ಜಮೀನಿನ ಓರಿಜಿನಲ್ ಪೋಡಿ ಟಿಪ್ಪಣಿ ಮೊಬೈಲ್ ನಲ್ಲೇ ಚೆಕ್ ಮಾಡಿ

Written by Ramlinganna

Updated on:

ರೈತರು ಮನೆಯಲ್ಲಿಯೇ ಕುಳಿತು ಈಗ ಪಹಣಿಯಂತೆ ಹಿಸ್ಸಾ ಸರ್ವೆ ಪೋಡಿ ಟಿಪ್ಪಣಿ ಪುಸ್ತಕವನ್ನು ಮೊಬೈಲ್ ನಲ್ಲೇ ಡೌನ್ಲೋಡ್ ಮಾಡಿಕೊಳ್ಳಬಹುದು.

ಹೌದು, ರೈತರು ತಮ್ಮ ಬಳಿಯಿರುವ ಮೊಬೈಲ್ ನಲ್ಲೇ ಕ್ಷಣಾರ್ಧದಲ್ಲಿ ಮೂಲ ಸರ್ವೆ ಟಿಪ್ಪಣಿ ಪುಸ್ತಕದೊಂದಿಗೆ ಹಿಸ್ಸಾ ಸರ್ವೆ ಪೋಡಿ ಟಿಪ್ಪಣಿಯನ್ನು ಮೊಬೈಲ್ ನಲ್ಲೇ ಪಡೆಯಬಹುದು. ಇದಕ್ಕಾಗಿ ರೈತರು ಯಾವ ಅಧಿಕಾರಿಗಳ  ಬಳಿಯೂ ಹೋಗಬೇಕಿಲ್ಲ. ಮನೆಯಲ್ಲಿಯೇ ಕುಳಿತು ಒಂದೇ ನಿಮಿಷದಲ್ಲಿ ಡೌನ್ಲೋಡ್ ಮಾಡಿ ಚೆಕ್ ಮಾಡಬಹುದು.

ಮೊಬೈಲ್ ನಲ್ಲಿ ಹಿಸ್ಸಾ ಸರ್ವೆ ಪೋಡಿ ಟಿಪ್ಪಣಿ ಡೌನ್ಲೋಡ್ ಮಾಡುವುದು ಹೇಗೆ?

ರೈತರು ತಮ್ಮ ಬಳಿಯಿರುವ ಮೊಬೈಲ್ ನಲ್ಲೇ ಹಿಸ್ಸಾ ಸರ್ವೆ ಟಿಪ್ಪಣಿಯನ್ನು ಡೌನ್ಲೋಡ್ ಮಾಡಲು ಈ

https://landrecords.karnataka.gov.in/service137/

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಸರ್ವೆ ಡಾಕುಮೆಂಟ್ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ರೈತರು ಯಾವ ಜಿಲ್ಲೆಗೆ ಸಂಬಂಧಿಸಿದ್ದಾರೋ ಆ ಜಿಲ್ಲೆಯನ್ನು ಆಯ್ಕೆ ಮಾಡಿಕೊಳ್ಳಬೇಕು. ತಾಲೂಕು ಆಯ್ಕೆ ಮಾಡಿಕೊಳ್ಳಬೇಕು. ಇದಾದಮೇಲೆ ಹೋಬಳಿ ಆಯ್ಕೆ ಮಾಡಿಕೊಂಡು ಗ್ರಾಮ ಆಯ್ಕೆ ಮಾಡಿಕೊಳ್ಳಬೇಕು. ನಂತರ ಯಾವ ಸರ್ವೆ ನಂಬರಿನ ಹಿಸ್ಸಾ ಸರ್ವೆ ಪೋಡಿ ಟಿಪ್ಪಣಿಯನ್ನು ನೋಡಬೇಕೆಂದುಕೊಂಡಿದ್ದೀರೋ ಆ ಸರ್ವೆ ನಂಬರ್ ನಮೂದಿಸಬೇಕು. ಸರ್ನೋಕ್ ಕಾಲಂನಲ್ಲಿ * ನಮೂದಿಸಬೇಕು. ಹಿಸ್ಸಾ ನಂಬರ್ ಗೊತ್ತಿದ್ದರೆ ನಮೂದಿಸಬೇಕು.

ಒಂದು ವೇಳೆ ಹಿಸ್ಸಾ ನಂಬರ್ ಗೊತ್ತಿಲ್ಲದಿದ್ದರೆ * ಹಾಕಬೇಕು. ನಂತರ Search ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ಓಪನ್ ಆಗುತ್ತದೆ. ಅಲ್ಲಿ ನೀವು ನಮೂದಿಸಿ ಸರ್ವೆ ನಂಬರ್ ಹಾಗೂ ಹಿಸ್ಸಾ ಸರ್ವೆ ನಂಬರ್ ಗಳ ಪಟ್ಟಿ ಕಾಣುತ್ತದೆ. ನೀವುಮೂಲ ಸರ್ವೆ ಟಿಪ್ಪಣಿ ಪುಸ್ತಕ ನೋಡಬೇಕೆಂದರೆ ಅದು ಎದುರು ಕಾಣುವ View Document  ಪೇಜ್ ಮೇಲೆ ಕ್ಲಿಕ್ ಮಾಡಬೇಕು. ಆಗ ಮೂಲ ಸರ್ವೆ ಟಿಪ್ಪಣಿ ಪುಸ್ತಕ ತೆರೆದುಕೊಳ್ಳುತ್ತದೆ.

