Check your land survey tippani ರೈತರು ತಮ್ಮ ಹೊಲದ ಮೂಲ ಅಂದರೆ ಒರಿಜನಲ್ ಟಿಪ್ಪಣಿ ಪುಸ್ತಕ ಮೊಬೈಲ್ ನಲ್ಲೇ ಪಡೆಯಬಹುದು. ಹೌದು, ರೈತರು ತಮ್ಮ ಜಮೀನಿನ ಸರ್ವೆ ನಂಬರ್ ನಮೂದಿಸಿದರೆ ಸಾಕು, ಮೂಲ ಸರ್ವೆ ಟಿಪ್ಪಣಿ ಪುಸ್ತಕ ಮೊಬೈಲ್ ನಲ್ಲೇ ಪಡೆಯಬಹುದು. ಅದು ಹೇಗೆ ಅಂದುಕೊಂಡಿದ್ದೀರಾ… ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.
Check your land survey tippani ನಿಮ್ಮ ಜಮೀನಿನ ಮೂಲ ಸರ್ವೆ ಟಿಪ್ಪಣಿ ಪುಸ್ತಕ ಮೊಬೈಲ್ ನಲ್ಲಿ ಪಡೆಯುವುದು ಹೇಗೆ?
ರೈತರು ಯಾವುದೇ ಜಮೀನಿನ ಮೂಲ ಸರ್ವೆ ಟಿಪ್ಪಣಿ ಪುಸ್ತಕ ಪಡೆಯಲು ಈ
https://bhoomojini.karnataka.gov.in/service35/
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಸರ್ವೆ ಡಾಕುಮೆಂಟ್ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ರೈತರು ಜಮೀನಿನ ಟಿಪ್ಪಣಿ ಪುಸ್ತಕ ಹಾಗೂ ಆಕಾರಬಂದ್ ಎರಡನ್ನೂ ಪಡೆಯಬಹುದು. ಹೌದು, ರೈತರು ತಮ್ಮ ಜಿಲ್ಲೆ ಆಯ್ಕೆ ಮಾಡಿಕೊಳ್ಳಬೇಕು. ನಂತರ ತಾಲೂಕು ಆಯ್ಕೆ ಮಾಡಿಕೊಳ್ಳಬೇಕು. ಇದಾದಮೇಲೆ ಹೋಬಳಿ ಆಯ್ಕೆ ಮಾಡಿಕೊಳ್ಳಬೇಕು. ಗ್ರಾಮ ಆಯ್ಕೆ ಮಾಡಿಕೊಂಡು ಸರ್ವೆ ನಂಬರ್ ಹಾಕಬೇಕು. ಸರ್ನೋಕ್ ನಲ್ಲಿ ಸ್ಟಾರ್ ಹಾಗೂ ಹಿಸ್ಸಾ ನಂಬರ್ ನಲ್ಲಿ ಸ್ಟಾರ್ ಆಯ್ಕೆ ಮಾಡಿಕೊಳ್ಳಬೇಕು. ನಂತರ ಸರ್ಚ್ ಮೇಲೆ ಕ್ಲಿಕ್ ಮಾಡಿದಾಗ ಇನ್ನೊಂದು ಪೇಜ್ ಕಾಣಿಸುತ್ತದೆ.
ಅಲ್ಲಿ ನಿಮ್ಮ ಸರ್ವೆ ನಂಬರ್ಹಾಗೂ ಹಿಸ್ಸಾ ನಂಬರ್ ಗಳ ಪಟ್ಟಿ ಕಾಣಿಸುತ್ತದೆ. ಅಂದರ ಮುಂದುಗಡೆ ಯಾವ ದಾಖಲೆ ಪಡೆಯಬೇಕು ಎಂಬುದನ್ನು ಬರೆಯಲಾಗಿರುತ್ತದೆ.ಅದರ ಮುಂದೆ View Document ಕೆಳಗಡೆ ಕಾಣುವ ಪಿಡಿಎಫ್ ಫೈಲ್ ಮೇಲೆ ಕ್ಲಿಕ್ ಮಾಡಬೇಕು.
ಮೂಲ ಸರ್ವೆ ಟಿಪ್ಪಣಿ ಪುಸ್ತಕ ನೋಡಬೇಕೆಂದರೆ ಅದರ ಮುಂದುಗಡೆ ಕಾಣುವ ಫೈಲ್ ಮೇಲೆ ಕ್ಲಿಕ್ ಮಾಡಬೇಕು ಜಮೀನಿನ ಓರಿಜಿನಲ್ ಅಂದರೆ ಮೂಲ ಸರ್ವೆ ಟಿಪ್ಪಣಿ ಪುಸ್ತಕ ಕಾಣಿಸುತ್ತದೆ. ಇದರಲ್ಲಿ ನಿಮ್ಮ ಜಮೀನಿನ ಸರ್ವೆ ನಂಬರ್ ಪ್ರಕಾರ ಜಮೀನು ವಿಭಜನೆಯಾಗಿರುವುದನ್ನು ತೋರಿಸಲಾಗಿರುತ್ತದೆ. ಈ ದಾಖಲೆ ಓರಿಜನಲ್ ರೂಪದಲ್ಲಿ ಬೇಕಾದರೆ ನಾಡಕಚೇರಿಯಲ್ಲಿ ಶುಲ್ಕ ಪಾವತಿಸಿ ಪಡೆಯಬಹುದು.
