Aadhaar pan card link ಆಗಿದೆಯೇ? ಇಲ್ಲೇ ಚೆಕ್ ಮಾಡಿ

Written by Ramlinganna

Updated on:

Aadhaar pan card link ಆಗಿದೆಯೋ ಇಲ್ಲವೋ ಎಂಬುದನ್ನು ಸಾರ್ವಜನಿಕರು ಈಗ ತಮ್ಮ ಬಳಿಯಿರುವ ಮೊಬೈಲ್ ನಲ್ಲೇ ಚೆಕ್ ಮಾಡಬಹುದು. ಹೌದು, ಮನೆಯಲ್ಲಿಯೇ ಕುಳಿತು ಚೆಕ್ ಮಾಡಬಹುದು.

ಹೌದು, ಆಧಾರ್ ಕಾರ್ಡ್ ನಂಬರಿಗೆ ಪ್ಯಾನ್ ಕಾರ್ಡ್ ಲಿಂಕ್ ಆಗಿರುವುದನ್ನು ಸುಲಭವಾಗಿ ಮೊಬೈಲ್ ನಲ್ಲೇ ಚೆಕ್ ಮಾಡಬಹುದು. ಇದಕ್ಕಾಗಿ ಯಾರ ಸಹಾಯವೂ ಬೇಕಿಲ್ಲ.  ಈ ಹಿಂದೆ ಆಧಾರ್ ಪ್ಯಾನ್ ಕಾರ್ಡ್ ಲಿಂಕ್ ಹಲವಾರು ಸಲ ಲಿಂಕ್ ಮಾಡಲು ಸಮಯ ನೀಡಲಾಗಿತ್ತು.  ನಿಗದಿತ ಅವಧಿಯೊಳಗೆ ಗೆ ಲಿಂಕ್ ಮಾಡದಿದ್ದರೆ ನಿಮ್ಮ ಪ್ಯಾನ್ ಕಾರ್ಡ್ ನಿಷ್ಕ್ರೀಯವಾಗಲಿದೆ. ಮುಂದಿನ ದಿನಗಳಲ್ಲಿ ಬ್ಯಾಂಕಿಂಗ್ ವ್ಯವಹಾರ ಸೇರಿದಂತೆ ಎಲ್ಲಾ ಆರ್ಥಿಕ ಚಟುವಟಿಕೆಗಳಿಗೆ ಸಮಸ್ಯೆಯಾಗಲಿದೆ. ಎಂದು ಎಚ್ಚರಿಕೆಯನ್ನು ಸಹ ನೀಡಲಾಗಿತ್ತು.

ಪ್ಯಾನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡದಿದ್ದರೆ ಮುಂದಿನ  ದಿನಗಳಲ್ಲಿ ಲಿಂಕ್ ಮಾಡಲು ಸುಮಾರು 10 ಸಾವಿರ ರೂಪಾಯಿಯವರೆಗೆ ಖರ್ಚಾಗಲಿದೆ ಎಂಬ ಸೂಚನೆ ಸಲ ನೀಡಲಾಗಿತ್ತು. ಆದರೂ ಸಹ ಹಲವಾರು ಜನ ಲಿಂಕ್ ಮಾಡಿದ್ದಿಲ್ಲ. ಈಗ ಯಾರು ಲಿಂಕ್ ಮಾಡಿದ್ದಾರೋ ಅವರು ಚೆಕ್ ಮಾಡಿಕೊಳ್ಳಬಹುದು. ಅದು ಹೇಗೆ ಅಂದುಕೊಂಡಿದ್ದೀರಾ? ಇಲ್ಲಿದೆ ಮಾಹಿತಿ

Aadhaar pan card link ಆಗಿದೆಯೇ? ಮೊಬೈಲ್ ನಲ್ಲೇ ಸ್ಟೇಟಸ್ ಚೆಕ್ ಮಾಡಿ

ನಿಮ್ಮ ಆಧಾರ್ ಕಾರ್ಡಿಗೆ ಪ್ಯಾನ್ ಕಾರ್ಡ್ ಲಿಂಕ್ ಆಗಿದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಲು ಈ

https://eportal.incometax.gov.in/iec/foservices/#/pre-login/link-aadhaar-status

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಲಿಂಕ್ ಆಧಾರ್ ಸ್ಟೇಟಸ್ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನಿಮ್ಮ ಪ್ಯಾನ್ ಕಾರ್ಡ್  ನಂಬರ್ ಹಾಕಬೇಕು. ಅದರ ಕೆಳಗಡೆ ಆಧಾರ್ ಕಾರ್ಡ್ ನಂಬರ್ ಹಾಕಬೇಕು. ನಂತರ View Link Aadhaar status ಮೇಲೆ ಕ್ಲಿಕ್ ಮಾಡಬೇಕು.  ನೀವು ಆಧಾರ್ ಕಾರ್ಡಿಗೆ ಪ್ಯಾನ್ ಕಾರ್ಡ್ ಲಿಂಕ್ ಆಗಿದ್ದರೆ Your Pan card is already linked to given aadhaar ಎಂಬ ಮೆಸೆಜ್ ಬರುತ್ತದೆ. ಅಳ್ಲಿ ಪ್ಯಾನ್ ಕಾರ್ಡ್ ನ ಮೊದಲ ಎರಡು ಅಕ್ಷರ ಕೊನೆಯ ಎರಡು ಅಕ್ಷ ಹಾಗೂ ಆಧಾರ್ ಕಾರ್ಡಿನ ಮೊದಲ ಎರಡು ಅಕ್ಷರ ಹಾಗೂ ಕೊನೆಯ ಎರಡು ಅಕ್ಷರ ಕಾಣಿಸುತ್ತದೆ.

