Crop loan ಈ ಪಟ್ಟಿಯಲ್ಲಿದ್ದವರಿಗೆ ಮಾತ್ರ ಬೆಳೆ ಸಾಲ ಮನ್ನಾ

Written by Ramlinganna

Updated on:

Crop loan waiver list ಕೆಲವು ರೈತರಿಗೆ ಬೆಳೆ ಸಾಲಮನ್ನಾ ಆದರೆ ಇನ್ನೂ ಕೆಲವು ರೈತರಿಗೆ ಬೆಳೆ ಸಾಲಮನ್ನಾ ಭಾಗ್ಯ ಸಿಕ್ಕಿಲ್ಲ. ಬೆಳೆ ಸಾಲಮನ್ನಾ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೋ ಇಲ್ಲವೋ ಇಲ್ಲೆ ಚೆಕ್ ಮಾಡಬಹುದು.

ಹೌದು, 2018 ರಲ್ಲಿ 1 ಲಕ್ಷ ರೂಪಾಯಿಯವರೆಗೆ ರೈತರಿಗೆ ಬೆಳೆ ಸಾಲ ಮನ್ನಾ ಘೋಷಣೆ ಮಾಡಲಾಗಿತ್ತು. ಆಗ ತಾಂತ್ರಿಕ ಕಾರಣಗಳಿಂದ ಕೆಲವು ರೈತರಿಗೆ ಸಾಲಮನ್ನಾ ಭಾಗ್ಯ ಸಿಕ್ಕಿರಲಿಲ್ಲ. ನಂತರ ಕೆಲವು ರೈತರ ದಾಖಲೆಗಳು ಸರಿಪಡಿಸಿದ್ದರಿಂದ ಅವರಿಗೆ ಸಾಲಮನ್ನಾ ಆಗಿತ್ತು. ಆದರೆ ಇನ್ನೂ ಕೆಲವು ರೈತರಿಗೆ ಸಾಲ ಮನ್ನಾ ಆಗಿಲ್ಲ. ಯಾವ ಯಾವ ರೈತರು ಸಾಲಮನ್ನಾ ಪಟ್ಟಿಯಲ್ಲಿದ್ದಾರೆ ಎಂಬುದನ್ನು ಈ ಕೆಳಗಿನಂತೆ ಚೆಕ್ ಮಾಡಬಹುದು.

Crop loan waiver list ವಾಣಿಜ್ಯ ಬ್ಯಾಂಕಿನಲ್ಲಿ ಸಾಲ ಪಡೆದ ರೈತರ ಸಾಲಮನ್ನಾ ಪಟ್ಟಿಯಲ್ಲಿ ನಿಮ್ಮ ಹೆಸರು ಚೆಕ್ ಮಾಡಿ

ಯಾವ ಯಾವ ರೈತರ ಹೆಸರು ಸಾಲಮನ್ನಾ ಪಟ್ಟಿಯಲ್ಲಿದ್ದಾರೆ ಎಂಬುದನ್ನು ಚೆಕ್ ಮಾಡಲು ಈ

https://mahitikanaja.karnataka.gov.in/Revenue/LoanWaiverReportBANKNew?ServiceId=2059&Type=TABLE&DepartmentId=2066

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ವಾಣಿಜ್ಯ ಬ್ಯಾಂಕಿನಲ್ಲಿ ಯಾರು ಯಾರು ಸಾಲ ಪಡೆದಿದ್ದಾರೋ ಅವರು ಸಾಲಮನ್ನಾ ಸ್ಟೇಟಸ್ ಚೆಕ್ ಮಾಡಬಹುದು. ಹೌದು ಮೇಲಿನ ಲಿಂಕ್ ಕ್ಲಿಕ್ ಮಾಡಿದ ನಂತರ ವಾಣಿಜ್ಯ ಬ್ಯಾಂಕಿಗೆ ಸಾಲ ಮನ್ನಾ ವರದಿ ಪೇಜ್ ತೆರೆದುಕೊಳ್ಳುತ್ತದೆ. ಮಾದರಿ ಕೆಳಗಡೆ ರೈತ ಆಯ್ಕೆ ಮಾಡಿಕೊಳ್ಳಬೇಕು. ನಂತರ ಜಿಲ್ಲೆ ಆಯ್ಕೆ ಮಾಡಿಕೊಳ್ಳಬೇಕು ಇದಾದನಂತರ ತಾಲೂಕು ಆಯ್ಕೆ ಮಾಡಿಕೊಳ್ಳಬೇಕು.  ನಂತರ ಹೋಬಳಿ ಆಯ್ಕೆ ಮಾಡಿಕೊಳ್ಳಬೇಕು. ಇದಾದನಂತರ ಗ್ರಾಮ ಆಯ್ಕೆ ಮಾಡಿಕೊಳ್ಳಬೇಕು. ನಂತರ ಸಲ್ಲಿಸಿ ಮೇಲೆಕ್ಲಿಕ್ ಮಾಡಬೇಕು. ಆಗ ನೀವು ಆಯ್ಕೆ ಮಾಡಿಕೊಂಡ ಗ್ರಾಮದಲ್ಲಿ ಯಾರು ಯಾರು ಸಾಲಮನ್ನಾ ಪಟ್ಟಿಯಲ್ಲಿದ್ದಾರೆ? ಯಾರು ಯಾವ ಬ್ಯಾಂಕಿನಿಂದ ಸಾಲ ಪಡೆದಿದ್ದಾರೆ ಹಾಗೂ ಯಾವ ಬ್ಯಾಂಕಿನಿಂದ ಸಾಲ ಪಡೆದಿದ್ದಾರ ಅವರಿಗೆ ಎಷ್ಟು ಸಾಲ ಮನ್ನಾ ಆಗಿದೆ ಎಂಬುದನ್ನುಚೆಕ್ ಮಾಡಬಹುದು.

