ಅಗ್ನೀವೀರ ವಾಯು ಹುದ್ದೆಗೆ ನೋಂದಣಿ ಮಾಡಿಸಿ

Written by Ramlinganna

Updated on:

Direct interview for job ಕಲಬುರಗಿ ಸರ್ಕಾರಿ ಐಟಿಐ ಕಾಲೇಜು ಹಿಂದುಗಡೆಯಿರುವ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಮಾರ್ಚ್ 28 ರಂದು ಬೆಳಗ್ಗೆ 10.30 ಗಂಟೆಯಿಂದ 2 ಗಂಟೆಯವರೆಗೆ ನೇರ ಸಂದರ್ಶನ ಹಮ್ಮಿಕೊಳ್ಳಲಾಗಿದೆ ಎಂದು ಕಲಬುರಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೌದು, ವಿವಿಧ ಹುದ್ದೆಗಳಿಗಾಗಿ ಕಾಯುತ್ತಿರುವ ಯುವಕ ಯುವತಿಯರಿಗಾಗಿ ನೇರ ಸಂದರ್ಶನ ಏರ್ಪಡಿಸಲಾಗಿದೆ.

Direct interview for job ನೇರ ಸಂದರ್ಶನದಲ್ಲಿ ಯಾವ ಯಾವ ಕಂಪನಿಗಳು ಭಾಗವಹಿಸುತ್ತವೆ?

ಕಲಬುರಗಿಯ ಎಸ್.ಬಿ.ಐ ಲೈಫ್ ಇನ್ಸುರೇನ್ಸ್ ನಲ್ಲಿ ಯೂನಿಟ್ ಮ್ಯಾನೇಜರ್ ಹುದ್ದೆಗೆ ಪಿಯುಸಿ ವಿದ್ಯಾರ್ಹತೆ ಹೊಂದಿರಬೇಕು. ವಯೋಮಿತಿ 25 ರಿಂದ 35 ವರ್ಷದೊಳಗಿರಬೇಕು. ಲೈಫ್ ಮಿತ್ರಾ ಹುದ್ದೆಗೆ ಯಾವುದೇ ಪದವಿ ವಿದ್ಯಾರ್ಹತೆ ಹೊಂದಿರಬೇಕು. ವಯೋಮಿತಿ 30 ರಿಂದ 60 ವರ್ಷದೊಳಗಿರಬೇಕು.  ಮಠ ಮಲ್ಚಿ ಮೈಂಡ್ಸ್ ದಲ್ಲಿ ಟೇಲಿ ಕಾಲರ್ ಹುದ್ದೆಗೆ ಪಿಯುಸಿ, ಯಾವುದೇ ಪದವಿ ವಿದ್ಯಾರ್ಹತೆ ಹೊಂದಿರಬೇಕು. ವಯೋಮಿತಿ 18 ರಿಂದ 30 ವರ್ಷದೊಳಗಿರಬೇಕು. ಎ.ಬಿ. ಪವರ್ ಸಿಸ್ಟಮ್ ದಲ್ಲಿ ಎಫ್.ಎಸ್.ಇ ಕೋ ಆರ್ಡಿನೇಟರ್ ಹುದ್ದೆಗೆ ಪಿಯುಸಿ, ಯಾವುದೇ ಪದವಿ ವಿದ್ಯಾರ್ಹತೆ ಹೊಂದಿರಬೇಕು. ವಯೋಮಿತಿ 18 ರಿಂದ 30 ವರ್ಷದೊಳಗಿರಬೇಕು. ಎಫ್.ಎಸ್.ಇ (ಫೀಲ್ಡ್ ಸರ್ವಿಸ್ ಇಂಜಿನಿಯರಿಂಗ್) ಹುದ್ದೆಗೆ ಐಟಿಐ (ಎಲ್ಲಾ ಟ್ರೇಡ್) ವಿದ್ಯಾರ್ಹತೆ ಹೊಂದಿರಬೇಕು. ವಯೋಮಿತಿ 18 ರಿಂದ 30 ವರ್ಷದೊಳಗಿರಬೇಕು.

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು

ಆಸಕ್ತಿಯುಳ್ಳ ಅಭ್ಯರ್ಥಿಗಳು ತಮ್ಮ ಎಲ್ಲಾ ಅಂಕಪಟ್ಟಿಗಳ ಝರಾಕ್ಸ್ ಪ್ರತಿ ಸಲ್ಲಿಸಬೇಕಾಗುತ್ತದೆ. ರೆಸ್ಯೂಮ್ (ಬಯೋಡೆಟಾ) ಭಾವಚಿತ್ರಗಳು  ಹಾಗೂ ಆಧಾರ್ ಕಾರ್ಡ್ ದಾಖಲಾತಿಗಳೊಂದಿಗೆ ಮಾರ್ಚ್ 28 ರಂದು ನಡೆಯುವ ಸಂದರ್ಶನಕ್ಕೆ ಹಾಜರಾಗಬೇಕು. ಅಭ್ಯರ್ಥಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸಿ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು.

