ಐದು ನಿಮಿಷ ಮೊದಲೇ ಸಿಡಿಲಿನ ಮಾಹಿತಿ ನೀಡುತ್ತದೆೆ ದಾಮಿನಿ ಆ್ಯಪ್

Written by Ramlinganna

Updated on:

Damini gives lightning alert ಸಿಡಿಲು ಬೀಳುವ ಮೊದಲೇ ಸಾರ್ವಜನಿಕರಿಗೆ ಎಲ್ಲಿಸಿಡಿಲು ಬೀಳುತ್ತದೆ? ಎಂಬ ಮಾಹಿತಿ ನೀಡುತ್ತದೆ ದಾಮಿನಿ ಆ್ಯಪ್. ಈ ಆ್ಯಪ್ ಹೇಗೆ ಸಾರ್ವಜನಿಕರಿಗೆ ಮಾಹಿತಿ ನೀಡುತ್ತದೆ ಇಲ್ಲಿದೆ  ಮಾಹಿತಿ.

ಮುಂಗಾರು ಪೂರ್ವ ಈಗಾಗಲೇ ರಾಜ್ಯದ ವಿವಿಧೆಡೆ ಗುಡುಗು ಮಿಂಚಿನ ಆರ್ಭಟ ಕೇಳುತ್ತಿರಬಹುದು. ಕೆಲವು ಕಡೆ ಸಿಡಿಲಿಗೆ ರೈತರು, ಕುರಿಗಾಹಿಗಳು ಸಾವನ್ನಪ್ಪುತ್ತಿರುವ ಸುದ್ದಿಗಳು ಓದುತ್ತಿರಬಹುದು. ರೈತರು, ಸಾರ್ವಜನಿಕರು ಈ ಆ್ಯಪ್ ತಮ್ಮ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಂಡರೆ ಯಾವ ಪ್ರದೇಶದ ವ್ಯಾಪ್ತಿಯಲ್ಲಿ ಸಿಡಿಲು ಬೀಳಬಹುದು ಎಂಬುದರ ಕುರಿತು ಮಾಹಿತಿ ದೊರೆಯಲಿದೆ.

ಈ ಆ್ಯಪ್.  ಎಲ್ಲೆಲ್ಲಿ ಮಳೆ, ಗುಡುಗು, ಸಿಡಿಲು ಬಡಿಯಲಿದೆ ಎನ್ನುವ ಸೂಚನೆ ನೀಡಲಿದೆ. ದಾಮಿನಿ ಆ್ಯಪ್ ಡೌನ್ಲೋಡ್ ಮಾಡಿಕೊಂಡ ನಂತರ ನೋಂದಣಿ ಮಾಡಿಸಿಕೊಂಡರೆ ಮಳೆ ಸಿಡಿಲಿನ ಕುರಿತಾದ ಸಂದೇಶ ನೀಡಲಿದೆ.

ಏನಿದು ದಾಮಿನಿ ಆ್ಯಪ್?

ಸಿಡಿಲಿನಿಂದ ಪಾರಾಗಲು ಹಾಗೂ ಸಿಡಿಲು ಕುರಿತು ಮುಂಚಿತವಾಗಿ ಮುನ್ಸೂಚನೆ ನೀಡುವುದು ದಾಮಿನಿ ಆ್ಯಪ್. ಈ ಆ್ಯಪ್ ನ್ನು ಕೇಂದ್ರ ಸರ್ಕಾರದ ಭೂ ವಿಜ್ಞಾನ ಸಚಿವಾಲಯ ಅಧೀನದ ಭಾರತೀಯ ಉಷ್ಣವಲಯದ ಹವಾಮಾನ ಸಂಸ್ಥೆ ಅಭಿವೃದ್ಧಿ ಪಡಿಸಿದೆ.

ಪುಣೆಯಲ್ಲಿರುವ ಭಾರತೀಯ ಉಷ್ಣವಲಯದ ಹವಾಮಾನ ಸಂಸ್ಥೆಯು ಸಿಡಿಲಿನ ಅನಾಹುತ ತಪ್ಪಿಸಲು ಸಿಡಿಲು ಪತ್ತೆಹಚ್ಚಲು ಸಂವೇದಕಗಳನ್ನು ದೇಶದ ವಿವಿಧ ಭಾಗಗಳಲ್ಲಿ ಸ್ಥಾಪಿಸಿದೆ. ಹಾಗಾಗಿ ಒಂದು ಸ್ಥಳದ ಸುತ್ತಮುತ್ತಲಿನ 20 ರಿಂದ 40 ಕಿ. ಮೀ ದೂರದವರೆಗೆ 15 ನಿಮಿಷಗಳ ಒಳಗೆಡ ಸಂಭವಿಸಬಹುದಾದ ಸಿಡಿಲಿನ ಬಗ್ಗೆ ನಿಖರವಾದ ಮಾಹಿತಿ ನೀಡಲಿದೆ.

Damini gives lightning alert ದಾಮಿನಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳುವುದು ಹೇಗೆ?