ಪ್ರಾಥಮಿಕ ಕೃಷಿ ಸಹಕಾರಿ ಸಂಘಗಳ ಸಾಲಮನ್ನಾ ವರದಿ

ಪ್ರಾಥಮಿಕ ಕೃಷಿ ಸಹಕಾರಿ ಸಂಘಗಳಲ್ಲಿ ಸಾಲ ಪಡೆದವರು ಅವರ ಸಾಲಮನ್ನಾ ಸ್ಟೇಟಸ್ ಚೆಕ್ ಮಾಡಲು ಈ

https://mahitikanaja.karnataka.gov.in/Revenue/LoanWaiverReportPACSNew?ServiceId=2060&Type=TABLE&DepartmentId=2066

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ನಂತರ ಮಾದರಿ ಕೆಳಗಡೆ ರೈತ ಆಯ್ಕೆ ಮಾಡಿಕೊಳ್ಳಬೇಕು. ನಂತರ ಜಿಲ್ಲೆ ಆಯ್ಕೆ ಮಾಡಿಕೊಳ್ಳಬೇಕು. ಇದಾದ ನಂತರ ತಾಲೂಕು ಹಾಗೂ ಹೋಬಳಿ ಆಯ್ಕೆ ಮಾಡಿಕೊಂಡು ನಿಮ್ಮ ಊರು ಆಯ್ಕೆ ಮಾಡಿಕೊಳ್ಳಬೇಕು. ನಂತರ ಸಲ್ಲಿಸಿ ಮೇಲೆ ಕ್ಲಿಕ್ ಮಾಡಿ ಸೊಸೈಟಿಯಲ್ಲಿ ಯಾರ ಯಾರ ಸಾಲಮನ್ನಾ ಆಗಿದೆ ಎಂಬುದನ್ನು ಚೆಕ್ ಮಾಡಬಹುದು.

2018 ರಲ್ಲಿ ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದಾಗ ಬೆಳೆ ಸಾಲಮನ್ನಾ ಘೋಷಣೆ  ಮಾಡಿದ್ದರು. ಆ ಬೆಳೆ ಸಾಲಮನ್ನಾ ವರದಿಯನ್ನು ಚೆಕ್ ಮಾಡಬಹುದು. ಅದಾದ ನಂತರ ಬಿಜೆಪಿ ಸರ್ಕಾರವಾಗಲಿ ಅಥವಾ ಕಾಂಗ್ರೆಸ್ ಸರ್ಕಾರವಾಗಲಿ ರೈತರ ಬೆಳೆ ಸಾಲಮನ್ನಾ ಘೋಷಣೆ ಮಾಡಿಲ್ಲ. ಈಗ ರೈತರಿಗೆ ಯಾವುದೇ ಸಾಲಮನ್ನಾಆಗಿಲ್ಲ.

ಇದನ್ನೂ ಓದಿ bele vime ಹಾಗೂ ಬೆಳೆ ಹಾನಿ ಪರಿಹಾರ ಜಮೆಯಾಗಿದ್ದನ್ನು ಮೊಬೈಲ್ ನಲ್ಲೇ ಚೆಕ್ ಮಾಡಿ

2018 ಕ್ಕಿಂತ ಹಿಂದೆ ಯಾರು ಯಾರು ಬೆಳೆ ಸಾಲ ಪಡೆದಿದ್ದರೋ ಅವರಲ್ಲಿ ಕೆಲವು ರೈತರಿಗೆ ಮಾತ್ರ ಬೆಳೆ ಸಾಲಮನ್ನಾ ಆಗಿದೆ. ಅದರಲ್ಲಿ ಇನ್ನೂ ಹಲವಾರು ರೈತರು ಆಧಾರ್ ಕಾರ್ಡ್, ರೇಶನ್ ಕಾರ್ಡ್, ಜಮೀನಿನ ದಾಖಲೆ ಹಾಗೂ ಬ್ಯಾಂಕ್ ಖಾತೆ ನಿಷ್ಕ್ರೀಯ ಹೀಗೆ ಕೆಲವು ತಾಂತ್ರಿಕ ಕಾರಣಗಳಿಂದ ಸಾಲಮನ್ನಾ ಸೌಲಭ್ಯದಿಂದ ವಂಚಿತರಾಗಿದ್ದಾರೆ. ಕೆಲವು ರೈತರು ಸಾಲಮನ್ನಾ ಷರತ್ತಿಗೊಳಪಡದೆ ಇನ್ನೂ ವಂಚಿತರಾಗಿದ್ದಾರೆ.

Leave a Comment