ಮೊಬೈಲ್ ನಲ್ಲಿ ಬೆಳೆ ಸಮೀಕ್ಷೆ ಮಾಡಿ ಪರಿಹಾರ ಪಡೆಯಿರಿ

Written by Ramlinganna

Published on:

Crop survey : ರೈತರು ಇನ್ನೂ ಮುಂದೆ ಬೆಳೆ ಸಮೀಕ್ಷೆ ಮಾಡಿದರೆ ಮಾತ್ರ ಬೆಳೆ ಹಾನಿ, ಬೆಳೆ ಪರಿಹಾರ ಹಾಗಹೂ ಬೆಳೆ ವಿುಮೆ ಹಣ ಜಮೆಯಾಗುವುದು. ಬೆಳೆ ಸಮೀಕ್ಷೆ ಮಾಡದಿದ್ದರೆ ಪರಿಹಾರ ಹಣ ಬರುವ ಸಾಧ್ಯತೆ ಕಡಿಮೆ.

ಹೌದು, ಬೆಳೆ ಸಮೀಕ್ಷೆ ಮಾಡಲು ಸರ್ಕಾರವು ಬೆಳೆ ಸಮೀಕ್ಷೆ ಆ್ಯಪ್ ಅಭಿವೃದ್ಧಿ ಪಡಿಸಿದೆ. ಈ ಆ್ಯಪ್ ಸಹಾಯದಿಂದ ರೈತರು ತಮ್ಮ ಬಳಿಯಿರುವ ಮೊಬೈಲ್ ನಲ್ಲೇ ತಾವೇ ಬೆಳೆ ಸಮೀಕ್ಷೆ ಮಾಡಬಹುದು. ಕೃಷಿ ಇಲಾಖೆಯು ಬೆಳೆ ಸಮೀಕ್ಷೆ ಕುರಿತಂತೆ ಪ್ರಕಟಣೆ ಹೊರಡಿಸುತ್ತಲೇಇರುತ್ತದೆ. ಬೆಳೆ ಹಾಳಾದರೆ ಬೆಳೆ ಪರಿಹಾರ ಹಾಗೂ ಬೆಳೆ ವಿಮೆ ಹಣ ಪಡೆಯಲು ಬೆಳೆ ಸಮೀಕ್ಷೆ ಕಡ್ಡಾಯಗೊಳಿಸಿದೆ.

2023-24ನೇ ಸಾಲಿನ ನನ್ನ ಬೆಳೆ ನನ್ನ ಹಕ್ಕು ಆಶಯದಂತೆ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಕಾರ್ಯದಲ್ಲಿ ರೈತರು ಸ್ವತಃ ತಮ್ಮ ಜಮೀನಿನಲ್ಲಿ ತಾವು ಬೆಳೆದ ಬೆಳೆಯ ವಿವರ ದಾಖಲಿಸಲು ಮುಂಗಾರು ರೈತರ ಬೆಳೆ ಸಮೀಕ್ಷೆ 2023 ಆ್ಯಪ್ ಬಳಸಿಕೊಳ್ಳಬಹುದು

Crop survey ಮೊಬೈಲ್ ನಲ್ಲೇ ಬೆಳೆ ಸಮೀಕ್ಷೆ ಮಾಡುವದು ಹೇಗೆ?

ರೈತರು ತಮ್ಮ ಬಳಿಯಿರುವ ಮೊಬೈಲ್ ನಲ್ಲೇ ಬೆಳೆ ಸಮೀಕ್ಷೆ ಮಾಡಲು ಗೂಗಲ್ ಪ್ಲೇ ಸ್ಟೋರ್ ನಲ್ಲಿ crop survey app 2023-24 ಎಂದು ಟೈಪ್ ಮಾಡಬೇಕು. ಅಲ್ಲಿಕನ್ನಡದಲ್ಲಿಮುಂಗಾರು ರೈತರ ಬೆಳೆ ಸಮೀಕ್ಷೆ 2023 ಎಂದು ಟೈಪ್ ಮಾಡಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಬಹುದು. ಅಥವಾ  ಈ

