ಬೆಳೆ ಸಾಲಮನ್ನಾ ಗ್ರಾಮವಾರು ಪಟ್ಟಿಯಲ್ಲಿ ಯಾವ ಯಾವ ರೈತರಿದ್ದಾರೆ ಎಂಬುದನ್ನು ಮೊಬೈಲ್ ನಲ್ಲೇ ಚೆಕ್ ಮಾಡಬಹುದು.

ಹೌದು, ರೈತರ ಬಳಿಯಿರುವ ಮೊಬೈಲ್ ನಲ್ಲಿ ಗ್ರಾಮವಾರು ಪಟ್ಟಿಯಲ್ಲಿ ಯಾವ ಯಾವ ರೈತರು ಬೆಳೆ ಸಾಲಮನ್ನಾ ಪಟ್ಟಿಯಲ್ಲಿದ್ದಾರೆ ಎಂಬುದನ್ನು ಒಂದೇ ನಿಮಿಷದಲ್ಲಿ ಚೆಕ್ ಮಾಡಬಹುದು. ಹಾಗೂ ಬೇಳೆ ಸಾಲಮನ್ನಾಕ್ಕಿರುವ ಅರ್ಹತೆಗಳೇನು ಎಂಬುದನ್ನು ಸಂಪೂರ್ಣ ಮಾಹಿತಿ ಇಲ್ಲಿದೆ.

2018 ರ ಬೆಳೆ ಸಾಲಮನ್ನಾ ಭಾಗ್ಯ ಇನ್ನೂ ಕೆಲವು ರೈತರಿಗೆ ತಾಂತ್ರಿಕ ದೋಷಗಳ ಕಾರಣಗಳಿಂದಾಗಿ ಆ ಭಾಗ್ಯ ಸಿಕ್ಕಿಲ್ಲ. ಕೆಲವು ರೈತರು ಅರ್ಹತೆ ಪಡೆದಿದ್ದರೂ ಸಹ ಅವರಿಗೆ ಸಾಲಮನ್ನಾ ಭಾಗ್ಯ ಸಿಕ್ಕಿಲ್ಲ. ನೀವು ಬೆಳೆ ಸಾಲಮನ್ನಾ ಪಟ್ಟಿಯಲ್ಲಿದ್ದೀರಾ? ಆದರೂ ನಿಮಗೇಕೆ ಬೆಳೆ ಸಾಲಮನ್ನಾ ಸಿಕ್ಕಿಲ್ಲ ಎಂಬುದನ್ನು ಚೆಕ್ ಮಾಡಬಹುದು.

ಬೆಳೆ ಸಾಲಮನ್ನಾ ಪಟ್ಟಿಯಲ್ಲಿ ತಮ್ಮ ಹೆಸರಿರುವುದನ್ನು ಚೆಕ್ ಮಾಡುವುದು ಹೇಗೆ?

ರೈತರು ಬೆಳೆ ಸಾಲಮನ್ನಾ ಗ್ರಾಮವಾರು ಪಟ್ಟಿಯಲ್ಲಿ ತಮ್ಮ ಹೆಸರಿದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಲು ಈ

https://clws.karnataka.gov.in/loanwaiverreport/

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಅಗ ಬೆಳೆ ಸಾಲಮನ್ನಾ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ರೈತರಿಗೆ ಎರಡು ಆಯ್ಕೆಗಳು ಕಾಣಿಸುತ್ತವೆ. Bank wise ಹಾಗೂ pacs wise ಎಂಬ ಎರಡು ಆಯ್ಕೆಗಳಿರುತ್ತವೆ. ಇದರಲ್ಲಿ ರೈತರು Bank wise  ಆಯ್ಕೆ ಮಾಡಿಕೊಳ್ಳಬೇಕು.  ನಂತರ ಸೆಲೆಕ್ಟ್ ರಿಪೋರ್ಟ್ ನಲ್ಲಿ Farmer wise ಆಯ್ಕೆ ಮಾಡಿಕೊಳ್ಳಬೇಕು.

ಆಗ ಕೆಲವು ಆಯ್ಕೆಗಳು ಕಾಣಿಸುತ್ತವೆ. ಅಲ್ಲಿ ರೈತರು ಜಿಲ್ಲೆ ಆಯ್ಕೆ ಮಾಡಿಕೊಳ್ಳಬೇಕು. ನಂತರ ತಾಲೂಕು ಆಯ್ಕೆ ಮಾಡಿಕೊಳ್ಳಬೇಕು. ನಂತರ ಹೋಬಳಿ ಆಯ್ಕೆ ಮಾಡಿಕೊಳ್ಳಬೇಕು. ಇದಾದ ಮೇಲೆ ರೈತರು ತಮ್ಮ ಗ್ರಾಮ ಆಯ್ಕೆ ಮಾಡಿಕೊಂಡು Get Report ಮೇಲೆ ಕ್ಲಿಕ್ ಮಾಡಬೇಕು. ನಂತರ ನೀವು ಆಯ್ಕೆ ಮಾಡಿಕೊಂಡ ಗ್ರಾಮದಲ್ಲಿ ಯಾವ ಯಾವ ರೈತರು ಬೆಳೆ ಸಾಲಮನ್ನಾ ಪಡೆದಿದ್ದಾರೆ ಹಾಗೂ ಯಾವ ಯಾವ ರೈತರು ಬೆಳೆ ಸಾಲಮನ್ನಾ ಪಡೆದಿಲ್ಲ ಎಂಬ ಪಟ್ಟಿ ಕಾಣಿಸುತ್ತದೆ.

