ರೈತರ ಖಾತೆಗೆ ಪರಿಹಾರ ಹಣ ಜಮೆ: ಮೊಬೈಲ್ ನಲ್ಲೇ ಚೆಕ್ ಮಾಡಿ

Written by Ramlinganna

Updated on:

whose crops were damaged ಪ್ರಸಕ್ತ ವರ್ಷ ಮುಂಗಾರು ಹಂಗಾಮಿನಲ್ಲಿ ಸುರಿದ ಅತೀ ಹೆಚ್ಚು ಮಳೆಯಿಂದಾಗಿ ಬೆಳೆ ಹಾನಿಯಾದ ರೈತರ ಖಾತೆಗೆ ಬೆಳೆ ಹಾನಿ ಪರಿಹಾರ ಹಣ ಜಮಯಾಗಿದೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ತಿಳಿಸಿದ್ದಾರೆ.

ಹೌದು, ಹಾವೇರಿ ಜಿಲ್ಲೆಯ ಹಿರೇಕೇರೂರ ಹಾಗೂ ರಟ್ಟಿಹಳ್ಳಿ ತಾಲೂಕಿನ ರೈತರ ಖಾತೆಗೆ ಬೆಳೆ ಹಾನಿ ಪರಿಹಾರ ಜಮೆ ಮಾಡಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಈ ಬಾರಿ ಅತೀ ಹೆಚ್ಚು ಮಳೆಯಾದ ಕಾರಣದಿಂದಾಗಿ ಹಿರೇಕೇರೂರ ಮತ್ತು ರಟ್ಟಿಹಳ್ಳಿ ತಾಲೂಕಿನ ರೈತರ ಬೆಳೆಗಳೆಲ್ಲ ಹಾನಿಯಾಗಿದ್ದು, ಇತ್ತೀಚಿನ ಅತೀವೃಷ್ಟಿಯ ಬೆಳೆ ಹಾನಿಗೆ ಪರಿಹಾರ ನೀಡಲಾಗಿದೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಹೇಳಿದರು.

ಅವರು ಪಟ್ಟಣದ ಗೃಹ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅತೀವೃಷ್ಟಿಯಿಂದ ಬೆಳೆ ಹಾನಿಗೆ ಪರಿಹಾರವನ್ನು ರೈತರ ಖಾತೆಗೆ ನೇರ ವರ್ಗಾವಣೆ ಮೂಲಕ ಪರಿಹಾರ ಹಣವನ್ನು ಡಿಬಿಟಿ ಮೂಲಕ ಜಮಾ ಮಾಡಲಾಗಿದೆ.ಇಲ್ಲಿಯವರೆಗೆ ಹಿರೇಕೇರೂರ ವಿಧಾನಸಭಾ ಕ್ಷೇತ್ರದ ಹಿರೇಕೇರೂರ ತಾಲೂಕಿನಲ್ಲಿ 32 ಸಾವಿರ ಹೆಕ್ಟೇರ್ ಬೆಳೆ ಹಾನಿಗೆ 27.77 ಕೋಟಿ ರೂಪಾಯಿಗಳನ್ನು ಹಾಗೂ ರಟ್ಟೀಹಳ್ಳಿ ತಾಲೂಕಿನ 23950 ಹೆಕ್ಟೇರ್ ಬೆಳೆ ಹಾನಿಗೆ 33.97 ಕೋಟಿ ರೂಪಾಯಿ ರೂಪಾಯಿ ಬೆಳೆ ಹಾನಿ ಪರಿಹಾರ ಹಣ ಜಮೆ ಮಾಡಲಾಗಿದೆ ಎಂದರು.

ಹಿರೇಕೇರೂರ ತಾಲೂಕಿನ 857 ಮನೆಗಳ ಹಾನಿಗೆ 39.59 ಕೋಟಿ ರೂಪಾಯಿ ರಟ್ಟಿ ಹಳ್ಳಿ ತಾಲೂಕಿನ 540 ಮನೆಗಳ ಹಾನಿಗೆ 23.27 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ.

