ಪಶುಪಾಲನೆ ಇಲಾಖೆ, ಮೀನುಗಾರಿಕೆ ಇಲಾಖೆಗಳ ವತಿಯಿಂದ ವಿವಿಧ ಯೋಜನೆಗಳಡಿಯಲ್ಲಿ ಕುರಿ ಮೇಕೆ ಸಾಕಾಣಿಕೆ ಘಟಕ, ಕಾವ್ ಮ್ಯಾಟ್, ಮೀನುಸಾಕಾಣಿಕೆಗೆ ಸಬ್ಸಿಡಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ.
ಹೌದು, ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖಾ ವತಿಯಿಂದ 2023-24 ನೇ ಸಾಲಿನ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಕೌ ಮ್ಯಾಟ್ ಸೌಲಭ್ಯಕ್ಕಾಗಿ ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಆಯ್ಕೆಯಾಗುವ ಪ್ರತಿ ಭಲಾನುಭವಿಗೆ ಎರಡು ಕೌ ಮ್ಯಾಟ್ ವಿತರಣೆ ಮಾಡಲಾಗುವುದು. ಘಟಕದ ವೆಚ್ಚ 2799 ರೂಪಾಯಿ ಇದ್ದು, ಶೇ. 50 ರಷ್ಟು ಸಹಾಯಧನ ನೀಡಲಾಗುವುದು. ಅಂದರೆ 1399 ರೂಪಾಯಿ ಸಬ್ಸಿಡಿ ನೀಡಲಾಗುವುದು. ರೈತರು ಶೇ. 50 ರಷ್ಟು ಅಂದರೆ 1399 ರೂಪಾಯಿ ಫಲಾನುಭವಿ ವಂತಿಗೆ ಪಾವತಿಸಬೇಕು.
ಹಾವೇರಿ ಜಿಲ್ಲೆಯ ಬ್ಯಾಡಗಿ, ಹಾವೇರಿ, ಹಾನಗಲ್ಲ, ರಾಣಿಬೆನ್ನೂರ ಹಾಗೂ ಸವಣೂರು ತಾಲೂಕಿಗೆ ತಲಾ 50, ಹಿರೇಕೇರೂರ ಹಾಗೂ ರಟ್ಟಿಹಳ್ಳಿ ತಾಲೂಕಿಗೆ ತಲಾ 60 ಹಾಗೂ ಶಿಗ್ಗಾವಿ ತಾಲೂಕಿಗೆ 100 ಮ್ಯಾಟ್ ವಿತರಣೆ ಗುರಿ ನಿಗದಿಪಡಿಸಲಾಗಿದೆ.
ಅರ್ಜಿ ನಮೂನೆಗಳನ್ನು ಹತ್ತಿರದ ಪಶುವೈದ್ಯ ಸಂಸ್ಥೆಗಳಿಂದ ಪಡೆದು ಭರ್ತಿ ಮಾಡಿ ಸಲ್ಲಿಸಬೇಕು. ಆಸಕ್ತ ರೈತರು ಆಧಾರ್ ಕಾರ್ಡ್, ಸ್ಥಳೀಯ ಪಶು ವೈದ್ಯ ಸಂಸ್ಥೆಗಳಿಂದ ಪಡೆದ ಜಾನುವಾರು ದೃಢೀಕರಣ ಪತ್ರ, ಪಡಿತರ ಚೀಟಿ ಹಾಗೂ ಜಾತಿ ಪ್ರಮಾಣ ಪತ್ರ ಸಲ್ಲಿಸಬೇಕು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ಮಾತ್ರ) ಪತ್ರಗಳ ನಕಲು ಪ್ರತಿಗಳೊಂದಿಗೆ ತಾಲೂಕಿನ ಪಶು ಆಸ್ಪತ್ರೆಯಲ್ಲಿ ಆಗಸ್ಟ್ 22 ರೊಳಗೆ ಸಲ್ಲಿಸಬೇಕು.
ಅರ್ಜಿ ನಮೂನೆ ಮತ್ತು ಹೆಚ್ಚಿನ ಮಾಹಿತಿಗಾಗಿ ತಾಲೂಕಿನ ಮುಖ್ಯ ಪಶು ವೈದ್ಯಾಧಿಕಾರಿಗಳು (ಆಡಳಿತ) ಅಥವಾ ಹತ್ತಿರದ ಪಶುವೈದ್ಯ ಸಂಸ್ಥೆಗಳಿಂದ ಸಂಪರ್ಕಿಸಲು ಮತ್ತು ಜಿಲ್ಲೆಯ ರೈತರು ಈ ಯೋಜನೆಯ ಸದುಪಪಯೋಗ ಪಡೆದುಕೊಳ್ಳುವಂತೆ ಪಶುಪಾಲನೆ ಮತ್ತು ಪಶು ವೈದ್ಯ ಸೇವಾ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕುರಿ ಘಟಕ ಸ್ಥಾಪನೆಗೆ ಅರ್ಜಿ ಆಹ್ವಾನ
ಪ್ರಸಕ್ತ ಸಾಲಿನಲ್ಲಿ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದಿಂದ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪ ಯೋಜನೆಯಡಿ ಕುರಿ ಮೇಕೆ ಘಟಕಗಳ ಸ್ಥಾಪನೆಗೆ ಚಿಕ್ಕಮಗಳೂರು ಜಿಲ್ಲೆಯ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.
