Do you know benefit of crop insurance ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ರೈತರು ಬೆಳೆ ವಿಮೆ ಮಾಡಿಸುತ್ತಾರೆ. ಆದರೆ ಯಾವ ಬೆಳೆಗೆ ಎಷ್ಟು ವಿಮಾ ಮೊತ್ತ ಬರುತ್ತದೆ ಎಂಬ ಮಾಹಿತಿ ಇರುವುದಿಲ್ಲ. ಕೆಲವು ರೈತರಿಗೆ ಬೆಳೆಸಾಲದಲ್ಲಿಯೇ ಬೆಳೆ ವಿಮೆ ಹಣ ಕಡಿತವಾಗಿರುವುದರಿಂದ ಯಾವ ಬೆಳೆಗೆ ಎಷ್ಟು ವಿಮೆ ಕಡಿತವಾಗಿರುವ ಮಾಹಿತಿ ಇರುವುದಿಲ್ಲ. ಬೆಳೆ ವಿಮೆಗೆ ರೈತರ ವಂತಿಗೆ ಎಷ್ಟು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬೆಳೆ ವಿಮೆಗೆ ಎಷ್ಟು ಹಣ ಕಟ್ಟುತ್ತವೆ. ಹಾಗೂ ಯಾವ ಬೆಳೆಗೆ ಎಷ್ಟು ವಿಮೆ ಹಣ ಬರುತ್ತದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.
ಏನಿದು ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ?
ಪ್ರಕೃತಿ ವಿಕೋಪಗಳಾದ ಅತೀವೃಷ್ಟಿ, ಅನಾವೃಷ್ಟಿ, ಭೂಕುಸಿತ, ಆಲಿಕಲ್ಲು, ಸೇರಿದಂತೆ ಇನ್ನಿತರ ಪ್ರಕೃತಿ ವಿಕೋಪಗಳಿಂದ ಬೆಳೆ ಹಾಳಾದರೆ ರೈತರ ನೆರವಿಗೆ ಬರಲು ಸರ್ಕಾರವು ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯನ್ನು ಜಾರಿಗೆ ತಂದಿದೆ. ಪ್ರಕೃತಿ ವಿಕೋಪದಿಂದಾಗಿ ಬೆಳೆ ಹಾಳಾದರೆ ನಷ್ಟದ ಪ್ರಮಾಣವನ್ನು ತಿಳಿದು ಅದಕ್ಕನುಗುಣವಾಗಿ ಪರಿಹಾರವನ್ನು ನಿರ್ಧರಿಸಲಾಗುವುದು.
ಮಂಗಾರು ಹಂಗಾಮಿನ ಯಾವ ಬೆಳೆಗೆ ಎಷ್ಟು ವಿಮೆ ಹಣ ಬರುವ ಸ್ಟೇಟಸ್ ಚೆಕ್ ಮಾಡಬೇಕೆ?
ಮುಂಗಾರು ಹಂಗಾಮಿಗೆ ರೈತರು ಯಾವ ಬೆಳೆಗೆ ಎಷ್ಟು ವಿಮೆ ಕಂತು ಕಟ್ಟಬೇಕು. ರಾಜ್ಯ, ಕೇಂದ್ರ ಸರ್ಕಾರದ ಪಾಲು ಹಾಗೂ ರೈತರ ಬೆಳೆ ಹಾಳಾದಾಗ ಎಷ್ಟು ವಿಮಾ ಮೊತ್ತಬರುತ್ತದೆ ಎಂಬುದನ್ನು ಚೆಕ್ ಮಾಡಲು ಈ
https://www.samrakshane.karnataka.gov.in/Premium/Premium_Chart.aspx
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಸಂರಕ್ಷಣೆ ಪೇಜ್ ಓಪನ್ ಆಗುತ್ತದೆ. ರೈತರು ಜಿಲ್ಲೆ, ತಾಲೂಕು, ಹೋಬಳಿ, ಗ್ರಾಮ ಆಯ್ಕೆ ಮಾಡಿಕೊಂಡು ಬೆಳೆ ಕಾಲಂನಲ್ಲಿ ನಿಮ್ಮ ಹೋಬಳಿಯ ಬೆಳೆಗಳ ಪಟ್ಟಿ ಇರುತ್ತದೆ. ಅಲ್ಲಿ ನೀವು ಯಾವ ಬೆಳೆಯ ವಿಮೆ ನೋಡಬೇಕು ಅದನ್ನು ಆಯ್ಕೆ ಮಾಡಿಕೊಳ್ಳಬೇಕು. ನಂತರ ಎಷ್ಟು ಎಕರೆ ಮತ್ತು ಗುಂಟೆಗೆ ವಿಮೆ ಚೆಕ್ ಮಾಡಬೇಕು ಅದನ್ನು ನಮೂದಿಸಬೇಕು. ನಂತರ Show premium ಮೇಲೆ ಕ್ಲಿಕ್ ಮಾಡಿದರೆ ಸಾಕು, ಬೆಳೆ ವಿಮೆ ಹಣ ಎಷ್ಟು ಬರುತ್ತದೆ, ಒಟ್ಟು ಎಷ್ಟು ವಿಮಾ ಮೊತ್ತ ಕಟ್ಟಲಾಗುತ್ತದೆ. ರೈತರ ವಂತಿಗೆ ಎಷ್ಟು, ರಾಜ್ಯಸರ್ಕಾರಮತ್ತು ಕೇಂದ್ರಸರ್ಕಾರದ ವಂತಿಗೆ ಎಷ್ಟು ಇರುತ್ತದೆ ಎಂಬ ಮಾಹಿತಿ ಕಾಣುತ್ತದೆ.ಈ ಆಧಾರದ ಮೇಲೆ ರೈತರು ಬೆಳೆಯ ವಿಮಾ ಮೊತ್ತವನ್ನು ಮೊಬೈಲ್ ನಲ್ಲೇ ನೋಡಿಕೊಳ್ಳಬಹುದು.
