ಬೆಳೆ ಹಾನಿ ಪರಿಹಾರಕ್ಕೆ ಡಿಸೆಂಬರ್ 31, ಮನೆ ಹಾನಿ ಪರಿಹಾರಕ್ಕೆ ಜನವರಿ 15 ಗಡವು

Written by By: janajagran

Published on:

ಬೆಳೆಹಾನಿ ಪರಿಹಾರಕ್ಕೆ ಅರ್ಜಿ ಸಲ್ಲಿಸದೆ ಇರುವ ರೈತರಿಗೆ ಸಂತಸದ ಸುದ್ದಿ. ರಾಜ್ಯದಲ್ಲಿ ಈಗಾಗಲೇ ಬೆಳೆಹಾನಿಯಾದ ರೈತರಿಗೆ ಪರಿಹಾರ ಹಣವನ್ನು ರೈತರ ಖಾತೆಗೆ ಜಮೆ ಮಾಡಲಾಗಿದೆ. ಇನ್ನೂ ಕೆಲವು ರೈತರು ಮಾಹಿತಿಯ ಕೊರತೆಯಿಂದಾಗಿ ಅರ್ಜಿ ಸಲ್ಲಿಸಿರಲಿಲ್ಲ. ಅಂತಹ ರೈತರಿಗಾಗಿ ಬೆಳೆಹಾನಿ ಪರಿಹಾರಕ್ಕೆ ಡಿಸೆಂಬರ್ 31ರವರೆಗೆ ಗಡುವು ನೀಡಲಾಗಿದೆ.

ಹೌದು, ರಾಜ್ಯದಲ್ಲಿ ಅತೀವೃಷ್ಟಿ ಮತ್ತು ಪ್ರವಾಹದಿಂದ ನಷ್ಟವಾದ ಬೆಳೆಗೆ ಪರಿಹಾರ ವಿತರಿಸಲು ಡಿಸೆಂಬರ್ ಅಂತ್ಯ, ಮನೆ ಹಾನಿಯನ್ನು ಪರಿಶೀಲಿಸಿ ಸಂತ್ರಸ್ತರಿಗೆ ಪರಿಹಾರ ವಿತರಣೆಗೆ ಜನವರಿ 15ರವರೆಗೆ ಗಡವು ವಿಧಿಸಲಾಗಿದೆ ಎಂದು ಕಂದಾಯ ಸಚಿವರು ವಿಧಾನಸಭೆಗೆ ತಿಳಿಸಿದ್ದಾರೆ.

ಪರಿಹಾರಕ್ಕೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು

ಮಳೆಯಿಂದಾಗಿ ಬೆಳೆ ಹಾನಿಯಾದರೆ ರೈತರು ಗ್ರಾಮ ಪಂಚಾಯತಿ ಕಚೇರಿಗೆ ಅರ್ಜಿ ಸಲ್ಲಿಸಬೇಕು.  ವಿಳಾಸ, ಸರ್ವೆ ನಂಬರ್, ಜಮೀನಿನ ವಿಸ್ತೀರ್ಣ, ಬೆಳೆ ವಿವರ, ಬೆಳೆ ಹಾನಿಯಾದ ವಿಸ್ತೀರ್ಣ, ರೈತರ ವರ್ಗ ಅಂದರೆ ಸಣ್ಣ, ಅತೀ ಸಣ್ಣ ರೈತರು ಎಂದು ನಮೂದಿಸಬೇಕು.  ಆಧಾರ್ ಕಾರ್ಡ್ ಝರಾಕ್ಸ್, ಆಧಾರ್ ಕಾರ್ಡ್ ನಲ್ಲಿರುವಂತೆ ಹೆಸರು, ಬ್ಯಾಂಕ್ ಪಾಸ್ ಬುಕ್ ಝರಾಕ್ಸ್, ಬ್ಯಾಂಕಿನ ಹೆಸರು, ಬ್ಯಾಂಕ್ ಐಎಫ್ಎಸ್ಐ ಕೋಡ್, ಬ್ಯಾಂಕ್ ಬ್ರ್ಯಾಂಚ್, ಮೊಬೈಲ್ ಸಂಖ್ಯೆ ನಮೂದಿಸಿ ಅರ್ಜಿ ಸಲ್ಲಿಸಬೇಕು. ಅರ್ಜಿ ಸ್ವೀಕರಿಸಿದ ಅಧಿಕಾರಿಗಳು ರೈತರ ಎಲ್ಲಾ ವಿವರಗಳನ್ನು ಪರಿಶೀಲಿಸಿ ಪರಿಹಾರ ತಂತ್ರಾಂಶದಲ್ಲಿ ನಮೂದಿಸುತ್ತಾರೆ. ನಂತರ ರೈತರ ಖಾತೆಗೆ ಪರಿಹಾರ ಹಣ ಜಮೆ ಮಾಡಲಾಗುವುದು.

