ಈ ಲಿಸ್ಟ್ ನಲ್ಲಿರುವವರಿಗೆ ಮಾತ್ರ ಮತಹಾಕುವ ಹಕ್ಕು- ನಿಮ್ಮ ಹೆಸರು ಇದೆಯೇ? ಇಲ್ಲೇ ಚೆಕ್ ಮಾಡಿ

Written by Ramlinganna

Published on:

ಮತದಾನದ ಚುನಾವಣಾ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೋ ಇಲ್ಲವೋ ಎಂಬುದನ್ನು ಮೊಬೈಲ್ ನಲ್ಲೇ ಚೆಕ್ ಮಾಡಬಹುದು. ಹೌದು, ನಿಮ್ಮ ಬಳಿಯಿರುವ ಫೋನ್ ನಲ್ಲಿ ಚೆಕ್ ಮಾಡಬಹುದು. ಅದು ಹೇಗೆ ಅಂದುಕೊಂಡಿದ್ದೀರಾ ಇಲ್ಲಿದೆ ಮಾಹಿತಿ.

ಚುನಾವಣೆಗೆ ಮತ ಚಲಾಯಿಸಲು ಇನ್ನೂ ಕೇವಲ 6 ದಿನ ಉಳಿಯಿತು. ಈಗಾಗಲೇ ವಿವಿಧ ಪಕ್ಷಗಳು ತಮ್ಮ ಪಕ್ಷಕ್ಕೆ ಮತ ಚಲಾಯಿಸಲು ಹಗಲು ರಾತ್ರಿ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾರೆ. ಆದರೆ  ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರಿದ್ದರೆ ಮಾತ್ರ ಮತ ಚಲಾಯಿಸುವ ಹಕ್ಕಿದೆ. ಒಂದು ವೇಳೆ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರಿಲ್ಲದಿದ್ದರೆ ನಿಮಗೆ ಮತ ಚಲಾಯಿಸಲು ಅವಕಾಶ ನೀಡುವ ಸಾಧ್ಯತೆ ತುಂಬಾ ಕಡಿಮೆ ಇರುತ್ತದೆ. ಹಾಗಾಗಿ ನಿಮ್ಮ ಹೆಸರನ್ನು ಈಗಲೇ ಚೆಕ್ ಮಾಡಿಕೊಳ್ಳಬಹುದು.

ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಚೆಕ್ ಮಾಡಿ (How to check voter name in list)

ಸಾರ್ವಜನಿಕರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಚೆಕ್ ಮಾಡಲು ಈ

https://electoralsearch.in/#!#resultArea

ಲಿಂಕ್ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ. ಅಲ್ಲಿ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಚೆಕ್ ಮಾಡುವ ಪೇಜ್ ತೆರೆದುಕೊಳ್ಳುತ್ತದೆ.  ಅಲ್ಲಿ ನಿಮ್ಮ ಹೆಸರು, ತಂದೆಯ/ಪತಿಯ ಹೆಸರು ಬರೆಯಬೇಕು.  ನಿಮ್ಮ ವಯಸ್ಸು ಸೆಲೆಕ್ಟ್ ಮಾಡಿಕೊಳ್ಳಬೇಕು. ಲಿಂಗ, ರಾಜ್ಯ, ಜಿಲ್ಲೆ ಆಯ್ಕೆ ಮಾಡಿಕೊಳ್ಳಬೇಕು. ತಾಲೂಕು ಅಂದರೆ ನಿಮ್ಮ ಅಸೆಂಬ್ಲಿ ಕ್ಷೇತ್ರಆಯ್ಕೆ ಮಾಡಿಕೊಳ್ಳಬೇಕು. ನಂತರ ಅಲ್ಲಿಕಾಣುವ ಕ್ಯಾಪ್ಚ್ಯಾ ಕೋಡ್ ಆಯ್ಕ ಮಾಡಿಕೊಂಡು ಸರ್ಚ್  ಮೇಲೆಕ್ಲಿಕ್ ಮಾಡಬೇಕು. ಆಗ ನಿಮ್ಮ ಹೆಸರು ಮತದಾರರ ಪಟ್ಟಿಯಲ್ಲಿದೆಯೋ ಇಲ್ಲವೋ ಎಂಬುದು ಕಾಣಿಸುತ್ತದೆ.  ಅಲ್ಲಿ ನಿಮ್ಮ ಹೆಸರು ವಯಸ್ಸು, ತಂದೆಯ ಹೆಸರು ಕಾಣಿಸುತ್ತದೆ. ನಿಮ್ಮ ಪೋಲಿಂಗ್ ಸ್ಟೇಶನ್ ಸಹ ಕಾಣಿಸುತ್ತದೆ.

