ನಿಮ್ಮ ಬೆಳೆ ಹಾಳಾಗಿದೆಯೇ? ವಿಮೆ ಹಣ ಜಮೆಯಾಗಲು ಈ ಕೆಲಸ ಮಾಡಿ

Written by Ramlinganna

Published on:

Crop insurance contact number : ಬೆಳೆ ವಿಮೆ ಪಾವತಿಸಿದ ರೈತರು ತಮ್ಮ ಬೆಳೆ ವಿಮೆ ಪರಿಹಾರಕ್ಕಾಗಿ ಯಾವ ಕಂಪನಿಗೆ ಸಂಪರ್ಕಿಸಬೇಕು. ನಿಮ್ಮ ಜಿಲ್ಲೆಗೆ ಯಾವ ವಿಮಾ ಕಂಪನಿಯನ್ನು ನಿಯೋಜಿಸಲಾಗಿದೆ ಎಂಬುದನ್ನು ಮೊಬೈಲ್ ನಲ್ಲೇ ಚೆಕ್ ಮಾಡಬಹುದು. ಹೌದು  ಜಿಲ್ಲಾವಾರು ವಿಮಾ ಕಂಪನಿಗಳ ಮೊಬೈಲ್ ನಂಬರ್ ಸಹ ಇಲ್ಲಿ ನೀಡಲಾಗಿದೆ.

ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಅಡಿಯಲ್ಲಿ ಪ್ರಸಕ್ತ ಸಾಲಿನ ಅಂದರೆ ಮುಂಗಾರು ಹಂಗಾಮಿಗೆ ಬೆಳೆ ವಿಮೆಗೆ ಹಣ ಪಾವತಿಸಿದ ರೈತರು ವಿಮೆ ಹಮ ಕಟ್ಟಿದ ನಂತರ  ಯಾರಿಗೆ ಸಂಪರ್ಕಿಸಬೇಕು. ಯಾವಾಗ ಸಂಪರ್ಕಿಸಬೇಕು ಬೆಳೆ ವಿಮೆ ಹಣ ಜಮೆಯಾಗಲು ಏನು ಮಾಡಬೇಕೆಂಬುದು ಸೇರಿದಂತೆ ಇನ್ನಿತರ ಮಾಹಿತಿಯನ್ನು ಪಡಯಬಹುದು.

Crop insurance contact number  ನಿಮ್ಮ ಜಿಲ್ಲೆಗೆ ಯಾವ ವಿಮಾ ಕಂಪನಿಯನ್ನು ನಿಯೋಜಿಸಲಾಗಿದೆ ಇಲ್ಲೇ ಚೆಕ್ ಮಾಡಿ

ನಿಮ್ಮ ಜಿಲ್ಲೆಗೆ ಯಾವ ವಿಮಾ ಕಂಪನಿಯನ್ನು ನಿಯೋಜಿಸಲಾಗಿದೆ ಎಂಬುದನ್ನು ಚೆಕ್ ಮಾಡಲು ಈ

https://www.samrakshane.karnataka.gov.in/

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.ಆಗ ನಿಮಗೆ ಸಂರಕ್ಷಣೆ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನಿಮಗೆ 2026-27 ಹಾಗೂ ಅದರ ಕೆಳಗಡೆ ಖಾರೀಪ್ ಎಂಬ ಮಾಹಿತಿ ಕಾಣಿಸುತ್ತದೆ. ನೀವು  ಮುಂದೆ ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನೀವು Know Your Insurance Co. ಮೇಲೆ ಕ್ಲಿಕ್ ಮಾಡಬೇಕು. ಇದಾದ ನಂತರ ನಿಮಗೆ ಇನ್ನುಂದು ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ಯಾವ ಯಾವ ಜಿಲ್ಲೆಗಳಿಗೆ ಯಾವ ಯಾವ ವಿಮಾ ಕಂಪನಿಗಳನ್ನು ನಿಯೋಜಿಸಲಾಗಿದೆ ಎಂಬ ಪಟ್ಟಿ ಕಾಣಿಸುತ್ತದೆ. ನೀವು ಕಲಬುರಗಿ ಜಿಲ್ಲೆಯವರಾಗಿದ್ದರೆ ಅಗ್ರಿಕಲ್ಚರ್ ಇನ್ಸುರೆನ್ಸ್ ಕಂ. ಲಿ ಹಾಗೂ ಇಂಡಸ್ ಲ್ಯಾಂಡ್ ಜನರಲ್ ಇನ್ಸುರೆನ್ಸ್ ಕಂ ಕಾಣಿಸುತ್ತದೆ.ಒಂದು ವೇಳೆ ನೀವು ಮಂಡ್ಯ ಜಿಲ್ಲೆಯವರಾಗಿದ್ದರೆ ಎಸ್.ಬಿ.ಐ ಜನರಲ್ ಇನ್ಸುರೆನ್ಸ್ ಕಾಣಿಸುತ್ತದೆ. ಒಂದು ವೇಳೆ ನೀವು ಹಾಸನ ಜಿಲ್ಲೆಯವರಾಗಿದ್ದರೆ ಅಗ್ರಿಕಲ್ಚರ್ ಇನ್ಸುರೆನ್ಸ್ ಕಂಪನಿ. ಆಫ್ ಇಂಡಿಯಾ ಲಿಮಿಟೆಡ್, ಕೊಪ್ಪಳ ಜಿಲ್ಲೆಯವರಾಗಿದ್ದರೆ ಇಫ್ಕೋ ಟೋಕಿಯೋ ಜನರಲ್ ಇನ್ಸುರೆನ್ ಕಂ ಹೀಗೆ ವಿವಿಧ ಜಿಲ್ಲೆಗಳಿಗೆ ವಿವಿಧ ವಿಮಾ ಕಂಪನಿಗಳನ್ನು ನಿಯೋಜಿಸಲಾಗಿದೆ. ನಿಮ್ಮ ಜಿಲ್ಲೆಗೆ ಯಾವ ವಿಮಾ ಕಂಪನಿ ನಿಯೋಜಿಸಲಾಗಿದೆ ಎಂಬುದನ್ನು ಚೆಕ್ ಮಾಡಲು ನೀವು ಅಲ್ಲಿ ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿಕೊಳ್ಳಬೇಕು. ಆಗ ನಿಮ್ಮ ಜಿಲ್ಲೆಗೆ ಯಾವ ವಿಮಾ ಕಂಪನಿಯನ್ನು ನಿಯೋಜಿಸಲಾಗಿದೆ ಎಂಬ ಮಾಹಿತಿ ಕಾಣಿಸುತ್ತದೆ.