ಇದನ್ನೂ ಓದಿ ಪಿಎಂ ಕಿಸಾನ್ 14ನೇ ಕಂತಿನ ಗ್ರಾಮವಾರು ಪಟ್ಟಿ ಬಿಡುಗಡೆ- ನಿಮ್ಮ ಹೆಸರಿದೆಯೇ? ಮೊಬೈಲ್ ನಲ್ಲೇ ಚೆಕ್ ಮಾಡಿ

ಅಲ್ಲಿ ನೀವು ಆಯ್ಕೆ ಮಾಡಿಕೊಂಡ ಗ್ರಾಮ ಕಾಣಿಸುತ್ತದೆ. ಅದರ ಮುಂದೆ ರೈತರ ಹೆಸರು, ತಂದೆಯ ಹೆಸರು ಕಾಣಿಸುತ್ತದೆ. ಯಾವ ಬ್ಯಾಂಕಿನಲ್ಲಿ ಸಾಲ ಪಡೆದಿದ್ದಾರೆ  ಹಾಗೂ ಬ್ರ್ಯಾಂಚ್ ಹೆಸರು ಕಾಣಿಸುತ್ತದೆ. ಬೆಳೆ ಸಾಲ ಅಕೌಂಟ್ ನಂಬರ್, ಇದಾದ ಮೇಲೆ ನೀವು ತೆಗೆದುಕೊಂಡ ಬೆಳೆ ಸಾಲ ಯಾವ ಪ್ರಕಾರದ್ದಾಗಿದೆ.  ನೀವು ಎಷ್ಟು ಬೆಳೆ  ಸಾಲ ಪಡೆದಿದ್ದೀರಿ ಹಾಗೂ ನೀವು  ಬೆಳೆ ಸಾಲ ಮನ್ನಾ ಭಾಗ್ಯದ ಗ್ರೀನ್ ಲಿಸ್ಟ್ ನಲ್ಲಿದ್ದಾರೋ ಇಲ್ಲ ವೋ ಎಂಬುದು ಕಾಣಿಸುತ್ತದೆ.

ಒಂದು ವೇಳೆ ನೀವು ಗ್ರೀನ್ ಲಿಸ್ಟ್ ನಲ್ಲಿರದಿದ್ದರೆ ಯಾವ ಕಾರಣಕ್ಕಾಗಿ ಗ್ರೀನ್ ಲಿಸ್ಟ್ ನಲ್ಲಿಲ್ಲ ಎಂಬುದು ಮೆಸೆಜ್ ಇರುತ್ತದೆ. ಇದಾದ ಮೇಲೆ ರೈತರಿಗೆ ಬೆಳೆ ಸಾಲಮನ್ನಾಆಗಿದೆಯೋ ಇಲ್ಲವೋ ಎಂಬುದು ಕಾಣಿಸುತ್ತದೆ. ಒಂದು ವೇಳೆ ಬೆಳೆ ಸಾಲಮನ್ನಾ ಆಗಿದ್ದರೆ ಎಷ್ಟು ಬೆಳೆ ಸಾಲಮನ್ನಾ ಆಗಿದೆ ಎಂಬುದು ಕಾಣಿಸುತ್ತದೆ. ಬೆಳೆ ಸಾಲ ಸಂಪೂರ್ಣವಾಗಿ ಮನ್ನಾ ಆಗಿದೆಯೋ ಇಲ್ಲವೋ ಎಂಬುದು ಕಾಣಿಸುತ್ತದೆ.

ರೈತರ ಹೆಸರು ಅಲ್ಪಾಬೆಟಿಕ್ ಆರ್ಡರ್ ಅಂದರೆ ಎ ದಿಂದ ಝಡ್ ಪ್ರಕಾರಗವಾಗಿ ಲಿಸ್ಟ್ ಇರುತ್ತದೆ. ನಿಮ್ಮ ಹೆಸರು ಯಾವ ಅಕ್ಷರದಿಂದ ಆರಂಭವಾಗುತ್ತದೆ ಎಂಬುದರ ಪ್ರಕಾರ ಚೆಕ್ ಮಾಡಬಹುದು.

ಯಾವ ರೈತರು ಬೆಳೆ ಸಾಲಮನ್ನಾಕ್ಕೆ ಅರ್ಹರಿರುವುದಿಲ್ಲ

2018 ರಲ್ಲಿ ಬೆಳೆ ಸಾಲಮನ್ನಾ ಘೋಷಣೆಯಾದಾಗ ಯಾರು ಆದಾಯ ತೆರಿಗೆ ವ್ಯಾಪ್ತಿಗೆ ಇರುತ್ತಾರೋ ಆ ರೈತರು ಅರ್ಹರಿರುವುದಿಲ್ಲ. ಕಳೆದ 3 ವರ್ಷಗಳಲ್ಲಿ ಯಾವುದಾದರು ಒಂದು ವರ್ಷ ಆದಾಯ ತೆರಿಗೆ ಪಾವತಿಸಿದ್ದರೂ ಅವರು ಅರ್ಹರರಿವುದಿಲ್ಲ. ಇದರೊಂದಿಗೆ 15 ಸಾವಿರಕ್ಕೂ ಹೆಚ್ಚು ಪಿಂಚಣಿ ಪಡೆಯುವ ರೈತರು ಅರ್ಹರಿರುವುದಿಲ್ಲ.

Leave a Reply

Your email address will not be published. Required fields are marked *