Bele vime ಪಾವತಿಸಲು ಇನ್ನೂ ಅವಕಾಶ- ಇಲ್ಲೇ ಚೆಕ್ ಮಾಡಿ

Written by Ramlinganna

Updated on:

Bele vime arji : ಹಿಂಗಾರು ಹಂಗಾಮಿನ ಬೆಳೆ ವಿಮೆ ಹಣ ಪಾವತಿಸಲು ರೈತರಿಗೆ ಇನ್ನೂ ಕಾಲವಕಾಶವಿದೆ. ಈಗಲೇ ಹಿಂಗಾರು ಹಂಗಾಮಿನ ಬೆಳೆಗಳಿಗೆ ವಿಮೆ ಪಾವತಿಸಿ ಬೆಳೆ ವಿಮೆ ಸೌಲಭ್ಯ ಪಡೆಯಬಹುದು? ಅದು ಹೇಗೆ ಅಂದುಕೊಂಡಿದ್ದೀರಾ? ಇಲ್ಲಿದೆ ನೋಡಿ ಮಾಹಿತಿ.

ಹೌದು, ಪ್ರಸಕ್ತ ಸಾಲಿನ ಹಿಂಗಾರು ಹಂಗಾಮಿನ ಬೆಳೆಗಳಿಗೆ ವಿಮೆ ಪಾವತಿಸಲು ಈಗಾಗಲೇ ಅರ್ಜಿ ಆಹ್ವಾನಿಸಲಾಗಿದೆ. ರೈತರು ಯಾವ ಯಾವ ಬೆಳೆಗಳ ವಿಮೆ ಮಾಡಿಸಬಹುದು ಎಂಬುದನ್ನು ಮೊಬೈಲ್ ನಲ್ಲೇ ಚೆಕ್ ಮಾಡಬಹುದು.

ಯಾವ ಯಾವ ಬೆಳೆಗಳಿಗೆ ವಿಮ ಮಾಡಿಸಬಹುದು? ಹೀಗೆ ಚೆಕ್ ಮಾಡಿ

ರೈತರು ತಮ್ಮ ಬಳಿಯಿರುವ ಮೊಬೈಲ್ ನಲ್ಲಿ ಯಾವ ಯಾವ ಬೆಳೆಗಳಿಗೆ ವಿಮೆ ಮಾಡಿಸಬಹುದು ಎಂಬುದನ್ನು ಚೆಕ್ ಮಾಡಲು ಈ

https://samrakshane.karnataka.gov.in/publichome.aspx

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಫಾರ್ಮರ್ಸ್ ಕಾಲಂ ಕೆಳಗಡೆ ಕಾಣುವ Premium calculator ಮೇಲೆ ಕ್ಲಿಕ್ ಮಾಡಬೇಕು. ನಂತರ ತೆರೆದುಕೊಳ್ಳುವ ಪೇಜ್ ನಲ್ಲಿ ನಿಮ್ಮ ಜಿಲ್ಲೆ, ತಾಲೂಕು, ಹೋಬಳಿ, ಗ್ರಾಮ ಆಯ್ಕೆ ಮಾಡಿಕೊಳ್ಳಬೇಕು. ಆಗ ನೀವು ಯಾವ ಯಾವ ಬೆಳೆಗಳಿಗೆ ವಿಮೆ ಮಾಡಿಸಬಹುದು ಎಂಬುದು  ಕ್ರಾಪ್ ಪಕ್ಕದಲ್ಲಿರುವ ಸೆಲೆಕ್ಟ್ ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ಕಾಣುವ ಬೆಳೆಗಳಲ್ಲಿ ನೀವು ಯಾವ ಬೆಳೆಗೆ ವಿಮೆ ಮಾಡಿಸಬಹುದು ಎಂದುಕೊಂಡಿದ್ದೀರೋ? ಅದನ್ನು ಆಯ್ಕೆ ಮಾಡಿಕೊಳ್ಳಬೇಕು. ನಂತರ ಎಕರೆ ನಮೂದಿಸಬೇಕು. ನಂತರ ಗುಂಟೆ ನಮೂದಿಸಬಹುದು. ನಂತರ Show Premium ಮೇಲೆ ಕ್ಲಿಕ್ ಮಾಡಬೇಕು ಆಗ ನೀವು ಎಷ್ಟು  ಬೆಳೆ ವಿಮೆ (Farmer Share) ಪಾವತಿಸಬೇಕು. Sum insured ( ನಿಮಗೆಷ್ಟು ಹಣ ಜಮೆಯಾಗಬಹುದು) ಎಂಬುದು ಕಾಣಿಸುತ್ತದೆ.