Do you know benefit of crop insurance ಬೆಳೆ ವಿಮೆ ಅರ್ಜಿಯ ಸ್ಟೇಟಸ್ ಮೊಬೈಲ್ ನಲ್ಲೇ ಚೆಕ್ ಮಾಡಿ
ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿಯಲ್ಲಿ ಬೆಳೆ ವಿಮೆ ಕಟ್ಟಿದ ರೈತರು ಬೆಳೆ ವಿಮೆ ಅರ್ಜಿಯ ಸ್ಟೇಟಸ್ ಚೆಕ್ ಮಾಡಲು ಎಲ್ಲಿಯೂ ಹೋಗಬೇಕಿಲ್ಲ. ಮನೆಯಲ್ಲಿಯೇ ಕುಳಿತು ಮೊಬೈಲ್ ನಲ್ಲಿ ಚೆಕ್ ಮಾಡಬಹುದು. ಅದು ಹೇಗೆ ಅಂದುಕೊಂಡಿದ್ದೀರಾ…. ರೈತರು ವಿಮೆ ಸ್ಟೇಟಸ್ ಚೆಕ್ ಮಾಡಲು ಈ
https://www.samrakshane.karnataka.gov.in/Premium/CheckStatusMain_aadhaar.aspx
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಸಂರಕ್ಷಣೆಯ ಪೇಜ್ ಓಪನ್ ಆಗುತ್ತದೆ. ಅಲ್ಲಿ ಚೆಕ್ ಸ್ಟೇಟಸ್ ಬೈ ಟೈಪ್ ಮುಂದುಗಡೆ ಮೊಬೈಲ್ ನಂಬರ್ ಆಯ್ಕೆ ಮಾಡಿಕೊಳ್ಳಬೇಕು. ಮೊಬೈಲ್ ನಂಬರ್ ನಮೂದಿಸಿ ಕ್ಯಾಪ್ಚ್ಯಾ ಕೋಡ್ ನಮೂದಿಸಿದ ನಂತರ ಸರ್ಚ್ ಮೇಲೆಕ್ಲಿಕ್ ಮಾಡಿದರೆ ಸಾಕು, ಬೆಳೆ ವಿಮೆ ಅರ್ಜಿಯ ಸ್ಟೇಟಸ್ ಮೊಬೈಲ್ ನಲ್ಲೇ ಚೆಕ್ ಮಾಡಬಹುದು. ನೀವು ಬೆಳೆವಿಮೆ ಸಲ್ಲಿಸಿದ ಅರ್ಜಿ ಸ್ವೀಕೃತವಾಗಿದೆಯೋ ಇಲ್ಲವೋ ಎಂಬುದು ಗೊತ್ತಾಗುತ್ತದೆ.
ಇದನ್ನೂ ಓದಿ ಈ ರೈತರಿಗೇಕೆ ಬೆಳೆ ವಿಮೆ ಹಣ ಜಮೆಯಾಗಿಲ್ಲ? ಇಲ್ಲಿದೆ ಮಾಹಿತಿ
ಬೆಳೆವಿಮೆ ಸಲ್ಲಿಸಿದ ನಂತರ ಅರ್ಜಿಯ ಸ್ಟೇಟಸ್ ಏನೂ ಕಾಣದಿದ್ದರೆ ನೀವು ಯಾವ ವಿಮಾ ಕಂಪನಿಗೆ ಹಣ ಪಾವತಿಸಿದ್ದೀರೋ ಆ ವಿಮಾ ಕಂಪನಿಯ ಏಜೆಂಟರಿಂದ ಮಾಹಿತಿ ಪಡೆಯಬಹುದು. ಒಂದು ವೇಳೆ ನಿಮಗೆ ವಿಮಾ ಕಂಪನಿಯ ಏಜೆಂಟರ ಮೊಬೈಲ್ ನಂಬರ್ ಗೊತ್ತಿಲ್ಲದಿದ್ದರೆ ಈ 1800 180 1551 ಸಹಾಯವಾಣಿಗೆ ಕರೆ ಮಾಡಿದರೆ ಸಾಕು. ನಿಮ್ಮ ಜಿಲ್ಲೆಗೆ ಯಾವ ವಿಮಾ ಕಂಪನಿಇದೆ. ನಿಮ್ಮ ಜಿಲ್ಲೆಯ ಏಜೆಂಟರ ನಂಬರ್ ಕೊಡುತ್ತಾರೆ. ಆಗ ನೀವು ನಿಮ್ಮ ಬೆಳೆ ವಿಮಾಕಂಪನಿಯ ಏಜೆಂಟರೊಂದಿಗೆ ಸಂಪರ್ಕಿಸಿ ನಿಮ್ಮ ಬೆಳೆವಿಮಾ ಅರ್ಜಿಯ ಸ್ಟೇಟಸ್ ಚೆಕ್ ಮಾಡಬಹುದು.