ದಾಮಿನಿ ಆ್ಯಪ್ ನ್ನು ಗೂಗಲ್ ಪ್ಲೇ ಸ್ಟೋರ್ ನಲ್ಲಿ Damini app ಎಂದು ಟೈಪ್ ಮಾಡಬೇಕು. ಆಗ ದಾಮಿನಿ ಆ್ಯಪ್ ಮೇಲ್ಗಡೆ ಕಾಣಿಸುತ್ತದೆ. ಅಲ್ಲಿ ಇನಸ್ಟಾಲ್ ಮೇಲೆ ಕ್ಲಿಕ್ ಮಾಡಿಕೊಳ್ಳಬಹುದು. ಅಥವಾ  ಈ

https://play.google.com/store/apps/details?id=com.lightening.live.damini

ಲಿಂಕ್ ಮೇಲೆ ಕ್ಲಿಕ್ ಮಾಡಿದಾಗ ದಾಮಿನಿ ಆ್ಯಪ್ ಓಪನ್ ಆಗುತ್ತದೆ. ಅಲ್ಲಿ Install ಮೇಲೆ ಕ್ಲಿಕ್ ಮಾಡಬೇಕು. ನಂತರ ಓಪನ್ ಮೇಲೆ ಕ್ಲಿಕ್ ಮಾಡಬೇಕು. ನಂತರ ದಾಮಿನಿ ಆ್ಯಪ್ ಓಪನ್ ಆಗುತ್ತದೆ. ಅಲ್ಲಿ ನೀವು ಭಾಷೆ ಆಯ್ಕೆ ಮಾಡಿಕೊಳ್ಳಬೇಕು. ಭಾ ಷೆ  ಕನ್ನಡ ಆಯ್ಕೆ ಮಾಡಿಕೊಂಡ ನಂತರ ಸರಿ ಮೇಲೆ ಕ್ಲಿಕ್ ಮಾಡಬೇಕು.

ಆಗ ನೀವು ಸಕ್ರಿಯಗೊಳಿಸಿದರೆ ಜಿಪಿಎಸ್  ಎಂಬ ಸಂದೇಶ ಕಾಣಿಸುತ್ತದೆ. ಜಿಪಿಎಸ್ ಆನ್ ಇದ್ದರೆ ಸಿಡಿಲಿನ ಸ್ಥಳ ಗುರುತಿಸಲು ಸುಲಭವಾಗುತ್ತದೆ. ಇದಕ್ಕೆ ನಾನು ಒಪ್ಪುತ್ತೇನೆ ಬಾಕ್ಸ್ ಆಯ್ಕೆ ಮಾಡಿಕೊಂಡು ಜಿಪಿಎಸ್ ನ್ನು ಸಕ್ರಿಯಗೊಳಿಸಿ ಮೇಲೆ ಕ್ಲಿಕ್ ಮಾಡಬೇಕು. ನಂತರ ವೈಲ್ ಯೂಸಿಂಗ್ ದಿ ಆ್ಯಪ್  ಮೇಲೆ ಕ್ಲಿಕ್ ಮಾಡಬೇಕು.

ಇದನ್ನೂ ಓದಿ : ನೀವು ನಿಂತಿರುವ ಜಮೀನು ಯಾರ ಹೆಸರಿಗಿದೆ? ಸರ್ವೆ ನಂಬರ್ ಏನಿದೆ? ಮೊಬೈಲ್ ನಲ್ಲೇ ಚೆಕ್ ಮಾಡಿ

ಆಗ ನಿಮಗೆ ಒಂದು ಸರ್ಕಲ್ ಕಾಣಿಸುತ್ತದೆ. ಅಲ್ಲಿಎ ಷ್ಟು ನಿಮಿಷದೊಳಗೆ ನೀವು ಇರುವ ಸುತ್ತಮತ್ತಲಿನ ಪ್ರದೇಶದ ಎಲ್ಲೆಲ್ಲಿ ಸಿಡಿಲು ಬೀಳುವ ಸಾಧ್ಯತೆ ಎಂಬುದು ಕಾಣಿಸುತ್ತದೆ. ಕೆಳಗಡೆ ನಿಮಿಷ ಕಾಣಿಸುತ್ತದೆ. ಅದಕ್ಕೆ ಬಣ್ಣವನ್ನು ಸಹ ಗುರುತಿಸಲಾಗಿರುತ್ತದೆ. ಆ ಆಧಾರದ ಮೇಲೆ  7 ನಿಮಿಷದೊಳಗೆ ಎಲ್ಲೆಲ್ಲಿ 14 ನಿಮಿಷದೊಳಗೆ ಎಲ್ಲೆಲ್ಲಿ ಹಾಗೂ 21 ನಿಮಿಷದೊಳಗೆ ಎಲ್ಲೆಲ್ಲಿ ಸಿಡಿಲು ಬೀಳುತ್ತವೆ ಎಂಬ ಮಾಹಿತಿ ಕಾಣಿಸುತ್ತದೆ.

ನಿಮಗೆ ಅಲರ್ಟ್ ಮೆಸೆಜ್ ಬರಲು ಹೆಸರು ನೋಂದಾಯಿಸಿ

ಆ್ಯಪ್ ನಲ್ಲಿ ಕೆಳಗಡೆ ಕಾಣುವ ನೋಂದಣಿ (Register) ಮೇಲೆಕ್ಲಿಕ್ ಮಾಡಬೇಕು. ನಂತರ  ನಿಮ್ಮ ಹೆಸರು, ಮೊಬೈಲ್ ನಂಬರ್, ವಿಳಾಸ, ಪಿನ್ ಕೋಡ್ ಹಾಗೂ ವೃತ್ತಿ ಭರ್ತಿ ಮಾಡಿದ ನಂತರ ನೋಂದಣಿ ಮೇಲೆ ಕ್ಲಿಕ್ ಮಾಡಿದರೆ ಸಾಕು, ನಿಮಗೆ ನಿಮ್ಮ ಹತ್ತಿರದ ಸಿಡಿಲು ಬೀಳುವ ಸಾಧ್ಯತೆಯಿದ್ದರೆ ಮೆಸೆಜ್ ಬರುತ್ತದೆ.

Leave a Comment