ಆಕಾರ್ ಬಂದ್ ಪ್ರಕಾರ ನಿಮಗೆಷ್ಟು ಜಮೀನಿದೆ? ಇಲ್ಲೇ ಚೆಕ್ ಮಾಡಿ

Written by Ramlinganna

Updated on:

Check your land as for akarband ರೈತರು ತಮ್ಮ ಜಮೀನಿನ ಸರ್ವೆ ನಂಬರಿನ ಆಕಾರ್ ಬಂದ್ ಮೊಬೈಲ್ ನಲ್ಲೇ ವೀಕ್ಷಿಸಬಹುದು. ಹೌದು, ರೈತರ ಬಳಿ ಒಂದು ಸ್ಮಾರ್ಟ್ ಫೋನ್ ಇದ್ದರೆ ಸಾಕು, ಕ್ಷಣಾರ್ಧದಲ್ಲಿ ಜಮೀನಿನ ಆಕಾರ್ ಬಂದ್ ನ್ನು ಮೊಬೈಲ್ ನಲ್ಲೇ ನೋಡಬಹುದು.

ಏನಿದು ಆಕಾರ್ ಬಂದ್?

ಜಮೀನು ವಿಧಗಳು, ಸರ್ವೆ ನಂಬರ್, ವಿಸ್ತೀರ್ಣ ಹಾಗೂ ನಿಗದಿಪಡಿಸಿದ ದರಗಳು ಸೇರಿದಂತೆ ಒಟ್ಟು 29 ಕಾಲಂಗಳನ್ನು ಆಕಾರ್ ಬಂದ್ ಹೊಂದಿರುತ್ತದೆ. ಜಮೀನಿನ ಅಂತಿಮ ವಿಸ್ತೀರ್ಣ ವಿರುವ ದಾಖಲೆಯನ್ನು ಆಕಾರ್ ಬಂದ್ ಎನ್ನುವರು.  ರೈತರಿಗೆ ಆಕಾರ್ ಬಂದ್ ಪ್ರಮುಖ ದಾಖಲೆಯಾಗಿರುತ್ತದೆ. ಇದು ಪಹಣಿಗಿಂತ ಸ್ವಲ್ಪ ಭಿನ್ನವಾಗಿರುತ್ತದೆ. ಸಾಗುವಳಿ ಜಮೀನು ಹಾಗೂ ಖರಾಬು ಜಮೀನು ಎಸ್ಟಿದೆ ಎಂಬ ಮಾಹಿತಿ ಇಲ್ಲಿ ಸಿಗುತ್ತದೆ.

Check your land as for akarband ಆಕಾರ್ ಬಂದ್ ಪ್ರತಿಯನ್ನು ಮೊಬೈಲ್ ನಲ್ಲಿ ನೋಡುವುದು ಹೇಗೆ?

ರೈತರು ಆಕಾರ್ ಪ್ರತಿಯನ್ನು ಮೊಬೈಲ್ ನಲ್ಲಿ ನೋಡಲು ಈ

https://landrecords.karnataka.gov.in/service139/

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.  ಆಗ ಕಂದಾಯ ಇಲಾಖೆಯ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ರೈತರು ಯಾವ ಜಿಲ್ಲೆಗೆ ಸಂಬಂಧಿಸಿದ್ದಾರೋ ಆ ಜಿಲ್ಲೆ ಆಯ್ಕೆ ಮಾಡಿಕೊಳ್ಳಬೇಕು. ಇದಾದನಂತರ ತಮ್ಮ ತಾಲೂಕು ಆಯ್ಕೆ ಮಾಡಿಕೊಳ್ಳಬೇಕು. ತಾಲೂಕು ಆಯ್ಕೆ ಮಾಡಿಕೊಂಡ ನಂತರ ಹೋಬಳಿ ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ನಂತರ ಗ್ರಾಮ ಆಯ್ಕೆ ಮಾಡಿಕೊಂಡು ಯಾವ ಸರ್ವೆ ನಂಬರಿನ ಆಕಾರ್ ಬಂದ್ ನೋಡಬೇಕೆಂದುಕೊಂಡಿದ್ದಾರೋ ಆ ಸರ್ವೆ ನಂಬರ್ ಆಯ್ಕೆ ಮಾಡಿಕೊಳ್ಳಬೇಕು.

ಸರ್ನೋಕ್ ನಲ್ಲಿ *  ನಮೂದಿಸಬೇಕು. ಹಿಸ್ಸಾನಂಬರ್ ನಲ್ಲಿ * ನಮೂದಿಸಬೇಕು. ಇದಾದ ಮೇಲೆ view Akarband ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮ್ಮ ಮುಂದೆ 29 ಕಾಲಂಗಳಿರುವ ಆಕಾರ್ ಬಂದ್ ಪೇಜ್ ತೆರೆದುಕೊಳ್ಳುತ್ತದೆ.

