಷ್ಟವಾದರೆ ವಿಮಾ ಮೊತ್ತದ ಶೇ. 46 ರಷ್ಟು ಪರಿಹಾರ ನೀಡಲಾಗುವುದು. ಬೆಳವಣಿಗೆ ಹಂತದಲ್ಲಿ ಶೇ. 29, ಮೊಗ್ಗುವ ಹಂತದಲ್ಲಿ ಕೊಯ್ಲು ಹಂತದಲ್ಲಿ ಶೇ. 25 ರಷ್ಟು ಪರಿಹಾರ ನೀಡಲಾಗುವುದು.
ಹೆಸರು ಬೆಳೆಯನ್ನು ಮೊಳಕೆ ಹಂತದಲ್ಲಿ ಶೇ. 60, ಬೆಳೆವಣಿಗೆ ಹಂತದಲ್ಲಿ ಶೇ. 19, ಕೊಯ್ಲು ಹಂತದಲ್ಲಿ ಶೇ. 80 ರಷ್ಟು ಪರಿಹಾರ ನೀಡಲಾಗುವುದು.
ಸೊಯಾಬಿನ್ ಮತ್ತು ಅವರೆ ಮೊಳಕೆ ಹಂತದಲ್ಲಿ ಶೇ. 54, ಬೆಳವಣಿಗೆ ಹಂತದಲ್ಲಿ ಶೇ. 22, ಕೊಯ್ಲು ಹಂತದಲ್ಲಿ ಶೇ. 22 ಪರಿಹಾರ ನೀಡಲಾಗುವುದು.
ಸೂರ್ಯಕಾಂತಿ ಮೊಳಕೆ ಹಂತದಲ್ಲಿ ಶೇ. 68, ಬೆಳವಣಿಗೆ ಹಂತದಲ್ಲಿ ಶೇ. 18, ಕೊಯ್ಲು ಹಂತದಲ್ಲಿ ಶೇ. 13 ರಷ್ಟು ಪರಿಹಾರ ನೀಡಲಾಗುವುದು.
ಹತ್ತಿ ಮೊಳಕೆ ಹಂತದಲ್ಲಿ ಶೇ. 44, ಬೆಳವಣಿಗೆ ಹಂತದಲ್ಲಿ ಶೇ. 25, ಕೊಯ್ಲು ಹಂತದಲ್ಲಿ ಶೇ. 21 ರಷ್ಟು ಪರಿಹಾರ ನೀಡಲಾಗುವುದು. ಅದೇ ರೀತೆ ಎಳ್ಳು ಮೊಳಕೆ ಹಂತದಲ್ಲಿ ಶೇ. 58, ಬೆಳವಣಿಗೆ ಹಂತದಲ್ಲಿ ಶೇ. 18 ಹಾಗೂ ಕೊಯ್ಲು ಹಂತದಲ್ಲಿ ಶೇ. 24 ರಷ್ಚು ಪರಿಹಾರ ನೀಡಲಾಗುವುದು. ಹಾಗಾಗಿ ರೈತರು ಕಡ್ಡಾಯವಾಗಿ ಬೆಳೆ ವಿಮಾ ಸೌಲಭ್ಯವನ್ನು ಪಡೆಯಲು ಕೋರಲಾಗಿದೆ.
ರೈತರು ಪಾವತಿಸಬೇಕಾದ ವಿಮಾ ಮೊತ್ತದ ಮಾಹಿತಿ ಇಲ್ಲಿದೆ
ರೈತರು ಪ್ರತಿ ಹೆಕ್ಟೇರಿಗೆ ತೊಗರಿ 800 ರಿಂದ 850 ರೂಪಾಯಿ ಹೆಸರು 580 ರೂಪಾಯಿ ಉದ್ದು 560 ರೂಪಾಯಿ, ಸಜ್ಜೆ 580 ರೂಪಾಯಿ ಸೋಯಾ ಮತ್ತು ಅವರೆ 580 ರೂಪಾಯಿ ರೈತರ ವಂತಿಗೆ ಪಾವತಿಸಬೇಕಾಗುತ್ತದೆ. ಸೂರ್ಯಕಾಂತಿ 840 ರೂಪಾಯಿ ಹತ್ತಿ ನೀರಾವರಿ 3350, ಎಳ್ಳು 500 ರೂಪಾಯಿ ವಿಮಾ ಮೊತ್ತ ಪಾವತಿಸಬೇಕಾಗುತ್ತದೆ.