ನಿಮ್ಮ ಸರ್ವೆ ನಂಬರಿನ ಹಿಸ್ಸಾ ಸರ್ವೆ ಪೋಡಿ ಟಿಪ್ಪಣಿ ನೋಡಲು ನಿಮ್ಮ ಹಿಸ್ಸಾ ನಂಬರ್ ಎದುರುಗಡೆಯಿರುವ View Document ಮೇಲೆ ಕ್ಕಿಲ್ ಮಾಡಬೇಕು. ಆಗ ಇನ್ನೊಂದು ಪಿಡಿಎಫ್ ಪೇಜ್ ಓಪನ್ ಆಗುತ್ತದೆ.

ಹಿಸ್ಸಾ ಸರ್ವೆ ಪೋಡಿ ಟಿಪ್ಪಣಿಯಲ್ಲಿ ಯಾವ ಯಾವ ಮಾಹಿತಿ ಇರುತ್ತದೆ?

ಹಿಸ್ಸಾ ಸರ್ವೆ ಪೋಡಿ ಟಿಪ್ಪಣಿಯಲ್ಲಿ ಜಿಲ್ಲೆ, ತಾಲೂಕು, ಹೋಬಳಿ, ಗ್ರಾಮ, ಸರ್ವೆ ನಂಬರ್ ಹಾಗೂ ಹಿಸ್ಸಾ ನಂಬರ್ ಕಾಣುತ್ತದೆ.  ಅದರ ಕೆಳಗಡೆ ಯಾವ ವರ್ಷದಲ್ಲಿ ಪೋಡಿಟಿಪ್ಪಣಿ ಮಾಡಲಾಗಿದೆ ಎಷ್ಟು ಎಕರೆಗೆ ಟಿಪ್ಪಣಿ ಮಾಡಲಾಗಿದೆ ಎಂಬುದು ಕಾಣುತ್ತದೆ.

ಇದನ್ನೂ ಓದಿ ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರಿರುವುದನ್ನು ಮೊಬೈಲ್ ನಲ್ಲೇ ಚೆಕ್ ಮಾಡಿ

ಜಮೀನು ಯಾರ ಯಾರ ಹೆಸರಿಗೆ ವರ್ಗಾವಣೆಯಾಗಿದೆ? ಎಂಬುದರ ನಕ್ಷೆ ಕಾಣುತ್ತದೆ.  ಅದರ ಕೆಳಗಡೆ ಆ ಸರ್ವೆ ನಂಬರಿನಲ್ಲಿ ಯಾರ ಯಾರ ಹೆಸರಿದೆ? ಯಾರ ಹೆರಿಗೆ ಎಷ್ಟು ಎಕರೆ ಜಮೀನಿದೆ ಎಂಬ ಮಾಹಿತಿಯೂ ಇರುತ್ತದೆ.  ಇದು ಹಳೆಯ ಸರ್ವೆ ಟಿಪ್ಪಣಿ ಪುಸ್ತಕವಾಗಿರುತ್ತದೆ. ಜಮೀನು ಈಗ ಬೇರೆಯವರಿಗೆ ಮಾರಾಟವಾಗಿದ್ದರೆ ಅವರ ಹೆಸರು ಇರುವುದಿಲ್ಲ. ಮೂಲ ಸರ್ವೆ ಟಿಪ್ಪಣಿ ತಯಾರು ಮಾಡುವಾಗ ಯಾರ ಯಾರ ಹೆಸರಿಗಿತ್ತು ಎಂಬ ಮಾಹಿತಿ ಇದರಲ್ಲಿರುತ್ತದೆ. ಇದು ರೈತರಿಗೆ ತುಂಬಾ ಉಪಯುಕ್ತ ಮಾಹಿತಿಯನ್ನು ನೀಡುತ್ತದೆ.  ರೈತರಿಗೆ ಈ ಮಾಹಿತಿ ನೋಡುವುದಕ್ಕಾಗಿರುತ್ತದೆ.

ಒಂದು ವೇಳೆ ರೈತರು ಇದನ್ನು ಪ್ರಿಂಟ್ ಸಹ ತೆಗೆದುಕೊಳ್ಳಬೇಕು. ರೈತರು ಹತ್ತಿರದ ನಾಡಕಚೇರಿ ಹಾಗೂ ತಹಶೀಲ್ದಾರ ಕಚೇರಿಗಳಲ್ಲಿ ಪ್ರಿಂಟ್ ಶುಲ್ಕ ಪಾವತಿಸಿ ಸರ್ವೆ ಟಿಪ್ಪಣಿ ಪುಸ್ತಕವನ್ನು ಪಡೆದುಕೊಳ್ಳಬಹುದು. ಸರ್ವೆ ಟಿಪ್ಪಣಿ ಪುಸ್ತಕದ ಶುಲ್ಕ ತುಂಬಾ ಕಡಿಮೆಯಿರುವುದರಿಂದ ರೈತರು ಶುಲ್ಕ ಪಾವತಿಸಿ ಹಿಸ್ಸಾ ಸರ್ವೆ ನಂಬರ್ ಪೋಡಿ ಟಿಪ್ಪಣಿ ಪಡೆದುಕೊಳ್ಳಬಹುದು.

1 thought on “ಜಮೀನಿನ ಓರಿಜಿನಲ್ ಪೋಡಿ ಟಿಪ್ಪಣಿ ಮೊಬೈಲ್ ನಲ್ಲೇ ಚೆಕ್ ಮಾಡಿ”

Leave a Comment