ವಿಮಾ ಕಂಪನಿಯ ಸಹಾಯವಾಣ ನಂಬರ್ ಹೇಗೆ ಪಡೆಯಬೇಕು ?

ನಿಮ್ಮ ಜಿಲ್ಲೆಯ ವಿಮಾ ಕಂಪನಿಯ ಸಹಾಯವಾಣಿ ನಂಬರ್ ಪಡೆಯಲು ನೀವು ಮೇಲೆ ಕಾಣಿಸುವ Contact us ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ಎಲ್ಲಾ ವಿಮಾ ಕಂಪನಿಗಳ ಹೆಸರು ಮತ್ತು ಆ ಕಂಪನಿಗಳ ಸಹಾಯವಾಣಿ ನಂಬರ್ ನೀಡಲಾಗುತ್ತದೆ. ಆ ಸಹಾಯವಾಣಿ ನಂಬರುಗಳಿಗೆ ನೀವು ಸಂಪರ್ಕಿಸಬಹುದು.

ಬೆಳೆ ವಿಮೆ ಹಣ ಜಮೆಯಾಗಲು ಯಾವಾಗ ಸಂಪರ್ಕಿಸಬೇಕು ?

ಮುಂಗಾರು ಹಂಗಾಮಿನ ಅಂದರೆ ಪ್ರಸಕ್ತ ಸಾಲಿಗೆ ಬೆಳೆ ವಿಮೆ ಮಾಡಿಸಿದ್ದರೆ ಹಾಗೂ ನಿಮ್ಮ ಬೆಳೆ ಮಳೆ ಕೊರತೆಯಿಂದಾಗಿ ಹಾಳಾದರೆ ಅಥವಾ ಅತೀ ಹೆಚ್ಚು ಮಳೆಯಿಂದಾಗಿ ಬೆಳೆ ಹಾಳಾದರೆ, ಅಥವಾ ಮೊಳಕೆ ಒಡೆಯದೆ ಒಣಗಿದ್ದರೆ ಅಥವಾ ಪ್ರಾಕೃತಿಕ ವಿಕೋಪದಿಂದಾಗಿ ಬೆಳೆ ಹಾಳಾಗಿದ್ದರೆ ನೀವು ವಿಮೆಯ ಹಣವನ್ನು ಪಡೆಯಬಹುದು. ಹೌದು, ಬೆಳೆ ಹಾಳಾದ ನಂತರ 72 ಗಂಟೆಯೊಳಗೆ ಕರೆ ಮಾಡಬೇಕು. ಆಗ ವಿಮಾ ಕಂಪನಿಯವರು ನಿಮ್ಮ ಜಮೀನಿಗೆ ಬಂದು ನಿಮ್ಮ ಬೆಳೆಯನ್ನು ಪರಿಶೀಲಿಸುತ್ತಾರೆ. ನಂತರ ನಿಮ್ಮ ಖಾತೆಗೆ ಬೆಳೆ ವಿಮೆ ಹಣ ಜಮೆಯಾಗುತ್ತದೆ.

ಇದನ್ನೂ ಓದಿ ರೈತರಿಗೆ ಗುಡ್ ನ್ಯೂಸ್ ಜಮೀನಿನ ಟಿಪ್ಪಣಿ ಮೊಬೈಲ್ ನಲ್ಲೇ ಪಡಯಲು ಇಲ್ಲಿ ಕ್ಲಿಕ್ ಮಾಡಿ

ನೀವು ಯಾವ ಬೆಳೆಗೆ ವಿಮೆ ಮಾಡಿಸಿದ್ದೀರೋ ಎಷ್ಟು ಎಕರೆಗೆ ವಿಮೆ ಮಾಡಿಸಿದ್ದೀರೋ ಆ ಹಣ ನಿಮ್ಮ ಖಾತೆಗೆ ಜಮೆಯಾಗುತ್ತದೆ.

Leave a Comment