ಇದನ್ನೂ ಓದಿ ಗೃಹಲಕ್ಷ್ಮೀ, ಅನ್ನಭಾಗ್ಯ ಹಣ ಈ ಲಿಸ್ಟ್ ನಲ್ಲಿದ್ದವರಿಗೆ ಜಮೆ- ಚೆಕ್ ಮಾಡಿ
ರೈತರು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಅಥವಾ ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ಬೆಳೆ ವಿಮೆ ಮಾಡಿಸಿ ಬೆಳೆಯ ವಿವಿಧ ಹಂತಗಳಲ್ಲಿ ಹಾನಿ ಸಂಭವಿಸಿದಾಗ ವಿಮಾ ಪರಿಹಾರ ಪಡೆಯಬಹುದು.
ಬೆಳೆ ವಿಮೆ ಕಟ್ಟುವಾಗ ಯಾವ ವಿಮಾ ಕಂಪನಿಗೆ ಕಟ್ಟಲಾಗಿದೆ ಎಂಬುದನ್ನು ರೈತರು ಬರೆದಿಟ್ಟುಕೊಳ್ಳಬೇಕು. ಇದರೊಂದಿಗೆ ನಿಮ್ಮ ತಾಲೂಕಿನ ವಿಮಾ ಕಂಪನಿಯ ಸಿಬ್ಬಂದಿಯ ಮೊಬೈಲ್ ನಂಬರ್ ಇಟ್ಟುಕೊಳ್ಳಬೇಕು. ಬೆಳೆ ಹಾನಿಯಾದರೆ ವಿಮಾ ಕಂಪನಿಗೆ 72 ಗಂಟೆಯೊಳಗೆ ತಿಳಿಸಬೇಕಾಗುತ್ತದೆ. ಆಗ ವಿಮಾ ಕಂಪನಿಯ ಸಿಬ್ಬಂದಿ ನಿಮ್ಮ ಜಮೀನಿಗೆ ಬಂದು ಬೆಳೆಹಾನಿಯಾಗಿದ್ದನ್ನು ಪರಿಶೀಲಿಸಿ ಬೆಳೆ ವಿಮೆ ಪರಿಹಾರಕ್ಕಾಗಿ ಮೇಲಧಿಕಾರಿಗಳಿಗೆ ತಿಳಿಸುತ್ತಾರೆ.
ನಿಮ್ಮ ಜಿಲ್ಲೆಗೆ ಯಾವ ವಿಮಾ ಕಂಪನಿಯಿದೆ ಎಂಬುದನ್ನು ತಿಳಿದುಕೊಳ್ಳಲು ರೈತರು ಈ ಲಿಂಕ್
https://www.samrakshane.karnataka.gov.in/HomePages/frmKnowYourInsCompany.aspx
ಮೇಲೆ ಕ್ಲಿಕ್ ಮಾಡಿದ ನಂತರ ಯಾವ ಜಿಲ್ಲೆಗೆ ಯಾವ ವಿಮಾ ಕಂಪನಿಯನ್ನು ಬೆಳೆವಿಮೆಗೆ ನಿಯೋಜಿಸಲಾಗಿದೆ ಎಂಬ ಪಟ್ಟಿ ಕಾಣುತ್ತದೆ. ನಿಮ್ಮ ತಾಲೂಕಿನಲ್ಲಿ ವಿಮಾ ಕಂಪನಿಯ ಸಿಬ್ಬಂದಿಗಳ ಮೊಬೈಲ್ ನಂಬರ್ ತಿಳಿದುಕೊಳ್ಳಲು ಸಹಾಯವಾಣಿ 1800 180 1551 ನಂಬರಿಗೆ ಕರೆ ಮಾಡಿ ತಿಳಿದುಕೊಳ್ಳಬಹುದು. ಉಚಿತ ಸಹಾಯವಾಣಿ ಕಾರ್ಯನಿರ್ವಹಿಸದಿದ್ದರೆ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಬಹುದು.