ಇನ್ನೂ 10 ದಿನಗಳಲ್ಲಿ ಎಲ್ಲಾ ರೈತರಿಗೆ ಬೆಳೆ ವಿಮೆ ಪರಿಹಾರ ಜಮೆ

Written by Ramlinganna

Updated on:

ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿಯಲ್ಲಿ ಬೆಳೆ ವಿಮೆ ಮಾಡಿಸಿದ ರಾಜ್ಯದ ರೈತರಿಗೆ  ಜೂನ್ ತಿಂಗಳಲ್ಲಿ 441 ಕೋಟಿ ರೂಪಾಯಿ ಬೆಳೆ ವಿಮೆ ಬಿಡುಗಡೆಯಾಗಿದೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ. ಪಾಟೀಲ್ ತಿಳಿಸಿದ್ದಾರೆ.

ಅವರು ಚಿತ್ರದುರ್ಗ ಜಿಲ್ಲೆಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು. ಕಳೆದ ಸಾಲಿನಲ್ಲಿ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ವಿಮೆ ಮಾಡಿದ ರೈತರಿಗೆ ಜೂನ್ ತಿಂಗಳಲ್ಲಿ 441 ಕೋಟಿ ರೂಪಾಯಿ ಬೆಳೆ ವಿಮೆ ಹಣ ಬಿಡುಗಡೆಯಾಗಿದೆ. ಇನ್ನೂ ಬೆಳೆ ವಿಮೆ ಜಮೆಯಾಗದೆ ಉಳಿದಿರುವ ರೈತರಿದೆ ಮುಂದಿನ 10 ದಿನಗಳಲ್ಲಿ ಬೆಳೆ ವಿಮೆ ಹಣ ಜಮೆಯಾಗಲಿದೆ ಎಂದು ಹೇಳಿದರು.

ಎಣ್ಣೆಕಾಳು ಬೆಳೆಗಳು ರೈತರಿಗೆ ಲಾಭಾದಾಯಕವಾಗಲಿದೆ. ದೇಶಾದ್ಯಂತ ಎಣ್ಣೆಕಾಳು ಬೆಳೆಗಳಿಗೆ ಉತ್ತಮ ಬೇಡಿಕೆಯೂ ಇದೆ. ಹಾಗಾಗಿ ರೈತರು ಹೆಚ್ಚಿನ ಪ್ರಮಾಣದಲ್ಲಿ ಎಣ್ಣೆಕಾಳು  ಬೆಳೆ ಬೆಳೆಯಲು ಉತ್ತೇಜನ ನೀಡಬೇಕು. ರೈತರು ಸೋಯಾಬಿನ್ ಹಾಗೂ ಸೂರ್ಯಕಾಂತಿ ಬೆಳೆಗಳನ್ನು ಬೆಳೆಯಬಹುದು ಎಂದರು.

ಚಿತ್ರದುರ್ಗ ಜಿಲ್ಲೆಯಲ್ಲಿ ಆಧಾರ್ ಜೋಡಣೆಯಾಗದ ಕಾರಣ ಜಿಲ್ಲೆಯ 1500 ರೈತರಿಗೆ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ಬೆಳೆ ವಿಮೆ ನೀಡುವುದು ಬಾಕಿಯಿದೆ.  ಇನ್ನೂ 10 ದಿನಗಳಲ್ಲಿ ಎಲ್ಲಾ ರೈತರಿಗೆ ಬೆಳೆ ವಿಮೆ ಪರಿಹಾರ ನೀಡಲಾಗುವುದು. ಎಂದರು.

ಚಿತ್ರದುರ್ಗ ಜಿಲ್ಲೆಯ ರೈತರಿಗೆ 84 ಕೋಟಿ ಬೆಳೆ ವಿಮೆ ಪರಿಹಾರ

ಫಸಲ್ ಬಿಮಾ ಯೋಜನೆಯಡಿ ಮುಂಗಾರು ಹಂಗಾಮಿನಲ್ಲಿ ನೋಂದಣಿಯಾದ ರೈತರಿಗೆ 84 ಕೋಟಿ ರೂಪಾಯಿ ಪರಿಹಾರ ವಿತರಣೆಯಾಗಿದೆ ಎಂದು ಚಿತ್ರದುರ್ಗ ಜಿಲ್ಲೆಯ ಕೃಷಿ ಇಲಾಖೆಯ ಜಂಟಿ ನಿರ್ದೇಶಕರ ಪಿ. ರಮೇಶ ಕುಮಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದರು.

