ರಾಜ್ಯ ಸರ್ಕಾರದ ಘೋಷಿಸಿದ್ದ ಆರ್ಥಿಕ ಪ್ಯಾಕೇಜ್ ಅಡಿಯಲ್ಲಿ ಕೋವಿಡ್ ಪರಿಹಾರ ಪಡೆಯಲು Seva sindhu ಮೂಲಕ ಅರ್ಜಿ ಸಲ್ಲಿಸಿದವರು ಈಗ ಮನೆಯಲ್ಲಿಯೇ ಕುಳಿತು ತಮ್ಮ ಫೋನ್ ನಲ್ಲಿಯೇ ಅರ್ಜಿಯ ಸ್ಟೇಟಸ್ ನೋಡಬಹುದು. ಹೌದು, ಇದಕ್ಕಾಗಿ ಫಲಾನುಭವಿಗಳು ಯಾವ ಕಚೇರಿಗೂ ಹೋಗಬೇಕಿಲ್ಲ, ಮನೆಯಲ್ಲಿಯೇ ಕುಳಿತು ಸೇವಾ ಸಿಂಧು ಪೋರ್ಟಲ್ ನಲ್ಲಿ ಪರಿಹಾರದ ಸ್ಟೇಟಸ್ ನೋಡಬಹುದು. ಅದು ಹೇಗೆ ಅಂದುಕೊಂಡಿದ್ದೀರಾ.. ಇಲ್ಲಿದೆ ಸಂಪೂರ್ಣ ಮಾಹಿತಿ.

ಕರ್ನಾಟಕ ರಾಜ್ಯ ಸೇರಿದಂತೆ ದೇಶದ ಬಹುತೇಕ ಎಲ್ಲಾ ರಾಜ್ಯಗಳಲ್ಲಿ ಕೊರೋನಾ ಎರಡನೇ ಅಲೆ ತೀವ್ರವಾಗಿ ಹೆಚ್ಚಳವಾಗಿದ್ದರಿಂದ ಕರ್ನಾಟಕದಲ್ಲಿ ಲಾಕ್ಡೌನ್ ವಿಧಿಸಲಾಗಿತ್ತು.  ಈ ಲಾಕ್ಡೌನ್ ನಿಂದ ಹಲವು ಅಸಂಘಟಿತ ವಲಯಗಳಿಗೆ, ರೈತರಿಗೆ, ದಿನಗೂಲಿ ನೌಕರರಿಗೆ, ಬಡವರಿಗೆ ತೀವ್ರ ಸಂಕಷ್ಟವಾಗಿರುವ ಹಿನ್ನೆಲೆಯಲ್ ಸರ್ಕಾರ ಎರಡು ಸಲ ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಿಸಿತ್ತು. ನಂತರ ಆರ್ಥಿಕ ಸಹಾಯಧನ ಪಡೆಯಲು ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಆಹ್ವಾನಿಸಲಾಗಿತ್ತು.

11 ಅಸಂಘಟಿತ ವರ್ಗಗಳ ಕಾರ್ಮಿಕರಿಗೆ 2000 ರೂಪಾಯಿ ಪರಿಹಾರ, ಚಮ್ಮಾರರು, ಚರ್ಮ ಕುಶಲಕರ್ಮಿಗಳಿಗೆ ಚಲನಚಿತ್ರ ಮತ್ತು ಕಿರುತೆರೆ ರಂಗದವರಿಗೆ 2000 ರೂಪಾಯಿ, ಕಟ್ಟಡ ಕಾರ್ಮಿಕರಿಗೆ 3 ಸಾವಿರ ರೂಪಾಯಿ,  ಬೀದಿ ವ್ಯಾಪಾರಿಗಳಇಗೆ 2 ಸಾವಿರ ರೂಪಾಯಿ, ಕಲಾವಿದರಿಗೆ 3 ಸಾವಿರ ರೂಪಾಯಿ,  ಹಣ್ಣು ಮತ್ತು ತರಕಾರಿ ಹಾಗೂ ಹೂವು ಬೆಳೆಗಾರರಿಗೆ ಪ್ರತಿ ಹೆಕ್ಟೇರಿಗೆ 10 ಸಾವಿರದಂತೆ ಸಹಾಯಧನ ನೀಡಲು ಅರ್ಜಿ ಆಹ್ವಾನಿಸಿದ್ದರಿಂದ ಬಹುತೇಕರು ಸೇವಾಸಿಂಧು ಮೂಲಕ ಅರ್ಜಿ ಸಲ್ಲಿಸಿದ್ದಾರೆ.