ಇದನ್ನೂ ಓದಿ : ಯಾವ ಬೆಳೆಗೆ ಎಷ್ಚು ವಿಮೆ ಹಣ ಜಮೆ: ಮೊಬೈಲಲ್ಲೇ ಚೆಕ್ ಮಾಡಿ

2022-23ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಹೆಚ್ಚಿನ ಮಳೆಯಿಂದಾಗಿ ಬೆಳೆ ಹಾನಿಯಾದ ನಿಮಿತ್ತ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯ ಮಾರ್ಗಸೂಚಿಯನ್ವರ ಮುಸುಕಿನ ಜೋಳ (ಮಳೆಯಾಶ್ರಿತ) ಮುಸುಕಿನ ಜೋಳ (ನೀರಾವರಿ) ಬೆಳೆಗೆ ವಿಮೆ ಪರಿಹಾರ ಹಣವನ್ನು ಜಮೆ ಮಾಡಲಾಗಿದೆ. ಹಿರೇಕೇರೂರ ತಾಲೂಕಿನ 16201 ಫಲಾನುಭವಿಗಳಿಗೆ 7.15 ಕೋಟಿ ರೂಪಾಯಿ ರಟ್ಟಿಹಳ್ಳಿ ತಾಲೂಕಿನ 16386 ಫಲಾನುಭವಿಗಳಿಗೆ 7.68 ಕೋಟಿ ರೂಪಾಯಿ ಮಧ್ಯಂತರ ಬೆಳೆ ವಿಮೆ ಪರಿಹಾರ ಹಣ ನೀಡಲಾಗಿದೆ.

2022-23ನೇ ಸಾಲಿನ ಮುಂಗಾರು ಹಂಗಾಮಿನ ಸ್ಥಳೀಯ ಗಂಡಾಂತರದಡಿ ಹಿರೇಕೇರೂರ ತಾಲೂಕಿಗೆ 0.22 ಕೋಟಿ ರೂಪಾಯಿ ಮತ್ತು ರಟ್ಟಿಹಳ್ಳಿ ತಾಲೂಕಿನಗೆ 0.28 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

whose crops were damaged ಬೆಳೆ ಹಾನಿ ಪರಿಹಾರ ನಿಮ್ಮ ಖಾತೆಗೆ ಜಮೆಯಾಗಿದೆಯೋ ಇಲ್ಲವೋ? ಹೀಗೆ ಚೆಕ್ ಮಾಡಿ

ರೈತರು ಬೆಳೆ ಹಾನಿ ಪರಿಹಾರ ಹಣ ತಮ್ಮ ಖಾತೆಗೆ ಜಮೆಯಾಗಿದೆಯೋ ಇಲ್ಲವೋ ಎಂಬುದನ್ನು ಮೊಬೈಲ್ನಲ್ಲಿ ಚೆಕ್ ಮಾಡಲು ಈ

https://landrecords.karnataka.gov.in/PariharaPayment/

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಬೆಳೆಹಾನಿ ಪರಿಹಾರ ಜಮೆಯಾಗುವ ಸ್ಟೇಟಸ್ ಪೇಜ್ ತೆರೆದುಕೊಳ್ಳುತ್ತದೆ. ಆಗ ಆಧಾರ್ ಸಂಖ್ಯೆ ಬಾಕ್ಸ್ ಮೇಲೆ ಕ್ಲಿಕ್ ಮಾಡಬೇಕು. ನಂತರ ಕಾಲಾಮಿಟಿ ಟೈಪ್ ನಲ್ಲಿ ಫ್ಲಡ್ ಆಯ್ಕೆ ಮಾಡಿಕೊಂಡು ಸೆಲೆಕ್ಟ್ ಇಯರ್ ಟೈಪ್ ನಲ್ಲಿ 2022-23 ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ನಂತರ 12 ಅಂಕಿಯ ನಿಮ್ಮ ಆಧಾರ್ ಕಾರ್ಡ್ ಸಂಖ್ಯೆ ಹಾಕಬೇಕು. ಇದಾದಮೇಲೆ ಅಲ್ಲಿ ಕಾಣುವ ಕ್ಯಾಪ್ಚ್ಯಾ ಕೋಡ್ ಹಾಕಿ ವಿವರಗಳನ್ನು ಪಡೆಯಲು ಮೇಲೆ ಕ್ಲಿಕ್ ಮಾಡಿದರೆ ಸಾಕು, ನಿಮ್ಮ ಖಾತೆಗೆ ಹಣ ಜಮೆಯಾಗಿದೆಯೋ ಇಲ್ಲವೋ ಎಂಬುದು ಗೊತ್ತಾಗುತ್ತದೆ. ಇದರೊಂದಿಗೆ ಯಾವ ಬ್ಯಾಂಕಿಗೆ, ಯಾವ ಸರ್ವೆ ನಂಬರ್ ಹಾಗೂ ಎಸ್ಟು ಎಕರೆಗೆ ಹಣ ಜಮೆಯಾಗಿದೆ ಎಂಬುದು ಸಹ ಗೊತ್ತಾಗುತ್ತದೆ.

Leave a Comment