2021 ರಲ್ಲಿ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯ 68216 ರೈತರು ನೋಂದಣಿಯಾಗಿದ್ದರು. ಇದರಲ್ಲಿ 48683 ರೈತರಿಗೆ ಬೆಳೆ ವಿಮೆ ಪರಿಹಾರ ಸಿಕ್ಕಿದೆ. ಆಧಾರ್ ಜೋಡಣೆಯಾಗಿದೆ ಇರುವುದರಿಂದ ಕೆಲವು ರೈತರಿಗೆ ಬೆಳೆ ವಿಮೆ ಪರಿಹಾರ ನೀಡಲು ಸಾಧ್ಯವಾಗಿಲ್ಲ ಎಂದರು.

ಶೇಂಗಾ ಬೆಳೆಗೆ ಅತೀ ಹೆಚ್ಚು ಪರಿಹಾರ ಸಿಕ್ಕಿದೆ. ಈ ಬೆಳೆಗೆ 65 ಕೋಟಿ ರೂಪಾಯಿ ಪರಿಹಾರ ನೀಡಲಾಗಿದೆ. ರಾಗಿ ಬೆಳೆಗೆ 2 ಕೋಟಿ, ಮೆಕ್ಕೆಜೋಳಕ್ಕೆ 9 ಕೋಟಿ, ತೊಗರಿಗೆ 2 ಕೋಟಿ, ಸೂರ್ಯಕಾಂತಿಗೆ 5 ಕೋಟಿ ರೂಪಾಯಿ ಪರಿಹಾರ ವಿತರಿಸಲಾಗಿದೆ ಎಂದು ಹೇಳಿದ್ದರು.

ನಿಮ್ಮ ಜಿಲ್ಲೆಗೆ ಯಾವ ಯಾವ ಬೆಳೆಗಳಿಗೆ ವಿಮೆ ಮಾಡಿಸಬೇಕು? ಇಲ್ಲೇ ಚೆಕ್ ಮಾಡಿ

ನಿಮ್ಮಜಿಲ್ಲೆಗೆ ಯಾವ ಯಾವ ಬೆಳೆಗಳ ವಿಮೆ ಮಾಡಿಸಬಹುದು ಹಾಗೂ ಕೊನೆಯ ದಿನಾಂಕ ಯಾವುದು ಎಂಬುದನ್ನು ರೈತರು ಮೊಬೈಲ್ ನಲ್ಲೇ ಚೆಕ್ ಮಾಡಬಹುದು.

ಹೌದು ರೈತರು, ಈ

https://www.samrakshane.karnataka.gov.in/PublicView/FindCutOff.aspx

ಲಿಂಕ್ ಮೇಲೆ ಕ್ಲಿಕ್ ಮಾಡಿ ಜಿಲ್ಲೆ ಆಯ್ಕೆ ಮಾಡಿಕೊಳ್ಳಬೇಕು. ಆಗ ನಿಮ್ಮ ಜಿಲ್ಲೆಗೆ ಯಾವ ಯಾವ ಬೆಳೆಗೆ ವಿಮೆ ಮಾಡಿಸಬಹುದು ಹಾಗೂ  ಕೊನೆಯ ದಿನಾಂಕ ಯಾವುದು ಎಂಬುದನ್ನು ಚೆಕ್ ಮಾಡಬಹುದು.

ಇನ್ನೂ ಬೆಳೆ ವಿಮೆ ಮಾಡಿಸಿಲ್ಲವೇ? ಗ್ರಾಮ ಒನ್ ಕೇಂದ್ರಗಳಲ್ಲಿ ಬೆಳೆ ವಿಮೆ ಮಾಡಿಸಿ

ರೈತರು ಗ್ರಾಮ ಒನ್ ಕೇಂದ್ರಗಳಲ್ಲಿಯೂ ಈಗ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ಬೆಳೆ ವಿಮೆ ಮಾಡಿಸಬಹುದು.  ಈಹಿಂದೆ ಹತ್ತಿರದ ಬ್ಯಾಂಕುಗಳಲ್ಲಿ ಹಾಗೂ ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ಮಾತ್ರ ರೈತರು ಬೆಳೆ ವಿಮೆ ಮಾಡಿಸುತ್ತಿದ್ದರು. ಆದರೆ ಈಗ ಪ್ರತಿ ಗ್ರಾಪಂಗಳಲ್ಲಿ ಆರಂಭಿಸಲಾದ ಗ್ರಾಮ ಒನ್ ಕೇಂದ್ರಗಳಲ್ಲಿಯೂ ಬೆಳೆ ವಿಮೆ ನೋಂದಣಿ ಮಾಡಿಸಬಹುದು.

1 thought on “ಇನ್ನೂ 10 ದಿನಗಳಲ್ಲಿ ಎಲ್ಲಾ ರೈತರಿಗೆ ಬೆಳೆ ವಿಮೆ ಪರಿಹಾರ ಜಮೆ”

Leave a Comment