Aadhaar pan card link ಮಾಡುವುದು ಹೇಗೆ?

ಸಾರ್ವಜನಿಕರು ಮನೆಯಲ್ಲಿಯೇ ಕುಳಿತು ತಮ್ಮ ಆಧಾರ್ ಕಾರ್ಡಿಗೆ ಪ್ಯಾನ್ ಕಾರ್ಡನ್ನು ಲಿಂಕ್ ಮಾಡಬಹುದು.ಹೌದು, ಲಿಂಕ್ ಮಾಡಲು ಎರಡು ವಿಧಾನಗಳಿವೆ. ಆಧಾರ್ ಮತ್ತು ಪ್ಯಾನ್ ನಂಬರ್ ಗಳನ್ನು ಲಿಂಕ್ ಮಾಡಲು ಆದಾಯ ತೆರಿಗೆ ಇಲಾಖೆಯ ಎರಡು ವಿಧಾನಗಳನ್ನು ನೀಡಿದೆ. ಇದರ ಮೂಲಕ ಆಧಾರ್ ಮತ್ತು ಪ್ಯಾನ್ ಜೋಡಣೆ ಮಾಡಬಹುದು.

ಮೊದಲಿಗೆ ಆದಾಯ ತೆರಿಗೆ ಇಲಾಖೆಯ ಇ ಫೈಲಿಂಗ್ ಪೋರ್ಟಲ್ ನ ಈ

https://eportal.incometax.gov.in/iec/foservices/#/pre-login/bl-link-aadhaar

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.ಅದರಲ್ಲಿ ನಿಮ್ಮ ಪ್ಯಾನ್ ಹಾಗೂ ಆಧಾರ್ ಕಾರ್ಡ್ ನ್ನು ನಮೂದಿಸಿ ವ್ಯಾಲಿಡೆಟ್ ಮೇಲೆ ಕ್ಲಿಕ್ ಮಾಡಿ ಮುಂದೆ ಕೇಳಲಾದ ಅಗತ್ಯ ಮಾಹಿತಿಗಳನ್ನು ಭರ್ತಿ ಮಾಡಿ ಪ್ಯಾನ್ ಆಧಾರ್ ಕಾರ್ಡ್ ಲಿಂಕ್ ಮಾಡಬಹುದು.

ನಿಮ್ಮ ಪ್ಯಾನ್ ಕಾರ್ಡ್ ನಿಷ್ಕ್ರೀಯಗೊಂಡರೆ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಮುಂದಿನ ದಿನಗಳಲ್ಲಿ ಮ್ಯುಚವಲ್ ಫಂಡ್ ಹಾಗೂ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಸಮಸ್ಯೆಯಾಗಬಹುದು. ಆದಾಯ ತೆರಿಗೆ ರಿಟರ್ನ್ ಫೈಲ್ ಸಲ್ಲಿಸಲು ಸಮಸ್ಯೆಯಾಗುತ್ತದೆ. ಬ್ಯಾಂಕಿನಲ್ಲಿ  50 ಸಾವಿರಕ್ಕಿಂತ ಹೆಚ್ಚಿನ ಹಣ ವ್ಯವಹಾರಕ್ಕೆ ಸಮಸ್ಯೆಯಾಗಬಹುದು. ಕ್ರೆಡಿಟ್ ಕಾರ್ಡ್ ಪಡೆಯಲು ಆಗುವುದಿಲ್ಲ. ಬ್ಯಾಂಕ್ ನಲ್ಲಿ ಸಾಲ ಪಡೆಯಲು ಸಮಸ್ಯೆಯಾಗುತ್ತದೆ.  ಜೂನ್ 30 ರೊಳಗೆ ನಿಮ್ಮ ಪ್ಯಾನ್ ಕಾರ್ಡ್ ಆಧಾರ್ ಕಾರ್ಡ್ ಗೆ ಲಿಂಕ್ ಮಾಡಿಸಿಕೊಳ್ಳಬಹುದು.

ಇದನ್ನೂ ಓದಿ : Baragala parihara ನನ್ನ ಖಾತೆಗೆ ಜಮೆ: ನಿಮಗೆಷ್ಟು ಜಮೆ? ಚೆಕ್ ಮಾಡಿ

Leave a Comment