Crop insurance last date check : ಬೆಳೆ ವಿಮೆ ಮಾಡಿಸಲು ಇನ್ನೂ ಕಾಲವಕಾಶವಿದೆ. ಹೌದು, ರೈತರು ಆಗಸ್ಟ್ 25 ರೊಳಗಾಗಿ ಬೆಳೆ ವಿಮೆ ಮಾಡಿಸಲು ಅರ್ಜಿ ಆಹ್ವಾನಿಸಲಾಗಿದೆ.
ಮುಂಗಾರು ಹಂಗಾಮಿನಲ್ಲಿ ಕೃಷಿ ಬೆಳೆಗಳಿಗೆ ಬೆಳೆ ವಿಮೆ ನೋಂದಣಿ ಮಾಡಿಸಲು ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಅಧಿಸೂಚಿಸಲಾಗಿದೆ.
ರೈತರು ತಮ್ಮ ಜಿಲ್ಲೆಯಲ್ಲಿ ಯಾವ ಯಾವ ಬೆಳೆಗಳಿಗೆ ವಿಮೆ ಮಾಡಿಸಲು ಆಗಸ್ಟ್ ಕೊನೆಯ ದಿನವಾಗಿದೆ ಎಂಬುದನ್ನು ರೈತರು ಮೊಬೈಲ್ ನಲ್ಲೇ ಚೆಕ್ ಮಾಡಬಹುದು.
ಇದನ್ನೂ ಓದಿ Baragala Parihara Status ಇಲ್ಲೇ ಚೆಕ್ ಮಾಡಿ ನಿಮಗೆಷ್ಟು ಜಮೆ
ರೈತರು ನೋಂದಣಿಗಾಗಿ ಫ್ರೂಟ್ಸ್ ತಂತ್ರಾಂಶದಲ್ಲಿ ಹೊಂದಿದ ಎಪ್ಐಡಿ ಸಂಖ್ಯೆಯನ್ನು ಹಾಗೂ ತಮ್ಮ ಬ್ಯಾಂಕ್ ಖಾತೆಯನ್ನು ಆಧಾರ್ ಜೊತೆಗೆ ಎನ್.ಪಿ.ಸಿ.ಆಯ್ ಸೀಡಿಂಗ್ ಮಾಡಿಸಿರಬೇಕು. ಆಧಾರ್ ಕಾರ್ಡ್ ಝರಾಕ್ಸ್ ಪ್ರತಿ, ಪಹಣಿ ಪತ್ರಿಕೆ, ಹಾಗೂ ಬ್ಯಾಂಕ್ ಪಾಸ್ ಬುಕ್ ಪ್ರತಿ ದಾಖಲೆಗಳೊಂದಿಗೆ ಹತ್ತಿರದ ಬ್ಯಾಂಕ್ ಶಾಖೆಗಳಲ್ಲಿ ಅಥವಾ ಗ್ರಾಮಒನ್ ಕೇಂದ್ರ ಅಥವಾ ಸಿ.ಎಸ್.ಸಿ ಕೇಂದ್ರದಲ್ಲಿ ಬೆಳೆ ವಿಮೆ ನೋಂದಣಿ ಮಾಡಿಸಿಕೊಳ್ಳಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿತಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ತಾಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಬಹುದು.
Crop insurance last date check ನಿಮ್ಮ ಜಿಲ್ಲೆಗೆ ಯಾವ ಯಾವ ಬೆಳೆಗೆ ವಿಮೆ ಮಾಡಿಸಲು ಅಂತಿಮ ದಿನವಿದೆ?
ನಿಮ್ಮ ಜಿಲ್ಲೆಗೆ ಯಾವ ಯಾವ ಬೆಳೆಗಳಿಗೆ ವಿಮೆ ಮಾಡಿಸಲು ಅಂತಿಮ ದಿನವಿದೆ ಎಂದು ರೈತರು ಮೊಬೈಲ್ ನಲ್ಲೇ ಚೆಕ್ ಮಾಡಬಹುದು. ಹೌದು, ಇದಕ್ಕಾಗಿ ರೈತರು ಕೆಳಗೆ ನೀಡಲಾದ ಕೆಲವು ಮಾಹಿತಿಗಳ ಪ್ರಕಾರ ಅತೀ ಸುಲಭವಾಗಿ ಚೆಕ್ ಮಾಡಬಹುದು.
ರೈತರು ಪ್ರಸಕ್ತಸಾಲಿನಲ್ಲಿ ಮುಂಗಾರು ಹಂಗಾಮಿಗೆ ಯಾವ ಯಾವ ಬೆಳೆಗೆ ವಿಮೆ ಮಾಡಿಸಲು ಕೊನೆಯ ದಿನಾಂಕ ಯಾವುದು ಎಂಬುದನ್ನು ಚೆಕ್ ಮಾಡಲು ಈ
https://samrakshane.karnataka.gov.in/
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಬೆಳೆ ವಿಮೆ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ಮುಂದೆ ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ನಿಮಗೆ Premium Calculator, Crop you can insure, check status, Know your Insurance co. Find Gram panchayat, Crop Insurance Detail on survey No and View cut of Details ಮೇಲೆ ಕಾಣಿಸುತ್ತವೆ. ಅಲ್ಲಿ ನೀವು View cut of Details ಮೇಲೆ ಕ್ಲಿಕ್ ಮಾಡಬೇಕು. ಅಥವಾ
https://samrakshane.karnataka.gov.in/PublicView/FindCutOff.aspx
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ತೆರೆದುಕೊಳ್ಳುವ ಪೇಜ್ ನಲ್ಲಿ ನೀವು ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿಕೊಳ್ಳಬೇಕು. ಆಗ ನಿಮಗೆ ನಿಮ್ಮ ಜಿಲ್ಲೆಯಿಂದ ಯಾವ ಯಾವ ಬೆಳೆಗಳಿಗೆ ಯಾವುದು ಕೊನೆಯ ದಿನಾಂಕವಿದೆ ಎಂಬ ಮಾಹಿತಿ ಕಾಣಿಸುತ್ತದೆ.
ಬೆಳೆ ವಿಮೆ ಕುರಿತು ಸಂಪೂರ್ಣ ಮಾಹಿತಿ ಪಡೆಯಲು ರೈತರು ತಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಬಹುದು.
Crop insurance last date check ಬೆಳೆ ವಿಮೆ ಮಾಡಿಸಿದ ನಂತರ ರೈತರೇನು ಮಾಡಬೇಕು?
ಮುಂಗಾರು ಹಂಗಾಮಿಗೆ ಬೆಳೆ ವಿಮೆ ಮಾಡಿಸಿದ ನಂತರ ರೈತರು ಬೆಳೆ ಸಮೀಕ್ಷೆ ಮಾಡಿಸಬೇಕು. ಬೆಳೆ ಸಮೀಕ್ಷೆ ಮಾಡಿಸುವುದರೊಂದಿಗೆ ಫ್ರೂಟ್ಸ್ ಐಡಿಹೊಂದಿರಬೇಕು. ಇದರೊಂದಿಗೆ ತಮ್ಮ ಬ್ಯಾಂಕ್ ಶಾಖೆಯಲ್ಲಿ ಆಧಾರ್ ಸೀಡ್ ಮಾಡಿಸಿಕೊಂಡಿರಬೇಕು. ಹೌದು, ಸರ್ಕಾರದ ಸೌಲಭ್ಯ ಪಡೆಯಲು ಆಧಾರ್ ಸಿಡ್ ಮಾಡಿಸುವುದು ಕಡ್ಡಾಯವಾಗಿದೆ.