ತೋಟಗಾರಿಕೆ ಬೆಳೆ ವಿಮೆ ನೋಂದಣಿ (Bele vime arji) ಗೆ ನವೆಂಬರ್ 15 ಕೊನೆಯ ದಿನ

ಬೀದರ್ ಜಿಲ್ಲೆಯ ರೈತರು  2023-24ನೇ ಸಾಲಿನ ಹಿಂಗಾರು ಹಂಗಾಮಿನ ಮರು ವಿನ್ಯಾಸಗೊಳಿಸಿದ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಡಿ ಹೂಕೋಸು ಮತ್ತು ಹಸಿ ಮೆಣಸಿನ ಕಾಯಿ (ನೀರಾವರಿ) ಬೆಳೆಗಳಿಗೆ ವಿಮೆ ನೋಂದಣಿ ಮಾಡಲು ಆವಕಾಶವಿರುತ್ತದೆ. ಬೀದರ್ ಜಿಲ್ಲೆಯಲ್ಲಿ KSHEMA ವಿಮಾ ಕಂಪನಿ ಆಯ್ಕೆಯಾಗಿರುತ್ತದೆ.

ವಿಮಾ ನೋಂದಣಿಗೆ ನವೆಂಬರ್ 15 ಕೊನೆಯ ದಿನಾಂಕವಾಗಿದೆ. ಬೆಳೆ ಸಾಲ ಪಡೆಯುವ ಮತ್ತು ಬೆಳೆ ಸಾಲ ಪಡೆಯದ ರೈತರು ವಿಮೆ ನೋಂದಾಯಿಸಿಕೊಳ್ಳಲು ಪಹಣಿ, ಆಧಾರ್ ಕಾರ್ಡ್,  ಬ್ಯಾಂಕ್ ಪಾಸ್ ಪುಸ್ತಕದ ನಕಲು ಪ್ರತಿ ಹಾಗೂ ಸ್ವಯಂ ಘೋಷಿತ ದೃಢೀಕರಣಪತ್ರ ಒಳಗೊಂಡಂತೆ ತಮ್ಮ ಸಮೀಪದ ಬ್ಯಾಂಕ್ ಶಾಖೆಗೆ ಸಂಪರ್ಕಿಸಬಹುದು.

ಇದನ್ನೂ ಓದಿ Baragala parihara ಜಮೆಯಾಗಲು ಕೂಡಲೇ ಇಲ್ಲಿ ನಿಮ್ಮ ಹೆಸರು ನೋಂದಾಯಿಸಿ

ಹವಾಮಾನ ಅಂಶಗಳಾದ ಮಳೆ ಪ್ರಮಾಣ, ಗಾಳಿಯ ವೇಗ, ಆರ್ದರತೆ ಇತ್ಯಾದಿ ಮಾಹಿತಿಗಳನ್ನು ಸ್ಥಳೀಯವಾಗಿ ಲಭ್ಯವಿರುವ ಟೆಲಿ ಮೆಟ್ರಿಕ್ ಮಳೆ ಮಾಪನ ಕೇಂದ್ರಗಳಲ್ಲಿ ದಾಖಲಿಸುವ ಅಂಶಗಳ ಆಧಾರದ ಮೇಲೆ ವಿಮೆ ನಷ್ಟ ತೀರ್ಮಾನಿಸಲಾಗುವುದು.

ಬೆಳೆಗಳ ಹೆಸರು, ವಿಮಾ ಮೊತ್ತ ಮತ್ತು ವಿಮಾ ಕಂತಿನ ವಿವರ

ಹೂಕೋಸು ಬೆಳೆಗೆ ಪ್ರತಿ ಹೆಕ್ಟೇರಿಗೆಮೊತ್ತ 62 ಸಾವಿರ ರೂಪಾಯಿ ಜಮೆಯಾಗುವುದು. ಇದಕ್ಕೆ ರೈತರು ವಿಮಾ ಕಂತಿನ ದರ ಶೇ. 5 ಅಂದರೆ 3100 ರೂಪಾಯಿ ಪಾವತಿಸಬೇಕು. ಅದೇ ರೀತಿ ಹಸಿ ಮೆಣಸಿನ ಕಾಯಿ (ನೀರಾವರಿ) ಬೆಳೆಗೆ ಪ್ರತಿ ಹೆಕ್ಟೇರಿಗೆ ವಿಮಾ ಮೊತ್ತ 71 ಸಾವಿರ ರೂಪಾಯಿವರೆಗೆ ಜಮೆಯಾಗುತ್ತದೆ. ಇದಕ್ಕೆ ರೈತರು ಪಾವತಿಸಬೇಕಾದ ವಿಮಾ ಕಂತಿನ ಮೊತ್ತ ಶೇ. 5 ರಷ್ಟು ಅಂದರೆ 3550 ರೂಪಾಯಿ ಇರುತ್ತದೆ ಎಂದು ಬೀದರ್ ತೋಟಗಾರಿಕೆ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Comment