ಇದನ್ನೂ ಓದಿ ನಿಮ್ಮ ಜಮೀನಿನ ಅಕ್ಕಪಕ್ಕ ಯಾರಿಗೆಷ್ಟು ಜಮೀನಿದೆ? ಚೆಕ್ ಮಾಡಿ

ಆಕಾರ್ ಬಂದ್ ನಲ್ಲಿ ಗ್ರಾಮ, ಹೋಬಳಿ, ತಾಲೂಕು, ಎಷ್ಟು ಹೆಕ್ಟೇರ್, ಎಕರೆ ಹಾಗೂ ಗುಂಟೆ ಜಮೀನು ಸಾಗುವಳಿ ಜಮೀನು ಇದೆ ಎಂಬ ಮೆಸೆಜ್ ಕಾಣುತ್ತದೆ. ಅದರ ಕೆಳಗಡೆ ಸರ್ವೆ ನಂಬರ್, ಹಿಸ್ಸಾ ನಂಬರ್, ಜಮೀನಿನ ಒಟ್ಟು ವಿಸ್ತೀರ್ಣ, ಖರಾಬು ಜಮೀನು ಎಷ್ಟು ಎಕರೆ ಅಥವಾ ಗುಂಟೆಯಲ್ಲಿದೆ ಎಂಬ ಮಾಹಿತಿಯೂ ಇರುತ್ತದೆ.

ಇದರೊಂದಿಗೆ ಖುಷ್ಕಿ ಜಮೀನು. ತರಿ ಜಮೀನು ಬಾಗಾಯ್ತು ಜಮೀನು ಎಷ್ಟಿದೆ ಎಂಬುದರ ಸಂಪೂರ್ಣ ಮಾಹಿತಿ ಈ ಆಕಾರ್ ಬಂದ್ ನಲ್ಲಿ ಸಿಗುತ್ತದೆ.  ಕೊನೆಗೆ ಈ ಸರ್ವೆ ನಂಬರಿನಲ್ಲಿ ಒಟ್ಟು ಸಾಗುವಳಿ ವಿಸ್ತೀರ್ಣ ಎಷ್ಟಿದೆ ಎಂಬ ಮಾಹಿತಿ ಇರುತ್ತದೆ.

ಆಕಾರ್ ಬಂದ್ ನಲ್ಲಿ ಯಾರ ಹೆಸರಿಗೆ ಎಷ್ಟು ಎಕರೆ ಜಮೀನಿದೆ ಚೆಕ್ ಮಾಡಿ

ಆಕಾರ್ ಬಂದ್ ಜಮೀನಿನಲ್ಲಿ ಯಾರಿಗೆ ಎಷ್ಟು ಎಕರೆ ಜಮೀನಿದೆ ಎಂಬುದನ್ನು ಚೆಕ್ ಮಾಡಲು ಈ

https://landrecords.karnataka.gov.in/Service2/

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಭೂಮಿ ಲ್ಯಾಂಡ್ ರಿಕಾರ್ಡ್ ಪೇಜ್ ಓಪನ್ ಆಗುತ್ತದೆ. ಅಲ್ಲಿ ರೈತರು ಜಿಲ್ಲೆ, ತಾಲೂಕು, ಹೋಬಳಿ, ಗ್ರಾಮ, ಸರ್ವೆ ನಂಬರ್ ಆಯ್ಕೆ ಮಾಡಿಕೊಂಡು ಗೋ ಮೇಲೆ ಕ್ಲಿಕ್ ಮಾಡಬೇಕು.

ಇದಾದನಂತರ ಸರ್ನೋಕ್ ನಲ್ಲಿ ಸ್ಟಾರ್ ಹಿಸ್ಸಾನಂಬರಿನಲ್ಲಿ ಸ್ಟಾರ್ ಆಯ್ಕೆ ಮಾಡಿಕೊಂಡು  ಪಿರಿಯಡ್ ನಲ್ಲಿ ಕೆಲಗಡೆ ಕಾಣುವ ಅವಧಿ ಆಯ್ಕೆ ಮಾಡಿಕೊಳ್ಳಬೇಕು. ಇದನಂತರ year ನಲ್ಲಿ 2022-2023 ಆಯ್ಕೆ ಮಾಡಿಕೊಂಡು ಫೆಟ್ಚ್ ಡಿಟೇಲ್ ಮೇಲೆ ಕ್ಲಿಕ್ ಮಾಡಬೇಕು. ಇಲ್ಲಿ ಜಮೀನು ಮಾಲಿಕರ ಹೆಸರು, ಅವರ ಹೆಸರಿಗೆ ಎಷ್ಟು ಎಖರೆ ಜಮೀನಿದೆ ಹಾಗೂ ಖಾತಾ ನಂಬರ್ ಸಹ ಕಾಣುತ್ತದೆ.

ವೀವ್ ಮೇಲೆ ಕ್ಲಿಕ್ ಮಾಡಬೇಕು. ಆಗ ಪಹಣಿ ಓಪನ್ ಆಗುತ್ತದೆ. ಇಲ್ಲಿಒಟ್ಟು ಸಾಗುವಳಿ ಜಮೀನು ಎಷ್ಟಿದೆ  ಎಂಬ ಮಾಹಿತಿ ಹಾಗೂ ಯಾರ ಹೆಸರಿಗೆ ಎಷ್ಟು ಜಮೀನಿದೆಎಂಬ ಮಾಹಿತಿ ಕಾಣುತ್ತದೆ. ಸಾಲ ತೆಗೆದುಕೊಂಡಿದ್ದರೆ ಯಾವ ಬ್ಯಾಂಕಿನಿಂದ ಸಾಲ ಪಡೆದಿದ್ದಾರೆ ಎಂಬ ಮಾಹಿತಿಯೂ ಇರುತ್ತದೆ.

Leave a Comment