ಇದನ್ನೂಓದಿ : ಖಾತಾ ನಂಬರ್ ಪ್ರಕಾರ ನಿಮ್ಮೆಸರಿಗೆ ಎಷ್ಟು ಎಕರೆ ಜಮೀನಿದೆ? ಮೊಬೈಲ್ ನಲ್ಲೇ ಚೆಕ್ ಮಾಡಿ ಸರ್ವೆ ನಂಬರ್ ಹಾಕಿ
ಹಿಸ್ಸಾ ಸರ್ವೆ ಪೋಡಿ ಟಿಪ್ಪಣಿ ಎದುರುಗಡೆ ಕಾಣುವ ಪಿಡಿಎಫ್ ಫೈಲ್ ಮೇಲೆ ಕ್ಲಿಕ್ ಮಾಡಿದರೆ ಇನ್ನೊಂದು ಪೇಜ್ ಕಾಣಿಸುತ್ತದೆ. ಅಲ್ಲಿ ಮೂಲ ಅಂದರೆ ಆರಂಭದಲ್ಲಿ ಜಮೀನು ವಿಭಾಗ ಮಾಡಿ ಯಾರ ಯಾರ ಹೆಸರಿಗೆ ಜಮೀನು ಎಷ್ಟು ಎಕರೆ ಜಮೀನು ವರ್ಗಾವಣೆಯಾಗಿದೆ ಎಂಬ ಮಾಹಿತಿ ಇರುತ್ತದೆ. ಈ ಬರವಣಿಗೆಯು ಕೈಯಿಂದ ಬರೆಯಲಾಗಿರುತ್ತದೆ. ಆಗ ಕಂಪ್ಯೂಟರ್ ಗಳಿರಲಿಲ್ಲ. ಹಾಗಾಗಿ ಬರವಣಿಗೆಯಲ್ಲಿರುತ್ತದೆ. ಆಂಗ್ಲಭಾ ಷೆಯಲ್ಲಿ ಬರೆಯಲಾಗಿರುತ್ತದೆ. ಅಂಕಿಗಳು ಕನ್ನಡ ಅಂಕಿಗಳಲ್ಲಿರುತ್ತದೆ. ಹಾಗಾಗಿ ಝೂಮ್ ಮಾಡಿ ಹೆಸರು ಹಾಗೂ ಜಮೀನು ವರ್ಗಾವಣೆಯ ಮಾಹಿತಿ ವೀಕ್ಷಿಸಬಹುದು.
ಜಮೀನಿನ ಆಕಾರಬಂದ್ ಮೊಬೈಲ್ ನಲ್ಲಿ ಪಡೆಯಿರಿ
ನೀವು ನಿಮ್ಮ ಜಮೀನಿನ ಆಕಾರ ಬಂದ್ ಮೊಬೈಲ್ ನಲ್ಲೇ ವೀಕ್ಷಿಸಬೇಕಾದರೆ ಅಲ್ಲಿ ಅಲ್ಲಿ ಕಾಣುವ ವೀವ್ ಆಕಾರಬಂದ್ ಮೇಲೆ ಕ್ಲಿಕ್ ಮಾಡಬೇಕು. ಆಗ 29 ಕಾಲಂಗಳಿರುವ ಆಕಾರಬಂದ್ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ಗ್ರಾಮ, ಹೋಬಳಿ, ತಾಲೂಕು, ಜಮೀನು ಎ ಷ್ಟು ಹೆಕ್ಟೇರ್ನಲ್ಲಿದೆ ಎಂಬ ಮಾಹಿತಿ ಇರುತ್ತದೆ. ಅದರ ಕೆಳಗಡೆ ನಾಲ್ಕನೇ ಕಾಲಂನಲ್ಲಿ ನೀವ ನಮೂದಿಸಿ ಸರ್ವೆ ನಂಬರಿನಲ್ಲಿ ಒಟ್ಟು ಎ ಷ್ಟು ಎಕರೆ ಗುಂಟೆಯಲ್ಲಿ ಜಮೀನಿದೆ ಎಂಬ ಮಾಹಿತಿ ಇರುತ್ತದೆ. ಜಮೀನಿನ ಪಹಣಿಯಂತೆ ಆಕಾರಬಂದ್ ಸಹ ರೈತರಿಗೆ ಮುಖ್ಯವಾದ ದಾಖಲೆಯಾಗಿದೆ. ಇದೂ ಸಹ ಜಮೀನಿನ ದಾಖಲೆಗಳಲ್ಲಿ ಮುಖ್ಯವಾಗಿದೆ.