ವೀವ್ ಡಿಟೇಲ್ ಮೇಲೆ ಕ್ಲಿಕ್ ಮಾಡಿದರೆ ಸಾಕು, ನಿಮ್ಮ ಅಸೆಂಬ್ಲಿ ಕ್ಷೇತ್ರದ ಸಂಖ್ಯೆ, ಜಿಲ್ಲೆ. ನಿಮ್ಮ ಹೆಸರು, ತಂದೆಯ ಹೆಸರು, ಕಾಣಿಸುತ್ತದೆ. ಅದರ ಕೆಳಗಡೆ ಮತದಾರರ ಸಿರಿಯಲ್ ನಂಬರ್ ಸಹ ಚೆಕ್ ಮಾಡಬಹುದು.

ಸಾರ್ವಜನಿಕರು ತಮ್ಮ ವೋಟರ್ ಐಡಿಗೆ ಆಧಾರ್ ಕಾರ್ಡ್ ಲಿಂಕ್ ಆಗಿದೆಯೋ ಇಲ್ಲವೋ ಎಂಬದನ್ನು ಮೊಬೈಲ್ ನಲ್ಲೇ ಚೆಕ್ ಮಾಡಬಹುದು. ಹೌದು, ಅತೀ ಸುಲಭವಾಗಿ ಸಾರ್ವಜನಿಕರು ತಮ್ಮ ಮೊಬೈಲ್ ನಲ್ಲೇ ಚೆಕ್ ಮಾಡಿಕೊಳ್ಳಬಹುದು.

ಇದನ್ನೂ ಓದಿ ಈ ಲಿಸ್ಟ್ ನಲ್ಲಿರುವ ರೈತರಿಗೆ ಪಿಎಂ ಕಿಸಾನ್ ಹಣ ಜಮೆಯಾಗಲ್ಲ ಲಿಸ್ಟ್ ನಲ್ಲಿ ನಿಮ್ಮ ಹೆಸರಿದೆಯೇ ಇಲ್ಲೇ ಚೆಕ್ ಮಾಡಿ

ತಂತ್ರಜ್ಞಾನ ಬೆಳೆದಂತೆ ಸಾರ್ವಜನಿಕರಿಗೆ ಬೇಕಾಗುವ ದಾಖಲೆಗಳನ್ನು ಮೊಬೈಲ್ ನಲ್ಲೇ ಡೌನ್ಲೋಡ್ ಮಾಡಿಕೊಳ್ಳುವ ವ್ಯವಸ್ಥೆ ಮಾಡಲಾಗಿದೆ. ಇದರೊಂದಿಗೆ ದಾಖಲೆಗಳನ್ನು ಪರಿಶೀಲಿಸುವುದು, ತಿದ್ದುಪಡಿ ಮಾಡುವುದನ್ನು ಸಹ ಮಾಡಲಾಗಿದೆ.

ಮೇ 10 ರಂದು ನಡೆಯಲಿದೆ ಕರ್ನಾಟಕದ ವಿಧಾನಸಭಾ ಚುನಾವಣೆ ( On may 10 th Karnataka assembly Election)

ಕರ್ನಾಟಕದಲ್ಲಿ ಚುನಾವಣೆಗೆ ಇನ್ನೇನು ಒಂದೇ ವಾರ ಉಳಿದಿದೆ.  ಚುನಾವಣೆಯಲ್ಲಿ ಮತ ಚಲಾಯಿಸುವ ಹಕ್ಕು ಪ್ರತಿಯೊಬ್ಬರಿಗಿದೆ. ಹಾಗಾಗಿ ಮೇ 10 ರಂದು ಮತ ಚಲಾಯಿಸುವುದನ್ನು ತಪ್ಪಿಸಿಕೊಳ್ಳಬಾರದು. ರಾಜ್ಯದ ಜನಪ್ರತಿನಿಧಿಗಳ್ನು ಆಯ್ಕೆ ಮಾಡುವ ಹಕ್ಕು ನಿಮಗೆ ಸಿಕ್ಕಿದೆ. ನಿಮ್ಮ ಒಂದು ಮತ ರಾಜ್ಯದ ದಿಕ್ಕನ್ನೇ ಬದಲಾಯಿಸಬಹುದು. ನಿಮ್ಮ ಮತಕ್ಕೆ ತುಂಬಾ ಬೆಲೆಯಿದೆ. ನಿಮ್ಮ ಮತದಲ್ಲಿ ರಾಜ್ಯದ ಭವಿಷ್ಯ ಅಡಗಿದೆ.

ನವ ಯುವಕರು ಮತದಾರ ಚೀಟಿಗಾಗಿ ಅರ್ಜಿ ಸಲ್ಲಿಸಿರುತ್ತಾರೆ. ಹೊಸದಾಗಿ ಅರ್ಜಿ ಸಲ್ಲಿಸಿದವರು ತಮ್ಮ ಮೊಬಲ್ ನಲ್ಲೇ ಚನಾವಣೆ ಗುರುತಿನ ಚೀಟಿಯನ್ನು ಡೌನ್ಲೋಡ್ ಮಾಡಿಕೊಳ್ಳಬಹುದು. ಇದರೊಂದಿಗೆ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರಿರುವುದನ್ನು ಚೆಕ್ ಮಾಡಿಕೊಳ್ಳಬಹುದು.

Leave a comment