ಪರಿಹಾರದ ಸ್ಟೇಟಸ್ ನೋಡಲು  https://sevasindhu.karnataka.gov.in/Sevasindhu/Kannada?ReturnUrl=%2F

ಈ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು ಆಗ ಸೇವಾ ಸಿಂಧು ವೆಬ್ ಪೇಜ್ ಓಪನ್ ಆಗುತ್ತದೆ.  ಮೇಲ್ಗಡೆಯಿರುವ ಪರಿಹಾರ ನಿಧಿ ಅರ್ಜಿಯ ಸ್ಥಿತಿಯನ್ನು ತಿಳಿಯಿರಿ -2021 ಮೇಲೆ ಕ್ಲಿಕ್ ಮಾಡಬೇಕು. ಆಗ ಟ್ರ್ಯಾಕ್ ಯುವರ್ ಅಪ್ಲಿಕೇಷನ್ ಸ್ಟೇಟಸ್ ಫಾರ್ ಕೋವಿಡ್-19 ರಿಲೀಫ್ ಫಂಡ್ -2021 ಕೆಳಗಡೆಯಿರುವ ಪ್ಲೀಸ್ ಸೆಲೆಕ್ಟ್ ದ ಡಿಬಿಟಿ ಸ್ಕೀಮ್ ಕಾಲಮ್ ನಲ್ಲಿ ಕ್ಲಿಕ್ ಮಾಡಬೇಕು.  ಇಲ್ಲಿ 11 ಅಸಂಘಟಿತ ವರ್ಗಗಳ ಕಾರ್ಮಿಕರು, ಚರ್ಮ ಕುಶಲಕರ್ಮಿಗಳಿಗೆ ಕಲಾವಿದರು, ಕಟ್ಟಡ ಕಾರ್ಮಿಕರು ಮತತ್ ಬೀದಿ ವ್ಯಾಪಾರಿಗಳು ಈ ಐದರಲ್ಲಿ ನೀವು ಯಾವ ಗುಂಪಿಗೆ ಸೇರಿದವರೆಂಬುದನ್ನು ಸೆಲೆಕ್ಟ್ ಮಾಡಿಕೊಳ್ಳಬೇಕು. ಉದಾಹರಣೆಗೆ ನೀವು ಅಸಂಘಟಿತ ವರ್ಗಗಳ ಕಾರ್ಮಿಕರಾಗಿದ್ದರೆ one time assistance to 11 categories or unorganised workers ಸೆಲೆಕ್ಟ್ ಮಾಡಬೇಕು. ನಂತರ ನಿಮ್ಮ ಆಧಾರ್ ನಂಬರ್ ನಮೂದಿಸಿ ಸಬ್ಮಿಟ್ ಮೇಲೆ ಕ್ಲಿಕ್ ಮಾಡಿದ ನಂತರ ಸ್ಟೇಟಸ್ ನೋಡಿಕೊಳ್ಳಬಹುದು.

2 Replies to “ಕೋವಿಡ್ ಪರಿಹಾರ ನಿಧಿಯ ಹಣ ಜಮೆಯಾಗಿರುವ ಸ್ಟೇಟಸ್ ಚೆಕ್ ಮಾಡಲು ಇಲ್ಲಿ ಕ್ಲಿಕ್ ಮಾಡಿ”

Leave a Reply

Your email address will not be published. Required fields are marked *