ಪರಿಹಾರ ಹಣ ಜಮೆಯ ಸ್ಟೇಟಸ್ ಸಹ ರೈತರು ಮೊಬೈಲ್ ನಲ್ಲಿಯೇ ನೋಡಿಕೊಳ್ಳಬಹುದು. ಕಳೆದ ವರ್ಷ ಪರಿಹಾರ ಹಣ ಎಷ್ಟು ಜಮೆಯಾಗಿದೆ ಈ ವರ್ಷ ಜಮೆಯಾಗುವ ಸ್ಟೇಟಸ್ ಸಹ ನೋಡಿಕೊಳ್ಳಬಹುದು.

ಮೊಬೈಲ್ ನಲ್ಲೇ ಪರಿಹಾರ ಸ್ಟೇಟಸ್ ನೋಡಿ

ಪರಿಹಾರ ಸ್ಟೇಟಸ್ ನೋಡಲು ಈ  https://landrecords.karnataka.gov.in/PariharaPayment/ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಸರ್ಕಾರದ ಪರಿಹಾರ ವೆಬ್ ಪೇಜ್ ಓಪನ್ ಆಗುತ್ತದೆ ಅಲ್ಲಿ ಆಧಾರ್ ಸಂಖ್ಯೆ ಆಯ್ಕೆ ಮಾಡಿಕೊಳ್ಳಬೇಕು. ನಂತರ Select calamity type ನಲ್ಲಿ Flood ಆಯ್ಕೆ ಮಾಡಿಕೊಳ್ಳಬೇಕು. ಈ ವರ್ಷದ ಸ್ಟೇಟಸ್ ನೋಡಲು 2021-22 ಆಯ್ಕೆ ಮಾಡಿಕೊಳ್ಳಬೇಕು. ಈ ಕಳೆದ ವರ್ಷ ಸ್ಟೇಟಸ್ ನೋಡಲು 2020-21 ಆಯ್ಕೆ ಮಾಡಿಕೊಳ್ಳಬೇಕು.. ಕೆಳಗಡೆ ಆಧಾರ್ ಸಂಖ್ಯೆ ನಮೂದಿಸಿ ಕ್ಯಾಪ್ಚ್ಯಾ ಕೋಡ್ ನಮೂದಿಸಬೇಕು ನಂತರ ವಿವರಗಳನ್ನು ಪಡೆಯಲು ಮೇಲೆ ಕ್ಲಿಕ್ ಮಾಡಿದರೆ ಸಾಕು ಪರಿಹಾರ ಸ್ಟೇಟಸ್ ಮೊಬೈಲ್ ನಲ್ಲಿಯೇ ನೋಡಿಕೊಳ್ಳಬಹುದು.

ಇದನ್ನೂ ಓದಿ: ಪಿಎಂ ಕಿಸಾನ್ ಯೋಜನೆಯ 10ನೇ ಕಂತಿನ ಹಣ ಜಮೆಯಾಗಲು ಮೊಬೈಲ್ ನಲ್ಲಿ ಇ-ಕೆವೈಸಿ ಮಾಡುವುದು ಹೇಗೆ..? ಇಲ್ಲಿದೆ ಮಾಹಿತಿ

ಈ ವರ್ಷದಲ್ಲಿ ಎಷ್ಟು ಎಕರೆಗೆ ಬೆಳೆ ಪರಿಹಾರ ನೀಡಲಾಗಿದೆ. ಯಾವ ಬ್ಯಾಂಕಿನಲ್ಲಿ ಹಣ ಜಮೆಯಾಗಿದೆ. ಯಾವ ಬೆಳೆಗೆ ಪರಿಹಾರ ನೀಡಲಾಗಿದೆ ಎಂಬ ಮಾಹಿತಿ ಕಾಣುತ್ತದೆ.

Leave a comment