https://play.google.com/store/apps/details?id=com.csk.farmer23_24.cropsurvey

ಲಿಂಕ್ ಮೇಲೆ ಕ್ಲಿಕ್ ಮಾಡಿ ಡೌನ್ಲೋಡ್ ಮಾಡಿಕೊಳ್ಳಬಹುದು. ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿದ ನಂತರ ಓಪನ್ ಆಗುವ ಆ್ಯಪ್ ಮೇಲೆ ಇನಸ್ಟಾಲ್ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ. ನಂತರ ಓಪನ್ ಮೇಲೆ ಕ್ಲಿಕ್ ಮಾಡಬೇಕು. ನಂತರ  ನಿಮಗೆ ರೈತರ ಬೆಳೆ ಸಮೀಕ್ಷೆ 2023-24 ಕಾಣಿಸುತ್ತದೆ. ಅಲ್ಲಿ ವೈಲ್ ಯೂಸಿಂಗ್ ದಿ ಆ್ಯಪ್ ಮೇಲೆ ಕ್ಲಿಕ್ ಮಾಡಬೇಕು. ನಂತರ ಅಲೋ ಮೇಲೆ ಕ್ಲಿಕ್ ಮಾಡಬೇಕು. ಆಗ ಋತು ಮುಂಗಾರು ಕಾಣಿಸುತ್ತದೆ. ಅದರ ಕೆಳಗಡೆ ನಿರ್ಗಮಿಸು ಹಾಗೂ ಇಕೆವೈಸಿಮೂಲಕ ಆಧಾರ್ ದೃಢೀಕರಿಸಿ ಅದರ ಕೆಳಗಡೆ ಹೆಚ್ಚಿನ ವಿವರಗಳಿಗಾಗಿ ಬೆಳೆ ಸಮೀಕ್ಷೆ ಸಹಾಯವಾಣಿ ಕರೆ ಮಾಡಿ ನಂಬರ್ 8448447715 ಇರುತ್ತದೆ.ಈ ನಂಬರಿಗೆ ಕರೆ ಮಾಡಿ ಬೆಳೆ ಸಮೀಕ್ಷೆ ಕುರಿತಂತೆ ಮಾಹಿತಿ ಪಡೆಯಬಹುದು.

ಇಕೆವೈಸಿ ಮೂಲಕ ಆಧಾರ್ ದೃಢೀಕರಿಸು ಮೇಲೆ ಕ್ಲಿಕ್ ಮಾಡಬೇಕು. ನಂತರ ಅ್ಲಲಿ ನಿಮಗೆ ಓಪನ್ ಆಗುವ ಪೇಜ್ ನಲ್ಲಿ ನಿಮ್ಮ ಆಧಾರ್ ಕಾರ್ಡ್ ಹಾಕಬೇಕು. ನಂತರ ನನ್ನ ಆಧಾರ್ ಮಾಹಿತಿ ಬಾಕ್ಸ್ಆಯ್ಕೆ ಮಾಡಿಕೊಳ್ಳಬೇಕು. ಅದರ ಕೆಳಗಡೆ ಓಟಿಪಿ ಹಾಗೂ ಫೇಸ್ ಕ್ಯಾಪ್ಚರ್ ಎಂಬ ಎರಡು ಆಯ್ಕೆಗಳು ಕಾಣಿಸುತ್ತವೆ.ಅಲ್ಲಿ ಓಟಿಪಿ ಮೂಲಕವೂ ಬೆಳೆ ಸಮೀಕ್ಷೆ ಮಾಡಬಹುದು. ಅಥವಾ ಫೆಸ್ ಕ್ಯಾಪ್ಚರ್ ಮೂಲಕವೂ ಬೆಳೆ ಸಮೀಕ್ಷೆ ಮಾಡಬಹುದು.

ಇದನ್ನೂ ಓದಿ ಅನ್ನಭಾಗ್ಯದ ಹಣ ಬಿಡುಗಡೆ- ನಿಮಗೆ ನಿಮಗೆಷ್ಟು ಜಮೆಯಾಗಿದೆ? ಮೊಬೈಲ್ ನಲ್ಲೇ ಚೆಕ್ ಮಾಡಿ

ಓಟಿಪಿ ಆಯ್ಕೆ ಮಾಡಿಕೊಂಡ ನಂತರ ಜನರೇಟ್ ಓಟಿಪಿ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮ್ಮ ಮೊಬೈಲಿಗೆ ಓಟಿಪಿ ಬರುತ್ತದೆ. ಆ ಓಟಿಪಿ ನಮೂದಿಸಿದ ನಂತರ ಸಬ್ಮಿಟ್ ಮೇಲೆ ಕ್ಲಿಕ್ ಮಾಡಬೇಕು.

ನಂತರ ನಿಮ್ಮ ಹೆಸರು ತಂದೆಯ ಹೆಸರು, ಹುಟ್ಟಿದ ದಿನಾಂಕ ಕಾಣಿಸುತ್ತದೆ. ಅಲ್ಲಿ ನಿಮ್ಮ ಮೊಬೈಲ್ ನಂಬರ್ ಹಾಕಬೇಕು. ನಂತರ ಸಕ್ರಿಯಗೊಳಿಸುಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಓಟಿಪಿ ಬರುತ್ತದೆ.  ಓಟಿಪಿ ಸಂಖ್ಯೆ ನಮೂದಿಸಿ ಸಲ್ಲಿಸಿ ಮೇಲೆ ಕ್ಲಿಕ್ ಮಾಡಬೇಕು.  ಆಗ ನಿಮ್ಮ ಎಫ್ಐಡಿ ಸಂಖ್ಯೆ ನಿಮ್ಮ ಹೆಸರು ನಿಮ್ಮ ಸರ್ವೆ ನಂಬರ್ ಸಹಿತ ನಿಮ್ಮ ಮಾಹಿತಿ ಕಾಣಿಸುತ್ತದೆ.  ಅಲ್ಲಿ ನೀವು  ನಿಮ್ಮ ಜಮೀನಿನಲ್ಲಿರುವ ಬೆಳೆಯ ಫೋಟೋ ತೆಗೆದು ಅಪ್ಲೋಡ್ ಮಾಡಿ ಸಬ್ಮಿಟ್ ಮಾಡಬೇಕು.

Leave a Comment