ಇದನ್ನೂ ಓದಿ : ಪಿಎಂ ಕಿಸಾನ್ 14ನೇ ಕಂತಿನ ಗ್ರಾಮವಾರು ಪಟ್ಟಿ ಬಿಡುಗಡೆ- ನಿಮ್ಮ ಹೆಸರಿದೆಯೇ? ಮೊಬೈಲ್ ನಲ್ಲೇ ಚೆಕ್ ಮಾಡಿ

ಈ ಸಂದರ್ಶನದಲ್ಲಿ ಭಾಗವಹಿಸುವ ಅಭ್ಯರ್ಥಿಗಳಿಗೆ ಯಾವುದೇ ತರಹದ ಭತ್ಯೆಯನ್ನು ನೀಡಲಾಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯನ್ನು ಹಾಗೂ ಕಚೇರಿ ದೂರವಾಣಿ ಸಂಖ್ಯೆ 08472 274846ಗೆ ಸಂಪರ್ಕಿಸಲು ಕೋರಲಾಗಿದೆ.

ಅಗ್ನಿವೀರ ವಾಯು ಹುದ್ದೆಗಳಿಗೆ ನೋಂದಾಯಿಸಿಕೊಳ್ಳಲು ಸೂಚನೆ

ಭಾರತೀಯ ವಾಯು ಸೇನೆಯಲ್ಲಿ ಅಗ್ನಿಪಥ ಯೋಜನೆಯಡಿ ಅಗ್ನಿವೀರ ವಾಯು (ಗ್ರೂಪ್ ವೈ ಹಾಗೂ ಗ್ರೂಪ್ ಎಕ್ಸ್) ಹುದ್ದೆಗಳಿಗೆ ಕಲಬುರಗಿ ಜಿಲ್ಲೆಯ ಹಾಗೂ ರಾಜ್ಯದ ವಯೋಮಿತಿ 17 ½  ರಿಂದ 21 ವರ್ಷದೊಳಗಿನ ಅಭ್ಯರ್ಥಿಗಳಿಗೆ ಆನ್ಲೈನ್ ಮೂಲಕ ನೋಂದಾಯಿಸಿಕೊಳ್ಳಲು ಮಾರ್ಚ್ 31 ರವರೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಕಲಬುರಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.

ಹೆಸರು ನೋಂದಾಯಿಸಲು ಬೇಕಾಗುವ ಅರ್ಹತೆಗಳು

ಗ್ರೂಪ್ ವೈ ಹುದ್ದೆಗೆ ಅಭ್ಯರ್ಥಿಗಳು ಪಿಯುಸಿ ವಿದ್ಯಾರ್ಹತೆ ಹೊಂದಿರಬೇಕು. ಪಿಯುಸಿಯಲ್ಲಿ ಪ್ರತಿಶತ ಶೇ. 50 ಹಾಗೂ ಆಂಗ್ಲ ಭಾಷೆಯಲ್ಲಿ ಪ್ರತಿಶತ ಶೇ. 50 ಅಂಕಗಳನ್ನು ಪಡೆದು ಉತ್ತೀರ್ಣರಾಗಿರಬೇಕು. ಗ್ರೂಪ್ ಎಕ್ಸ್ ಹುದ್ದೆಗೆ ಅಭ್ಯರ್ಥಿಗಳು ಡಿಪ್ಲೋಮಾ ವಿದ್ಯಾರ್ಹತೆ ಹೊಂದಿರಬೇಕು. ಡಿಪ್ಲೋಮಾದಲ್ಲಿ ಪ್ರತಿಶತ ಶೇ. 50 ಅಂಕಗಳನ್ನು ಪಡೆದು ಉತ್ತೀರ್ಣರಾಗಿರಬೇಕು.

ಆಸಕ್ತಿಯುಳ್ಳ ಅಭ್ಯರ್ಥಿಗಳು https://agnipathvayu.cdac.in  ವೆಬ್ಸೈಟ್ ದಲ್ಲಿ 2023 ರ ಮಾರ್ಚ್ 20 ರಿಂದ ಮಾರ್ಚ್ 31 ರವರೆಗೆ ಆನ್ಲೈನ್ ಮೂಲಕ ಹೆಸರು ನೋಂದಾಯಿಸಿಕೊಳ್ಳಬೇಕು. ಮತ್ತಿತರ ಹೆಚ್ಚಿನ ಮಾಹಿತಿಗಾಗಿ

https://agnipathvayu.cdac.in

ವೆಬ್ಸೈಟ್ ನ್ನು ಕಲಬುರಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯನ್ನು ಹಾಗೂ ಕಚೇರಿ ದೂರವಾಣಿ ಸಂಖ್ಯೆ 08472 274846 ಗೆ ಸಂಪರ್ಕಿಸಲು ಕೋರಲಾಗಿದೆ.

ಕೊನೆಯ ದಿನಾಂಕದವರೆಗೆ ಅಭ್ಯರ್ಥಿಗಳು ಕಾಯದೆ, ಬೇಗನೆ ಅರ್ಜಿ ಸಲ್ಲಿಸಿ ಉದ್ಯೋಗ ಪಡೆದುಕೊಳ್ಳಲು ಕೋರಲಾಗಿದೆ.  ಅಗ್ನಿವೀರ ವಾಯು ಹುದ್ದೆಗಳಿಗೆ ಎಲ್ಲಾ ಜಿಲ್ಲೆಗಳಿಂದಲೂ ಅರ್ಜಿ ಆಹ್ವಾನಿಸಲಾಗಿದೆ.

Leave a Comment