ಜಿಲ್ಲೆಯಲ್ಲಿನ ನೋಂದಾಯಿತ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘದ ಪರಿಶಿಷ್ಟ ಜಾತಿ, ಪಂಗಡಗಳ ಮಹಿಳಾ ಸದಸ್ಯರಿಗೆ, ಮಹಿಳಾ ಸದಸ್ಯರು, ಇಲ್ಲದಿದ್ದಲ್ಲಿ 18-60 ವರ್ಷ ವಯೋಮಿತಿಯ ಪುರುಷ ಸದಸ್ಯರು ಆಗಸ್ಟ್ 25 ರೊಳಗೆ ಅರ್ಜಿ ಸಲ್ಲಿಸಬಹುದು.
ಇದನ್ನೂ ಓದಿ : ನಿಮ್ಮ ಹೆಸರಿಗೆ ಪ್ರೂಟ್ಸ್ ಐಡಿ ಇದೆಯೋ ಇಲ್ಲವೋ? ಮೊಬೈಲ್ ನಲ್ಲೇ ಚೆಕ್ ಮಾಡಿ
ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಸಹಾಯಕ ನಿರ್ದೇಶಕರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಸಿದ್ದಾರೆ.
ಮೀನುಗಾರಿಕೆಗೆ ಸಹಾಯದನ ನೀಡಲು ಅರ್ಜಿ ಆಹ್ವಾನ
ಮೀನುಗಾರಿಕೆ ಇಲಾಖೆಯ ವತಿಯಿಂದ 2023-24ನೇ ಸಾಲಿನಲ್ಲಿ ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ಹೊಸ ಮೀನು ಕೊಳಗಳ ನಿರ್ಮಾಣ ಮತ್ತು ಹೂಡಿಕೆ ವಜ್ರಗಳು, ಒಳನಾಡಿನಲ್ಲಿ 0.10 ಹೆಕ್ಟೇರ್ ಬಯೋಪ್ಲಾಕ್ ಕೊಳಗಳ ನಿರ್ಮಾಣಕ್ಕೆ ಮಂಡ್ಯ ಜಿಲ್ಲೆಯ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.
ಒಳನಾಡು ಪ್ರದೇಶದಲ್ಲಿ ಎಫ್.ಆರ್.ಪಿ ದೋಣಿಗಳ ಖರೀದಿಗೆ ಸಹಾಯಧನ ಮತ್ತು ಶಾಖ ನಿರೋಧಕ ವಾಹನ (ಇನ್ಸುಲೆಟೆಡ್ ವಾಹನ) ಘಟಕಗಳಿಗೆ ಸಹಾಯಧನ ನೀಡಲು ಆಸಕ್ತ ಹೊಂದಿರುವ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿಯನ್ನು ತಾಲೂಕು ಮಟ್ಟದ ಮೀನುಗಾರಿಕೆ ಸಹಾಯಕ ನಿರ್ದೇಶಕ ಕಚೇರಿಯಿಂದ ಪಡೆದು ಎಲ್ಲಾ ಅಗತ್ಯ ದಾಖಲೆಗಳೊಂದಿಗೆ ಆಗಸ್ಟ್ 22 ರೊಳಗೆ ಸಂಬಂಧಪಟ್ಟ ತಾಲೂಕು ಮಟ್ಟದ ಮೀನುಗಾರಿಕೆ ಸಹಾಯಕ ನಿರ್ದೇಶಕ ಕಚೇರಿಗೆ ಸಲ್ಲಿಸಬಹುದು ಎಂದು ಜಿಲ್ಲಾ ಪಂಚಾಯತ್ ಮೀನುಗಾರಿಕೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೀನು ಸಾಕಾಣಿಕೆ ಘಟಕ ಸ್ಥಾಪನೆಗೆ ಅರ್ಜಿ ಆಹ್ವಾನ
ಮತ್ಸ್ಯ ಸಂಪದ ಯೋಜನೆಯಡಿ ಸಹಾಯಧನಕ್ಕಾಗಿ ಮೀನು ಕೃಷಿ ಕೊಳದ ಕೂಡಿಕೆ ವೆಚ್ಚ ಸಹಾಯ 10.00 ಹೆಕ್ಟೇರ್ ಸಿಹಿ ನೀರು ಬಯೋಪ್ಲಾಕ್ ಘಟಕ ಸ್ಥಾಪನೆಗೆ ಸಹಾಯಧನ ನೀಡಲು ಬಾಗಲಕೋಟೆ ಜಿಲ್ಲೆಯ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ. ಆಗಸ್ಟ್ 25 ರೊಳಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಮೀನುಗಾರಿಕೆ ಉಪ ನಿರ್ದೇಶಕರು ಬಾಗಲಕೋಟೆ ತಾಲೂಕಿನವರು ಮೊ. 8296212520, ಮೀನುಗಾರಿಕೆ ಸಹಾಯಕ ನಿರ್ದೇಶಕ ಬಾದಾಮಿ ತಾಲೂಕಿನವರು ಮೊಬೈಲ್. 8095303104, ಮೀನುಗಾರಿಕೆ ಸಹಾಯಕ ನಿರ್ದೇಶಕ ಜಮಖಂಡಿ ತಾಲೂಕಿನವರು ಮೊ. 7411121617 ಗೆ ಸಂಪರ್ಕಿಸಲು ಕೋರಲಾಗಿದೆ.